IND vs ENG: ಲಾರ್ಡ್ಸ್‌ನಲ್ಲಿ ಎರಡನೇ ಶತಕ ಬಾರಿಸಿದ ಕನ್ನಡಿಗ ಕೆಎಲ್ ರಾಹುಲ್

KL Rahul's Lords Century: ಲಾರ್ಡ್ಸ್ ಟೆಸ್ಟ್ ಪಂದ್ಯದ ಮೂರನೇ ದಿನದ ಆಟದಲ್ಲಿ ಟೀಂ ಇಂಡಿಯಾ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್ ಅವರು ಶತಕದ ಜೊತೆಯಾಟ ಆಡಿದರು. ಆದರೆ ರಿಷಭ್ ಪಂತ್ ವಿಕೆಟ್ ಪತನದೊಂದಿಗೆ ಜೊತೆಯಾಟ ಮುರಿಯಿತು. ಆದಾಗ್ಯೂ ಎರಡನೇ ಸೆಷನ್‌ನಲ್ಲಿ ಕೆಎಲ್ ರಾಹುಲ್ ಲಾರ್ಡ್ಸ್‌ನಲ್ಲಿ ತಮ್ಮ ಎರಡನೇ ಶತಕವನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾದರು.

IND vs ENG: ಲಾರ್ಡ್ಸ್‌ನಲ್ಲಿ ಎರಡನೇ ಶತಕ ಬಾರಿಸಿದ ಕನ್ನಡಿಗ ಕೆಎಲ್ ರಾಹುಲ್
Kl Rahul

Updated on: Jul 12, 2025 | 6:44 PM

ಲಾರ್ಡ್ಸ್ ಟೆಸ್ಟ್ (Lords Test) ಪಂದ್ಯದಲ್ಲಿ ಮೂರನೇ ದಿನದಾಟ ಆರಂಭವಾಗಿದ್ದು, ಟೀಂ ಇಂಡಿಯಾ ಮೊದಲ ಸೆಷನ್​ನಲ್ಲಿ ಅಧ್ಬುತವಾಗಿ ಬ್ಯಾಟಿಂಗ್‌ ಮಾಡಿದೆ. ಈ ಸೆಷನ್​ನಲ್ಲಿ ರಿಷಭ್ ಪಂತ್ (Rishabh Pant) ಹಾಗೂ ಕೆಎಲ್ ರಾಹುಲ್ (KL Rahul) ಶತಕದ ಜೊತೆಯಾಟವನ್ನು ಪೂರೈಸಿದರು. ಆದರೆ ಮೊದಲ ಸೆಷನ್ ಅಂತ್ಯದ ಅಂಚಿನಲ್ಲಿ ರಾಹುಲ್ ಹಾಗೂ ರಿಷಭ್ ಅವರ ಆತುರದ ನಿರ್ಧಾರದಿಂದಾಗಿ ರಿಷಭ್ ಅವರ ವಿಕೆಟ್​ ಪತನದೊಂದಿಗೆ ಇವರಿಬ್ಬರ ಜೊತೆಯಾಟ ಮುರಿದುಬಿತ್ತು. ಇದೀಗ ಆರಂಭವಾಗಿರುವ ಎರಡನೇ ಸೆಷನ್​ ಆರಂಭದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಐತಿಹಾಸಿಕ ಲಾರ್ಡ್ಸ್‌ ಮೈದಾನದಲ್ಲಿ ತಮ್ಮ ಎರಡನೇ ಶತಕವನ್ನು ಪೂರೈಸಿದರು. ಆದರೆ ಶತಕ ಬಾರಿಸಿದ ಬೆನ್ನಲ್ಲೇ ರಾಹುಲ್ ತಮ್ಮ ಇನ್ನಿಂಗ್ಸ್​ಗೆ ಅಂತ್ಯ ಹಾಡಿರುವುದು ಟೀಂ ಇಂಡಿಯಾಕ್ಕೆ ಆಘಾತ ನೀಡಿದೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದ ರಾಹುಲ್ ಈಗ ಲಾರ್ಡ್ಸ್‌ನಲ್ಲೂ ಶತಕ ಗಳಿಸಿದ್ದಾರೆ. ಇದು ರಾಹುಲ್ ಅವರ 9 ನೇ ಟೆಸ್ಟ್ ಶತಕವಾಗಿದೆ. ಇದರೊಂದಿಗೆ, ಈ ಐತಿಹಾಸಿಕ ಮೈದಾನದಲ್ಲಿ ಒಂದಕ್ಕಿಂತ ಹೆಚ್ಚು ಟೆಸ್ಟ್ ಶತಕಗಳನ್ನು ಬಾರಿಸಿದ ಭಾರತದ ಎರಡನೇ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ರಾಹುಲ್ ನಿರ್ಮಿಸಿದರು.

2021ರಲ್ಲಿ ಮೊದಲ ಶತಕ

ಎರಡನೇ ದಿನದಂದು ಅರ್ಧಶತಕ ಗಳಿಸಿ ಅಜೇಯರಾಗಿ ಉಳಿದಿದ್ದ ರಾಹುಲ್, ಮೂರನೇ ದಿನದಾಟದಲ್ಲಿ ಪಂತ್ ಅವರೊಂದಿಗೆ ಸೇರಿ ಟೀಂ ಇಂಡಿಯಾವನ್ನು 250 ರನ್‌ಗಳ ಗಡಿ ದಾಟಿಸಿದರು. ಆದರೆ ಮೇಲೆ ಹೇಳಿದಂತೆ ಊಟಕ್ಕೆ ಮುಂಚಿನ ಕೊನೆಯ ಓವರ್‌ನಲ್ಲಿ ಪಂತ್ ರನೌಟ್ ಆಗುವ ಮೂಲಕ ಇವರಿಬ್ಬರ ಜೊತೆಯಾಟ ಮುರಿದುಬಿತ್ತು. ಇದರ ಜೊತೆಗೆ ರಾಹುಲ್ ತಮ್ಮ ಶತಕಕ್ಕಾಗಿ ಮುಂದಿನ ಸೆಷನ್‌ಗಾಗಿ ಕಾಯಬೇಕಾಯಿತು. ನಂತರ ಎರಡನೇ ಸೆಷನ್ ಪ್ರಾರಂಭವಾದಾಗ, ರಾಹುಲ್ ಒಂದು ರನ್ ಗಳಿಸುವ ಮೂಲಕ ತಮ್ಮ ಟೆಸ್ಟ್ ವೃತ್ತಿಜೀವನದ 9 ನೇ ಶತಕವನ್ನು ಪೂರ್ಣಗೊಳಿಸಿದರು. ಇದರೊಂದಿಗೆ, ರಾಹುಲ್ ಲಾರ್ಡ್ಸ್‌ನಲ್ಲಿ ತಮ್ಮ ಸತತ ಎರಡನೇ ಶತಕವನ್ನು ಸಹ ಪೂರ್ಣಗೊಳಿಸಿದರು. 2021 ರಲ್ಲಿ ಕೊನೆಯ ಪ್ರವಾಸದಲ್ಲಿ ರಾಹುಲ್ ಈ ಮೈದಾನದಲ್ಲಿ ಶತಕ ಬಾರಿಸಿದ್ದರು. ಅದು ಈ ಮೈದಾನದಲ್ಲಿ ರಾಹುಲ್ ಅವರ ಮೊದಲ ಶತಕವಾಗಿತ್ತು. ಈಗ ಅವರು ಈ ಐತಿಹಾಸಿಕ ಸ್ಥಳದಲ್ಲಿ ಎರಡನೇ ಬಾರಿಗೆ 100 ರ ಗಡಿ ದಾಟಿದ್ದಾರೆ.

IND vs ENG: ಬುಮ್ರಾ 5 ವಿಕೆಟ್, ರಾಹುಲ್ ಅರ್ಧಶತಕ; 2ನೇ ದಿನದಾಟದ ವಿವರ ಇಲ್ಲಿದೆ

ಈ ಸಾಧನೆ ಮಾಡಿದ 2ನೇ ಭಾರತೀಯ

ಆದರೆ, ಶತಕ ಬಾರಿಸಿದ ಬೆನ್ನಲ್ಲೇ ರಾಹುಲ್, ಶೋಯೆಬ್ ಬಶೀರ್ ಎಸೆತದಲ್ಲಿ ಕ್ಯಾಚಿತ್ತು ಔಟಾದರು. ಅಂತಿಮವಾಗಿ ರಾಹುಲ್ 177 ಎಸೆತಗಳಲ್ಲಿ 13 ಬೌಂಡರಿಗಳ ಸಹಾಯದಿಂದ 100 ರನ್ ಕಲೆಹಾಕಿದರು. ರಾಹುಲ್ ತಮ್ಮ ಶತಕವನ್ನು ದೊಡ್ಡ ಸ್ಕೋರ್ ಆಗಿ ಪರಿವರ್ತಿಸಲು ಸಾಧ್ಯವಾಗದಿರಬಹುದು ಆದರೆ ಈ ಇನ್ನಿಂಗ್ಸ್‌ನೊಂದಿಗೆ ಅವರು ಖಂಡಿತವಾಗಿಯೂ ಇತಿಹಾಸ ನಿರ್ಮಿಸಿದ್ದಾರೆ. ಲಾರ್ಡ್ಸ್ ಮೈದಾನದಲ್ಲಿ ಒಂದಕ್ಕಿಂತ ಹೆಚ್ಚು ಶತಕಗಳನ್ನು ಗಳಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಅವರಿಗಿಂತ ಮೊದಲು, ದಿಲೀಪ್ ವೆಂಗ್‌ಸರ್ಕಾರ್ ಈ ಮೈದಾನದಲ್ಲಿ 3 ಶತಕಗಳನ್ನು ಗಳಿಸಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:22 pm, Sat, 12 July 25