ಐಪಿಎಲ್ (IPL 2022) 15ನೇ ಆವೃತ್ತಿ ಈಗಾಗಲೇ ಪ್ಲೇ ಆಫ್ನತ್ತ ಸಾಗುತ್ತಿದೆ. ಈ ಆವೃತ್ತಿಯಲ್ಲಿ ಅನೇಕ ಅಚ್ಚರಿಗಳು ಸಹ ಕಂಡುಬಂದಿವೆ. ಲೀಗ್ನ ಅತ್ಯಂತ ಯಶಸ್ವಿ ತಂಡಗಳಾದ ಚೆನ್ನೈ ಹಾಗೂ ಮುಂಬೈ ಕಳಪೆ ಪ್ರದರ್ಶನದ ಮೂಲಕ ಲೀಗ್ ಹಂತದಲ್ಲೇ ಪಂದ್ಯಾವಳಿಯಿಂದ ಹೊರನಡೆಯುವ ಹಂತದಲ್ಲಿವೆ. ಇದರೊಂದಿಗೆ ಇನ್ನು ಅನೇಕ ತಂಡಗಳು ಉತ್ತಮ ಆಟ ಪ್ರದರ್ಶಿಸಿ ಪ್ಲೇ ಆಫ್ನತ್ತ ಸಾಗುತ್ತಿವೆ. ಇಷ್ಟು ಸಾಲದೆಂಬಂತೆ ಈ ಲೀಗ್ನಲ್ಲಿ ಅನೇಕ ಪಂಡಿತರ ಲೆಕ್ಕಾಚಾರಗಳು ತಲೆ ಕೆಳಗಾಗಿವೆ. ಅವುಗಳೆಂದರೆ, ಹರಾಜಿಗೂ ಮುನ್ನ ತಂಡದಲ್ಲಿ ಉಳಿಸಿಕೊಂಡ ಆಟಗಾರರು ಕಳಪೆ ಪ್ರದರ್ಶನ ನೀಡಿದರೆ, ಕಡಿಮೆ ಮೊತ್ತಕ್ಕೆ ಬಿಕರಿಯಾದ ಆಟಗಾರರು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಇವರುಗಳೊಂದಿಗೆ ಹರಾಜಿನಲ್ಲಿ ಕೋಟಿ ಕೋಟಿ ಪಡೆದ ಬೌಲರ್‌ಗಳ ಲೆಕ್ಕಚಾರವೂ ಬುಡಮೇಲಾಗಿದೆ. ತಮ್ಮ ಬೌಲಿಂಗ್ ಕೈಚಳಕದಿಂದ ತಂಡಕ್ಕೆ ಗೆಲುವು ತಂದುಕೊಡಬೇಕಾದ ಬೌಲರ್‌ಗಳು ಒಮ್ಮೊಮ್ಮೆ ಒಂದೇ ಓವರ್‌ನಲ್ಲಿ ಅತ್ಯಧಿಕ ರನ್ ಬಿಟ್ಟುಕೊಟ್ಟು ತಂಡದ ಸೋಲಿಗೆ ಕಾರಣರಾಗಿದ್ದಾರೆ. ಈಗ ನಾವು ಅಂತಹವರ ಬಗ್ಗೆ ಹೇಳಲಿದ್ದೇವೆ.
ಇದಕ್ಕೆ ತಕ್ಕ ಉದಾಹರಣೆ ಎಂಬಂತೆ ಈ ಆವೃತ್ತಿಯಲ್ಲಿ, ಮುಂಬೈ ಇಂಡಿಯನ್ಸ್ (MI) ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ (KKR) ನಡುವಿನ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ಡೇನಿಯಲ್ ಸ್ಯಾಮ್ಸ್ ಅವರ ಓವರ್‌ನಲ್ಲಿ 35 ರನ್ ಗಳಿಸಿದರು. ಸ್ಯಾಮ್ ಅವರ ಈ ಓವರ್ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಓವರ್ ಆಗಿದೆ. ಬೌಲರ್‌ಗಳು ಓವರ್‌ನಲ್ಲಿ 30ಕ್ಕೂ ಹೆಚ್ಚು ರನ್ ಗಳಿಸಿದ್ದು ಇದೇ ಮೊದಲಲ್ಲ.
ಹರ್ಷಲ್ ಪಟೇಲ್..
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವೇಗದ ಬೌಲರ್ ಹರ್ಷಲ್ ಪಟೇಲ್ 1 ಓವರ್‌ನಲ್ಲಿ 37 ರನ್ ನೀಡಿದ್ದರು. ಕಳೆದ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವೆ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟ್ಸ್‌ಮನ್ ರವೀಂದ್ರ ಜಡೇಜಾ ಅವರು ಹರ್ಷಲ್ ಪಟೇಲ್ ಅವರ ಒಂದು ಓವರ್‌ನಲ್ಲಿ 37 ರನ್ ಗಳಿಸಿ ಪಂದ್ಯದ ದಿಕ್ಕನೆ ಬದಲಾಯಿಸಿದ್ದರು.
ಪ್ರಶಾಂತ್ ಪರಮೇಶ್ವರನ್..
2011ರ ಐಪಿಎಲ್‌ನಲ್ಲಿ ಕೊಚ್ಚಿ ಟಸ್ಕರ್ಸ್ ಕೇರಳದ ವೇಗದ ಬೌಲರ್ ಪ್ರಶಾಂತ್ ಪರಮೇಶ್ವರನ್ ಒಂದು ಓವರ್‌ನಲ್ಲಿ 37 ರನ್ ನೀಡಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೊಚ್ಚಿ ಟಸ್ಕರ್ಸ್ ಕೇರಳ ನಡುವೆ ಪಂದ್ಯ ನಡೆದಿತ್ತು. ಪ್ರಶಾಂತ್ ಪರಮೇಶ್ವರನ್ ಅವರ ಈ ಓವರ್ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಓವರ್ ಆಗಿತ್ತು.
ಡೇನಿಯಲ್ ಸಾಮ್ಸ್..
ಮುಂಬೈ ಇಂಡಿಯನ್ಸ್ (MI) ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಬ್ಯಾಟ್ಸ್‌ಮನ್ ಪ್ಯಾಟ್ ಕಮಿನ್ಸ್ ವೇಗದ ಬೌಲರ್ ಡೇನಿಯಲ್ ಸ್ಯಾಮ್ಸ್ ಅವರ ಓವರ್‌ನಲ್ಲಿ 35 ರನ್ ಗಳಿಸಿದರು. ಹೀಗಾಗಿ, 1 ಓವರ್‌ನಲ್ಲಿ ಅತಿ ಹೆಚ್ಚು ರನ್ ನೀಡಿದವರ ಪಟ್ಟಿಯಲ್ಲಿ ಸ್ಯಾಮ್ಸ್ ಮೂರನೇ ಸ್ಥಾನ ಪಡೆದರು. ಕಮ್ಮಿನ್ಸ್ ಅವರ ಇನ್ನಿಂಗ್ಸ್‌ನಿಂದಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಮುಂಬೈ ಇಂಡಿಯನ್ಸ್ ಅನ್ನು ಸುಲಭವಾಗಿ ಸೋಲಿಸಿತು.
ಪರ್ವಿಂದರ್ ಅವನಾ..
ಒಂದು ಓವರ್‌ನಲ್ಲಿ ಅತಿ ಹೆಚ್ಚು ರನ್ ನೀಡಿದ ಬೌಲರ್‌ಗಳ ಪಟ್ಟಿಯಲ್ಲಿ ಪರ್ವಿಂದರ್ ಅವಾನಾ ಕೂಡ ಇದ್ದಾರೆ. 2014ರಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಬೌಲರ್ ಪರ್ವಿಂದರ್ ಅವಾನಾ 1 ಓವರ್‌ನಲ್ಲಿ 33 ರನ್ ನೀಡಿದ್ದರು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಕಿಂಗ್ಸ್ (PBKS) ನಡುವಿನ ಪಂದ್ಯದಲ್ಲಿ ಈ ದಾಖಲೆ ನಿರ್ಮಾಣವಾಗಿತ್ತು.
ರವಿ ಬೋಪಾರ..
ಇಂಗ್ಲೆಂಡ್‌ನ ಮಾಜಿ ಆಲ್‌ರೌಂಡರ್ ರವಿ ಬೋಪಾರಾ ಕೂಡ ಅತಿ ಹೆಚ್ಚು ರನ್ ನೀಡಿದ ಬೌಲರ್‌ಗಳ ಪಟ್ಟಿಯಲ್ಲಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಬೋಪಾರಾ ಒಂದು ಓವರ್‌ನಲ್ಲಿ 33 ರನ್ ನೀಡಿದ್ದರು.
Published On - 4:33 pm, Mon, 9 May 22