ಮುಂದಿನ ತಿಂಗಳು ಅಂದರೆ ಇದೆ ಜೂನ್ 1 ರಿಂದ ವೆಸ್ಟ್ ಇಂಡೀಸ್ ಮತ್ತು ಯುಎಸ್‌ಎಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗಾಗಿ (T20 World Cup 2024) ಟೀಂ ಇಂಡಿಯಾದ ಹೊಸ ಜೆರ್ಸಿಯನ್ನು ಇಂದು ಬಿಡುಗಡೆ ಮಾಡಲಾಗಿದೆ. ಟೀಂ ಇಂಡಿಯಾದ (Team India) ಕಿಟ್ ಪ್ರಾಯೋಜಕತ್ವದ ಹಕ್ಕನ್ನು ಖರೀದಿಸಿರುವ ಅಡಿಡಾಸ್, ಮುಂಬರುವ ಟಿ20 ವಿಶ್ವಕಪ್‌ಗೆ ಹಸಿರು ಹಾಗೂ ಕೇಸರಿ ಮಿಶ್ರಿತ ನೂತನ ಜೆರ್ಸಿಯನ್ನು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma), ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್ ಅವರ ಉಪಸ್ಥಿತಿಯಲ್ಲಿ ಧರ್ಮಶಾಲಾದಲ್ಲಿ ಬಿಡುಗಡೆ ಮಾಡಿದೆ ಎಂದು ವರದಿಗಳಾಗಿವೆ. ಬಿಸಿಸಿಐ (BCCI) ಜೆರ್ಸಿ ಬಿಡುಗಡೆ ಮಾಡಿರುವ ಅದರ ವಿಡಿಯೋಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಮುಂಬರುವ ಟಿ20 ವಿಶ್ವಕಪ್‌ಗೆ ಇಂದು ಬಿಡುಗಡೆಯಾಗಿರುವ ಟೀಂ ಇಂಡಿಯಾದ ನೂತನ ಜೆರ್ಸಿ ಮೇಲೆ ಹೇಳಿದಂತೆ ನೀಲಿ ಮತ್ತು ಕೇಸರಿ ಬಣ್ಣದಲ್ಲಿದೆ. ಜೆರ್ಸಿಯ ಕಾಲರ್ ಮೇಲೆ ತ್ರಿವರ್ಣ ಧ್ವಜವನ್ನು ಹೊಲುವ ಅಂದರೆ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದ ಪಟ್ಟೆಗಳಿವೆ. ತೋಳುಗಳು ಕೇಸರಿ ಬಣ್ಣದಲ್ಲಿದ್ದರೆ, ಭುಜದ ಮೇಲೆ ಮೂರು ಬಿಳಿಯ ಗೆರೆಗಳಿವೆ. ಉಳಿದ ಭಾಗ ಸಂಪೂರ್ಣ ನೀಲಿ ಬಣ್ಣದ್ದಾಗಿದೆ. ಜರ್ಸಿಯ ಮಧ್ಯದಲ್ಲಿ ಟೀಂ ಇಂಡಿಯಾ ಎಂದು ಬರೆಯಲಾಗಿದೆ. ಈ ಜೆರ್ಸಿಯನ್ನು ಹೆಲಿಕಾಪ್ಟರ್‌ನಿಂದ ಬಿಡುಗಡೆ ಮಾಡಿರುವಂತೆ ತೋರಿಸಲಾಗಿದೆ.
INDIA’S T20 WORLD CUP JERSEY LAUNCH IN DHARAMSHALA. 👌🇮🇳
– Rohit, Jadeja, Kuldeep featured in the launch video. pic.twitter.com/XZ4PeAz9Qq
— Mufaddal Vohra (@mufaddal_vohra) May 6, 2024
ಏತನ್ಮಧ್ಯೆ, ಜೆರ್ಸಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾದ ಬಳಿಕ ಟೀಂ ಇಂಡಿಯಾ ಅಭಿಮಾನಿಗಳು ಬಿಡುಗಡೆಯಾಗಿರುವ ನೂತನ ಜೆರ್ಸಿಯ ಬಗ್ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೆಲವರು ಜರ್ಸಿಯನ್ನು ‘ಸ್ಟೈಲಿಶ್’ ಎಂದಿದ್ದರೆ, ಇನ್ನು ಕೆಲವರಿಗೆ ನೂತನ ಜೆರ್ಸಿ ಇಷ್ಟವಾಗಿಲ್ಲ.
This 2016 WC Jersey>>>>All other jerseys pic.twitter.com/Yd4Q0kyZxq
— Crazy Arpita (@ArpitaKiVines) May 6, 2024
Nice jersey
— Rishabh katiyar (@katiyar4Rishabh) May 6, 2024
Ctrl C + Ctrl V by Adidas. pic.twitter.com/8JCJK4Zb6R
— Shubham Sakhuja (@ishubhamsakhuja) May 6, 2024
Lovely… beautiful to watch. Champion 🏆
— Sanfornow (@sanfornow_2040) May 6, 2024
ಇನ್ನು ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಜೂನ್ 5 ರಂದು ನ್ಯೂಯಾರ್ಕ್‌ನಲ್ಲಿ ಐರ್ಲೆಂಡ್ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಆ ನಂತರ ಪಾಕಿಸ್ತಾನದ ವಿರುದ್ಧ ಜೂನ್ 9 ರಂದು ಹೈವೋಲ್ಟೇಜ್ ಕದನ ನಡೆಯಲ್ಲಿದೆ. ಬಳಿಕ ಕ್ರಮವಾಗಿ ಯುಎಸ್ಎ ಮತ್ತು ಕೆನಡಾ ವಿರುದ್ಧ ಜೂನ್ 12 ಮತ್ತು 15 ರಂದು ಗುಂಪು ಹಂತದ ಪಂದ್ಯಗಳನ್ನು ಆಡಲಿದೆ.
ಟಿ20 ವಿಶ್ವಕಪ್‌ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಾಲ್, ಅರ್ಶ್ದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಮೀಸಲು ಆಟಗಾರರು: ಶುಭ್ಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:43 pm, Mon, 6 May 24