THE 6IXTY: 60 ಎಸೆತ, 2+1 ಪವರ್​ಪ್ಲೇ, 6 ಬ್ಯಾಟ್ಸ್​ಮನ್: ಕ್ರಿಕೆಟ್ ಅಂಗಳಕ್ಕೆ ಹೊಸ ಲೀಗ್ ಎಂಟ್ರಿ..!

'THE 6IXTY': ವೆಸ್ಟ್ ಇಂಡೀಸ್ ಕ್ರಿಕೆಟ್​ ಮಂಡಳಿ-ಕೆರಿಬಿಯನ್ ಪ್ರೀಮಿಯರ್ ಲೀಗ್ ಜಂಟಿಯಾಗಿ ಆಯೋಜಿಸಲಿರುವ ಈ ಟೂರ್ನಿಯನ್ನು ವರ್ಷಕ್ಕೆ 4 ಬಾರಿ ನಡೆಯಲಿದೆ

THE 6IXTY: 60 ಎಸೆತ, 2+1 ಪವರ್​ಪ್ಲೇ, 6 ಬ್ಯಾಟ್ಸ್​ಮನ್: ಕ್ರಿಕೆಟ್ ಅಂಗಳಕ್ಕೆ ಹೊಸ ಲೀಗ್ ಎಂಟ್ರಿ..!
THE 6IXTY
Follow us
TV9 Web
| Updated By: ಝಾಹಿರ್ ಯೂಸುಫ್

Updated on:Jun 23, 2022 | 3:59 PM

ಏಕದಿನ ಕ್ರಿಕೆಟ್ ಆಯ್ತು, ಟಿ20 ಕ್ರಿಕೆಟ್ ಕೂಡ ಬಂದಾಯ್ತು, ಇನ್ನು ಟಿ10 ಸಹ ಪರಿಚಯವಾಯಿತು…ಮುಂದೇನು ಎಂಬ ಪ್ರಶ್ನೆಗೆ ಇದೀಗ ಉತ್ತರ ನೀಡಲು ಮುಂದಾಗಿದ್ದಾರೆ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್​​. ಹೌದು, ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಹೊಸ ಮಾದರಿಯ ಕ್ರಿಕೆಟ್ ಅನ್ನು ಪರಿಚಯಿಸಲು ಮುಂದಾಗುತ್ತಿದೆ. ಅದು ಕೂಡ 60 ಬಾಲ್ ಕ್ರಿಕೆಟ್. ಆದರೆ ಇದು ಟಿ10 ಕ್ರಿಕೆಟ್ ಅಲ್ಲ ಎಂಬುದು ವಿಶೇಷ. ದಿ ಸಿಕ್ಸ್ಟಿ (‘THE 6IXTY’) ಹೆಸರಿನಲ್ಲಿ ಮೂಡಿಬರಲಿರುವ ಈ ಟೂರ್ನಿಗಾಗಿ ಈಗಾಗಲೇ ಸಿದ್ದತೆಗಳು ಶುರುವಾಗಿದೆ. ಅದರಂತೆ ಆಗಸ್ಟ್ ತಿಂಗಳಿಂದ ದಿ ಸಿಕ್ಸ್ಟಿಗೆ ಚಾಲನೆ ನೀಡಲು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಹಾಗೂ ಕೆರಿಬಿಯನ್ ಪ್ರೀಮಿಯರ್ ಲೀಗ್ ಆಯೋಜಕರು ಯೋಜನೆ ರೂಪಿಸಿದ್ದಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿರುವ ತಂಡಗಳೇ ಈ ಲೀಗ್​ನಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇನ್ನು ಈ ಲೀಗ್​ನಲ್ಲಿ ಹಲವು ಹೊಸ ನಿಯಮಗಳನ್ನು ಪರಿಚಯಿಸಲಾಗಿದ್ದು, ಅದರಂತೆ ಟೂರ್ನಿ ನಡೆಯಲಿದೆ. ಆಗಿದ್ರೆ ದಿ ಸಿಕ್ಸ್ಟಿ ಲೀಗ್​ನಲ್ಲಿರುವ ನಿಯಮಗಳೇನು ನೋಡೋಣ…

  1. ಈ ಟೂರ್ನಿಯಲ್ಲಿ ಒಟ್ಟು 6 ತಂಡಗಳು ಕಣಕ್ಕಿಳಿಯಲಿದೆ. ಆದರೆ ಇಲ್ಲಿ 6 ಬ್ಯಾಟ್ಸ್​ಮನ್​ಗಳಿಗೆ ಮಾತ್ರ ಅವಕಾಶ ಇರಲಿದೆ ಎಂಬುದು ವಿಶೇಷ. ಅಂದರೆ ಪ್ರತಿ ಬ್ಯಾಟಿಂಗ್ ತಂಡವು ಆರು ವಿಕೆಟ್‌ಗಳನ್ನು ಹೊಂದಿರುತ್ತದೆ. 6ನೇ ವಿಕೆಟ್‌ ಪತನದೊಂದಿಗೆ ಆಲ್​ಔಟ್ ಎಂದು ಪರಿಗಣಿಸಲಾಗುತ್ತದೆ.
  2. ಹಾಗೆಯೇ ಬೌಲಿಂಗ್​ಗೂ ಹೊಸ ನಿಯಮ ಪರಿಚಯಿಸಲಾಗಿದೆ. ಇಲ್ಲಿ ಒಟ್ಟು 10 ಓವರ್​ಗಳನ್ನು ಎರಡು ತುದಿಯಿಂದ ಎಸೆಯುವಂತಹ ನಿಯಮ ರೂಪಿಸಲಾಗಿದೆ. ಅಂದರೆ 5 ಓವರ್​ ಪಿಚ್​ನ ಒಂದು ತುದಿಯಿಂದ ಎಸೆದರೆ, ಮತ್ತೆ ಐದು ಓವರ್​ಗಳನ್ನು ಇನ್ನೊಂದು ತುದಿಯಿಂದ ಎಸೆಯಬೇಕಾಗುತ್ತದೆ. ಇದರಿಂದ ಪಿಚ್​​ ಮೇಲ್ಮೈ ಕೂಡ ಬದಲಾಗಲಿದೆ. ಹೀಗಾಗಿ ಪಂದ್ಯವು ಯಾವುದೇ ತಿರುವನ್ನು ಕೂಡ ಪಡೆಯಬಹುದು.
  3. ಇನ್ನು ಪ್ರತಿ ತಂಡವು 45 ನಿಮಿಷಗಳಲ್ಲಿ 10 ಓವರ್‌ಗಳನ್ನು ಪೂರ್ಣಗೊಳಿಸಬೇಕು. ಈ ಸಮಯದೊಳಗೆ 10 ಓವರ್​ ಪೂರ್ಣಗೊಳಿಸಲು ವಿಫಲವಾದರೆ ಕೊನೆಯ 6 ಎಸೆತಗಳಿಗೆ ಫೀಲ್ಡರ್ ಕಡಿತ ಮಾಡಲಾಗುತ್ತದೆ.
  4. ಹಾಗೆಯೇ  ಒಬ್ಬ ಬೌಲರ್​ಗೆ ಕೇವಲ 2 ಓವರ್​ ಮಾತ್ರ ಇರಲಿದೆ. ಅದರಂತೆ ಒಂದು ತಂಡದಲ್ಲಿ ಐವರು ಬೌಲರ್​ಗಳು ಇರಲೇಬೇಕಾಗುತ್ತದೆ.
  5. ಇದನ್ನೂ ಓದಿ
    Image
    Irfan Pathan: ಟಿ20 ವಿಶ್ವಕಪ್​ಗೆ ಇರ್ಫಾನ್ ಪಠಾಣ್​ರ ಟೀಮ್ ಇಂಡಿಯಾ ಪ್ಲೇಯಿಂಗ್ 11
    Image
    Team India: 8 ತಿಂಗಳಲ್ಲಿ 6 ನಾಯಕರನ್ನು ಕಣಕ್ಕಿಳಿಸಿದ ಟೀಮ್ ಇಂಡಿಯಾ
    Image
    ಪೆಟ್ರೋಲ್ ಪಂಪ್​ನಲ್ಲಿ ಚಹಾ ನೀಡುತ್ತಿರುವ ಶ್ರೀಲಂಕಾ ಕ್ರಿಕೆಟಿಗ
    Image
    Rishabh Pant: ನಾಯಕನಾಗಿ ಅತ್ಯಂತ ಕೆಟ್ಟ ದಾಖಲೆ ಬರೆದ ರಿಷಭ್ ಪಂತ್
  6. ಈ ಪಂದ್ಯದಲ್ಲಿ ಎರಡು ಪವರ್ ಪ್ಲೇ ಓವರ್‌ಗಳು ಇರಲಿದೆ. ಇಲ್ಲಿ ಮೊದಲ ಎರಡು ಪವರ್​ಪ್ಲೇನಲ್ಲಿ ಬ್ಯಾಟ್ಸ್​ಮನ್​ಗಳು  ಎರಡು ಸಿಕ್ಸರ್‌ಗಳನ್ನು ಬಾರಿಸಿದರೆ, ಮೂರನೆ ಪವರ್​ಪ್ಲೇ ಅನ್ಲಾಕ್ ಆಗುತ್ತದೆ. ಅಂದರೆ ಮೊದಲೆರಡು ಓವರ್​ಗಳಲ್ಲಿ 2 ಸಿಕ್ಸ್ ಬಾರಿಸಿದ ಮತ್ತೊಂದು ಪವರ್​ಪ್ಲೇ ಸಿಗಲಿದೆ. ಈ ಪವರ್​ಪ್ಲೇ ಅನ್ನು 3 ರಿಂದ 9 ಓವರ್​ಗಳ ನಡುವೆ ತೆಗೆದುಕೊಳ್ಳಬಹುದು.

ವೆಸ್ಟ್ ಇಂಡೀಸ್ ಕ್ರಿಕೆಟ್​ ಮಂಡಳಿ-ಕೆರಿಬಿಯನ್ ಪ್ರೀಮಿಯರ್ ಲೀಗ್ ಜಂಟಿಯಾಗಿ ಆಯೋಜಿಸಲಿರುವ ಈ ಟೂರ್ನಿಯನ್ನು ವರ್ಷಕ್ಕೆ 4 ಬಾರಿ ನಡೆಯಲಿದೆ. ಅಂದರೆ ಪ್ರತಿ 3 ತಿಂಗಳಿಗೊಮ್ಮೆ ಟೂರ್ನಿ ನಡೆಯಲಿದೆ. ಮೊದಲ ಸೀಸನ್ ಅನ್ನು ಸೇಂಟ್ ಕಿಟ್ಸ್‌ನಲ್ಲಿ ಆಗಸ್ಟ್ 24 ರಿಂದ 28 ರವರೆಗೆ ಆಯೋಜಿಸಲಾಗುವುದು ಎಂದು ತಿಳಿಸಲಾಗಿದೆ.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:53 am, Thu, 23 June 22

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ