AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರ್ಷದ ಟೆಸ್ಟ್ ಇಲೆವೆನ್: ಟೀಮ್ ಇಂಡಿಯಾದ ಮೂವರಿಗೆ ಸ್ಥಾನ

Cricket Australia: 2025 ರಲ್ಲಿ ಟೆಸ್ಟ್ ಕ್ರಿಕೆಟ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಒಳಗೊಂಡ ಬೆಸ್ಟ್ ಇಲೆವೆನ್​ ಅನ್ನು ಕ್ರಿಕೆಟ್ ಆಸ್ಟ್ರೇಲಿಯಾ ಹೆಸರಿಸಿದೆ. ಈ ಹನ್ನೊಂದು ಆಟಗಾರರಲ್ಲಿ ಮೂವರು ಭಾರತೀಯರು ಇರುವುದು ವಿಶೇಷ. ಹಾಗೆಯೇ ಹೆಚ್ಚುವರಿ ಆಟಗಾರನಾಗಿಯೂ ಟೀಮ್ ಇಂಡಿಯಾ ಪ್ಲೇಯರ್ ಸ್ಥಾನ ಪಡೆದಿದ್ದಾರೆ.

ವರ್ಷದ ಟೆಸ್ಟ್ ಇಲೆವೆನ್: ಟೀಮ್ ಇಂಡಿಯಾದ ಮೂವರಿಗೆ ಸ್ಥಾನ
Test Xi Of The Year 2025
ಝಾಹಿರ್ ಯೂಸುಫ್
|

Updated on: Dec 30, 2025 | 11:30 AM

Share

ಕ್ರಿಕೆಟ್ ಆಸ್ಟ್ರೇಲಿಯಾ 2025ರ ಟೆಸ್ಟ್ ಇಲೆವೆನ್​ನ್ನು ಹೆಸರಿಸಿದ್ದಾರೆ. ಈ ಇಲೆವೆನ್​ನಲ್ಲಿ ಟೀಮ್ ಇಂಡಿಯಾದ ಮೂವರು ಆಟಗಾರರು ಸ್ಥಾನ ಪಡೆದಿದ್ದಾರೆ. ಇನ್ನು 12ನೇ ಆಟಗಾರನಾಗಿಯೂ ಆಯ್ಕೆಯಾಗಿರುವುದು ಭಾರತದ ಆಲ್​ರೌಂಡರ್ ಎಂಬುದು ವಿಶೇಷ.

ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಹೆಸರಿಸಿರುವ ಟೆಸ್ಟ್​ ಇಲೆವೆನ್​ನಲ್ಲಿ ಆರಂಭಿಕರಾಗಿ ಆಯ್ಕೆಯಾಗಿರುವುದು ಭಾರತದ ಕೆಎಲ್ ರಾಹುಲ್ ಹಾಗೂ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್. ಇನ್ನು ಮೂರನೇ ಕ್ರಮಾಂಕಕ್ಕೆ ಇಂಗ್ಲೆಂಡ್​ನ ಜೋ ರೂಟ್ ಅವರನ್ನು ಹೆಸರಿಸಿದ್ದಾರೆ.

ನಾಲ್ಕನೇ ಕ್ರಮಾಂಕಕ್ಕೆ ಭಾರತ ಟೆಸ್ಟ್ ತಂಡದ ನಾಯಕ ಶುಭ್​ಮನ್ ಗಿಲ್ ಅವರನ್ನು ಆಯ್ಕೆ ಮಾಡಿದ್ದಾರೆ. ಇನ್ನು ವರ್ಷದ ಟೆಸ್ಟ್ ಇಲೆವೆನ್​ನ ಕ್ಯಾಪ್ಟನ್ ಆಗಿ ಸೌತ್ ಆಫ್ರಿಕಾದ ನಾಯಕ ಟೆಂಬಾ ಬವುಮಾ ಅವರನ್ನು ಹೆಸರಿಸಿದ್ದಾರೆ.

ಈ ಪ್ಲೇಯಿಂಗ್ ಇಲೆವೆನ್​ನಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಆಯ್ಕೆಯಾಗಿರುವುದು ಆಸ್ಟ್ರೇಲಿಯಾದ ಅಲೆಕ್ಸ್ ಕ್ಯಾರಿ. ಇನ್ನು ಆಲ್​ರೌಂಡರ್ ಆಗಿ ಇಂಗ್ಲೆಂಡ್​ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಆಯ್ಕೆಯಾಗಿದ್ದಾರೆ.

ವೇಗಿಗಳಾಗಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್, ಸ್ಕಾಟ್ ಬೋಲ್ಯಾಂಡ್ ಮತ್ತು ಟೀಮ್ ಇಂಡಿಯಾ ಜಸ್​ಪ್ರೀತ್ ಬುಮ್ರಾ ಸ್ಥಾನ ಪಡೆದಿದ್ದಾರೆ. ಹಾಗೆಯೇ ಸ್ಪಿನ್ನರ್ ಆಗಿ ಸೌತ್ ಆಫ್ರಿಕಾದ ಸೈಮನ್ ಹರ್ಮರ್ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: 310ರ ಸ್ಟ್ರೈಕ್ ರೇಟ್​ನಲ್ಲಿ ಅಬ್ಬರಿಸಿದ ವೈಭವ್ ಸೂರ್ಯವಂಶಿ, ಆದರೆ…

ಇನ್ನು 12ನೇ ಆಟಗಾರನಾಗಿ ಭಾರತ ತಂಡದ ಆಲ್​ರೌಂಡರ್ ರವೀಂದ್ರ ಜಡೇಜಾ ಅವರನ್ನು ಹೆಸರಿಲಾಗಿದೆ. ಅದರಂತೆ ಕ್ರಿಕೆಟ್ ಆಸ್ಟ್ರೇಲಿಯಾದ 2025ರ ಟೆಸ್ಟ್​ ಇಲೆವೆನ್ ಈ ಕೆಳಗಿನಂತಿದೆ…

  • ಕೆಎಲ್ ರಾಹುಲ್ (ಭಾರತ)
  • ಟ್ರಾವಿಸ್ ಹೆಡ್ (ಆಸ್ಟ್ರೇಲಿಯಾ)
  • ಜೋ ರೂಟ್ (ಇಂಗ್ಲೆಂಡ್)
  • ಶುಭ್​ಮನ್ ಗಿಲ್ (ಭಾರತ)
  • ಟೆಂಬಾ ಬವುಮಾ (ನಾಯಕ/ ಸೌತ್ ಆಫ್ರಿಕಾ)
  • ಅಲೆಕ್ಸ್ ಕ್ಯಾರಿ ( ವಿಕೆಟ್ ಕೀಪರ್/ ಆಸ್ಟ್ರೇಲಿಯಾ)
  • ಬೆನ್ ಸ್ಟೋಕ್ಸ್ (ಇಂಗ್ಲೆಂಡ್)
  • ಮಿಚೆಲ್ ಸ್ಟಾರ್ಸ್ (ಆಸ್ಟ್ರೇಲಿಯಾ)
  • ಜಸ್​ಪ್ರೀತ್ ಬುಮ್ರಾ (ಭಾರತ)
  • ಸ್ಕಾಟ್ ಬೋಲ್ಯಾಂಡ್ (ಆಸ್ಟ್ರೇಲಿಯಾ)
  • ಸೈಮನ್ ಹರ್ಮರ್ (ಸೌತ್ ಆಫ್ರಿಕಾ)
  • ರವೀಂದ್ರ ಜಡೇಜಾ (12ನೇ ಆಟಗಾರ- ಭಾರತ)

Follow Us
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ