Rohit Sharma: ಗಾಯದ ಸಮಸ್ಯೆ: ಏಷ್ಯಾಕಪ್ ಆಡಲ್ವಾ ಹಿಟ್​ಮ್ಯಾನ್..? ಇಲ್ಲಿದೆ ಉತ್ತರ

TV9 Digital Desk

| Edited By: Zahir Yusuf

Updated on: Aug 04, 2022 | 1:06 PM

ಮುಂಬರುವ ಟಿ20 ವಿಶ್ವಕಪ್​ ಹಿನ್ನೆಲೆಯಲ್ಲಿ ಈ ಬಾರಿಯ ಏಷ್ಯಾಕಪ್ ಮಹತ್ವ ಪಡೆದುಕೊಂಡಿದೆ. ಯುಎಇನಲ್ಲಿ ನಡೆಯಲಿರುವ ಏಷ್ಯಾ ರಾಷ್ಟ್ರಗಳ ಈ ಚುಟುಕು ಕ್ರಿಕೆಟ್ ಕದನ ಆಗಸ್ಟ್ 27 ರಿಂದ ಶುರುವಾಗಲಿದೆ.

Rohit Sharma: ಗಾಯದ ಸಮಸ್ಯೆ: ಏಷ್ಯಾಕಪ್ ಆಡಲ್ವಾ ಹಿಟ್​ಮ್ಯಾನ್..? ಇಲ್ಲಿದೆ ಉತ್ತರ
Rohit sharma

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡ 2-1 ಮುನ್ನಡೆ ಸಾಧಿಸಿದೆ. ಸರಣಿಯ ಮೊದಲ ಪಂದ್ಯವನ್ನು ಗೆದ್ದ ಟೀಮ್ ಇಂಡಿಯಾ 2ನೇ ಪಂದ್ಯದಲ್ಲಿ ಸೋತಿತ್ತು. ಇನ್ನು ಮೂರನೇ ಪಂದ್ಯದಲ್ಲಿ ಭಾರತ ತಂಡವು ಭರ್ಜರಿಯಾಗಿ ಜಯ ಸಾಧಿಸಿತು. ಆದರೆ ಈ ಗೆಲುವಿನ ವೇಳೆ ನಾಯಕ ರೋಹಿತ್ ಶರ್ಮಾ (Rohit Sharma) ಗಾಯಗೊಂಡಿದ್ದರು. ಹಿಟ್​ಮ್ಯಾನ್ ಬೆನ್ನು ನೋವಿಗೆ ತುತ್ತಾಗಿ ಅರ್ಧದಲ್ಲೇ ಮೈದಾನ ತೊರೆದಿದ್ದರು. ಹೀಗಾಗಿಯೇ ಅವರು ಮುಂಬರುವ ಪಂದ್ಯಗಳಲ್ಲಿ ಆಡಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಮಾಧ್ಯಮ ವರದಿಗಳ ಪ್ರಕಾರ, 4ನೇ ಟಿ20 ಪಂದ್ಯದ ವೇಳೆಗೆ ರೋಹಿತ್ ಶರ್ಮಾ ಚೇತರಿಸಿಕೊಳ್ಳುವ ಸಾಧ್ಯತೆಯಿದೆ. ವೈದ್ಯಕೀಯ ವರದಿ ಪ್ರಕಾರ ಅವರ ನೋವಿನ ಸಮಸ್ಯೆ ಗಂಭೀರವಲ್ಲ. ಹೀಗಾಗಿ ಆಗಸ್ಟ್ 6 ರಂದು ನಡೆಯಲಿರುವ ಟಿ20 ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ. ಈ ಪಂದ್ಯಕ್ಕಾಗಿ ಇನ್ನೂ ಎರಡು ದಿನಗಳ ಕಾಲ ವಿಶ್ರಾಂತಿ ಪಡೆಯಬಹುದಾಗಿದೆ. ಇದಾಗ್ಯೂ ಮುನ್ನೆಚ್ಚರಿಕೆ ಕ್ರಮವಾಗಿ 4ನೇ ಪಂದ್ಯದಿಂದ ಹೊರಗುಳಿದರೂ, 5ನೇ ಪಂದ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇನ್ನು ವೆಸ್ಟ್ ಇಂಡೀಸ್ ವಿರುದ್ದದ 4ನೇ ಮತ್ತು 5ನೇ ಟಿ20 ಪಂದ್ಯವು ಆಗಸ್ಟ್ 6 ಆಗಸ್ಟ್ 7 ರಂದು ನಡೆಯಲಿದೆ. ಎರಡೂ ಪಂದ್ಯಗಳು ಫ್ಲೋರಿಡಾದಲ್ಲಿ ನಡೆಯಲಿವೆ. ಇದಾದ ಬಳಿಕ ಟೀಮ್ ಇಂಡಿಯಾ ಜಿಂಬಾಬ್ವೆ ವಿರುದ್ದ ಏಕದಿನ ಸರಣಿ ಆಡಲಿದೆ. ಆದರೆ ಈ ಸರಣಿಯಿಂದ ರೋಹಿತ್ ಶರ್ಮಾ ವಿಶ್ರಾಂತಿ ಪಡೆದಿದ್ದಾರೆ. ಹಾಗಾಗಿ ವೆಸ್ಟ್ ಇಂಡೀಸ್ ವಿರುದ್ದದ ಕೊನೆಯ 2 ಟಿ20 ಪಂದ್ಯಗಳಿಂದ ಮುನ್ನೆಚ್ಚರಿಕೆ ಸಲುವಾಗಿ ಹೊರಗುಳಿದರೂ ಏಷ್ಯಾಕಪ್​ ವೇಳೆಗೆ ಸಂಪೂರ್ಣ ಫಿಟ್​ನೆಸ್​ನೊಂದಿಗೆ ರೋಹಿತ್ ಶರ್ಮಾ ಕಾಣಿಸಿಕೊಳ್ಳುವುದು ಖಚಿತ.

ಇದನ್ನೂ ಓದಿ

ಮುಂಬರುವ ಟಿ20 ವಿಶ್ವಕಪ್​ ಹಿನ್ನೆಲೆಯಲ್ಲಿ ಈ ಬಾರಿಯ ಏಷ್ಯಾಕಪ್ ಮಹತ್ವ ಪಡೆದುಕೊಂಡಿದೆ. ಯುಎಇನಲ್ಲಿ ನಡೆಯಲಿರುವ ಏಷ್ಯಾ ರಾಷ್ಟ್ರಗಳ ಈ ಚುಟುಕು ಕ್ರಿಕೆಟ್ ಕದನ ಆಗಸ್ಟ್ 27 ರಿಂದ ಶುರುವಾಗಲಿದೆ. ಆಗಸ್ಟ್ 28 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ವಿರುದ್ದದ ಪಂದ್ಯದೊಂದಿಗೆ ಟೀಮ್ ಇಂಡಿಯಾ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ. ಹೀಗಾಗಿ ಮಹತ್ವದ ಪಂದ್ಯಕ್ಕಾಗಿ ಬಲಿಷ್ಠ ಪಡೆಯನ್ನೇ ಕಣಕ್ಕಿಳಿಸಬೇಕಿದ್ದು, ಹೀಗಾಗಿ ರೋಹಿತ್ ಶರ್ಮಾ ಅವರ ಫಿಟ್​ನೆಸ್ ಅಪ್​ಡೇಟ್ ಬಗ್ಗೆ ಬಿಸಿಸಿಐ ವಿಶೇಷ ಕಾಳಜಿವಹಿಸುತ್ತಿದೆ. ಅದರಂತೆ ವೆಸ್ಟ್ ಇಂಡೀಸ್ ವಿರುದ್ದದ ಕೊನೆಯ ಎರಡು ಪಂದ್ಯಗಳಲ್ಲಿ ಹಿಟ್​ಮ್ಯಾನ್ ವಿಶ್ರಾಂತಿ ನೀಡಿದರೂ ಅಚ್ಚರಿಪಡಬೇಕಿಲ್ಲ. ಒಂದು ವೇಳೆ ರೋಹಿತ್ ಶರ್ಮಾ ವಿಂಡೀಸ್ ವಿರುದ್ದದ ಕೊನೆಯ ಎರಡು ಪಂದ್ಯಗಳಿಂದ ಹೊರಗುಳಿದರೆ ಏಷ್ಯಾಕಪ್ ಮೂಲಕ ಮತ್ತೆ ಮೈದಾನಕ್ಕಿಳಿಯಲಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada