Jos Buttler: ಪಿಚ್ನಿಂದ ಹೊರಗಡೆ ಬಾಲ್ ಮಾಡಿದ ಬೌಲರ್: ಸಿಟ್ಟಾದ ಜೋಸ್ ಬಟ್ಲರ್ ಮಾಡಿದ್ದೇನು ನೋಡಿ
Netherlands vs England: ನೆದರ್ಲೆಂಡ್ ನೀಡಿದ್ದ 245 ರನ್‌ಗಳ ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿತ್ತು. ಇದರ ನಡುವೆ 29ನೇ ಓವರ್ನ ಪೌಲ್ ವಾನ್ ಮೀಕೆರೆನ್ ಬೌಲಿಂಗ್ನಲ್ಲಿ ಜೋಸ್ ಬಟ್ಲರ್ ಸಿಡಿಸಿದ ಸಿಕ್ಸ್ ವಿಶೇಷವಾಗಿತ್ತು.
ನೆದರ್ಲೆಂಡ್ ಪ್ರವಾಸ ಬೆಳೆಸಿದ್ದ ಇಂಗ್ಲೆಂಡ್ (Netherlands vs England) ಕ್ರಿಕೆಟ್ ತಂಡ ಆಡಿದ ಮೂರೂ ಪಂದ್ಯಗಳಲ್ಲಿ ಗೆದ್ದು ಬೀಗಿದ್ದು ಸರಣಿ ಕ್ಲೀನ್ಸ್ವೀಪ್ ಮಾಡಿದ ಸಾಧನೆ ಗೈದಿದೆ. ಮೊದಲ ಪಂದ್ಯದಲ್ಲಿ ಆಂಗ್ಲರು ದಾಖಲೆಯ 232 ರನ್‌ಗಳ ಗೆಲುವು ಕಂಡರೆ, ದ್ವಿತೀಯ ಕದನದಲ್ಲಿ 6 ವಿಕೆಟ್ಗಳ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ 8 ವಿಕೆಟ್ಗಳ ಜಯ ಸಾಧಿಸಿತು. ಅದರಲ್ಲೂ ಬುಧವಾರ ಜರುಗಿದ ಮೂರನೇ ಏಕದಿನ ಪಂದ್ಯದಲ್ಲಿ ನೆದರ್ಲೆಂಡ್ ಬೌಲರ್ಗಳನ್ನು ಇಂಗ್ಲೆಂಡ್ ಬ್ಯಾಟರ್ಗಳು ಮನಬಂದಂತೆ ದಂಡಿಸಿದರು. ಸರಣಿಯುದ್ದಕ್ಕೂ ಜೇಸನ್ ರಾಯ್ (Jason Roy) ಹಾಗೂ ಜೋಸ್ ಬಟ್ಲರ್ (Jos Buttler) ಮನಮೋಹಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇದು ಅಂತಿಮ ಪಂದ್ಯದಲ್ಲೂ ಮುಂದುವರೆಯಿತು. ಅದರಲ್ಲೂ ಬಟ್ಲರ್ ಕೇವಲ 64 ಎಸೆತಗಳಲ್ಲಿ 7 ಫೋರ್ ಹಾಗೂ 5 ಸಿಕ್ಸರ್ ಸಿಡಿಸಿ ಅಜೇಯ 86 ರನ್ ಚಚ್ಚಿದರು. ಜೊತೆಗೆ ವಿಶೇಷ ಸಿಕ್ಸರ್ಗೂ ಕಾರಣರಾದರು.
ಹೌದು, ನೆದರ್ಲೆಂಡ್ ನೀಡಿದ್ದ 245 ರನ್‌ಗಳ ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿತ್ತು. ಇದರ ನಡುವೆ 29ನೇ ಓವರ್ನ ಪೌಲ್ ವಾನ್ ಮೀಕೆರೆನ್ ಬೌಲಿಂಗ್ನಲ್ಲಿ ಜೋಸ್ ಬಟ್ಲರ್ ಸಿಡಿಸಿದ ಸಿಕ್ಸ್ ವಿಶೇಷವಾಗಿತ್ತು. ಪೌಲ್ ಸ್ಲೋವರ್ ಬೌನ್ಸರ್ ಎಸೆಯಲು ಯತ್ನಿಸಿದರು. ಆದರೆ, ಚೆಂಡು ಅವರು ಅಂದುಕೊಂಡರೀತಿ ಲ್ಯಾಂಡ್ ಆಗಲಿಲ್ಲ. ಚೆಂಡು ಎರಡು ಬೌನ್ಸ್ ಆಗಿ ಪಿಚ್ನಿಂದ ಹೊರಗಡೆ ಹೋಯಿತು.
?????? pic.twitter.com/SYVCmHr2iD
— Sachin (@Sachin72342594) June 22, 2022
ಅಸಲಿಗೆ ಅದು ಡೆಡ್ ಬಾಲ್. ಆದರೆ, ಬಟ್ಲರ್ ಕೂಡ ಪಿಚ್ನಿಂದ ಹೊರಗಡೆ ಬಂದು ಚೆಂಡನ್ನು ಸಿಕ್ಸರ್ ಕಡೆ ಅಟ್ಟಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ಬಟ್ಲರ್, “ನಾವು ತುಂಬಾ ಚೆನ್ನಾಗಿ ಆಡಿದೆವು. ಮುಂದಿನ ದಿನಗಳಲ್ಲಿ ಸಾಕಷ್ಟು ಕ್ರಿಕೆಟ್ ಪಂದ್ಯಗಳಿವೆ. ನಮ್ಮ ತಂಡ ಸಾಕಷ್ಟು ಬಲಿಷ್ಠವಾಗಿದೆ. ಮುಂದಿನ ಪಂದ್ಯಕ್ಕೆ ಉತ್ಸುಕನಾಗಿದ್ದೇನೆ,” ಎಂದು ಹೇಳಿದರು.
World Test Championship: ಭಾರತ ಕ್ರಿಕೆಟ್ ತಂಡಕ್ಕೆ ಇಂದು ನೋವಿನ ದಿನ: ಜುಲೈ 23 ರಂದು ನಡೆದಿದ್ದೇನು ನೋಡಿ
ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡವು ನೆದರ್ಲೆಂಡ್ ತಂಡವನ್ನ ಬ್ಯಾಟಿಂಗ್‌ಗೆ ಆಹ್ವಾನಿಸಿತು. ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ಮಧ್ಯಮ ಕ್ರಮಾಂಕದ ಸಾಧಾರಣ ಬ್ಯಾಟಿಂಗ್ ಪ್ರದರ್ಶನದಿಂದಾಗಿ 244 ರನ್‌ಗಳಿಸಿತು. ನೆದರ್ಲೆಂಡ್ ಪರ ಮ್ಯಾಕ್ಸ್ ಓವ್ಡ್ 50, ಟಾಮ್ ಕೂಪರ್ 33, ಬಾಸ್ ಡಿ ಲೀಡ್ 56, ನಾಯಕ ಎಡ್ವರ್ಡ್ 64 ರನ್ ಕಲೆಹಾಕಿದರು. ಇಂಗ್ಲೆಂಡ್ ಪರ ಡೇವಿಡ್ ವಿಲ್ಲಿ ನಾಲ್ಕು ವಿಕೆಟ್ ಪಡೆದು ಮಿಂಚಿದರು.
ಗುರಿ ಬೆನ್ನತ್ತಿದ ಇಂಗ್ಲೆಂಡ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿತು. ಮೊದಲ ವಿಕೆಟ್‌ಗೆ 85 ರನ್‌ಗಳ ಜೊತೆಯಾಟ ಮೂಡಿಬಂದಿತು. 39 ಎಸೆತಗಳಲ್ಲಿ 49 ರನ್ ಸಿಡಿಸಿದ್ದ ಫಿಲಿಪ್ ಸಾಲ್ಟ್ ಒಂದು ರನ್ ಅಂತರದಲ್ಲಿ ಅರ್ಧಶತಕ ಮಿಸ್ ಮಾಡಿಕೊಂಡು ಪೆವಿಲಿಯನ್ ಸೇರಿಕೊಂಡರು. ವಿಕೆಟ್ ಕೀಪರ್ ಹಾಗೂ ನಾಯಕನಾಗಿ ಕಣಕ್ಕಿಳಿದ ಜೋಸ್ ಬಟ್ಲರ್ ಮತ್ತೊಂದು ಸೊಗಸಾದ ಇನ್ನಿಂಗ್ಸ್ ಆಡುವ ಮೂಲಕ ತಂಡಕ್ಕೆ ಜಯ ತಂದುಕೊಟ್ಟರು. ನಾಯಕನಿಗೆ ಸಾಥ್ ಕೊಟ್ಟ ಓಪನರ್ ಜೇಸನ್ ರಾಯ್ 86 ಎಸೆತಗಳಲ್ಲಿ ಅಜೇಯ 101 ರನ್ ಕಲೆಹಾಕುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಬಟ್ಲರ್ 64 ಎಸೆತಗಳಲ್ಲಿ ಅಜೇಯ 86 ರನ್ ಸಿಡಿಸಿ ಮಿಂಚಿದರು. ಜೇಸನ್ ರಾಯ್ ಅಜೇಯ 101 ರನ್ ಕಲೆಹಾಕಿ ಜೇಸನ್ ರಾಯ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.