ಟೀಮ್ ಇಂಡಿಯಾದ ಸ್ವಿಂಗ್ ಕ್ವೀನ್ ಬೌಲಿಂಗ್​ಗೆ ತತ್ತರಿಸಿದ ಬ್ಯಾಟರ್​ಗಳು: ಇಲ್ಲಿದೆ ವಿಡಿಯೋ

| Updated By: ಝಾಹಿರ್ ಯೂಸುಫ್

Updated on: Aug 04, 2022 | 2:18 PM

Team India: ಕಾಮನ್​ವೆಲ್ತ್ ಗೇಮ್ಸ್​ನ ಮಹಿಳಾ ಟಿ20 ಟೂರ್ನಿಯಲ್ಲಿ ಭಾರತ ತಂಡವು ಸೆಮಿಫೈನಲ್ ಪ್ರವೇಶಿಸಿದ್ದು, ಈ ಪಂದ್ಯಗಳು ಆಗಸ್ಟ್ 6 ರಂದು ಬರ್ಮಿಂಗ್​ಹ್ಯಾಮ್​ನ ಎಡ್ಜ್​ಬಾಸ್ಟನ್​ ಮೈದಾನದಲ್ಲಿ ನಡೆಯಲಿದೆ.

ಟೀಮ್ ಇಂಡಿಯಾದ ಸ್ವಿಂಗ್ ಕ್ವೀನ್ ಬೌಲಿಂಗ್​ಗೆ ತತ್ತರಿಸಿದ ಬ್ಯಾಟರ್​ಗಳು: ಇಲ್ಲಿದೆ ವಿಡಿಯೋ
ರೇಣುಕಾ ಸಿಂಗ್ ಬೌಲಿಂಗ್
Follow us on

ಕಾಮನ್​ವೆಲ್ತ್ ಗೇಮ್ಸ್​ನಲ್ಲಿ (CWG 2022) ನಡೆಯುತ್ತಿರುವ ಮಹಿಳಾ ಕ್ರಿಕೆಟ್​ನಲ್ಲಿ ಭಾರತ ವನಿತೆಯರ ತಂಡ (India Women Cricket) ಸೆಮಿ ಫೈನಲ್​ಗೆ ಲಗ್ಗೆಯಿಟ್ಟಿದೆ. ಎಡ್ಜ್​ಬಾಸ್ಟನ್​​ ಮೈದಾನದಲ್ಲಿ ನಡೆದ ಬಾರ್ಬಡೋಸ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡವು ಬರೋಬ್ಬರಿ 100 ರನ್​ಗಳ ಅಂತರದಿಂದ ಅಮೋಘ ಗೆಲುವು ಸಾಧಿಸಿತು. ಈ ಭರ್ಜರಿ ಗೆಲುವಿನ ರೂವಾರಿ ರೇಣುಕಾ ಸಿಂಗ್. ಏಕೆಂದರೆ ರೇಣುಕಾ ಸಿಂಗ್ ಅವರ ಸ್ವಿಂಗ್ ಬೌಲಿಂಗ್ ಮುಂದೆ ಬಾರ್ಬಡೋಸ್ ವನಿತೆಯರು ಕ್ರೀಸ್ ಕಚ್ಚಿ ನಿಲ್ಲಲು ಹರಸಾಹಸಪಟ್ಟರು.

ಟೀಮ್ ಇಂಡಿಯಾ ನೀಡಿದ 163 ರನ್​ಗಳ ಟಾರ್ಗೆಟ್ ಬೆನ್ನಿತ್ತಿದ ಬಾರ್ಬಡೋಸ್ ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ಮೊದಲ ಓವರ್​ನಿಂದಲೇ ವಿಕೆಟ್ ಕಳೆದುಒಂಡ ತಂಡವು ರೇಣುಕಾ ಸಿಂಗ್ ಅವರ ಬೌಲಿಂಗ್ ಮುಂದೆ ರನ್​ಗಳಿಸಲು ಪರದಾಡಿದರು. ಪರಿಣಾಮ ಒಂದು ಹಂತದಲ್ಲಿ 50ರ ಗಡಿದಾಟುವುದು ಕೂಡ ಅನುಮಾನ ಎಂಬಂತಿತ್ತು.

ಇದಾಗ್ಯೂ ನೈಟ್ 16 ಹಾಗೂ ಶಕೀರ ಸೆಲ್ಮನ್ 12 ರನ್​ಗಳಿಸಿ ತಂಡದ ಮೊತ್ತವನ್ನು ಅರ್ಧಶತಕದ ಗಡಿದಾಟಿಸಿದರು. ಅಂತಿಮವಾಗಿ ರೇಣುಕಾ ಸಿಂಗ್ ದಾಳಿಗೆ ತತ್ತರಿಸಿದ ಬಾರ್ಬಡೋಸ್ 20 ಓವರ್​ಗೆ 8 ವಿಕೆಟ್ ನಷ್ಟಕ್ಕೆ 62 ರನ್ ಗಳಿಸಲಷ್ಟೇ ಶಕ್ತರಾದರು. ಬೆಂಕಿ ಬೌಲಿಂಗ್ ಪ್ರದರ್ಶಿಸಿದ ರೇಣುಕಾ ಸಿಂಗ್ 4 ಓವರ್​ಗೆ ಕೇವಲ 10 ರನ್ ನೀಡಿ 4 ವಿಕೆಟ್ ಕಿತ್ತರು. ಇದೀಗ ಟೀಮ್ ಇಂಡಿಯಾದ ಸ್ವಿಂಗ್ ಕ್ವೀನ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ರೇಣುಕಾ ಬೌಲಿಂಗ್ ಬಗ್ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಇದನ್ನೂ ಓದಿ
Team India: 7 ತಿಂಗಳಲ್ಲಿ 7 ನಾಯಕರು: ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
ಸಚಿನ್, ಧೋನಿಗೂ ಸಿಕ್ಕಿಲ್ಲ ಈ ಗೌರವ: ಇಂಗ್ಲೆಂಡ್ ಕ್ರಿಕೆಟ್ ಸ್ಟೇಡಿಯಂಗೆ ಭಾರತೀಯ ಕ್ರಿಕೆಟಿಗನ ಹೆಸರು..!
Cheteshwar Pujara: ಒಟ್ಟು 997 ರನ್​: ಕೌಂಟಿ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಪೂಜಾರ
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

 

 

ಕಾಮನ್​ವೆಲ್ತ್ ಗೇಮ್ಸ್​ನ ಮಹಿಳಾ ಟಿ20 ಟೂರ್ನಿಯಲ್ಲಿ ಭಾರತ ತಂಡವು ಸೆಮಿಫೈನಲ್ ಪ್ರವೇಶಿಸಿದ್ದು, ಈ ಪಂದ್ಯಗಳು ಆಗಸ್ಟ್ 6 ರಂದು ಬರ್ಮಿಂಗ್​ಹ್ಯಾಮ್​ನ ಎಡ್ಜ್​ಬಾಸ್ಟನ್​ ಮೈದಾನದಲ್ಲಿ ನಡೆಯಲಿದೆ.