ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಕೊನೆಯ ಮತ್ತು ಐದನೇ ಟೆಸ್ಟ್ ಪಂದ್ಯ ಇಂದಿನಿಂದ ಮ್ಯಾಂಚೆಸ್ಟರ್ ನಲ್ಲಿ ನಡೆಯಬೇಕಿತ್ತು. ಆದರೆ ಟೀಂ ಇಂಡಿಯಾದಲ್ಲಿ ಕೊರೊನಾ ಪ್ರಕರಣಗಳ ಕಾರಣ ಈ ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ. ಬಿಸಿಸಿಐ ಈ ಪಂದ್ಯವನ್ನು ನಂತರ ಆಯೋಜಿಸುವ ಬಗ್ಗೆ ಇಸಿಬಿಯೊಂದಿಗೆ ಮಾತನಾಡುವುದಾಗಿ ಹೇಳಿದೆ. ಆದರೆ ಈಗ ಪಂದ್ಯ ರದ್ದಾದ ನಂತರದ ಘಟನೆಗಳು ಮುಂಚೂಣೆಗೆ ಬಂದಿವೆ. ವಾಟ್ಸ್‌ಆ್ಯಪ್‌ನಲ್ಲಿ ತಂಡದ ಮ್ಯಾನೇಜ್‌ಮೆಂಟ್ ಆಟಗಾರರಿಗೆ ಕಳುಹಿಸಿದ ಸಂದೇಶಗಳು ಈಗ ಸಖತ್ ಸದ್ದು ಮಾಡುತ್ತಿವೆ. ಮ್ಯಾಂಚೆಸ್ಟರ್‌ನಲ್ಲಿನ ದುರಾಡಳಿತದ ಸಂಪೂರ್ಣ ಕಥೆಯನ್ನು ಹೇಳುವ ಸಂದೇಶಗಳನ್ನು ಆಟಗಾರರಿಗೆ ಕಳುಹಿಸಲಾಗಿದೆ. ಈ ಸಂದೇಶಗಳನ್ನು ಟೀಮ್ ಇಂಡಿಯಾದ ವಾಟ್ಸಾಪ್ ಗುಂಪಿನಲ್ಲಿ ಕಳುಹಿಸಲಾಗಿದೆ. ವಾಟ್ಸಾಪ್‌ನಲ್ಲಿ ಆಟಗಾರರು ಸ್ವೀಕರಿಸಿದ ಈ ಸಂದೇಶಗಳ ಬಗ್ಗೆ ತಿಳಿದುಕೊಂಡರೆ, ನೀವು ಕೂಡ ಆಶ್ಚರ್ಯ ವ್ಯಕ್ತಪಡಿಸುತ್ತೀರಿ.
ಟೀಮ್ ಇಂಡಿಯಾದ ವಾಟ್ಸಾಪ್ ಗ್ರೂಪ್ನಲ್ಲಿ ಕಳುಹಿಸಿದ ಎರಡು ಸಂದೇಶಗಳು ಮುನ್ನಲೆಗೆ ಬಂದಿವೆ. ಟಾಸ್‌ಗೆ ಸ್ವಲ್ಪ ಮೊದಲು ಈ ಎರಡೂ ಸಂದೇಶಗಳನ್ನು ಕಳುಹಿಸಲಾಗಿದೆ. ಮೊದಲ ಸಂದೇಶದಲ್ಲಿ ಪಂದ್ಯ ರದ್ದಾದ ಬಗ್ಗೆ ಆಟಗಾರರಿಗೆ ತಿಳಿಸಲಾಗಿದೆ. ಇದರೊಂದಿಗೆ, ಆಟಗಾರರು ತಮ್ಮ ಕೋಣೆಗಳಲ್ಲಿ ಉಳಿಯಲು ಸೂಚನೆಗಳನ್ನು ಸಹ ನೀಡಲಾಗಿದೆ. ಇಲ್ಲಿಯವರೆಗೆ ಎಲ್ಲವೂ ಚೆನ್ನಾಗಿತ್ತು ಮತ್ತು ಸ್ಪಷ್ಟವಾಗಿತ್ತು. ಆದರೆ 10 ನಿಮಿಷಗಳ ನಂತರ ಗುಂಪಿನಲ್ಲಿ ಎರಡನೇ ಸಂದೇಶ ಬಂದ ತಕ್ಷಣ, ಇದು ಮ್ಯಾಂಚೆಸ್ಟರ್‌ನಲ್ಲಿನ ದುರಾಡಳಿತವನ್ನು ಬಹಿರಂಗಪಡಿಸಿತು.
ಉಪಹಾರ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ 10 ನಿಮಿಷಗಳ ನಂತರ ಬಂದ ಎರಡನೇ ಸಂದೇಶವು ಟೀಂ ಇಂಡಿಯಾ ಆಟಗಾರರಿಗೆ ಆಶ್ಚರ್ಯವನ್ನುಂಟು ಮಾಡಿತು. WhatsApp ನಲ್ಲಿ ಟೀಮ್ ಇಂಡಿಯಾ ಸ್ವೀಕರಿಸಿದ ಇನ್ನೊಂದು ಸಂದೇಶದಲ್ಲಿ, ನಾವು ನಿಮಗೆ ಉಪಹಾರವನ್ನು ವ್ಯವಸ್ಥೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ನೀವು ಉಪಾಹಾರ ಸೇವಿಸಲು ಬಯಸಿದರೆ ಅದಕ್ಕಾಗಿ ನೀವು ರೆಸ್ಟೋರೆಂಟ್‌ಗೆ ಹೋಗಬೇಕು ಎಂಬ ಸಂದೇಶವನ್ನು ಮ್ಯಾಂಚೆಸ್ಟರ್ ಆಡಳಿತ ಮಂಡಳಿ ಕಳುಹಿಸಿದೆ. ಈ ಸಂದೇಶವು ಕೊರೊನಾದ ನೆರಳಿನಲ್ಲಿ ವಾಸಿಸುತ್ತಿರುವ ಆಟಗಾರರನ್ನು ಅಚ್ಚರಿಗೊಳಿಸಲಿದೆ. ಒಂದು ಕಡೆ ಆಟಗಾರರಿಗೆ ರೂಂ ನಲ್ಲಿ ಉಳಿಯಲು ಹೇಳಲಾಗುತ್ತದೆ ಮತ್ತು ಮತ್ತೊಂದೆಡೆ ಉಪಾಹಾರಕ್ಕಾಗಿ ಕೊಠಡಿಯಿಂದ ಹೊರಗೆ ಬರುವಂತೆ ಹೇಳಲಾಗಿದೆ.
ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸಲಾಗಿದೆ ಕೊರೊನಾದಿಂದಾಗಿ, ಟೀಮ್ ಇಂಡಿಯಾದ ಬಹುತೇಕ ಎಲ್ಲಾ ಸಹಾಯಕ ಸಿಬ್ಬಂದಿ ಕ್ವಾರಂಟೈನ್‌ನಲ್ಲಿದ್ದಾರೆ. ಭಾರತೀಯ ಆಟಗಾರರು ಕೂಡ ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು, ಆದರೂ ಅವರೆಲ್ಲರೂ ನೆಗೆಟಿವ್ ಎಂದು ತಿಳಿದುಬಂದಿದೆ. ಸ್ವಲ್ಪ ಸಮಯದವರೆಗೆ ಕೊನೆಯ ಟೆಸ್ಟ್ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದೆ ಎಂದು ಹೇಳಲಾಗಿತ್ತು. ನಂತರ, 5 ನೇ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸುವ ತೀರ್ಮಾನ ತೆಗೆದುಕೊಳ್ಳಲಾಯಿತು.