ದುರಂತ ಅಂತ್ಯ: ಮಾರಕ ಬೌನ್ಸರ್, ಹೃದಯಾಘಾತದಿಂದ ಪ್ರಾಣ ಕಳೆದುಕೊಂಡ ಐವರು ಕ್ರಿಕೆಟಿಗರಿವರು
ಬೌನ್ಸರ್ ಎಸೆತಗಳು ಬ್ಯಾಟ್ಸ್‌ಮನ್‌ಗಳನ್ನು ಗಾಯಗೊಳಿಸಿದ್ದು ಮಾತ್ರವಲ್ಲದೆ ಅವರ ಜೀವನವನ್ನು ಸಹ ಅಂತ್ಯಗೊಳಿಸಿವೆ. ಬೌನ್ಸರ್ ಬಾಲ್ ಅಥವಾ ಇನ್ನಾವುದೇ ಕಾರಣದಿಂದ ಕ್ರಿಕೆಟ್ ಮೈದಾನದಲ್ಲಿ ಸಾವನ್ನಪ್ಪಿದ ಐವರು ಕ್ರಿಕೆಟಿಗರ ಬಗ್ಗೆ ಇಲ್ಲಿದೆ ವಿವರ.
ಫಿಲೀಫ್ ಹ್ಯೂಸ್
Follow us on
ಭಾರತದ ಆಕ್ರಮಣಕಾರಿ ಎಡಗೈ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಸದ್ಯ ಆಸ್ಪತ್ರೆಯಲ್ಲಿದ್ದಾರೆ. ನಿನ್ನೆ ನಡೆದ ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಪಂದ್ಯದ ವೇಳೆ ಇಶಾನ್ ಕಿಶನ್ ತಲೆಗೆ ಪೆಟ್ಟು ಬಿದ್ದಿತ್ತು. ಶ್ರೀಲಂಕಾದ ವೇಗದ ಬೌಲರ್ ಲಹಿರು ಕುಮಾರ ಅವರ ಬೌನ್ಸರ್ ಚೆಂಡು ಇಶಾನ್ ಕಿಶನ್ ಅವರ ತಲೆಗೆ ಬಡಿದಿತ್ತು. ಅದೃಷ್ಟವಶಾತ್ ಅವರು ಹೆಲ್ಮೆಟ್ ಧರಿಸಿದ್ದ ಕಾರಣ ಇಶಾನ್ ಅವರಿಗೆ ಗಂಭೀರ ಗಾಯಗಳಾಗಿಲ್ಲ. ಇಶಾನ್ ಕಿಶನ್ ತಲೆಯ ಸಿಟಿ ಸ್ಕ್ಯಾನ್ ಮಾಡಲಾಗಿದೆ. ಆದರೆ ಯಾವುದೇ ಗಂಭೀರ ಗಾಯಗಳು ಕಂಡುಬಂದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಇಶಾನ್ ಈಗ ಆರೋಗ್ಯವಾಗಿದ್ದಾರೆ. ಈ ರೀತಿಯ ಘಟನೆ ಕ್ರಿಕೆಟ್ ಮೈದಾನದಲ್ಲಿ ಇದೇ ಮೊದಲ ಸಲ ನಡೆದಿಲ್ಲ. ಇದಕ್ಕೂ ಮೊದಲು ಬೌನ್ಸರ್ ಎಸೆತಗಳು ಬ್ಯಾಟ್ಸ್‌ಮನ್‌ಗಳನ್ನು ಗಾಯಗೊಳಿಸಿದ್ದು ಮಾತ್ರವಲ್ಲದೆ ಅವರ ಜೀವನವನ್ನು ಸಹ ಅಂತ್ಯಗೊಳಿಸಿವೆ. ಬೌನ್ಸರ್ ಬಾಲ್ ಅಥವಾ ಇನ್ನಾವುದೇ ಕಾರಣದಿಂದ ಕ್ರಿಕೆಟ್ ಮೈದಾನದಲ್ಲಿ ಸಾವನ್ನಪ್ಪಿದ ಐವರು ಕ್ರಿಕೆಟಿಗರ ಬಗ್ಗೆ ಇಲ್ಲಿದೆ ವಿವರ.
ಕ್ರಿಕೆಟ್ನಿಂದ ಸಾವನ್ನಪ್ಪಿದ ಆಟಗಾರರು ಇವರು
2014ರಲ್ಲಿ ಆಸ್ಟ್ರೇಲಿಯದ ಬ್ಯಾಟ್ಸ್‌ಮನ್ ಫಿಲೀಫ್ ಹ್ಯೂಸ್ ಅವರ ತಲೆಗೆ ಬೌನ್ಸರ್ ಎಸೆತ ಬಡಿದು ಮೈದಾನದಲ್ಲೇ ಕುಸಿದು ಬಿದ್ದಿದ್ದರು. ಸೌತ್ ಆಸ್ಟ್ರೇಲಿಯಾ ಮತ್ತು ನ್ಯೂ ಸೌತ್ ವೇಲ್ಸ್ ನಡುವಿನ ಪಂದ್ಯದ ಆರಂಭದಲ್ಲಿ ಈ ಘಟನೆ ನಡೆದಿತ್ತು. ಇದರಿಂದ ಅವರ ಮೆದುಳಿನಲ್ಲಿ ಭಾರೀ ರಕ್ತಸ್ರಾವವಾಗಿತ್ತು. ಕೂಡಲೇ ಅವರನ್ನು ಸಿಡ್ನಿಯ ಆಸ್ಪತ್ರೆಗೆ ಶಸ್ತ್ರಚಿಕಿತ್ಸೆಗೆ ಸೇರಿಸಲಾಗಿತ್ತು. ಆದರೆ ಎರಡು ದಿನಗಳ ನಂತರ ಫಿಲ್ ಹ್ಯೂಸ್ ಚಿಕಿತ್ಸೆ ಫಲಿಸದೆ ನಿಧನರಾದರು. ಅವರ ಮರಣದ ಸಮಯದಲ್ಲಿ ಅವರಿಗೆ ಕೇವಲ 25 ವರ್ಷ ವಯಸ್ಸಾಗಿತ್ತು.
ಡ್ಯಾರೆನ್ ರಾಂಡಾಲ್ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ. 2013ರಲ್ಲಿ ಸ್ಥಳೀಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಡುತ್ತಿದ್ದಾಗ ಬೌನ್ಸರ್‌ನಿಂದ ತಲೆಗೆ ಪೆಟ್ಟು ಬಿದ್ದಿತ್ತು. ಡಾರೆನ್ ಪುಲ್ ಶಾಟ್ ಆಡಲು ಯತ್ನಿಸುತ್ತಿದ್ದಾಗ ಚೆಂಡು ತಲೆಗೆ ಬಡಿದಿತ್ತು. ಈ ವೇಳೆ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಡ್ಯಾರೆನ್ ಸ್ಥಳದಲ್ಲೇ ಕುಸಿದು ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಡ್ಯಾರೆನ್‌ಗೆ ಆಗಿನ್ನು ಕೇವಲ 32 ವರ್ಷ.
ಪಾಕಿಸ್ತಾನದ ಕ್ರಿಕೆಟಿಗ ಜುಲ್ಫಿಕರ್ ಭಟ್ಟಿ ಸ್ಥಳೀಯ ಕ್ರಿಕೆಟ್ ಟೂರ್ನಿಯಲ್ಲಿ ಆಡುತ್ತಿದ್ದಾಗ ಎದೆಗೆ ಪೆಟ್ಟು ಬಿದ್ದಿತ್ತು. ಹೀಗಾಗಿ ಜುಲ್ಫಿಕರ್ ನೆಲದ ಮೇಲೆ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದರು. 2013 ರಲ್ಲಿ ಈ ಘಟನೆ ನಡೆದಿತ್ತು. ಆ ಸಮಯದಲ್ಲಿ ಜುಲ್ಫಿಕರ್ ಅವರಿಗೆ ಕೇವಲ 22 ವರ್ಷ ವಯಸ್ಸಾಗಿತ್ತು.
ರಿಚರ್ಡ್ ಬ್ಯೂಮಾಂಟ್ ಒಬ್ಬ ಇಂಗ್ಲಿಷ್ ಕ್ರಿಕೆಟಿಗ. ಮೈದಾನದಲ್ಲಿ ಆಟವಾಡುತ್ತಿದ್ದಾಗ ಹೃದಯಾಘಾತದಿಂದ ಮೈದಾನದಲ್ಲಿ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ರಿಚರ್ಡ್ ಬ್ಯೂಮಾಂಟ್ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಈ ಘಟನೆ 2012 ರಲ್ಲಿ ನಡೆದಿತ್ತು. ಆಗ ರಿಚರ್ಡ್‌ಗೆ 33 ವರ್ಷ.
ರಾಮನ್ ಲಂಬಾ ಭಾರತದ ಮಾಜಿ ಕ್ರಿಕೆಟಿಗ. ಢಾಕಾದಲ್ಲಿ ನಡೆದ ಪಂದ್ಯವೊಂದರಲ್ಲಿ ಫೀಲ್ಡಿಂಗ್ ಮಾಡುವಾಗ ಬ್ಯಾಟ್ಸ್‌ಮನ್‌ನಿಂದ ತಲೆಗೆ ಪೆಟ್ಟು ಬಿದ್ದಿತ್ತು. ನೆಲದ ಮೇಲೆ ಕುಸಿದು ಬಿದ್ದ ರಮಣ್ ಲಾಂಬಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಮೂರು ದಿನಗಳ ಕಾಲ ಕೋಮಾದಲ್ಲಿದ್ದರು. ಅಂತಿಮವಾಗಿ ಅವರು ನಿಧನರಾದರು. ಇದು 1998ರಲ್ಲಿ ನಡೆದ ಘಟನೆಯಾಗಿದೆ. ಆಗ ರಾಮನ್ ಲಂಬಾ ಅವರಿಗೆ 38 ವರ್ಷ.