IND vs NZ, ICC World Cup Semi Final: ವಿಶ್ವಕಪ್ ಸೆಮಿ ಫೈನಲ್​ನಲ್ಲಿ ಭಾರತದ ಎದುರಾಳಿ ನ್ಯೂಝಿಲೆಂಡ್: ಪಂದ್ಯ ಯಾವಾಗ?

|

Updated on: Nov 10, 2023 | 9:45 AM

ICC ODI World Cup 2023 Semi Final Schedule: ಐಸಿಸಿ ಏಕದಿನ ವಿಶ್ವಕಪ್ 2023ರ ಸೆಮಿ ಫೈನಲ್​ನಲ್ಲಿ ಯಾವ ತಂಡಗಳು ಮುಖಾಮುಖಿ ಆಗಲಿದೆ ಎಂಬುದು ಬಹುತೇಕ ಸ್ಪಷ್ಟವಾಗಿದೆ. ಹಾಗಾದರೆ, ಸೆಮೀಸ್​ನಲ್ಲಿ ಟೀಮ್ ಇಂಡಿಯಾ ಯಾರನ್ನು ಎದುರಿಸಲಿದೆ?, ಈ ಪಂದ್ಯ ಯಾವಾಗ?, ಎಲ್ಲಿ? ನಡೆಯಲಿದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

IND vs NZ, ICC World Cup Semi Final: ವಿಶ್ವಕಪ್ ಸೆಮಿ ಫೈನಲ್​ನಲ್ಲಿ ಭಾರತದ ಎದುರಾಳಿ ನ್ಯೂಝಿಲೆಂಡ್: ಪಂದ್ಯ ಯಾವಾಗ?
IND vs NZ World Cup Semi Final
Follow us on

36 ದಿನಗಳು ಮತ್ತು 41 ಪಂದ್ಯಗಳ ನಂತರ, ಐಸಿಸಿ ಏಕದಿನ ವಿಶ್ವಕಪ್ 2023 ರ ಸೆಮಿ ಫೈನಲ್‌ನಲ್ಲಿ (ICC ODI World Cup Semi Final) ನಾಲ್ಕು ತಂಡಗಳು ಸ್ಪರ್ಧಿಸಲಿರುವ ಚಿತ್ರಣ ಬಹುತೇಕ ಸ್ಪಷ್ಟವಾಗಿದೆ. ಆರಂಭದಿಂದಲೂ ನಿರೀಕ್ಷೆ ಮೂಡಿಸಿದ್ದ ತಂಡಗಳ ಪೈಕಿ ಆತಿಥೇಯ ಭಾರತ ಮತ್ತು ಆಸ್ಟ್ರೇಲಿಯಾ ಇದರಲ್ಲಿ ಸ್ಥಾನ ಪಡೆದುಕೊಂಡಿವೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ಈ ಬಾರಿ ಅರ್ಹತೆ ಪಡೆಯುವಲ್ಲಿ ಎಡವಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಬದಲಾಗಿ ದಕ್ಷಿಣ ಆಫ್ರಿಕಾ ಮತ್ತೊಮ್ಮೆ ವಿಶ್ವಕಪ್ ಸೆಮಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ಇದನ್ನು ಕೂಡ ಎಲ್ಲರೂ ನಿರೀಕ್ಷಿಸಿರಲಿಲ್ಲ. ನಾಲ್ಕನೇ ತಂಡಕ್ಕಾಗಿ ನ್ಯೂಝಿಲೆಂಡ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ ಪೈಪೋಟಿ ನಡೆಯುತ್ತಿದ್ದರೂ, ಇದರಲ್ಲಿ ಯಾವ ತಂಡ ಎಂಬುದು ಕೂಡ ಬಹುತೇಕ ಸ್ಪಷ್ಟವಾಗಿದೆ.

ಗುರುವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ ಶ್ರೀಲಂಕಾವನ್ನು 5 ವಿಕೆಟ್‌ಗಳಿಂದ ಸುಲಭವಾಗಿ ಸೋಲಿಸಿತು. ಇದರೊಂದಿಗೆ ಕಿವೀಸ್ ಪಡೆ ಸೆಮಿ ಫೈನಲ್ ತಲುಪುವುದು 99 ಪ್ರತಿಶತ ಖಚಿತವಾಗಿದೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಸೆಮೀಸ್ ರೇಸ್​ನಲ್ಲಿದ್ದವು. ಆದರೆ, ಅಫ್ಘಾನಿಸ್ತಾನಕ್ಕೆ ಇದು ಅಸಾಧ್ಯ. ಅಂತೆಯೆ ಪಾಕಿಸ್ತಾನ ಕೂಡ ಸೆಮಿ ಫೈನಲ್ ತಲುಪುವ ಸಾಧ್ಯತೆ ನಗಣ್ಯ.

ಪವಾಡ ನಡೆದ್ರೆ ಮಾತ್ರ ಪಾಕಿಸ್ತಾನ್ ಸೆಮಿಫೈನಲ್​ಗೆ: ಇಲ್ಲಿದೆ ಲೆಕ್ಕಾಚಾರ

ಇದನ್ನೂ ಓದಿ
ಆಸೀಸ್ ವಿರುದ್ಧದ ಟಿ20 ಸರಣಿಗೆ ಭಾರತ ಈ ದಿನಾಂಕದಂದು ಪ್ರಕಟ: ನಾಯಕ ಯಾರು?
ಭಾರತೀಯರು ತಂಗಿರುವ ಬೆಂಗಳೂರಿನ ಹೋಟೆಲ್​ನಲ್ಲಿ ವಿರಾಟ್ ಜೊತೆ ಅನುಷ್ಕಾ
ವಿಶ್ವಕಪ್​ನಲ್ಲಿಂದು ಆಫ್ರಿಕಾ-ಅಫ್ಘಾನಿಸ್ತಾನ ಮುಖಾಮುಖಿ
ಏಕದಿನ ವಿಶ್ವಕಪ್​ನಲ್ಲಿ ಹೊಸ ಇತಿಹಾಸ ಬರೆದ ರಚಿನ್ ರವೀಂದ್ರ

ಇವು ಸೆಮಿ ಫೈನಲ್‌ನ 4 ತಂಡಗಳು

ನವೆಂಬರ್ 19ರಂದು ನಡೆಯಲಿರುವ ವಿಶ್ವಕಪ್ ಫೈನಲ್‌ನಲ್ಲಿ ಯಾವ ತಂಡ ಆಡಲಿದೆ ಎಂಬುದು ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್ ನಡುವಿನ ಪೈಪೋಟಿಯಿಂದ ನಿರ್ಧಾರವಾಗಲಿದೆ. ಈಗ ಈ ನಾಲ್ಕು ತಂಡಗಳ ಚಿತ್ರಣ ಸ್ಪಷ್ಟವಾಗಿರುವುದರಿಂದ ಯಾವ ತಂಡಗಳು ಯಾವಾಗ, ಎಲ್ಲಿ ಸೆಣೆಸಾಟ ನಡೆಸಲಿವೆ ಎಂಬುದನ್ನು ನೋಡೋಣ.

ಪಾಯಿಂಟ್ಸ್ ಪಟ್ಟಿಯಲ್ಲಿ ಟೀಮ್ ಇಂಡಿಯಾ ಮೊದಲ ಸ್ಥಾನದಲ್ಲಿದ್ದು, ಅಗ್ರಸ್ಥಾನದಲ್ಲೇ ಉಳಿಯಲಿದೆ. ಪ್ರಸ್ತುತ, ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದೆ. ಇಬ್ಬರಿಗೂ 1-1 ಪಂದ್ಯಗಳು ಬಾಕಿ ಉಳಿದಿದ್ದು, ಅದಕ್ಕೆ ತಕ್ಕಂತೆ ಅಂಕಪಟ್ಟಿಯಲ್ಲಿ ಸ್ಥಾನ ಬದಲಾಗಬಹುದು. ನ್ಯೂಝಿಲೆಂಡ್ ನಾಲ್ಕನೇ ಸ್ಥಾನದಲ್ಲಿ ಉಳಿಯುತ್ತದೆ. ನಿಯಮದ ಪ್ರಕಾರ, ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ತಂಡವು ನಾಲ್ಕನೇ ಸ್ಥಾನ ಪಡೆದ ತಂಡವನ್ನು ಎದುರಿಸಲಿದೆ, ಎರಡು ಮತ್ತು ಮೂರನೇ ಸ್ಥಾನ ಪಡೆದ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ.

ಸೆಮಿಫೈನಲ್ ಪಂದ್ಯಗಳ ವೇಳಾಪಟ್ಟಿ

ಭಾರತವು ನ್ಯೂಝಿಲೆಂಡ್ ತಂಡವನ್ನು ಎದುರಿಸುವುದು ಬಹುತೇಕ ಖಚಿತ. ಅತ್ತ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಪರಸ್ಪರ ಮುಖಾಮುಖಿಯಾಗಲಿವೆ. ಭಾರತ ಮತ್ತು ನ್ಯೂಝಿಲೆಂಡ್ ನಡುವಿನ ಸೆಮಿ ಫೈನಲ್ ಪಂದ್ಯವು ಕಳೆದ ವಿಶ್ವಕಪ್‌ನ ಪುನರಾವರ್ತನೆಯಂತೆಯೇ ಇರುತ್ತದೆ. 2019ರಲ್ಲಿಯೂ ಎರಡೂ ತಂಡಗಳು ಸೆಮಿ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಈ ಬಾರಿಯೂ ಭಾರತ ಮತ್ತು ನ್ಯೂಝಿಲೆಂಡ್ ನಡುವೆ ಮೊದಲ ಸೆಮಿ ಫೈನಲ್ ನಡೆಯಲಿದ್ದು, ನವೆಂಬರ್ 15 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂ ಈ ಹಣಾಹಣಿಗೆ ಸಾಕ್ಷಿಯಾಗಲಿದೆ.

ನವೆಂಬರ್ 16 ರಂದು ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ. ಮಳೆಯಿಂದ ಪಂದ್ಯ ರದ್ದಾಯಿತು ಎಂದಾದರೆ ಎರಡೂ ಸೆಮಿ ಫೈನಲ್‌ಗಳಿಗೆ ಮೀಸಲು ದಿನವನ್ನು ಇರಿಸಲಾಗಿದೆ. ಮೊದಲ ಸೆಮಿ ಫೈನಲ್​ನಲ್ಲಿ ಗೆದ್ದ ತಂಡ ಮತ್ತು ಎರಡನೇ ಸೆಮೀಸ್​ನಲ್ಲಿ ಜಯಿಸಿದ ತಂಡ ಫೈನಲ್​ನಲ್ಲಿ ವಿಶ್ವಕಪ್ ಪ್ರಶಸ್ತಿಗೆ ಹೋರಾಡಲಿದೆ. ಇದು ನವೆಂಬರ್ 19 ರಂದು ನಡೆಯಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:43 am, Fri, 10 November 23