ಏಕದಿನ ಕ್ರಿಕೆಟ್ ಆಯ್ತು, ಟಿ20 ಕ್ರಿಕೆಟ್ ಕೂಡ ಬಂದಾಯ್ತು, ಇನ್ನು ಟಿ10 ಸಹ ಪರಿಚಯವಾಯಿತು…ಮುಂದೇನು ಎಂಬ ಪ್ರಶ್ನೆಗೆ ಇದೀಗ ಉತ್ತರ ನೀಡಲು ಮುಂದಾಗಿದ್ದಾರೆ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್. ಹೌದು, ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಹೊಸ ಮಾದರಿಯ ಕ್ರಿಕೆಟ್ ಅನ್ನು ಪರಿಚಯಿಸಲು ಮುಂದಾಗುತ್ತಿದೆ. ಅದು ಕೂಡ 60 ಬಾಲ್ ಕ್ರಿಕೆಟ್. ಆದರೆ ಇದು ಟಿ10 ಕ್ರಿಕೆಟ್ ಅಲ್ಲ ಎಂಬುದು ವಿಶೇಷ. ದಿ ಸಿಕ್ಸ್ಟಿ (‘THE 6IXTY’) ಹೆಸರಿನಲ್ಲಿ ಮೂಡಿಬರಲಿರುವ ಈ ಟೂರ್ನಿಗಾಗಿ ಈಗಾಗಲೇ ಸಿದ್ದತೆಗಳು ಶುರುವಾಗಿದೆ. ಅದರಂತೆ ಆಗಸ್ಟ್ ತಿಂಗಳಿಂದ ದಿ ಸಿಕ್ಸ್ಟಿಗೆ ಚಾಲನೆ ನೀಡಲು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಹಾಗೂ ಕೆರಿಬಿಯನ್ ಪ್ರೀಮಿಯರ್ ಲೀಗ್ ಆಯೋಜಕರು ಯೋಜನೆ ರೂಪಿಸಿದ್ದಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿರುವ ತಂಡಗಳೇ ಈ ಲೀಗ್ನಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇನ್ನು ಈ ಲೀಗ್ನಲ್ಲಿ ಹಲವು ಹೊಸ ನಿಯಮಗಳನ್ನು ಪರಿಚಯಿಸಲಾಗಿದ್ದು, ಅದರಂತೆ ಟೂರ್ನಿ ನಡೆಯಲಿದೆ. ಆಗಿದ್ರೆ ದಿ ಸಿಕ್ಸ್ಟಿ ಲೀಗ್ನಲ್ಲಿರುವ ನಿಯಮಗಳೇನು ನೋಡೋಣ…
ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ-ಕೆರಿಬಿಯನ್ ಪ್ರೀಮಿಯರ್ ಲೀಗ್ ಜಂಟಿಯಾಗಿ ಆಯೋಜಿಸಲಿರುವ ಈ ಟೂರ್ನಿಯನ್ನು ವರ್ಷಕ್ಕೆ 4 ಬಾರಿ ನಡೆಯಲಿದೆ. ಅಂದರೆ ಪ್ರತಿ 3 ತಿಂಗಳಿಗೊಮ್ಮೆ ಟೂರ್ನಿ ನಡೆಯಲಿದೆ. ಮೊದಲ ಸೀಸನ್ ಅನ್ನು ಸೇಂಟ್ ಕಿಟ್ಸ್‌ನಲ್ಲಿ ಆಗಸ್ಟ್ 24 ರಿಂದ 28 ರವರೆಗೆ ಆಯೋಜಿಸಲಾಗುವುದು ಎಂದು ತಿಳಿಸಲಾಗಿದೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:53 am, Thu, 23 June 22