Asia Cup 2022: ಟೀಮ್ ಇಂಡಿಯಾದ ಮುಂದಿನ ಎದುರಾಳಿ ಯಾರು ಗೊತ್ತಾ?

India's next match: ಉಭಯ ತಂಡಗಳ ಮುಖಾಮುಖಿಯಲ್ಲಿ ಗೆಲ್ಲುವ ತಂಡ ಮುಂದಿನ ಸುತ್ತಿಗೆ ಪ್ರವೇಶಿಸಲಿದೆ. ಇಲ್ಲಿ ಪಾಕ್ ತಂಡವು ಬಲಿಷ್ಠವಾಗಿರುವ ಕಾರಣ ಸೂಪರ್-4 ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

Asia Cup 2022: ಟೀಮ್ ಇಂಡಿಯಾದ ಮುಂದಿನ ಎದುರಾಳಿ ಯಾರು ಗೊತ್ತಾ?
Team India
Follow us
TV9 Web
| Updated By: ಝಾಹಿರ್ ಯೂಸುಫ್

Updated on: Sep 01, 2022 | 5:09 PM

Asia Cup 2022: ಏಷ್ಯಾಕಪ್​ನ ಮೊದಲ ಸುತ್ತಿನಲ್ಲಿ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಟೀಮ್ ಇಂಡಿಯಾ (Team India) ಸೂಪರ್-4 ಹಂತಕ್ಕೇರಿದೆ. ಗ್ರೂಪ್-A ನಲ್ಲಿ ಅಗ್ರಸ್ಥಾನ ಪಡೆದಿರುವ ಟೀಮ್ ಇಂಡಿಯಾ ಸೂಪರ್-4 ಹಂತದ ಮೊದಲ ಪಂದ್ಯದಲ್ಲಿ ಯಾರನ್ನು ಎದುರಿಸಲಿದೆ ಎಂಬುದೇ ಈಗ  ಕುತೂಹಲ. ಏಕೆಂದರೆ ಟೀಮ್ ಇಂಡಿಯಾ ಮುಂದೆ ಎರಡು ಎದುರಾಳಿಗಳಿದ್ದು, ಇವರಲ್ಲಿ ಗೆಲ್ಲುವ ತಂಡದ ವಿರುದ್ದವೇ ಮೊದಲ ಪಂದ್ಯವಾಡಬೇಕಿದೆ.  ಅಂದರೆ ಗ್ರೂಪ್-ಎ ನಲ್ಲಿ ಮೊದಲ ಸ್ಥಾನ ಪಡೆದ ತಂಡ ಅದೇ ಗ್ರೂಪ್​ನಲ್ಲಿ 2ನೇ ಸ್ಥಾನ ಪಡೆಯುವ ತಂಡದ ವಿರುದ್ಧ ಸೂಪರ್-4 ನಲ್ಲಿ ಮೊದಲ ಪಂದ್ಯವನ್ನು ಆಡಲಿದೆ. ಗ್ರೂಪ್​-ಎ ನಲ್ಲಿನ ಅಗ್ರ ತಂಡವಾಗಿ ಈಗಾಗಲೇ ಟೀಮ್ ಇಂಡಿಯಾ ಸೂಪರ್-4 ಹಂತವನ್ನು ಪ್ರವೇಶಿಸಿದೆ. ಹಾಗೆಯೇ ಇಲ್ಲಿ ಪಾಕಿಸ್ತಾನ್ ಹಾಗೂ ಹಾಂಗ್​ ಕಾಂಗ್ ತಂಡಗಳಲ್ಲಿ ಒಂದು ತಂಡವು ಸೂಪರ್-4 ಹಂತಕ್ಕೇರಬಹುದು.

ಅಂದರೆ ಉಭಯ ತಂಡಗಳ ಮುಖಾಮುಖಿಯಲ್ಲಿ ಗೆಲ್ಲುವ ತಂಡ ಮುಂದಿನ ಸುತ್ತಿಗೆ ಪ್ರವೇಶಿಸಲಿದೆ. ಇಲ್ಲಿ ಪಾಕ್ ತಂಡವು ಬಲಿಷ್ಠವಾಗಿರುವ ಕಾರಣ ಸೂಪರ್-4 ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಅದರಂತೆ ಸೆಪ್ಟೆಂಬರ್ 4 ರಂದು ಟೀಮ್ ಇಂಡಿಯಾ ಪಾಕಿಸ್ತಾನ್ ವಿರುದ್ದದ ಪಂದ್ಯದ ಮೂಲಕ ಸೂಪರ್-4 ಅಭಿಯಾನ ಆರಂಭಿಸಬಹುದು.

ಹೀಗಾಗಿ ಮುಂದಿನ ಹಂತದಲ್ಲಿ ಭಾರತ-ಪಾಕಿಸ್ತಾನ್ ಮುಖಾಮುಖಿಯಾಗುವುದು ಬಹುತೇಕ ಖಚಿತ ಎನ್ನಬಹುದು. ಒಂದು ವೇಳೆ ಪಾಕ್ ತಂಡವು ಮುಂದಿನ ಪಂದ್ಯದಲ್ಲಿ ಸೋತರೆ ಟೀಮ್ ಇಂಡಿಯಾಗೆ ಹಾಂಗ್ ಕಾಂಗ್ ಎದುರಾಳಿಯಾಗಿ ಸಿಗಬಹುದು. ಆದರೆ ಮೇಲ್ನೋಟಕ್ಕೆ ಪಾಕ್ ತಂಡವೇ ಬಲಿಷ್ಠವಾಗಿದ್ದು, ಹೀಗಾಗಿ ಸೂಪರ್-4 ಹಂತಕ್ಕೇರುವ ತಂಡವಾಗಿ ಗುರುತಿಸಿಕೊಂಡಿದೆ. ಅದರಂತೆ ಸೆಪ್ಟೆಂಬರ್-4 ರಂದು ನಡೆಯಲಿರುವ ಪಂದ್ಯದಲ್ಲಿ ಟೀಮ್ ಇಂಡಿಯಾ ಹಾಗೂ ಪಾಕಿಸ್ತಾನ್ ತಂಡಗಳು ಮತ್ತೆ ಮುಖಾಮುಖಿಯಾಗುವ ಸಾಧ್ಯತೆಯೇ ಹೆಚ್ಚು.

ಇದನ್ನೂ ಓದಿ
Image
Team India: ಟೀಮ್ ಇಂಡಿಯಾ ಆಟಗಾರರ ಜೊತೆ ಕಾಣಿಸಿಕೊಂಡ ಸ್ಟಾರ್ ಕ್ರಿಕೆಟಿಗನ ಮಗ..!
Image
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Image
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಸೂಪರ್- 4 ವೇಳಾಪಟ್ಟಿ:

  • ಸೆಪ್ಟೆಂಬರ್ 3 – ಅಫ್ಘಾನಿಸ್ತಾನ್ vs B2- ಶಾರ್ಜಾ
  • ಸೆಪ್ಟೆಂಬರ್ 4 – ಭಾರತ vs ಪಾಕಿಸ್ತಾನ್ ಅಥವಾ ಹಾಂಗ್​ ಕಾಂಗ್- ದುಬೈ
  • ಸೆಪ್ಟೆಂಬರ್ 6 – ಭಾರತ vs ಅಫ್ಘಾನಿಸ್ತಾನ್ – ದುಬೈ
  • ಸೆಪ್ಟೆಂಬರ್ 7 – A2 vs B2- ದುಬೈ
  • ಸೆಪ್ಟೆಂಬರ್ 8 – ಭಾರತ vs ಶ್ರೀಲಂಕಾ ಅಥವಾ ಬಾಂಗ್ಲಾದೇಶ್- ದುಬೈ
  • ಸೆಪ್ಟೆಂಬರ್ 9 – B1 vs- A2- ದುಬೈ
  • ಸೆಪ್ಟೆಂಬರ್ 11 – ಫೈನಲ್ ಪಂದ್ಯ- ದುಬೈ

ಟೀಮ್ ಇಂಡಿಯಾ ಹೀಗಿದೆ:

ರೋಹಿತ್‌ ಶರ್ಮಾ (ನಾಯಕ), ಕೆ.ಎಲ್‌ ರಾಹುಲ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ದೀಪಕ್‌ ಹೂಡ, ರಿಷಭ್ ಪಂತ್‌ (ವಿಕೆಟ್‌ಕೀಪರ್‌), ದಿನೇಶ್‌ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್‌ ಕುಮಾರ್‌, ಅರ್ಷದೀಪ್‌ ಸಿಂಗ್‌, ಅವೇಶ್‌ ಖಾನ್‌, ಯುಜ್ವೇಂದ್ರ ಚಹಲ್‌, ಆರ್‌ ಅಶ್ವಿನ್‌, ರವಿ ಬಿಷ್ಣೋಯ್‌. ಮೀಸಲು ಆಟಗಾರರು: ಅಕ್ಷರ್‌ ಪಟೇಲ್‌, ದೀಪಕ್‌ ಚಹರ್‌ ಮತ್ತು ಶ್ರೇಯಸ್‌ ಅಯ್ಯರ್‌.