ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್ (The Hundred 2023) ಲೀಗ್ನಲ್ಲಿ ಅಂದರೆ ನೂರು ಎಸೆತಗಳ ಲೀಗ್ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ (Jos Buttler), ತಮ್ಮ ನಾಯಕತ್ವದ ಮ್ಯಾಂಚೆಸ್ಟರ್ ಒರಿಜಿನಲ್ಸ್ (Manchester Originals) ತಂಡವನ್ನು ಫೈನಲ್‌ಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ. ಸದರ್ನ್ ಬ್ರೇವ್ (Southern Brave) ತಂಡದ ಬೌಲರ್ಗಳ ಬೆವರಳಿಸಿದ ಬಟ್ಲರ್ ಕೇವಲ 46 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 82 ರನ್ ಚಚ್ಚಿದರು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸದರ್ನ್ ಬ್ರೇವ್ ತಂಡ 197 ರನ್‌ಗಳ ಬೃಹತ್ ಟಾರ್ಗೆಟ್ ಸೆಟ್ ಮಾಡಿತು. ಈ ಗುರಿ ಬೆನ್ನಟ್ಟಿದ ಬಟ್ಲರ್ ನಾಯಕತ್ವದ ಮ್ಯಾಂಚೆಸ್ಟರ್ ಒರಿಜಿನಲ್ಸ್ ತಂಡ ಇನ್ನು 4 ಎಸೆತಗಳು ಬಾಕಿ ಇರುವಂತೆಯೇ ಕೇವಲ 3 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.
ಪಂದ್ಯಾವಳಿಯ ಎಲಿಮಿನೇಟರ್ ಪಂದ್ಯದಲ್ಲಿ, ಸದರ್ನ್ ಬ್ರೇವ್ಸ್ ತಂಡ ಮೊದಲು ಬ್ಯಾಟ್ ಮಾಡಿ ಕೇವಲ 100 ಎಸೆತಗಳಲ್ಲಿ 197 ರನ್ ಕಲೆಹಾಕಿತು. ಸದರ್ನ್ ಬ್ರೇವ್ಸ್ ಪರ, ಎಲ್ಲಾ ಅಗ್ರ ಮೂವರು ಬ್ಯಾಟ್ಸ್‌ಮನ್‌ಗಳಾದ ಫಿನ್ ಅಲೆನ್, ಡೆವೊನ್ ಕಾನ್ವೇ ಮತ್ತು ಜೇಮ್ಸ್ ವಿನ್ಸ್ ತಲಾ ಅರ್ಧಶತಕ ಸಿಡಿಸಿ ಮಿಂಚಿದರು. ಇದರೊಂದಿಗೆ, ಪಂದ್ಯಾವಳಿಯ ಇತಿಹಾಸದಲ್ಲಿ ತಂಡವೊಂದರ ಟಾಪ್ ಮೂವರು ಬ್ಯಾಟರ್ಗಳು ಅರ್ಧಶತಕ ಸಿಡಿಸಿದ ದಾಖಲೆಯನ್ನು ಸದರ್ನ್ ಬ್ರೇವ್ ಬರೆಯಿತು. ಆದರೆ, ಈ ದಾಖಲೆಯ ಹೊರತಾಗಿಯೂ ಬಟ್ಲರ್ ಅಬ್ಬರದೆದುರು ಸದರ್ನ್ ಬ್ರೇವ್ ತಂಡಕ್ಕೆ ಗೆಲುವು ದಕ್ಕಲಿಲ್ಲ.
6,6,6,6,6,6,6.. ದಿ ಹಂಡ್ರೆಡ್ ಲೀಗ್ನಲ್ಲಿ ಅಬ್ಬರಿಸಿದ ಮಾಜಿ ಆರ್ಸಿಬಿ ಬೌಲರ್..!
198 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮ್ಯಾಂಚೆಸ್ಟರ್ ಒರಿಜಿನಲ್ಸ್ ತಂಡದ ನಾಯಕ ಜೋಸ್ ಬಟ್ಲರ್ ತಮ್ಮ ಆರಂಭಿಕ ಜೊತೆಗಾರ ಫಿಲ್ ಸಾಲ್ಟ್ ಅವರೊಂದಿಗೆ 83 ರನ್ ಜೊತೆಯಾಟ ಹಂಚಿಕೊಂಡರು. ಈ ವೇಳೆ ಮತ್ತೊಬ್ಬ ಆರಂಭಿಕ ಸಾಲ್ಟ್ 17 ಎಸೆತಗಳಲ್ಲಿ 47 ರನ್ ಗಳಿಸಿ ಔಟಾದರು. ಆದರೆ ಮ್ಯಾಕ್ಸ್ ಹೋಲ್ಡನ್ ಸಾಥ್ ಪಡೆದ ಬಟ್ಲರ್ ವಿದ್ವಂಸಕ ಬ್ಯಾಟಿಂಗ್ ಮಾಡಿ ಕೇವಲ 41 ಎಸೆತಗಳಲ್ಲಿ ತಂಡದ ಶತಕ ಪೂರೈಸಿದರು.
Jos Buttler just can't stop hitting sixes right now 😎#TheHundred pic.twitter.com/6H52b4WVtp
— The Hundred (@thehundred) August 26, 2023
ಆದರೆ, ಕಥೆ ಇಲ್ಲಿಗೇ ಮುಗಿಯಲಿಲ್ಲ. ಮ್ಯಾಕ್ಸ್ ಹೋಲ್ಡನ್ 17 ಎಸೆತಗಳಲ್ಲಿ 31 ರನ್ ಗಳಿಸಿ ಔಟಾದರೆ, ಇದೇ ವೇಳೆ ಜೋಸ್ ಬಟ್ಲರ್ 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಸಂಪೂರ್ಣ 65 ನಿಮಿಷಗಳ ಕಾಲ ಬ್ಯಾಟಿಂಗ್ ಮಾಡಿದ ಬಟ್ಲರ್ ಮ್ಯಾಂಚೆಸ್ಟರ್ ತಂಡಕ್ಕೆ ಗೆಲುವನ್ನು ಖಚಿತಪಡಿಸಿದರು.
ತಂಡದ ವಿಕೆಟ್‌ಕೀಪರ್ ಮತ್ತು ನಾಯಕ ಜೋಸ್ ಬಟ್ಲರ್ ತಮ್ಮ 46 ಎಸೆತಗಳ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಒಳಗೊಂಡಂತೆ 178.26 ಸ್ಟ್ರೈಕ್ ರೇಟ್‌ನಲ್ಲಿ 83 ರನ್ ಚಚ್ಚಿದರು. ಬಟ್ಲರ್ ಅವರ ಈ ಅಬ್ಬರದ ಪರಿಣಾಮ ತಂಡ 198 ರನ್‌ಗಳ ಗುರಿಯನ್ನು 4 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್ ಕಳೆದುಕೊಂಡು ಸಾಧಿಸಿತು. ಇದು ಟೂರ್ನಿಯ ಇತಿಹಾಸದಲ್ಲೇ ಅತಿ ದೊಡ್ಡ ರನ್ ಚೇಸ್ ಎಂಬ ದಾಖಲೆ ಕೂಡ ಬರೆಯಿತು.
Freak 🙇 @josbuttler #TheHundred pic.twitter.com/HzyPY2CHjT
— The Hundred (@thehundred) August 26, 2023
And to do it to secure your spot at #TheHundred Final?
That's something else.
— The Hundred (@thehundred) August 26, 2023
96 ಎಸೆತಗಳಲ್ಲಿ 201 ರನ್‌ಗಳ ಗುರಿ ಬೆನ್ನಟ್ಟಿದ ಮ್ಯಾಂಚೆಸ್ಟರ್ ತಂಡ ಫೈನಲ್‌ಗೆ ಟಿಕೆಟ್ ಖಚಿತ ಪಡಿಸಿಕೊಂಡಿದೆ. ಇತ್ತ ಎಲಿಮಿನೇಟರ್ ಪಂದ್ಯದಲ್ಲಿ ಸೋತ ಸದರ್ನ್ ಬ್ರೇವ್ಸ್ ತಂಡ ಪಂದ್ಯಾವಳಿಯಿಂದ ಹೊರಬಿದ್ದಿದೆ. ತಂಡದ ಪರ ಸ್ಫೋಟಕ ಬ್ಯಾಟಿಂಗ್ ಮಾಡಿದ ಬಟ್ಲರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:13 am, Sun, 27 August 23