Test Twenty: ಟೆಸ್ಟ್ ಶೈಲಿಯಲ್ಲಿ ಟಿ20, ಈ ದಿನ ಹೊಸ ಸ್ವರೂಪಕ್ಕೆ ಚಾಲನೆ
Test Twenty Cricket: ಕ್ರಿಕೆಟ್‌ನಲ್ಲಿ ಹೊಸ 'ಟೆಸ್ಟ್ ಟ್ವೆಂಟಿ' ಫಾರ್ಮ್ಯಾಟ್ ಪರಿಚಯಿಸಲಾಗಿದೆ. ಇದು 80 ಓವರ್‌ಗಳ ಪಂದ್ಯವಾಗಿದ್ದು, ಟೆಸ್ಟ್ ಮತ್ತು T20 ಕ್ರಿಕೆಟ್‌ನ ನಿಯಮಗಳನ್ನು ಒಳಗೊಂಡಿರುತ್ತದೆ. ಪ್ರತಿ ತಂಡವು ತಲಾ 20 ಓವರ್‌ಗಳ ಎರಡು ಇನ್ನಿಂಗ್ಸ್‌ಗಳನ್ನು ಆಡುತ್ತದೆ. 2026 ರ ಜನವರಿಯಲ್ಲಿ ಮೊದಲ ಸೀಸನ್ ಪ್ರಾರಂಭವಾಗಲಿದ್ದು, ಇದು ಕ್ರಿಕೆಟ್ ಉತ್ಸಾಹವನ್ನು ಹೆಚ್ಚಿಸಿ ಯುವ ಆಟಗಾರರಿಗೆ ಹೊಸ ಅವಕಾಶಗಳನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಕಳೆದ ಕೆಲವು ವರ್ಷಗಳಿಂದ ಕ್ರಿಕೆಟ್‌ನ ಸ್ವರೂಪವು ಹಲವು ಬದಲಾವಣೆಗಳಿಗೆ ಒಳಗಾಗಿದೆ. ಇಲ್ಲಿಯವರೆಗೆ, ಕ್ರಿಕೆಟ್ ಅನ್ನು ಪ್ರಮುಖವಾಗಿ ಮೂರು ಸ್ವರೂಪಗಳಲ್ಲಿ ಆಡಲಾಗುತ್ತಿದೆ. ಪ್ರಸ್ತುತ ಕ್ರಿಕೆಟ್ ಅನ್ನು ಟಿ20, ಏಕದಿನ ಮತ್ತು ಟೆಸ್ಟ್ ಸ್ವರೂಪಗಳಲ್ಲಿ ಆಡಲಾಗುತ್ತಿದೆ. ಈಗ ನಾಲ್ಕನೇ ಸ್ವರೂಪದ ಕ್ರಿಕೆಟ್ ಹೊರಹೊಮ್ಮುತ್ತಿದ್ದು ಅದಕ್ಕೆ ಟೆಸ್ಟ್ ಟ್ವೆಂಟಿ (Test Twenty) ಎಂದು ಹೆಸರಿಡಲಾಗಿದೆ. ಟೆಸ್ಟ್ ಮತ್ತು ಟಿ20 ಸ್ವರೂಪಗಳ ಸಂಯೋಜನೆಯನ್ನು ಈ ಹೊಸ ಸ್ವರೂಪದಲ್ಲಿ ಕಾಣಬಹುದು. ಇದು ವಿಶ್ವದ ಮೊದಲ 80 ಓವರ್‌ಗಳ ಸ್ವರೂಪವಾಗಿರುತ್ತದೆ. ಎರಡೂ ತಂಡಗಳು ಟೆಸ್ಟ್‌ನಂತೆ ತಲಾ 20 ಓವರ್‌ಗಳ ಎರಡು ಇನ್ನಿಂಗ್ಸ್‌ಗಳನ್ನು ಆಡುವ ಅವಕಾಶವನ್ನು ಪಡೆಯುತ್ತವೆ. ಅಂದರೆ, ಪ್ರತಿ ತಂಡವು ಎರಡು ಬಾರಿ ಬ್ಯಾಟಿಂಗ್ ಮಾಡುತ್ತದೆ. ಟೆಸ್ಟ್ ಪಂದ್ಯದಂತೆಯೇ.. ಟೆಸ್ಟ್ ಮತ್ತು ಟಿ20 ಕ್ರಿಕೆಟ್‌ನ ಎರಡೂ ನಿಯಮಗಳು ಈ ಸ್ವರೂಪದಲ್ಲಿ ಅನ್ವಯವಾಗುತ್ತವೆ.
ಟೆಸ್ಟ್ ಟ್ವೆಂಟಿ ಪಂದ್ಯದ ಫಲಿತಾಂಶವನ್ನು ಹೇಗೆ ನಿರ್ಧರಿಸಲಾಗುತ್ತದೆ ಎಂಬ ಪ್ರಶ್ನೆಯೂ ಉದ್ಭವಿಸುತ್ತಿದೆ. ಈ ಪಂದ್ಯದಲ್ಲಿ ಗೆಲುವು, ಸೋಲು, ಟೈ ಅಥವಾ ಡ್ರಾ ಸಾಧ್ಯತೆ ಇದೆ. ಇದರಿಂದಾಗಿ, ಟೆಸ್ಟ್ ಜೊತೆಗೆ ಟಿ20 ಕ್ರಿಕೆಟ್ ಅನ್ನು ಸಹ ಆನಂದಿಸಬಹುದು. ಮೊದಲ ಇನ್ನಿಂಗ್ಸ್‌ನಲ್ಲಿ ಒಂದು ತಂಡ 75 ರನ್‌ಗಳಿಂದ ಹಿಂದೆ ಇದ್ದರೆ, ಅದು ಫಾಲೋ-ಆನ್ ಆಡಬೇಕಾಗುತ್ತದೆ. ಆದರೆ ಈ ಸ್ವರೂಪದಲ್ಲಿ ಚೆಂಡು ಕೆಂಪು ಅಥವಾ ಬಿಳಿ ಬಣ್ಣದ್ದಾಗಿರುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
Proud to have launched Test Twenty®️ with @gauravbahirvani . If you’re 13–19 and play with passion, this is your chance. Register: https://t.co/zNFYTDL6lV@The_Test_Twenty @HaydosTweets #clivelloyd @harbhajan_singh #ParitySports #oneonesixnetwork#TestTwenty #FourthFormat pic.twitter.com/FNDYvM6tJf
— AB de Villiers (@ABdeVilliers17) October 16, 2025
ಟೆಸ್ಟ್ ಟ್ವೆಂಟಿ ಯಾವಾಗ ಆರಂಭ?
ಟೆಸ್ಟ್ ಟ್ವೆಂಟಿ ಯ ಮೊದಲ ಸೀಸನ್ ಜನವರಿ 2026 ರಲ್ಲಿ ಆರಂಭವಾಗಲಿದೆ. ಭಾರತದಿಂದ ಮೂರು ಮತ್ತು ದುಬೈ, ಲಂಡನ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಿಂದ ತಲಾ ಮೂರು ಸೇರಿದಂತೆ ಆರು ಫ್ರಾಂಚೈಸಿಗಳು ಭಾಗವಹಿಸಲಿವೆ. ಪ್ರತಿ ತಂಡವು 16 ಆಟಗಾರರನ್ನು ಒಳಗೊಂಡಿರುತ್ತದೆ. ಈ ಹೊಸ ಸ್ವರೂಪವನ್ನು ಅಕ್ಟೋಬರ್ 16 ರಂದು ಅಧಿಕೃತವಾಗಿ ಪ್ರಾರಂಭಿಸಲಾಯಿತು. ಟೆಸ್ಟ್ ಟ್ವೆಂಟಿ20 ದಿ ಒನ್ ಒನ್ ಸಿಕ್ಸ್ ನೆಟ್‌ವರ್ಕ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಗೌರವ್ ಬಹಿರ್ವಾನಿ ಅವರ ಕನಸಿನ ಕೂಸಾಗಿದ್ದು, ಈ ಸ್ವರೂಪವು ಮಾಜಿ ಕ್ರಿಕೆಟಿಗರಿಂದ ವ್ಯಾಪಕ ಪ್ರಶಂಸೆಯನ್ನು ಪಡೆದಿದೆ.
ವೆಸ್ಟ್ ಇಂಡೀಸ್‌ನ ದಿಗ್ಗಜ ಕ್ಲೈವ್ ಲಾಯ್ಡ್, ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿವಿಲಿಯರ್ಸ್, ಆಸ್ಟ್ರೇಲಿಯಾದ ಮಾಜಿ ಓಪನರ್ ಮ್ಯಾಥ್ಯೂ ಹೇಡನ್ ಮತ್ತು ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಟೆಸ್ಟ್ ಟ್ವೆಂಟಿ ಸ್ವರೂಪದ ಸಲಹಾ ಮಂಡಳಿಯಲ್ಲಿರುತ್ತಾರೆ. ಇದರೊಂದಿಗೆ, ರಾಜಸ್ಥಾನ ರಾಯಲ್ಸ್‌ನ ಮಾಜಿ ಸಿಇಒ ಮೈಕೆಲ್ ಫೋರ್ಡ್‌ಹ್ಯಾಮ್ ಅವರನ್ನು ಮುಖ್ಯ ಕಾರ್ಯಾಚರಣಾ ಅಧಿಕಾರಿಯಾಗಿ ನೇಮಿಸಲಾಗಿದೆ. ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್, ‘ಕ್ರಿಕೆಟ್‌ನ ಹೊಸ ಸ್ವರೂಪವು ಉತ್ಸಾಹವನ್ನು ಹೆಚ್ಚಿಸುತ್ತದೆ. ಇದು ಯುವ ಆಟಗಾರರಿಗೆ ಸಾಕಷ್ಟು ಅವಕಾಶಗಳನ್ನು ನೀಡುತ್ತದೆ’ ಎಂದು ಹೇಳಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:30 pm, Fri, 17 October 25
