IND vs AUS T20I Series: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಈ ದಿನಾಂಕದಂದು ಪ್ರಕಟ: ನಾಯಕ ಯಾರು?
India Squad for Australia T20I Series: ಸೆಮಿಫೈನಲ್ ನಂತರ ಆಸ್ಟ್ರೇಲಿಯಾ ಸರಣಿಗೆ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸುವ ಸಾಧ್ಯತೆಯಿದೆ. ಅಂದರೆ ನವೆಂಬರ್ 16 ಅಥವಾ 17 ರಂದು ತಂಡದ ಘೋಷಣೆ ಆಗಲಿದೆ. ಈ ಸರಣಿಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಇತರೆ ಸ್ಟಾರ್ ಆಟಗಾರರು ಅಲಭ್ಯರಾಗಲಿದ್ದಾರೆ.
ಐಸಿಸಿ ಏಕದಿನ ವಿಶ್ವಕಪ್ 2023 ಮುಕ್ತಾಯವಾಗುತ್ತಿದ್ದಂತೆ, ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ (India vs Australia) ವಿರುದ್ಧದ ಟಿ20 ಸರಣಿಗಾಗಿ ತಯಾರಿಯನ್ನು ಪ್ರಾರಂಭಿಸಲಿದೆ. ಹಾರ್ದಿಕ್ ಪಾಂಡ್ಯ ಗಾಯಗೊಂಡಿರುವುದರಿಂದ ಐದು ಪಂದ್ಯಗಳ ಟಿ20 ಸರಣಿಗೆ ಟೀಮ್ ಇಂಡಿಯಾವನ್ನು ಪ್ರಕಟಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸಮಯ ತೆಗೆದುಕೊಳ್ಳುತ್ತಿದೆ. ರೋಹಿತ್ ಪಡೆ ವಿಶ್ವಕಪ್ನಲ್ಲಿ ಬ್ಯೂಸಿಯಾಗಿದ್ದು, ಆಡಿರುವ ಎಲ್ಲ ಎಂಟು ಪಂದ್ಯಗಳನ್ನು ಗೆದ್ದು, ಸೆಮಿ ಫೈನಲ್ ಪ್ರವೇಶಿಸಿದ ಮೊದಲ ತಂಡವಾಗಿದೆ.
ಸದ್ಯ ಪಿಟಿಐ ಮಾಡಿರುವ ವರದಿಗಳ ಪ್ರಕಾರ, ವಿಶ್ವಕಪ್ ಸೆಮಿಫೈನಲ್ ನಂತರ ಆಸ್ಟ್ರೇಲಿಯಾ ಸರಣಿಗೆ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸುವ ಸಾಧ್ಯತೆಯಿದೆ. ಅಂದರೆ ನವೆಂಬರ್ 16 ಅಥವಾ 17 ರಂದು ತಂಡದ ಘೋಷಣೆ ಆಗಲಿದೆ. ಈ ಸರಣಿಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಇತರೆ ಸ್ಟಾರ್ ಆಟಗಾರರು ಅಲಭ್ಯರಾಗಲಿದ್ದಾರೆ. ವಿಶ್ವಕಪ್ ನಂತರ ಇವರೆಲ್ಲ ವಿರಾಮವನ್ನು ಪಡೆಯಲಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ನಾಯಕ ಯಾರು ಎಂಬ ಪ್ರಶ್ನೆ ಕೂಡ ಎದ್ದಿದೆ.
IND vs AUS T20I Series: ಬಿಸಿಸಿಐ ಮಾಸ್ಟರ್ ಪ್ಲಾನ್: 1 ವರ್ಷದ ಬಳಿಕ ತಂಡ ಸೇರಿಕೊಳ್ಳಲಿದ್ದಾರೆ ಈ ಸ್ಟಾರ್ ಆಟಗಾರ
ಹಾರ್ದಿಕ್ ಪಾಂಡ್ಯ ಆಸೀಸ್ ವಿರುದ್ಧದ ಸರಣಿಗೆ ಲಭ್ಯವಿರುವುದು ಅನುಮಾನ. ಹೀಗಾಗಿ ಕ್ಯಾಪ್ಟನ್ ಪಟ್ಟ ಯಾರು ತೊಡುತ್ತಾರೆ ನೋಡಬೇಕು. ಪಾಂಡ್ಯ ವಿಶ್ವಕಪ್ನಲ್ಲಿ ಬಾಂಗ್ಲಾದೇಶ ವಿರುದ್ಧ ಪಂದ್ಯವನ್ನು ಆಡುವಾಗ ಗಾಯಕ್ಕೆ ತುತ್ತಾಗಿದ್ದಾರೆ. “ಹಾರ್ದಿಕ್ ಫಿಟ್ ಆಗಿದ್ದಾರೆ. ಆದರೆ, ಆಯ್ಕೆಗೆ ಲಭ್ಯವಾಗಲು ಸ್ವಲ್ಪ ಸಮಯವಿದೆ,” ಎಂದು ಬಿಸಿಸಿಐ ಮೂಲವು ತಿಳಿಸಿದೆ.
ಕ್ಯಾಪ್ಟನ್ ಯಾರು?:
ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ, ಆಯ್ಕೆದಾರರು ಸೂರ್ಯಕುಮಾರ್ ಯಾದವ್ ಅಥವಾ ರುತುರಾಜ್ ಗಾಯಕ್ವಾಡ್ ಅವರನ್ನು ಸ್ಟ್ಯಾಂಡ್-ಬೈ ಕ್ಯಾಪ್ಟನ್ ಆಗಿ ಆಯ್ಕೆಮಾಡುವ ಸಾಧ್ಯತೆ ಇದೆ. ಸೂರ್ಯಕುಮಾರ್ ಅವರು ಟಿ20 ತಂಡದ ಉಪನಾಯಕರಾಗಿದ್ದಾರೆ, ಆದರೆ ರುತುರಾಜ್ ಗಾಯಕ್ವಾಡ್ ಅವರು ಏಷ್ಯನ್ ಗೇಮ್ಸ್ನಲ್ಲಿ ಭಾರತ ತಂಡವನ್ನು ಮುನ್ನಡೆಸಿ ಚಿನ್ನದ ಪದಕ ಗೆಲ್ಲಿಸಿಕೊಟ್ಟಿದ್ದರು. ಅಲ್ಲದೆ ವಿಶ್ವಕಪ್ ನಂತರ ಸೂರ್ಯಕುಮಾರ್ ವಿಶ್ರಾಂತಿ ಕೇಳುವ ಸಾಧ್ಯತೆ ಇದೆ ಕೂಡ ಇದೆ. ಇದರ ನಡುವೆ ಅನುಭವಿ ವೇಗಿ ಭುವನೇಶ್ವರ್ ಕುಮಾರ್ 12 ತಿಂಗಳ ನಂತರ ಭಾರತ ತಂಡಕ್ಕೆ ಮರಳಲಿದ್ದಾರೆ. ವಿಕೆಟ್-ಕೀಪರ್ ಸಂಜು ಸ್ಯಾಮ್ಸನ್ ಹಾಗೂ ರಿಯಾನ್ ಪರಾಗ್ ಕೂಡ ಆಯ್ಕೆ ಆಗಲಿದ್ದಾರೆ ಎಂಬ ಮಾತಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ