The Hundred 2024: ಮತ್ತೆ ಚಾಂಪಿಯನ್ಸ್ ಪಟ್ಟಕ್ಕೇರಿದ ಓವಲ್ ಇನ್ವಿನ್ಸಿಬಲ್ಸ್

|

Updated on: Aug 19, 2024 | 7:53 AM

The Hundred 2024 Final: The Hundred 2024: ದಿ ಹಂಡ್ರೆಡ್ ಲೀಗ್ ಶುರುವಾಗಿದ್ದು 2021 ರಲ್ಲಿ. ಈವರೆಗೆ ಮೂರು ಸೀಸನ್ ಆಡಲಾಗಿದೆ. ಮೊದಲ ಸೀಸನ್​ನಲ್ಲಿ ಸದರ್ನ್ ಬ್ರೇವ್ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ದ್ವಿತೀಯ ಸೀಸನ್​ನಲ್ಲಿ ಟ್ರೆಂಟ್ ರಾಕೆಟ್ಸ್ ಕಿರೀಟ ಮುಡಿಗೇರಿಸಿಕೊಂಡಿತ್ತು. ಇನ್ನು ಕಳೆದ ಸೀಸನ್​ನಲ್ಲಿ ಓವಲ್ ಇನ್ವಿನ್ಸಿಬಲ್ಸ್ ತಂಡ ಚಾಂಪಿಯನ್ ಪಟ್ಟಕ್ಕೇರಿತ್ತು.

The Hundred 2024: ಮತ್ತೆ ಚಾಂಪಿಯನ್ಸ್ ಪಟ್ಟಕ್ಕೇರಿದ ಓವಲ್ ಇನ್ವಿನ್ಸಿಬಲ್ಸ್
Oval Invincibles
Follow us on

ಲಂಡನ್​ನಲ್ಲಿ ನಡೆದ ದಿ ಹಂಡ್ರೆಡ್ ಲೀಗ್ ಟೂರ್ನಿಯ ಫೈನಲ್​ ಪಂದ್ಯದಲ್ಲಿ ಸದರ್ನ್ ಬ್ರೇವ್ ತಂಡವನ್ನು ಮಣಿಸಿ ಓವಲ್ ಇನ್ವಿನ್ಸಿಬಲ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ ಬ್ಯಾಕ್ ಟು ಬ್ಯಾಕ್ ಟ್ರೋಫಿ ಎತ್ತಿ ಹಿಡಿಯುವಲ್ಲಿ ಓವಲ್ ತಂಡ ಯಶಸ್ವಿಯಾಗಿದೆ. 2023 ರಲ್ಲಿ ಮ್ಯಾಚೆಂಸ್ಟರ್ ಒರಿಜಿನಲ್ಸ್ ತಂಡಕ್ಕೆ ಸೋಲುಣಿಸಿ ಓವಲ್ ಇನ್ವಿನ್ಸಿಬಲ್ಸ್ ಚಾಂಪಿಯನ್ ಪಟ್ಟಕ್ಕೇರಿತ್ತು.

ಇನ್ನು ಲಂಡನ್​ನ ಲಾರ್ಡ್ಸ್​​ ಮೈದಾನದಲ್ಲಿ ನಡೆದ ಈ ಬಾರಿಯ ಫೈನಲ್​ನಲ್ಲಿ ಟಾಸ್ ಗೆದ್ದ ಸದರ್ನ್ ಬ್ರೇವ್ ತಂಡವು ಬೌಲಿಂಗ್ ಆಯ್ದುಕೊಂಡಿತ್ತು. ಅದರಂತೆ ಮೊದಲು ಬ್ಯಾಟ್ ಮಾಡಿದ ಓವಲ್ ಇನ್ವಿನ್ಸಿಬಲ್ಸ್ ಪರ ಆರಂಭಿಕ ದಾಂಡಿಗ ವಿಲ್ ಜಾಕ್ಸ್ 37 ರನ್ ಬಾರಿಸಿದರು.

ಆ ಬಳಿಕ ಬಂದ ಸ್ಯಾಮ್ ಕರನ್ ಹಾಗೂ ಜೋರ್ಡನ್ ಕಾಕ್ಸ್ ತಲಾ 25 ರನ್​ಗಳ ಕೊಡುಗೆ ನೀಡಿದರು. ಇನ್ನು ಅಂತಿಮ ಹಂತದಲ್ಲಿ ಟಾಮ್ ಕರನ್ 24 ರನ್ ಸಿಡಿಸಿದರು. ಈ ಮೂಲಕ ಓವಲ್ ಇನ್ವಿನ್ಸಿಬಲ್ಸ್ 100 ಎಸೆತಗಳಲ್ಲಿ 9 ವಿಕೆಟ್ ಕಳೆದುಕೊಂಡು 147 ರನ್​​ ಕಲೆಹಾಕಿತು.

148 ರನ್​ಗಳ ಗುರಿ ಪಡೆದ ಸದರ್ನ್ ಬ್ರೇವ್ ತಂಡಕ್ಕೆ ಅಲೆಕ್ಸ್ ಡೇವಿಡ್ (35) ಹಾಗೂ ಜೇಮ್ಸ್ ವಿನ್ಸ್ (24) ಉತ್ತಮ ಆರಂಭ ಒದಗಿಸಿದ್ದರು. ಆದರೆ ಬಳಿಕ ಬಂದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಇತ್ತ ಓವಲ್ ಪರ ಅತ್ಯುತ್ತಮ ದಾಳಿ ಸಂಘಟಿಸಿದ ಸಾಕಿ ಮಹಮೂದ್ 20 ಎಸೆತಗಳಲ್ಲಿ ಕೇವಲ 17 ರನ್ ನೀಡಿ 3 ವಿಕೆಟ್ ಕಬಳಿಸಿದರು.

ಪರಿಣಾಮ ಸದರ್ನ್ ಬ್ರೇವ್ ತಂಡವು 100 ಎಸೆತಗಳಲ್ಲಿ 7 ವಿಕೆಟ್ ಕಳೆದುಕೊಂಡು 130 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಓವಲ್ ಇನ್ವಿನ್ಸಿಬಲ್ಸ್ 17 ರನ್​ಗಳ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ದಿ ಹಂಡ್ರೆಡ್ ಲೀಗ್​ನಲ್ಲಿ ಬ್ಯಾಕ್ ಟು ಬ್ಯಾಕ್ ಚಾಂಪಿಯನ್ಸ್ ಪಟ್ಟ ಅಲಂಕರಿಸಿದ ವಿಶೇಷ ದಾಖಲೆಯೊಂದನ್ನು ಓವಲ್ ಇನ್ವಿನ್ಸಿಬಲ್ಸ್ ತಂಡ ತನ್ನದಾಗಿಸಿಕೊಂಡಿತು.

ಓವಲ್ ಇನ್ವಿನ್ಸಿಬಲ್ಸ್ ಪ್ಲೇಯಿಂಗ್ 11: ವಿಲ್ ಜ್ಯಾಕ್ಸ್ , ಡೇವಿಡ್ ಮಲಾನ್ , ಜೋರ್ಡಾನ್ ಕಾಕ್ಸ್ , ಸ್ಯಾಮ್ ಬಿಲ್ಲಿಂಗ್ಸ್ (ನಾಯಕ) , ಸ್ಯಾಮ್ ಕರನ್ , ಡೊನೊವನ್ ಫೆರೀರಾ , ಟಾಮ್ ಕರನ್ , ಟಾಮ್ ಲ್ಯಾಮನ್ಬಿ , ನಾಥನ್ ಸೌಟರ್ , ಆ್ಯಡಂ ಝಂಪಾ , ಸಾಕಿಬ್ ಮಹಮೂದ್.

ಇದನ್ನೂ ಓದಿ: ICC Rankings: ಐಸಿಸಿ ರ‍್ಯಾಕಿಂಗ್ ಪ್ರಕಟ: ಟಾಪ್-10 ನಲ್ಲಿ 6 ಭಾರತೀಯರು

 

ಸದರ್ನ್​ ಬ್ರೇವ್ ಪ್ಲೇಯಿಂಗ್ 11: ಅಲೆಕ್ಸ್ ಡೇವಿಸ್ , ಜೇಮ್ಸ್ ವಿನ್ಸ್ (ನಾಯಕ) , ಲೂಯಿಸ್ ಡೇ, ಜೇಮ್ಸ್ ಕೋಲ್ಸ್, ಲೌರಿನ್ ಇವನ್ಸ್, ಕೀರನ್ ಪೊಲಾರ್ಡ್, ಕ್ರಿಸ್ ಜೋರ್ಡನ್, ಅಕೀಲ್ ಹೊಸೈನ್, ಕ್ರೇಗ್ ಓವರ್ಟನ್, ಜೋಫ್ರಾ ಆರ್ಚರ್, ಟೈಮಲ್ ಮಿಲ್ಸ್.

 

Published On - 7:52 am, Mon, 19 August 24