ಹೊಸ ವರ್ಷದಲ್ಲಿ ಟೀಮ್ ಇಂಡಿಯಾ ಎದುರಾಳಿಗಳು ಯಾರೆಲ್ಲಾ?

Indian Team Schedule 2026: ಭಾರತ ತಂಡವು 2025ರಲ್ಲಿ ಒಟ್ಟು 46 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದೆ. ಈ ನಲ್ವತ್ತಾರು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಗೆದ್ದಿರೋದು 31 ಪಂದ್ಯಗಳಲ್ಲಿ. ಇನ್ನುಳಿದ 11 ಮ್ಯಾಚ್​ಗಳಲ್ಲಿ ಭಾರತ ತಂಡವು ಸೋಲನುಭವಿಸಿದೆ. ಹಾಗೆಯೇ ಮೂರು ಪಂದ್ಯಗಳು ಕಾರಣಾಂತರಗಳಿಂದ ರದ್ದಾಗಿತ್ತು.

ಹೊಸ ವರ್ಷದಲ್ಲಿ ಟೀಮ್ ಇಂಡಿಯಾ ಎದುರಾಳಿಗಳು ಯಾರೆಲ್ಲಾ?
Team India

Updated on: Dec 31, 2025 | 7:32 AM

ಭಾರತ ತಂಡವು ಏಳು-ಬೀಳುಗಳೊಂದಿಗೆ 2025 ಅನ್ನು ಮುಗಿಸಿದೆ. ಇನ್ನು ಟೀಮ್ ಇಂಡಿಯಾ ಕಣಕ್ಕಿಳಿಯಲಿರುವುದು ಮುಂದಿನ ವರ್ಷ. ಅಂದರೆ 2026 ರಲ್ಲಿ ನ್ಯೂಝಿಲೆಂಡ್ ವಿರುದ್ಧ ಕಣಕ್ಕಿಳಿಯುವ ಮೂಲಕ ಭಾರತ ತಂಡವು ಹೊಸ ವರ್ಷದ ಅಭಿಯಾನ ಆರಂಭಿಸಲಿದೆ. ಅದರಂತೆ ಟೀಮ್ ಇಂಡಿಯಾ 2026 ರಲ್ಲಿ ಕಣಕ್ಕಿಳಿಯುವ ಪಂದ್ಯಗಳ ವೇಳಾಪಟ್ಟಿ ಈ ಕೆಳಗಿನಂತಿದೆ…

 2026ರ ಟೀಮ್ ಇಂಡಿಯಾ ವೇಳಾಪಟ್ಟಿ:

ಸರಣಿ/ಟೂರ್ನಮೆಂಟ್ ಆತಿಥೇಯ ದೇಶ ಸ್ವರೂಪ ಪಂದ್ಯಗಳು ದಿನಾಂಕಗಳು
ಭಾರತ ತಂಡದ ನ್ಯೂಝಿಲೆಂಡ್ ಪ್ರವಾಸ ಭಾರತ ಏಕದಿನ/ಟಿ20 3 ಏಕದಿನ ಪಂದ್ಯಗಳು, 5 ಟಿ20 ಪಂದ್ಯಗಳು ಜನವರಿ 11 ರಿಂದ ಜನವರಿ 31, 2026
ಟಿ20 ವಿಶ್ವಕಪ್ 2026 ಭಾರತ/ಶ್ರೀಲಂಕಾ ಟಿ20 ಟೂರ್ನಿ 4 ರಿಂದ 9 ಟಿ20 ಪಂದ್ಯಗಳು ಫೆಬ್ರವರಿ 7 ರಿಂದ ಮಾರ್ಚ್ 8, 2026
ಅಫ್ಘಾನಿಸ್ತಾನ್ ತಂಡದ ಭಾರತ ಪ್ರವಾಸ ಭಾರತ ಏಕದಿನ/ಟೆಸ್ಟ್ 1 ಟೆಸ್ಟ್, 3 ಏಕದಿನ ಪಂದ್ಯಗಳು ಜೂನ್ 2026
ಭಾರತ ತಂಡದ ಇಂಗ್ಲೆಂಡ್ ಪ್ರವಾಸ ಇಂಗ್ಲೆಂಡ್ ಏಕದಿನ/ಟಿ20  3 ಏಕದಿನ, 5 ಟಿ20 ಪಂದ್ಯಗಳು ಜುಲೈ 1 ರಿಂದ ಜುಲೈ 19, 2026
ಭಾರತ ತಂಡದ ಶ್ರೀಲಂಕಾ ಪ್ರವಾಸ ಶ್ರೀಲಂಕಾ ಪರೀಕ್ಷೆ 2 ಪರೀಕ್ಷೆಗಳು (WTC ಯ ಭಾಗ) ಆಗಸ್ಟ್ 2026
ಬಾಂಗ್ಲಾದೇಶ ತಂಡದ ಭಾರತ ಪ್ರವಾಸ* ಬಾಂಗ್ಲಾದೇಶ್ ಏಕದಿನ/ ಟಿ20 ಪಂದ್ಯಗಳು 3 ಏಕದಿನ, 5 ಟಿ20 ಪಂದ್ಯಗಳು ಸೆಪ್ಟೆಂಬರ್ 2026
ಏಷ್ಯನ್ ಗೇಮ್ಸ್ 2026* ಜಪಾನ್ ಟಿ20 ಟೂರ್ನಿ 1 ರಿಂದ 3 ಟಿ20 ಪಂದ್ಯಗಳು 19 ಸೆಪ್ಟೆಂಬರ್ ರಿಂದ 4 ಅಕ್ಟೋಬರ್ 2026
ಭಾರತ ತಂಡ ಅಫ್ಘಾನಿಸ್ತಾನ್ ಪ್ರವಾಸ* ತಟಸ್ಥ ಟಿ20 3 ಟಿ20 ಪಂದ್ಯಗಳು ಸೆಪ್ಟೆಂಬರ್/ಅಕ್ಟೋಬರ್ 2026
ವೆಸ್ಟ್ ಇಂಡೀಸ್ ತಂಡದ ಭಾರತ ಪ್ರವಾಸ ಭಾರತ ಏಕದಿನ/ ಟಿ20 3 ಏಕದಿನ,  5 ಟಿ20 ಪಂದ್ಯಗಳು ಅಕ್ಟೋಬರ್/ನವೆಂಬರ್ 2026
ಭಾರತ ತಂಡದ ನ್ಯೂಝಿಲೆಂಡ್ ಪ್ರವಾಸ ನ್ಯೂಝಿಲೆಂಡ್ ಟೆಸ್ಟ್, ಏಕದಿನ, ಟಿ20  2 ಟೆಸ್ಟ್‌ಗಳು, 3 ಏಕದಿನ ಪಂದ್ಯಗಳು, 5 ಟಿ20 ಪಂದ್ಯಗಳು ನವೆಂಬರ್/ಡಿಸೆಂಬರ್ 2026

ಈ  ಸರಣಿಗಳಲ್ಲಿ ಭಾರತ ಮತ್ತು ಬಾಂಗ್ಲಾದೇಶ್ ನಡುವಣ ಸರಣಿ ನಡೆಯುವುದು ಅನುಮಾನ. ಏಕೆಂದರೆ ಕಳೆದ ವರ್ಷ ನಡೆಯಬೇಕಿದ್ದ ಇಂಡೊ-ಬಾಂಗ್ಲಾ ಸರಣಿಯನ್ನು ರಾಜತಾಂತ್ರಿಕ ಕಾರಣಗಳಿಂದಾಗಿ ರದ್ದುಗೊಳಿಸಲಾಗಿತ್ತು. ಹೀಗಾಗಿ 2026 ರಲ್ಲೂ ಟೀಮ್ ಇಂಡಿಯಾ ಬಾಂಗ್ಲಾದೇಶ್ ಪ್ರವಾಸ ಕೈಗೊಳ್ಳುವ ಸಾಧ್ಯತೆಯಿಲ್ಲ ಎಂದೇ ಹೇಳಬಹುದು.

ಇದನ್ನೂ ಓದಿ: 310ರ ಸ್ಟ್ರೈಕ್ ರೇಟ್​ನಲ್ಲಿ ಅಬ್ಬರಿಸಿದ ವೈಭವ್ ಸೂರ್ಯವಂಶಿ, ಆದರೆ…

ಇನ್ನುಳಿದ ಎಲ್ಲಾ ಸರಣಿಗಳಲ್ಲಿ ಟೀಮ್ ಇಂಡಿಯಾ ಕಣಕ್ಕಿಳಿಯಲಿದೆ. ಹಾಗೆಯೇ ಜಪಾನ್​ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್​ನಲ್ಲಿ ಯುವ ಪಡೆಯನ್ನು ಒಳಗೊಂಡ ತಂಡವನ್ನು ಬಿಸಿಸಿಐ ಕಣಕ್ಕಿಳಿಸಲಿದೆ. ಈ ಮೂಲಕ ಮತ್ತೊಮ್ಮೆ ಟೀಮ್ ಇಂಡಿಯಾ ಚಿನ್ನದ ಪದಕಕ್ಕಾಗಿ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.

 

Published On - 7:32 am, Wed, 31 December 25