ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (WCL 2024) ಟೂರ್ನಿಯ 9ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಚಾಂಪಿಯನ್ಸ್ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ಯುನಿವರ್ಸ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ (Chris Gayle). ಸೌತ್ ಆಫ್ರಿಕಾ ಚಾಂಪಿಯನ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಚಾಂಪಿಯನ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು.
ಅದರಂತೆ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ಚಾಂಪಿಯನ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಎನ್ ಮೆಕೆಂಜಿ ಶೂನ್ಯಕ್ಕೆ ಔಟಾದರೆ, ಮತ್ತೋರ್ವ ಆರಂಭಿಕ ಲೆವಿ ಕೇವಲ 20 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಇನ್ನು ನಾಯಕ ಜಾಕ್ಸ್ ಕಾಲಿಸ್ 18 ರನ್ಗಳಿಸಿದರೆ, ಜೆಪಿ ಡುಮಿನಿ 23 ರನ್ಗಳ ಕೊಡುಗೆ ನೀಡಿದರು. ಇನ್ನು ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆಶ್ವೆಲ್ ಪ್ರಿನ್ಸ್ 35 ಎಸೆತಗಳಲ್ಲಿ 46 ರನ್ ಬಾರಿಸಿದರೆ, ಡೇನ್ ವಿಲಾಸ್ 17 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 44 ರನ್ ಚಚ್ಚಿದರು. ಈ ಮೂಲಕ ಸೌತ್ ಆಫ್ರಿಕಾ ಚಾಂಪಿಯನ್ಸ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 174 ರನ್ ಕಲೆಹಾಕಿತು.
175 ರನ್ಗಳ ಕಠಿಣ ಗುರಿ ಪಡೆದ ವೆಸ್ಟ್ ಇಂಡೀಸ್ ಚಾಂಪಿಯನ್ಸ್ ತಂಡಕ್ಕೆ ನಾಯಕ ಕ್ರಿಸ್ ಗೇಲ್ ಸಿಡಿಲಬ್ಬರದ ಆರಂಭ ಒದಗಿಸಿದ್ದರು. ಮೊದಲ ಓವರ್ನಿಂದಲೇ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಗೇಲ್ ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್ಗಳ ಸುರಿಮಳೆಗೈದರು.
ಅಲ್ಲದೆ ಕೇವಲ 40 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 70 ರನ್ ಬಾರಿಸಿ ಕ್ರಿಸ್ ಗೇಲ್ ಔಟಾದರು. ಅಷ್ಟರಲ್ಲಾಗಲೇ ವೆಸ್ಟ್ ಇಂಡೀಸ್ ಚಾಂಪಿಯನ್ಸ್ ತಂಡದ ಸ್ಕೋರ್ 13 ಓವರ್ಗಳಲ್ಲಿ 124 ಕ್ಕೆ ತಲುಪಿತ್ತು.
THE CHRIS GAYLE SHOW IN WCL. 🐐
70 (40) with 4 fours and 6 sixes – the vintage Universe Boss at the Edgbaston Stadium, he’s hitting them cleanly. 🌟 pic.twitter.com/jM5O2Lt7uo
— Mufaddal Vohra (@mufaddal_vohra) July 8, 2024
ಆ ಬಳಿಕ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಚಾಡ್ವಿಕ್ ವಾಲ್ಟರ್ 29 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ ಅಜೇಯ 56 ರನ್ ಬಾರಿಸಿದರು. ಈ ಮೂಲಕ ವೆಸ್ಟ್ ಇಂಡೀಸ್ ಚಾಂಪಿಯನ್ಸ್ ತಂಡವು 19.1 ಓವರ್ಗಳಲ್ಲಿ ಗುರಿ ತಲುಪಿ 6 ವಿಕೆಟ್ಗಳ ಜಯ ಸಾಧಿಸಿತು.
ಸೌತ್ ಆಫ್ರಿಕಾ ಚಾಂಪಿಯನ್ಸ್ ಪ್ಲೇಯಿಂಗ್ 11: ರಿಚರ್ಡ್ ಲೆವಿ (ವಿಕೆಟ್ ಕೀಪರ್) , ನೀಲ್ ಮೆಕೆಂಜಿ , ಜಾಕ್ಸ್ ಕಾಲಿಸ್ (ನಾಯಕ) , ಜೀನ್-ಪಾಲ್ ಡುಮಿನಿ , ಆಶ್ವೆಲ್ ಪ್ರಿನ್ಸ್ , ಜಸ್ಟಿನ್ ಒಂಟಾಂಗ್ , ಡೇನ್ ವಿಲಾಸ್ , ವೆರ್ನಾನ್ ಫಿಲಾಂಡರ್ , ಚಾರ್ಲ್ ಲ್ಯಾಂಗೆವೆಲ್ಡ್ , ಡೇಲ್ ಸ್ಟೇನ್ , ಇಮ್ರಾನ್ ತಾಹಿರ್.
ಇದನ್ನೂ ಓದಿ: Team India: ಕೊನೆಯ 10 ಓವರ್ಗಳಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ
ವೆಸ್ಟ್ ಇಂಡೀಸ್ ಚಾಂಪಿಯನ್ಸ್ ಪ್ಲೇಯಿಂಗ್ 11: ಡ್ವೇನ್ ಸ್ಮಿತ್ , ಕ್ರಿಸ್ ಗೇಲ್ (ನಾಯಕ) , ಚಾಡ್ವಿಕ್ ವಾಲ್ಟನ್ (ವಿಕೆಟ್ ಕೀಪರ್) , ಜೊನಾಥನ್ ಕಾರ್ಟರ್ , ಕಿರ್ಕ್ ಎಡ್ವರ್ಡ್ಸ್ , ಆಶ್ಲೇ ನರ್ಸ್ , ನವೀನ್ ಸ್ಟೀವರ್ಟ್ , ರಾಯದ್ ಎಮ್ರಿಟ್ , ಟಿನೋ ಬೆಸ್ಟ್ , ಸ್ಯಾಮ್ಯುಯೆಲ್ ಬದ್ರೀ , ಸುಲೈಮಾನ್ ಬೆನ್ , ಜೇಸನ್ ಮೊಹಮ್ಮದ್.