T20 World Cup: ಆಸೀಸ್ ಪರ ಒಂದೇ ಒಂದು ಪಂದ್ಯವನ್ನಾಡದ ಮಾಜಿ ಆರ್​ಸಿಬಿ ಬ್ಯಾಟರ್ ಟಿ20 ವಿಶ್ವಕಪ್​ಗೆ ಆಯ್ಕೆ..!

| Updated By: ಪೃಥ್ವಿಶಂಕರ

Updated on: Sep 01, 2022 | 2:37 PM

T20 World Cup: ಟಿ20ಯಲ್ಲಿ ಅವರ ಸ್ಟ್ರೈಕ್ ರೇಟ್ 164.17 ಆಗಿದೆ. ಈ ಸ್ಟ್ರೈಕ್ ರೇಟ್‌ನೊಂದಿಗೆ ಅವರು ಟಿ20ಯಲ್ಲಿ 190 ಬೌಂಡರಿ ಮತ್ತು 160 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ.

T20 World Cup: ಆಸೀಸ್ ಪರ ಒಂದೇ ಒಂದು ಪಂದ್ಯವನ್ನಾಡದ ಮಾಜಿ ಆರ್​ಸಿಬಿ ಬ್ಯಾಟರ್ ಟಿ20 ವಿಶ್ವಕಪ್​ಗೆ ಆಯ್ಕೆ..!
ಟಿಮ್ ಡೇವಿಡ್
Follow us on

ಏಷ್ಯಾಕಪ್ (Asia Cup 2022) ಬಳಿಕ ಆರಂಭವಾಗಲಿರುವ ಟಿ20 ವಿಶ್ವಕಪ್​ಗೆ (T20 World Cup) ಅತಿಥೇಯ ಆಸ್ಟ್ರೇಲಿಯ ತಂಡ ತನ್ನ ಬಲಿಷ್ಟ ತಂಡವನ್ನು ಪ್ರಕಟಿಸಿದೆ. ಆಸೀಸ್ ಪ್ರಕಟಿಸಿರುವ 15 ಸದಸ್ಯರ ಪಟ್ಟಿಯಲ್ಲಿ ಕೆಲವು ಅಚ್ಚರಿಯ ಮುಖಗಳಿಗೆ ಅವಕಾಶ ನೀಡಿದೆ. ಅದರಲ್ಲಿ ಒಂದು ಪ್ರಮುಖ ಹೆಸರೆಂದರೆ ಅದು, ಯುವ ಆಲ್​ರೌಂಡರ್ ಟಿಮ್ ಡೇವಿಡ್ (Tim David). ಈ ಹಿಂದೆ ಸಿಂಗಾಪುರ್ ತಂಡವನ್ನು ಪ್ರತಿನಿಧಿಸಿದ್ದ ಡೇವಿಡ್, 2019 ರ ಬಳಿಕ ಆಸ್ಟ್ರೇಲಿಯಾದಲ್ಲಿ ದೇಶೀಯ ಕ್ರಿಕೆಟ್ ಆಡಲು ಆರಂಭಿಸಿದರು. ಇದೀಗ ಆಸೀಸ್ ಪರ ಚೊಚ್ಚಲ ವಿಶ್ವಕಪ್ ಆಡುವ ಅವಕಾಶವನ್ನು ಪಡೆದಿದ್ದಾರೆ. ಈ ಬಾಹುಬಲಿ ಬ್ಯಾಟ್ಸ್‌ಮನ್ IPL 2022 ರಲ್ಲಿ ಮುಂಬೈ ಇಂಡಿಯನ್ಸ್ ಪರ ಅಬ್ಬರಿಸಿದ್ದರು. ಆ ಮೂಲಕ ಪ್ರಪಂಚದ ಇತರ ಟಿ20 ಪಂದ್ಯಾವಳಿಯಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದರು. ಆದರೆ ಆಸೀಸ್ ಪರ ಒಂದೂ ಪಂದ್ಯ ಆಡದ ಡೇವಿಡ್​ಗೆ ಆಸ್ಟ್ರೇಲಿಯ ತಂಡದಿಂದ ಟಿ20 ವಿಶ್ವಕಪ್​ಗೆ ಕರೆ ಬಂದಿದೆ.

ಟಿಮ್ ಡೇವಿಡ್ ಈಗ ಆಸ್ಟ್ರೇಲಿಯಾ T20 ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿರಬಹುದು. ಆದರೆ ಅದಕ್ಕೂ ಮೊದಲು ಅವರು ಭಾರತದ ವಿರುದ್ಧ ತಮ್ಮ ಸಾಮಥ್ಯ್ರವನ್ನು ಸಾಭೀತುಪಡಿಸಲಿದ್ದಾರೆ. ಏಷ್ಯಾಕಪ್​ ಬಳಿಕ ಭಾರತ ಪ್ರವಾಸ ಮಾಡುವ ತನ್ನ ತಂಡದಲ್ಲಿ ಆಸ್ಟ್ರೇಲಿಯಾ ಕೂಡ ಟಿಮ್ ಡೇವಿಡ್ ಅವರನ್ನು ಆಯ್ಕೆ ಮಾಡಿದೆ. ಅಂದರೆ, ಅವರ ಬ್ಯಾಟ್ ಮೊದಲು ಭಾರತದ ವಿರುದ್ಧ ಅಬ್ಬರಿಸಲಿದ್ದು, ನಂತರ ಟಿ 20 ವಿಶ್ವಕಪ್​ನಲ್ಲಿ ಮಿಂಚುವ ನಿರೀಕ್ಷೆ ಇದೆ.

ಆಸೀಸ್ ಟಿ20 ವಿಶ್ವಕಪ್ ತಂಡದಲ್ಲಿ ಟಿಮ್ ಡೇವಿಡ್

ಇದನ್ನೂ ಓದಿ
Asia Cup 2022: ಬಾಂಗ್ಲಾ ತಂಡಕ್ಕೆ ಮುಖ್ಯ ಕೋಚ್ ಆಗಿ ಆಯ್ಕೆಯಾದ ಆರ್​ಸಿಬಿ ತಂಡದ ಬೌಲಿಂಗ್ ಕೋಚ್
T20 World Cup: ‘ಟಿ20 ವಿಶ್ವಕಪ್ ಹತ್ತಿರವಾದಂತೆ ತಂಡದಲ್ಲಿ ಆತಂಕ ಮನೆಮಾಡಿದೆ’; ಶಾಕಿಂಗ್ ಹೇಳಿಕೆ ಕೊಟ್ಟ ರಿಷಭ್ ಪಂತ್
ಟಿ20 ವಿಶ್ವಕಪ್​ಗೂ ಮುನ್ನ ಟೀಂ ಇಂಡಿಯಾದಲ್ಲಿ ಬದಲಾವಣೆ; ರಾಹುಲ್ ಬದಲು ಹಾರ್ದಿಕ್​ಗೆ ಉಪನಾಯಕತ್ವ ಪಟ್ಟ!

ಟಿಮ್ ಡೇವಿಡ್ ಅವರನ್ನು ಆಯ್ಕೆ ಮಾಡಿದ ಆಸ್ಟ್ರೇಲಿಯಾ ತಂಡದ ಆಯ್ಕೆಗಾರ ಜಾರ್ಜ್ ಬೈಲಿ ಮಾತನಾಡಿ, ಡೇವಿಡ್ ಒಬ್ಬ ಅದ್ಭುತ ಆಟಗಾರರಾಗಿದ್ದು, ಕ್ಲೀನ್ ಹಿಟ್ಟರ್ ಆಗಿದ್ದಾರೆ. ಅವರು ಇಲ್ಲಿಯವರೆಗೆ ಆಡಿದ ಅದೇ ಆಟವನ್ನು ಟಿ20 ವಿಶ್ವಕಪ್​ನಲ್ಲಿ ಪ್ರದರ್ಶಿಸುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದರು.

ಟಿಮ್ ಡೇವಿಡ್ ಕ್ರಿಕೆಟ್ ಜೀವನ

ಸಿಂಗಾಪುರ ಮೂಲದ ಈ ಬ್ಯಾಟ್ಸ್‌ಮನ್‌ ಮೇಲೆ ಕ್ರಿಕೆಟ್ ಆಸ್ಟ್ರೇಲಿಯಾ ಏಕೆ ಇಷ್ಟೊಂದು ನಂಬಿಕೆ ಇಟ್ಟಿದೆ ಎಂದರೆ, ಟಿ20ಯಲ್ಲಿ ಅವರ ಸ್ಟ್ರೈಕ್ ರೇಟ್ 164.17 ಆಗಿದೆ. ಈ ಸ್ಟ್ರೈಕ್ ರೇಟ್‌ನೊಂದಿಗೆ ಅವರು ಟಿ20ಯಲ್ಲಿ 190 ಬೌಂಡರಿ ಮತ್ತು 160 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ.

ಟಿಮ್ ಡೇವಿಡ್ ಅವರ T20 ಅಂತಾರಾಷ್ಟ್ರೀಯ ವೃತ್ತಿಜೀವನದ ಕುರಿತು ಮಾತನಾಡುವುದಾದರೆ, ಅವರು 14 ಪಂದ್ಯಗಳಲ್ಲಿ 158.52 ಸ್ಟ್ರೈಕ್ ರೇಟ್‌ನಲ್ಲಿ 558 ರನ್ ಗಳಿಸಿದ್ದಾರೆ. ಆದರೆ ಅವರು ಈ ಎಲ್ಲಾ ಅಂತಾರಾಷ್ಟ್ರೀಯ ಪಂದ್ಯಗಳನ್ನು ಸಿಂಗಾಪುರ ಪರ ಆಡಿದ್ದಾರೆ ಎಂಬುದನ್ನು ಇಲ್ಲಿ ಗಮನಿಸಬೇಕಾಗಿದೆ.

ಐಪಿಎಲ್‌ನಿಂದ ಪಿಎಸ್‌ಎಲ್‌ವರೆಗೆ ಡೇವಿಡ್ ಪ್ರಾಬಲ್ಯ

26 ವರ್ಷದ ಬ್ಯಾಟ್ಸ್‌ಮನ್ ಟಿಮ್ ಡೇವಿಡ್ ಐಪಿಎಲ್ 2022 ರಲ್ಲಿ ಮುಂಬೈ ಇಂಡಿಯನ್ಸ್‌ನ ಭಾಗವಾಗಿದ್ದರು. ಅದಕ್ಕೂ ಮೊದಲು ಅವರು ಆರ್​ಸಿಬಿ ತಂಡದ ಪರ ಆಡಿದ್ದರು. ಆದರೆ ಅಲ್ಲಿ ಅವರಿಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಬಳಿಕ ಮೇಗಾ ಹರಾಜಿನಲ್ಲಿ ಅವರನ್ನು ಮುಂಬೈ ತಂಡ ಖರೀದಿಸಿತ್ತು. ಐಪಿಎಲ್ 2022 ರಲ್ಲಿ, ಡೇವಿಡ್ ಒಟ್ಟು 86 ಎಸೆತಗಳನ್ನು ಎದುರಿಸಿ, ಅದರಲ್ಲಿ ಅವರು 16 ಸಿಕ್ಸರ್ಗಳನ್ನು ಬಾರಿಸಿದ್ದಾರೆ. ಇದಕ್ಕೂ ಮೊದಲು ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಅವರು 194.40 ಸ್ಟ್ರೈಕ್ ರೇಟ್‌ನಲ್ಲಿ 278 ರನ್ ಗಳಿಸಿದ್ದರು. ಕ್ರಿಕೆಟ್‌ನ ಕಿರು ಸ್ವರೂಪದಲ್ಲಿ ಅವರ ಅಬ್ಬರದ ಬ್ಯಾಟಿಂಗ್ ಆಸ್ಟ್ರೇಲಿಯಾ ಪರ T20 ವಿಶ್ವಕಪ್ ಆಡಲು ಸಹಾಯ ಮಾಡಿದೆ.

ಆಸ್ಟ್ರೇಲಿಯಾ ಟಿ20 ವಿಶ್ವಕಪ್ ತಂಡ:

ಆರೋನ್ ಫಿಂಚ್ (ನಾಯಕ), ಪ್ಯಾಟ್ ಕಮ್ಮಿನ್ಸ್ (ಉಪನಾಯಕ), ಆಷ್ಟನ್ ಅಗರ್, ಟಿಮ್ ಡೇವಿಡ್, ಜೋಶ್ ಹ್ಯಾಝಲ್‌ವುಡ್, ಜೋಶ್ ಇಂಗ್ಲಿಸ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್. ಕೇನ್ ರಿಚರ್ಡ್ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್ ಮತ್ತು ಆ್ಯಡಂ ಝಂಪಾ.

Published On - 2:36 pm, Thu, 1 September 22