ಕ್ರಿಕೆಟ್ ಎಂಬುದು ಅನಿಶ್ಚಿತತೆಯ ಆಟವಾದ್ದರಿಂದ ಈ ಆಟದಲ್ಲೂ ವರ್ಚಸ್ಸಿಗೆ ಅವಕಾಶವಿದೆ. ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ 100-ಬಾಲ್ ಪಂದ್ಯಾವಳಿ ‘ದಿ ಹಂಡ್ರೆಡ್’ ಲೀಗ್ನಲ್ಲಿ ಬೌಲರ್ರೊಬ್ಬರು ಕೇವಲ ಒಂದು ಕ್ಯಾಚ್ ಮೂಲಕ ಎಲ್ಲರನ್ನೂ ದಂಗಾಗಿಸಿದ್ದಾರೆ. ಬರ್ಮಿಂಗ್ಹ್ಯಾಮ್ ಫೀನಿಕ್ಸ್ ಮತ್ತು ಟ್ರೆಂಟ್ ರಾಕೆಟ್ಸ್ ನಡುವಿನ ಪಂದ್ಯದದ ವೇಳೆ ಟಾಮ್ ಹೆಲ್ಮ್ ಹಿಡಿದ ಈ ಕ್ಯಾಚ್ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಪಂದ್ಯದಲ್ಲಿ ಟ್ರೆಂಟ್ ರಾಕೆಟ್ಸ್ ಪರ ಆಡುತ್ತಿರುವ ಬ್ಯಾಟ್ಸ್‌ಮನ್ ಕಾಲಿನ್ ಮನ್ರೋ ಹೆಲ್ಮ್ ಎಸೆತಕ್ಕೆ ಭರ್ಜರಿ ಪ್ರತ್ಯುತ್ತರ ನೀಡಿದ್ದರು. ಆದರೆ ಕ್ಷಣಾರ್ಧದಲ್ಲೇ ಅದ್ಭುತ ಡೈವ್ ಕ್ಯಾಚ್ ಹಿಡಿಯುವ ಮೂಲಕ ಟಾಮ್ ಹೆಲ್ಮ್ ಎಲ್ಲರನ್ನು ನಿಬ್ಬೆರಗಾಗಿಸಿದರು. ಇದರೊಂದಿಗೆ 8 ಎಸೆತಗಳಲ್ಲಿ 11 ರನ್ ಗಳಿಸಿದ್ದ ಮನ್ರೊ ಇನಿಂಗ್ಸ್ ಕೂಡ ಅಂತ್ಯವಾಯಿತು.
ಈ ಕ್ಯಾಚ್ನ ವಿಡಿಯೋವನ್ನು ಕ್ಯಾಮೆರಾದ ಮೂರು ಕೋನಗಳಿಂದ ಚಿತ್ರಿಸಲಾಗಿದೆ. ಅಲ್ಲದೆ ಈ ಕ್ಯಾಚ್ ಅನ್ನು ಹಿಡಿಯುವುದು ಸುಲಭವಾಗಿರಲಿಲ್ಲ ಎಂದು ವಿಡಿಯೋ ವೀಕ್ಷಿಸಿದರೆ ಸ್ಪಷ್ಟವಾಗುತ್ತದೆ. ಇದೀಗ ಟಾಮ್ ಹೆಲ್ಮ್ ಫಾಲೋಥ್ರೂ ಹಿಡಿದಿರುವ ಅದ್ಭುತ ಕ್ಯಾಚ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.