ಮತ್ತೊಂದು ಸಂಡೆ… ಪಾಕಿಗಳನ್ನು ಟ್ರೋಲ್ ಮಾಡಿದ ಇರ್ಫಾನ್ ಪಠಾಣ್
India Women vs Pakistan Women: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 50 ಓವರ್ಗಳಲ್ಲಿ 247 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡವು 43 ಓವರ್ಗಳಲ್ಲಿ 159 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡವು 88 ರನ್ಗಳ ಭರ್ಜರಿ ಜಯ ಸಾಧಿಸಿದೆ.

ಭಾರತ ಮತ್ತು ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಪಂದ್ಯದ ಮುಕ್ತಾಯದ ಬೆನ್ನಲ್ಲೇ ಎಲ್ಲರ ಗಮನ ಸೆಳೆಯುವುದು ಇರ್ಫಾನ್ ಪಠಾಣ್ ಅವರ ಟ್ವೀಟ್. 2022 ರಿಂದ ಶುರುವಾದ ಈ ಟ್ವೀಟ್ ಸಮರ ಈಗಲೂ ಮುಂದುವರೆದಿದೆ. ಈ ಬಾರಿ ಮತ್ತೊಂದು ಸಂಡೆ… ಎಂದು ಟ್ವೀಟಿಸಿ ಇರ್ಫಾನ್ ಪಠಾಣ್ ಪಾಕಿಸ್ತಾನಿಗಳ ಕಾಲೆಳೆದಿದ್ದಾರೆ.
ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಪಾಕಿಗಳ ಕಾಲೆಳೆಯಲು ಆರಂಭಿಸಿದ್ದು 2022 ರಲ್ಲಿ. 2022ರ ಟಿ20 ವಿಶ್ವಕಪ್ನಲ್ಲಿ ಭಾರತ ತಂಡವು ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿದ ಬೆನ್ನಲ್ಲೇ ಇರ್ಫಾನ್ ಪಠಾಣ್, ನೆರೆಹೊರೆಯವರೇ (ಪಾಕಿಸ್ತಾನ್) ಭಾನುವಾರ ಹೇಗಿತ್ತು? ಎಂದು ಟ್ವೀಟ್ ಮಾಡಿ ಕಾಲೆಳೆದಿದ್ದರು.
ಈ ಟ್ವೀಟ್ ಭಾರೀ ವೈರಲ್ ಆದ ಬೆನ್ನಲ್ಲೇ ಪಾಕಿಸ್ತಾನಿಗಳು ಇರ್ಫಾನ್ ಪಠಾಣ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಮುಗಿ ಬಿದ್ದಿದ್ದರು. ಇದಾದ ಬಳಿಕ ಪ್ರತಿ ಬಾರಿ ಪಾಕ್ ವಿರುದ್ಧ ಭಾರತ ತಂಡ ಗೆದ್ದಾಗ ಪಾಕಿಸ್ತಾನಿಗಳ ಕಾಲೆಳೆಯುವ ಕಾಯಕ ಮುಂದುವರೆಸಿದ್ದಾರೆ.
2023 ರ ಏಕದಿನ ವಿಶ್ವಕಪ್ ಪಂದ್ಯದ ಸೋಲಿನ ಬೆನ್ನಲ್ಲೇ. ಇವತ್ತು ಸಾಕಷ್ಟು ಮೌನ ಆವರಿಸಿದೆ… ಈ ಬಾರಿ ನೆರೆಹೊರೆಯವರು ಟಿವಿ ಜೊತೆಗೆ ಮೊಬೈಲ್ ಫೋನ್‌ಗಳನ್ನು ಒಡೆದಿದ್ದಾರೆ ಅನಿಸುತ್ತೆ ಎಂದು ಪಾಕ್ ಅಭಿಮಾನಿಗಳ ಕಾಲೆಳೆದಿದ್ದರು.
ಅಲ್ಲದೆ ಈ ಬಾರಿಯ ಏಷ್ಯಾಕಪ್ನಲ್ಲಿ ಭಾರತ ತಂಡವು ಪಾಕಿಸ್ತಾನ್ ತಂಡವನ್ನು ಸೋಲಿಸುತ್ತಿದ್ದಂತೆ ಇರ್ಫಾನ್ ಪಠಾಣ್ ಮತ್ತೆ ಸಂಡೆ ಟ್ವೀಟ್ನೊಂದಿಗೆ ಹಿಂತಿರುಗಿದ್ದಾರೆ. ಈ ಬಾರಿ ಕೂಡ ಸಂಡೆ ಹೇಗಿತ್ತು ಎಂದು ಟ್ವೀಟಿಸಿ ಪಾಕಿಸ್ತಾನಿಗಳನ್ನು ಕಿಚಾಯಿಸಿದ್ದರು.
ಇದೀಗ ಮತ್ತೊಮ್ಮೆ ಸಂಡೆ ಟ್ವೀಟ್ನೊಂದಿಗೆ ಇರ್ಫಾನ್ ಪಠಾಣ್ ಆಗಮಿಸಿದ್ದಾರೆ. ಭಾನುವಾರ ಕೊಲಂಬೊದಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ್ ತಂಡದ ವಿರುದ್ಧ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದ್ದಾರೆ.
Just another Sunday of Eat. Sleep. Win. Repeat. 🇮🇳 TeamIndia
— Irfan Pathan (@IrfanPathan) October 5, 2025
ಈ ಗೆಲುವಿನ ಬೆನ್ನಲ್ಲೇ ಮತ್ತೊಂದು ಸಂಡೆ… ಈಟ್, ಸ್ಲೀಪ್, ವಿನ್, ರಿಪೀಟ್ ಎಂದು ಟ್ವೀಟಿಸಿ ಇರ್ಫಾನ್ ಪಠಾಣ್ ಪರೋಕ್ಷವಾಗಿ ಪಾಕಿಗಳ ಕಾಲೆಳೆದಿದ್ದಾರೆ. ಇದೀಗ ಈ ಟ್ವೀಟ್ ವೈರಲ್ ಆಗಿದ್ದು, ಅಭಿಮಾನಿಗಳಿಂದ ನಾನಾ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಬರೋಬ್ಬರಿ 12 ಸಿಕ್ಸ್, 23 ಫೋರ್ ಚಚ್ಚಿದ ವೈಭವ್ ಸೂರ್ಯವಂಶಿ
ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಮ್ ಇಂಡಿಯಾ 50 ಓವರ್ಗಳಲ್ಲಿ 247 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡವು 43 ಓವರ್ಗಳಲ್ಲಿ 159 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ 88 ರನ್ಗಳ ಅಮೋಘ ಜಯ ಸಾಧಿಸಿದೆ.
Published On - 2:11 pm, Mon, 6 October 25
