Asia Cup 2022: ಜಡೇಜಾ ರಾಕೆಟ್ ಥ್ರೋಗೆ ಹಾಂಗ್ ಕಾಂಗ್ ನಾಯಕನ ಆಟ 5 ಸೆಕೆಂಡ್‌ಗಳಲ್ಲಿ ಅಂತ್ಯ! ವಿಡಿಯೋ ನೋಡಿ
Ravindra Jadeja: ಬ್ಯಾಕ್‌ವರ್ಡ್ ಪಾಯಿಂಟ್ನಲ್ಲಿ ಫೀಲ್ಡಿಂಗ್ ಮಾಡುತ್ತಿದ ಜಡೇಜಾ ಚೆಂಡನ್ನು ವೇಗವಾಗಿ ಎತ್ತಿಕೊಂಡು ಸುಮಾರು 23 ಮೀಟರ್ ದೂರದಿಂದ ವಿಕೆಟ್ ಕಡೆಗೆ ಎಸೆದರು. ನಿಜಾಕತ್ ಕ್ರೀಸ್ ತಲುಪುವಷ್ಟರಲ್ಲಿ ಸ್ಟಂಪ್ನ ಬೆಲ್ಸ್ಗಳು ಚೆಲ್ಲಾಪಿಲ್ಲಿಯಾಗಿದ್ದವು.
ಏಷ್ಯಾಕಪ್‌ನ (Asia Cup 2022) ಪ್ರತಿಯೊಂದು ಪಂದ್ಯದಲ್ಲೂ ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜಾ (Ravindra Jadeja) ತಮ್ಮ ಛಾಪು ಮೂಡಿಸುತ್ತಿದ್ದಾರೆ. ಪಾಕಿಸ್ತಾನದ ವಿರುದ್ಧ ಅವರ ಬ್ಯಾಟಿಂಗ್ ಅದ್ಭುತವಾಗಿತ್ತು. ಈಗ ನಿನ್ನೆ ನಡೆದ ಹಾಂಗ್ ಕಾಂಗ್ ವಿರುದ್ಧದ (IND vs HKG) ಪಂದ್ಯದಲ್ಲಿ ಅಭಿಮಾನಿಗಳು ಮತ್ತೊಮ್ಮೆ ಜಡೇಜಾ ಅವರ ಅದ್ಭುತ ಫೀಲ್ಡಿಂಗ್ ಚಾಣಾಕ್ಷತನ ನೋಡಿ ಬೆಕ್ಕಸ ಬೆರಗಾದರು. ಜಡೇಜಾ ಬೆಂಕಿ ಥ್ರೋಗೆ ಹಾಂಕಾಂಗ್ ನಾಯಕ ನಿಜಾಕತ್ ಖಾನ್ ಫ್ರೀ ಹಿಟ್ ಎಸೆತದಲ್ಲಿ ವಿಕೆಟ್ ಕಳೆದುಕೊಂಡರು. ಇನ್ನೊಂದು ಕುತೂಹಲಕಾರಿ ಸಂಗತಿ ಎಂದರೆ, ಜಡೇಜಾ ಯಾವಾಗ ಚೆಂಡನ್ನು ವಿಕೆಟ್ಗೆ ಎಸೆದರು ಎಂಬುದನ್ನು ನಿಜಾಕತ್ಗೆ ಗೊತ್ತಾಗಲೇ ಇಲ್ಲ.
ಜಡೇಜಾ ಚಾಣಾಕ್ಷತನದ ಫೀಲ್ಡಿಂಗ್
ಈ ಅದ್ಭುತ ಘಟನೆ ನಡೆದಾಗ ಹಾಂಗ್ ಕಾಂಗ್ ಇನ್ನಿಂಗ್ಸ್ನ ಆರನೇ ಓವರ್ ನಡೆಯುತ್ತಿತ್ತು. ಈ ಓವರ್‌ನ ಕೊನೆಯ ಎಸೆತದಲ್ಲಿ ನಿಜಾಕತ್ ಖಾನ್ ಪೆವಿಲಿಯನ್‌ಗೆ ರನ್ ಔಟ್ ಆಗಿ ಪೆವಿಲಿಯನ್‌ಗೆ ಮರಳಬೇಕಾಯಿತು. ವೇಗಿ ಅರ್ಷದೀಪ್ ಸಿಂಗ್ ಎಸೆದ ಕೊನೆಯ ಎಸೆತ ನೋ ಬಾಲ್ ಆಗಿತ್ತು. ಹೀಗಾಗಿ ಮುಂದಿನ ಎಸೆತವನ್ನು ಅರ್ಷದೀಪ್ ಫ್ರೀ ಹಿಟ್ ಎಸೆಯಬೇಕಾಯಿತು. ಬ್ಯಾಟಿಂಗ್ನಲ್ಲಿದ್ದ ಹಾಂಗ್ ಕಾಂಗ್ ನಾಯಕ ನಿಜಾಕತ್ ಚೆಂಡನ್ನು ಬ್ಯಾಕ್‌ವರ್ಡ್ ಪಾಯಿಂಟ್ ಕಡೆಗೆ ಆಡಿದರು. ಬಳಿಕ ನಿಜಾಕತ್ ಖಾನ್ ರನ್ ತೆಗೆದುಕೊಳ್ಳಲು ಓಡಲು ಯತ್ನಿಸಿದರು. ಆದರೆ ಬ್ಯಾಕ್‌ವರ್ಡ್ ಪಾಯಿಂಟ್ನಲ್ಲಿ ಫೀಲ್ಡಿಂಗ್ ಮಾಡುತ್ತಿದ ಜಡೇಜಾ ಚೆಂಡನ್ನು ವೇಗವಾಗಿ ಎತ್ತಿಕೊಂಡು ಸುಮಾರು 23 ಮೀಟರ್ ದೂರದಿಂದ ವಿಕೆಟ್ ಕಡೆಗೆ ಎಸೆದರು. ನಿಜಾಕತ್ ಕ್ರೀಸ್ ತಲುಪುವಷ್ಟರಲ್ಲಿ ಸ್ಟಂಪ್ನ ಬೆಲ್ಸ್ಗಳು ಚೆಲ್ಲಾಪಿಲ್ಲಿಯಾಗಿದ್ದವು. ಆದರೆ ಯಾರೂ ಕೂಡ ಇದು ಔಟ್ ಎಂದು ಬಾವಿಸಿರಲಿಲ್ಲ. ಆದರೆ ರೀಪ್ಲೆಯಲ್ಲಿ ನೋಡಿದ ಎಲ್ಲರೂ ಆಶ್ಚರ್ಯ ಚಕಿತರಾಗಿದ್ದರು. ಸ್ವತಃ ನಿಜಾಕತ್ ಅವರೇ ರಿಪ್ಲೇ ನೋಡಿ ಅಚ್ಚರಿಗೊಂಡರು.
Replay of Nizakat’s run out.
Hong Kong needs to remember they’re playing with the big boys now. Jadeja is an arm you do NOT run on. pic.twitter.com/BbLss6vwzu
— Sweary Aaron is free at last! (@TripperheadToo) August 31, 2022
ಕೊಹ್ಲಿ ಮೆಚ್ಚುಗೆ
ರವೀಂದ್ರ ಜಡೇಜಾ ಅವರ ಈ ಎಸೆತಕ್ಕೆ ವಿರಾಟ್ ಕೊಹ್ಲಿ ತಮಾಷೆಯ ಪ್ರತಿಕ್ರಿಯೆ ನೀಡಿದ್ದಾರೆ. ಬೌಂಡರಿ ಬಳಿ ನಿಂತಿದ್ದ ಕೊಹ್ಲಿ ಕೈಯಿಂದ ಸನ್ನೆ ಮಾಡಿದರು. ಈಗ ಕೊಹ್ಲಿಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಆಲ್ ರೌಂಡರ್ ಜಡೇಜಾ ಬಾಲ್ಯದಲ್ಲಿ ಸಾಕಷ್ಟು ಮಾರ್ಬಲ್ಸ್ ಆಡಿದ್ದಾರೆ ಎಂಬುದನ್ನು ಹೇಳುವುದು ಕೊಹ್ಲಿಯ ಕೈ ಸನ್ನೆಯ ಉದ್ದೇಶವಾಗಿತ್ತು. ಇದನ್ನು ನೋಡಿದ ಜಡೇಜಾ ಕೂಡ ಮುಗುಳ್ನಗುತ್ತಾ ಥಂಬ್ಸ್ ಅಪ್ ಮಾಡಿದರು.
40 ರನ್‌ಗಳಿಂದ ಸೋತ ಹಾಂಕಾಂಗ್
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಹಾಂಕಾಂಗ್‌ಗೆ 192 ರನ್‌ಗಳ ಗುರಿ ನೀಡಿತ್ತು. ಸೂರ್ಯಕುಮಾರ್ ಯಾದವ್ ಭಾರತದ ಪರ ಅಜೇಯ 68 ರನ್ ಗಳಿಸಿದರು. ಅವರ ಇನ್ನಿಂಗ್ಸ್ ಆರು ಬೌಂಡರಿ ಮತ್ತು ಆರು ಸಿಕ್ಸರ್‌ಗಳನ್ನು ಒಳಗೊಂಡಿತ್ತು. ಅವರು ವಿರಾಟ್ ಕೊಹ್ಲಿಯೊಂದಿಗೆ 98 ರನ್‌ಗಳ ಅಜೇಯ ಪಾಲುದಾರಿಕೆಯನ್ನು ಸಹ ದಾಖಲಿಸಿದರು. ಸುಮಾರು ಆರು ತಿಂಗಳ ನಂತರ ಕೊಹ್ಲಿ ಕೂಡ ಅರ್ಧಶತಕ ಬಾರಿಸಿದರು. ಹಾಂಕಾಂಗ್ ವಿರುದ್ಧ ಭಾರತ ಎರಡು ವಿಕೆಟ್ ನಷ್ಟಕ್ಕೆ 192 ರನ್‌ಗಳ ಬೃಹತ್ ಸ್ಕೋರ್ ಮಾಡಿತು. ಹಾಂಕಾಂಗ್ ತಂಡ ತನ್ನೆಲ್ಲ ಶಕ್ತಿ ಪ್ರಯೋಗಿಸಿ ಕೇವಲ 152 ರನ್ ಗಳಿಸಲಷ್ಟೇ ಶಕ್ತವಾಯಿತು. ಗ್ರೂಪ್ ಸುತ್ತಿನಲ್ಲಿ ಭಾರತ ಆಡಿದ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ಸೂಪರ್ 4 ಗೆ ಅರ್ಹತೆ ಪಡೆದಿದೆ.