ಟಿ20 ವಿಶ್ವಕಪ್‌ನಲ್ಲಿ ಫ್ಲಾಪ್; ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿದ ರಾಹುಲ್

KL Rahul: ಮೂಲತಃ ಮಂಗಳೂರು ಮೂಲದವರಾಗಿರುವ ರಾಹುಲ್ ತಮ್ಮ ಸ್ನೇಹಿತರೊಂದಿಗೆ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಾಲಕ್ಕೆ ಭೇಟಿ ನೀಡಿದ್ದು, ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿ ಮಹಾಪೂಜೆಯಲ್ಲಿ ಭಾಗಿಯಾಗಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಫ್ಲಾಪ್; ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿದ ರಾಹುಲ್
ಕೆಎಲ್ ರಾಹುಲ್
TV9kannada Web Team

| Edited By: pruthvi Shankar

Nov 23, 2022 | 5:33 PM

ಟೀಂ ಇಂಡಿಯಾದ (Team India) ಉಪನಾಯಕತ್ವದ ಜವಬ್ದಾರಿ ಹೊತ್ತು ಟಿ20 ವಿಶ್ವಕಪ್​ಗೆ (T20 World Cup 2022) ಎಂಟ್ರಿಕೊಟ್ಟಿದ್ದ ಕನ್ನಡಿಗ ಕೆಎಲ್ ರಾಹುಲ್ (KL Rahul) ಇಡೀ ಟೂರ್ನಿಯಲ್ಲಿ ಹೇಳಿಕೊಳ್ಳುವಂತಹ ಒಂದೇ ಒಂದು ಪ್ರದರ್ಶನ ನೀಡಲಿಲ್ಲ. ಅದರಲ್ಲೂ ನಿರ್ಣಾಯಕ ಪಂದ್ಯಗಳಲ್ಲಿ ಕೈಗೊಡುವ ತಮ್ಮ ಸರಣಿಯನ್ನು ಮುಂದುವರೆಸಿದ ರಾಹುಲ್, ಪಾಕಿಸ್ತಾನ, ಸೌತ್ ಆಫ್ರಿಕಾ, ಹಾಗೂ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲೂ ನಿರಸ ಪ್ರದರ್ಶನ ನೀಡಿದ್ದರು. ಹೀಗಾಗಿ ರಾಹುಲ್​ರನ್ನು ತಂಡದಿಂದ ಕೈಬಿಡಬೇಕು ಎಂದು ಮಾಜಿ ಕ್ರಿಕೆಟಿಗರು ಹಾಗೂ ಟೀಂ ಇಂಡಿಯಾ ಅಭಿಮಾನಿಗಳು ಬಿಸಿಸಿಐ ಎದುರು ತಮ್ಮ ಆಕ್ರೋಶವನ್ನು ಹೊರಹಾಕಿದ್ದರು. ಸದ್ಯ ಟೀಂ ಇಂಡಿಯಾದಿಂದ ಬ್ರೇಕ್ ತೆಗೆದುಕೊಂಡಿರುವ ರಾಹುಲ್ ತಮ್ಮ ಎಂದಿನ ಫಾರ್ಮ್​ಗೆ ಮರಳಲು ದೇವರ ಮೊರೆ ಹೋದಂತೆ ಕಾಣುತ್ತಿದೆ. ಇದಕ್ಕೆ ಪೂರಕವಾಗಿ ಟೀಂ ಇಂಡಿಯಾ ಓಪನರ್ ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನಲ್ಲಿರುವ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಾಲಕ್ಕೆ ಭೇಟಿ ನೀಡಿದ್ದಾರೆ.

ವಿಶೇಷ ಪೂಜೆ ನೆರವೇರಿಸಿದ ರಾಹುಲ್

ಮೂಲತಃ ಮಂಗಳೂರು ಮೂಲದವರಾಗಿರುವ ರಾಹುಲ್ ತಮ್ಮ ಸ್ನೇಹಿತರೊಂದಿಗೆ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಾಲಕ್ಕೆ ಭೇಟಿ ನೀಡಿದ್ದು, ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿ ಮಹಾಪೂಜೆಯಲ್ಲಿ ಭಾಗಿಯಾಗಿದ್ದಾರೆ. ದೇವಾಲಯದ ವತಿಯಿಂದ ಕೆ.ಎಲ್. ರಾಹುಲ್ ಅವರನ್ನು ಬರಮಾಡಿಕೊಳ್ಳಲಾಯಿತು. ಈ ವೇಳೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಮತ್ತಿತರರು ಉಪಸ್ಥಿತರಿದ್ದರು.

ವಿಶ್ವಕಪ್‌ನಲ್ಲಿ ರಾಹುಲ್ ಫ್ಲಾಪ್

ಟಿ20 ವಿಶ್ವಕಪ್ ಆರಂಭದಿಂದಲೂ ರಾಹುಲ್ ಕಳಪೆ ಫಾರ್ಮ್‌ನಿಂದ ಕಂಗೆಟ್ಟಿದ್ದರು. ಅಲ್ಲದೆ ಟಿ20 ವಿಶ್ವಕಪ್‌ನಲ್ಲಿ ಅಗ್ರ 8 ತಂಡಗಳ ವಿರುದ್ಧ ಕೆಎಲ್ ರಾಹುಲ್ ಅವರ ದಾಖಲೆ ವಿಶೇಷವಾಗಿರಲಿಲ್ಲ . ಅಡಿಲೇಡ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಅವರು 5 ಎಸೆತಗಳಲ್ಲಿ 5 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಹಾಗೆಯೇ ಕೇವಲ 5 ನಿಮಿಷಗಳ ಕಾಲ ಕ್ರೀಸ್‌ನಲ್ಲಿ ಉಳಿಯಲು ಅವರಿಗೆ ಸಾಧ್ಯವಾಗಲಿಲ್ಲ. ಇದಕ್ಕೂ ಮೊದಲು ಮೆಲ್ಬೋರ್ನ್‌ನಲ್ಲಿ ಪಾಕಿಸ್ತಾನ ವಿರುದ್ಧ ಆಡಿದ ಪಂದ್ಯದಲ್ಲಿ 8 ಎಸೆತಗಳಲ್ಲಿ 4 ರನ್ ಗಳಿಸಿ ಬ್ಯಾಟ್ ಬದಿಗಿಟ್ಟಿದ್ದರು.

ದೊಡ್ಡ ತಂಡಗಳ ವಿರುದ್ಧ ರಾಹುಲ್ ಫೇಲ್

ದಕ್ಷಿಣ ಆಫ್ರಿಕಾ ವಿರುದ್ಧ ಪರ್ತ್‌ನಲ್ಲಿ 14 ಎಸೆತಗಳಲ್ಲಿ ಅವರ ಬ್ಯಾಟ್‌ನಿಂದ ಕೇವಲ 9 ರನ್‌ಗಳು ಮಾತ್ರ ಬಂದವು. ಕಳೆದ ವರ್ಷ ದುಬೈನಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅವರು ಕೇವಲ 16 ಎಸೆತಗಳನ್ನು ಎದುರಿಸಿ, 18 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಇದಕ್ಕೂ ಮುನ್ನ ದುಬೈನ ಇದೇ ಮೈದಾನದಲ್ಲಿ ಪಾಕಿಸ್ತಾನ ವಿರುದ್ಧ 8 ಎಸೆತಗಳಲ್ಲಿ 3 ರನ್ ಗಳಿಸಿದ್ದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada