ಟೀಮ್ ಇಂಡಿಯಾದ ಸ್ವಿಂಗ್ ಕ್ವೀನ್ ಬೌಲಿಂಗ್ಗೆ ತತ್ತರಿಸಿದ ಬ್ಯಾಟರ್ಗಳು: ಇಲ್ಲಿದೆ ವಿಡಿಯೋ
Team India: ಕಾಮನ್ವೆಲ್ತ್ ಗೇಮ್ಸ್ನ ಮಹಿಳಾ ಟಿ20 ಟೂರ್ನಿಯಲ್ಲಿ ಭಾರತ ತಂಡವು ಸೆಮಿಫೈನಲ್ ಪ್ರವೇಶಿಸಿದ್ದು, ಈ ಪಂದ್ಯಗಳು ಆಗಸ್ಟ್ 6 ರಂದು ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಮೈದಾನದಲ್ಲಿ ನಡೆಯಲಿದೆ.
ಕಾಮನ್ವೆಲ್ತ್ ಗೇಮ್ಸ್ನಲ್ಲಿ (CWG 2022) ನಡೆಯುತ್ತಿರುವ ಮಹಿಳಾ ಕ್ರಿಕೆಟ್ನಲ್ಲಿ ಭಾರತ ವನಿತೆಯರ ತಂಡ (India Women Cricket) ಸೆಮಿ ಫೈನಲ್ಗೆ ಲಗ್ಗೆಯಿಟ್ಟಿದೆ. ಎಡ್ಜ್ಬಾಸ್ಟನ್ ಮೈದಾನದಲ್ಲಿ ನಡೆದ ಬಾರ್ಬಡೋಸ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡವು ಬರೋಬ್ಬರಿ 100 ರನ್ಗಳ ಅಂತರದಿಂದ ಅಮೋಘ ಗೆಲುವು ಸಾಧಿಸಿತು. ಈ ಭರ್ಜರಿ ಗೆಲುವಿನ ರೂವಾರಿ ರೇಣುಕಾ ಸಿಂಗ್. ಏಕೆಂದರೆ ರೇಣುಕಾ ಸಿಂಗ್ ಅವರ ಸ್ವಿಂಗ್ ಬೌಲಿಂಗ್ ಮುಂದೆ ಬಾರ್ಬಡೋಸ್ ವನಿತೆಯರು ಕ್ರೀಸ್ ಕಚ್ಚಿ ನಿಲ್ಲಲು ಹರಸಾಹಸಪಟ್ಟರು.
ಟೀಮ್ ಇಂಡಿಯಾ ನೀಡಿದ 163 ರನ್ಗಳ ಟಾರ್ಗೆಟ್ ಬೆನ್ನಿತ್ತಿದ ಬಾರ್ಬಡೋಸ್ ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ಮೊದಲ ಓವರ್ನಿಂದಲೇ ವಿಕೆಟ್ ಕಳೆದುಒಂಡ ತಂಡವು ರೇಣುಕಾ ಸಿಂಗ್ ಅವರ ಬೌಲಿಂಗ್ ಮುಂದೆ ರನ್ಗಳಿಸಲು ಪರದಾಡಿದರು. ಪರಿಣಾಮ ಒಂದು ಹಂತದಲ್ಲಿ 50ರ ಗಡಿದಾಟುವುದು ಕೂಡ ಅನುಮಾನ ಎಂಬಂತಿತ್ತು.
ಇದಾಗ್ಯೂ ನೈಟ್ 16 ಹಾಗೂ ಶಕೀರ ಸೆಲ್ಮನ್ 12 ರನ್ಗಳಿಸಿ ತಂಡದ ಮೊತ್ತವನ್ನು ಅರ್ಧಶತಕದ ಗಡಿದಾಟಿಸಿದರು. ಅಂತಿಮವಾಗಿ ರೇಣುಕಾ ಸಿಂಗ್ ದಾಳಿಗೆ ತತ್ತರಿಸಿದ ಬಾರ್ಬಡೋಸ್ 20 ಓವರ್ಗೆ 8 ವಿಕೆಟ್ ನಷ್ಟಕ್ಕೆ 62 ರನ್ ಗಳಿಸಲಷ್ಟೇ ಶಕ್ತರಾದರು. ಬೆಂಕಿ ಬೌಲಿಂಗ್ ಪ್ರದರ್ಶಿಸಿದ ರೇಣುಕಾ ಸಿಂಗ್ 4 ಓವರ್ಗೆ ಕೇವಲ 10 ರನ್ ನೀಡಿ 4 ವಿಕೆಟ್ ಕಿತ್ತರು. ಇದೀಗ ಟೀಮ್ ಇಂಡಿಯಾದ ಸ್ವಿಂಗ್ ಕ್ವೀನ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ರೇಣುಕಾ ಬೌಲಿಂಗ್ ಬಗ್ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಕಾಮನ್ವೆಲ್ತ್ ಗೇಮ್ಸ್ನ ಮಹಿಳಾ ಟಿ20 ಟೂರ್ನಿಯಲ್ಲಿ ಭಾರತ ತಂಡವು ಸೆಮಿಫೈನಲ್ ಪ್ರವೇಶಿಸಿದ್ದು, ಈ ಪಂದ್ಯಗಳು ಆಗಸ್ಟ್ 6 ರಂದು ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಮೈದಾನದಲ್ಲಿ ನಡೆಯಲಿದೆ.