Tim David: ಟಿಮ್ ಡೇವಿಡ್ ಸಿಡಿಸಿದ 114 ಮೀಟರ್ ಸಿಕ್ಸ್ ಕಂಡು ಸ್ತಬ್ಧವಾದ ವಾಂಖೆಡೆ ಸ್ಟೇಡಿಯಂ: ರೋಚಕ ವಿಡಿಯೋ ನೋಡಿ

|

Updated on: Apr 23, 2023 | 9:29 AM

MI vs PBKS, IPL 2023: ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆಲುವಿಗೆ ಕಠಿಣ ಹೋರಾಟ ನಡೆಸುತ್ತಿದ್ದ ಟಿಮ್ ಡೇವಿಡ್ ಸಿಡಿಸಿದ ಒಂದು ಸಿಕ್ಸ್ ಇಡೀ ವಾಂಖೆಡೆ ಸ್ಟೇಡಿಯಂ ಅನ್ನು ಒಂದು ಕ್ಷಣ ಸ್ತಬ್ಧವಾಗಿಸಿತು.

Tim David: ಟಿಮ್ ಡೇವಿಡ್ ಸಿಡಿಸಿದ 114 ಮೀಟರ್ ಸಿಕ್ಸ್ ಕಂಡು ಸ್ತಬ್ಧವಾದ ವಾಂಖೆಡೆ ಸ್ಟೇಡಿಯಂ: ರೋಚಕ ವಿಡಿಯೋ ನೋಡಿ
Tim David Six
Follow us on

ಇಂಡಿಯನ್ ಪ್ರೀಮಿಯರ್ ಲೀಗ್ 2023 ರಲ್ಲಿ (IPL 2023) ನಡೆಯುತ್ತಿರುವ ಹೆಚ್ಚಿನ ಪಂದ್ಯಗಳು ಕೊನೆಯ ಓವರ್ ವರೆಗೆ ನಡೆಯುತ್ತಿದೆ. ಜೊತೆಗೆ ಉಭಯ ತಂಡಗಳು 200+ ರನ್ ಕಲೆಹಾಕುತ್ತಿದೆ. ಮತ್ತೊಂದು ಇಂತಹ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಿದ್ದು ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ (MI vs PBKS) ನಡುವಣ ಪಂದ್ಯ. ಮಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ (Wankhede Stadium) ಶನಿವಾರ ನಡೆದ ಈ ರೋಚಕ ಪಂದ್ಯದಲ್ಲಿ ಪಂಜಾಬ್ 13 ರನ್​ಗಳ ಜಯ ಸಾಧಿಸಿತು. ಕೊನೆಯ ಹಂತದ ವರೆಗೂ ಹೋರಾಡಿದ ಮುಂಬೈಗೆ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಆದರೆ, ನೆರೆದಿದ್ದ ಅಭಿಮಾನಿಗಳನ್ನು ಮಾತ್ರ ಈ ಮ್ಯಾಚ್ ನಿರಾಸೆ ಮೂಡಿಸಲಿಲ್ಲ. ಫೋರ್-ಸಿಕ್ಸರ್​ಗಳ ಮೂಲಕ ಬ್ಯಾಟರ್​ಗಳ ಮನೋರಂಜನೆ ನೀಡಿದರು.

ಮುಖ್ಯವಾಗಿ ಮುಂಬೈ ಗೆಲುವಿಗೆ ಕಠಿಣ ಹೋರಾಟ ನಡೆಸುತ್ತಿದ್ದ ಟಿಮ್ ಡೇವಿಡ್ ಸಿಡಿಸಿದ ಒಂದು ಸಿಕ್ಸ್ ಇಡೀ ವಾಂಖೆಡೆ ಸ್ಟೇಡಿಯಂ ಅನ್ನು ಒಂದು ಕ್ಷಣ ಸ್ತಬ್ಧವಾಗಿಸಿತು. ಕೊನೆಯ ಎರಡು ಓವರ್​ಗಳಲ್ಲಿ ಮುಂಬೈ ಗೆಲುವಿಗೆ 31 ರನ್​ಗಳ ಅವಶ್ಯಕತೆಯಿತ್ತು. ದೊಡ್ಡ ಹೊಡೆತಗಳ ಅವಶ್ಯಕತೆಯಿದ್ದ ಕಾರಣ ಕ್ರೀಸ್​ನಲ್ಲಿದ್ದ ಟಿಮ್ ಡೇವಿಡ್ 19ನೇ ಓವರ್​ನ ನೇಥನ್ ಎಲಿಸ್ ಅವರ ಎರಡನೇ ಎಸೆತದಲ್ಲಿ ಸಿಕ್ಸ್ ಸಿಡಿಸಿದರು. ಲೋ ಫುಲ್​ಟಾಸ್ ಚೆಂಡನ್ನು ಮಿಡ್ ವಿಕೆಟ್ ಕಡೆ ಅಟ್ಟಿದ ಡೇವಿಡ್ ಬರೋಬ್ಬರಿ 114 ಮೀಟರ್​ನ ದೊಡ್ಡ ಸಿಕ್ಸರ್ ಸಿಡಿಸಿದರು. ಈ ಸಿಕ್ಸ್ ಕಂಡು ಮುಂಬೈ ಮಾಲಕಿ ನೀತಾ ಅಂಬಾನಿ ಕೂಡ ಶಾಕ್ ಆದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ
Virat Kohli: ಬೆಂಗಳೂರಿನಲ್ಲಿ ಕೊಹ್ಲಿ-ಅನುಷ್ಕಾ ಸುತ್ತಾಟ: ಸಿಟಿಆರ್‌ ಹೋಟೆಲ್​​ನಲ್ಲಿ ಮಸಾಲೆದೋಸೆ ಸವಿದ ವಿರುಷ್ಕಾ
Yash: ಹಾರ್ದಿಕ್​ ಪಾಂಡ್ಯ ಮದುವೆಯಲ್ಲಿ ಬಿಂದಾಸ್​ ಆಗಿ ಕುಣಿದ ‘ರಾಕಿಂಗ್​ ಸ್ಟಾರ್’​ ಯಶ್​ ವಿಡಿಯೋ ವೈರಲ್​
RCB vs RR: ಐಪಿಎಲ್​ನಲ್ಲಿಂದು ಎರಡು ಪಂದ್ಯ: ರೋಚಕತೆ ಸೃಷ್ಟಿಸಿದ ಆರ್​ಸಿಬಿ-ರಾಜಸ್ಥಾನ್ ನಡುವಣ ಕಾದಾಟ
IPL 2023 RCB vs RR Live Streaming: ಆರ್​ಸಿಬಿಗೆ ರಾಜಸ್ಥಾನ್ ಎದುರಾಳಿ; ಪಂದ್ಯ ಎಷ್ಟು ಗಂಟೆಗೆ ಆರಂಭ?

IPL 2023: ಆರ್​ಸಿಬಿಗೆ ಹಸಿರೇ ಅಪಾಯ! ಗ್ರೀನ್ ಜೆರ್ಸಿ ಪಂದ್ಯಗಳಲ್ಲಿ ಆರ್​ಸಿಬಿ ಪ್ರದರ್ಶನ ಹೇಗಿದೆ ಗೊತ್ತಾ?

 

ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಪಂಜಾಬ್ ಪರ ಮ್ಯಾಥ್ಯೂ ಶಾರ್ಟ್11, ಚಪ್ರಭ್‌ಸಿಮ್ರಾನ್ 26, ಲಿವಿಂಗ್‌ಸ್ಟೋನ್ 10, ಅಥರ್ವ ಟೈಡೆ 29, ಹರ್‌ಪ್ರೀತ್ ಸಿಂಗ್ 41 ರನ್​ ಮಾಡಿ ತಂಡದ ರನ್​ ಕಲೆ ಹಾಕಿದರು. ಮಧ್ಯಮ ಕ್ರಮಾಂಕದಲ್ಲಿ ಸಿಡಿದ ನಾಯಕ ಸ್ಯಾಮ್ ಕುರ್ರನ್ 20 ಎಸೆತಗಳಲ್ಲಿ 5 ಫೋರ್, 4 ಸಿಕ್ಸರ್​ನೊಂದಿಗೆ 55 ರನ್, ಜಿತೇಶ್ ಶರ್ಮಾ 7 ಎಸೆತಗಳಲ್ಲಿ 25 ರನ್, ಹರ್‌ಪ್ರೀತ್ ಬ್ರಾರ್ 5 ರನ್ ಕೊಡುಗೆ ನೀಡಿದರು. ಇದರಿಂದ ಪಂಜಾಬ್ 8 ವಿಕೆಟ್ ನಷ್ಟಕ್ಕೆ ಬರೋಬ್ಬರಿ 214 ರನ್​ಗಳ ಬೃಹತ್​ ಮೊತ್ತ ಕಲೆ ಹಾಕಿತು. ಮುಂಬೈ ಪರ ಕ್ಯಾಮ್ರೋನ್ ಗ್ರೀನ್ ಹಾಗೂ ಪಿಯುಷ್ ಚಾವ್ಲಾ 2 ವಿಕೆಟ್ ಪಡೆದರು.

ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಪರ ನಾಯಕ ರೋಹಿತ್ ಶರ್ಮಾ 44, ಗ್ರೀನ್ 67 ಮತ್ತು ಸೂರ್ಯಕುಮಾರ್ ಯಾದವ್ ಅವರ ಸ್ಪೋಟಕ 57 ರನ್, ಟಿಮ್ ಡೇವಿಡ್ ಔಟಾಗದೆ 25 ರನ್ ಗಳಿಸಿದರೂ ಗೆಲುವು ಕಾಣಲು ಸಾಧ್ಯವಾಗಲಿಲ್ಲ. ಪಂಜಾಬ್ ಪರ ಬಿಗಿ ಬೌಲಿಂಗ್ ದಾಳಿ ನಡೆಸಿದ ಅರ್ಷದೀಪ್ ಸಿಂಗ್ 4 ವಿಕೆಟ್ ಕಿತ್ತು ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಅದರಲ್ಲೂ ಕೊನೆಯ 20 ಓವರ್​ನ 6 ಎಸೆತಗಳಲ್ಲಿ 3 ರನ್​ ನೀಡಿ 2 ವಿಕೆಟ್​ ಗಳಿಸಿದರು. ಮುಂಬೈ 6 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿ ಸೋಲು ಕಂಡಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ