AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL: ಟೀಂ ಇಂಡಿಯಾ ಆಟಗಾರರು ತೆರಳುವ ಬಸ್​ನಲ್ಲಿ ಸಜೀವ ಗುಂಡುಗಳು ಪತ್ತೆ! ಘಟನಾ ಸ್ಥಳದಲ್ಲಿ ಸಂಚಲನ

IND vs SL: ತಂಡದ ಬಸ್‌ನಲ್ಲಿ ಕಾರ್ಟ್ರಿಡ್ಜ್ ಶೆಲ್‌ನ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಬಾಂಬ್ ಶ್ವಾನ ದಳ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಡಿಡಿಆರ್ ದಾಖಲಿಸಿಕೊಂಡಿದ್ದಾರೆ.

IND vs SL: ಟೀಂ ಇಂಡಿಯಾ ಆಟಗಾರರು ತೆರಳುವ ಬಸ್​ನಲ್ಲಿ ಸಜೀವ ಗುಂಡುಗಳು ಪತ್ತೆ! ಘಟನಾ ಸ್ಥಳದಲ್ಲಿ ಸಂಚಲನ
ಟೀಂ ಇಂಡಿಯಾ ಆಟಗಾರರು
Follow us
TV9 Web
| Updated By: ಪೃಥ್ವಿಶಂಕರ

Updated on:Feb 27, 2022 | 4:07 PM

ಟಿ20 ಸರಣಿ ಜಾತ್ರೆ ಮುಗಿಯುತ್ತಿದ್ದಂತೆಯೇ ಟೆಸ್ಟ್ ಸರಣಿಯ ಕಹಳೆ ಮೊಳಗಲಿದೆ. ಭಾರತ ಮತ್ತು ಶ್ರೀಲಂಕಾ (India vs Sri Lanka) ಆಟಗಾರರು ಮಾರ್ಚ್ 4 ರಿಂದ ಬಿಳಿ ಉಡುಪಿನಲ್ಲಿ ಮುಖಾಮುಖಿಯಾಗಲಿದ್ದಾರೆ. ಇದಕ್ಕಾಗಿ ಎರಡೂ ತಂಡಗಳ ಬಹುತೇಕ ಆಟಗಾರರು ಚಂಡೀಗಢ ತಲುಪಿದ್ದಾರೆ. ಮೊಹಾಲಿಯ ಪಿಸಿಎ ಸ್ಟೇಡಿಯಂನಲ್ಲಿ ಟೆಸ್ಟ್ ಪಂದ್ಯ ನಡೆಯಲಿದೆ. ಟಿ20 ತಂಡದಲ್ಲಿರುವ ಭಾರತೀಯ ಆಟಗಾರರು ಕೂಡ ಚಂಡೀಗಢ ತಲುಪಿದ ಬಳಿಕ ಅಭ್ಯಾಸ ಆರಂಭಿಸಿದ್ದಾರೆ. ಆಟಗಾರರನ್ನು ಹೋಟೆಲ್‌ನಿಂದ ಕ್ರೀಡಾಂಗಣಕ್ಕೆ ಕರೆದೊಯ್ಯಲು ಬಸ್ ವ್ಯವಸ್ಥೆ ಮಾಡಲಾಗಿದೆ. ಆದರೆ ಆಟಗಾರರನ್ನು ಕರೆದೊಯ್ಯುವ ಬಸ್​ನಲ್ಲಿ ಎರಡು ಕಾಟ್ರಿಡ್ಜ್‌ಗಳು (ಪಿಸ್ತೂಲಿಗೆ ಬಳಸುವ ಗುಂಡು) ಪತ್ತೆಯಾಗಿದ್ದು, ಇದರಿಂದಾಗಿ ಸಂಚಲನ ಉಂಟಾಗಿದೆ.

ದಿ ಟೈಮ್ಸ್ ಆಫ್ ಇಂಡಿಯಾ ಸುದ್ದಿ ಪ್ರಕಾರ, ಆಟಗಾರರನ್ನು ಕ್ರೀಡಾಂಗಣಕ್ಕೆ ಬಿಡುವ ಬಸ್‌ನಲ್ಲಿ ಕಂಡುಬಂದ ಕಾರ್ಟ್ರಿಡ್ಜ್ ಶೆಲ್‌ಗಳು .32 ಬೋರ್ ಪಿಸ್ತೂಲ್‌ಗಳಾಗಿವೆ. ತಾರಾ ಬ್ರದರ್ಸ್‌ನ ಈ ಬಸ್ ಐಟಿ ಪಾರ್ಕ್‌ನಲ್ಲಿರುವ ಹೋಟೆಲ್ ಲಲಿತ್ ಹೊರಗೆ ನಿಂತಿದ್ದು, ಅಲ್ಲಿ ಎರಡೂ ತಂಡಗಳ ಆಟಗಾರರಿಗೆ ತಂಗಲು ವ್ಯವಸ್ಥೆ ಮಾಡಲಾಗಿದೆ.

ಬಸ್‌ನಲ್ಲಿ ಕಾರ್ಟ್ರಿಡ್ಜ್‌ಗಳು

ತಂಡದ ಬಸ್‌ನಲ್ಲಿ ಕಾರ್ಟ್ರಿಡ್ಜ್ ಶೆಲ್‌ನ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಬಾಂಬ್ ಶ್ವಾನ ದಳ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಡಿಡಿಆರ್ ದಾಖಲಿಸಿಕೊಂಡಿದ್ದಾರೆ. ಬಸ್ಸಿನಲ್ಲಿ ಕಾರ್ಟ್ರಿಡ್ಜ್ ಶೆಲ್ ಪತ್ತೆಯಾದ ನಂತರ, ಮೊಹಾಲಿಯ ಪಿಸಿಎ ಸ್ಟೇಡಿಯಂನಲ್ಲಿಯೂ ತನಿಖೆ ನಡೆಸಲಾಯಿತು. ಸದ್ಯ ಪೊಲೀಸರು ಪತ್ತೆಯಾದ ಎರಡೂ ಕಾಟ್ರಿಡ್ಜ್‌ಗಳ ಶೆಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಆರ್ ಅಶ್ವಿನ್, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಶುಭಮನ್ ಗಿಲ್, ಹನುಮ ವಿಹಾರಿ, ಪ್ರಿಯಾಂಕ್ ಪಾಂಚಾಲ್, ಉಮೇಶ್ ಯಾದವ್, ಜಯಂತ್ ಯಾದವ್, ಸೌರಭ್ ಕುಮಾರ್ ಮತ್ತು ಕೆಎಸ್ ಭರತ್ ಶ್ರೀಲಂಕಾ ವಿರುದ್ಧ ಟೆಸ್ಟ್ ಪಂದ್ಯಗಳನ್ನು ಆಡಲು ಹೋಟೆಲ್ ಲಲಿತ್‌ನಲ್ಲಿ ತಂಗಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರಿಷಬ್ ಪಂತ್ ಕೂಡ ಶನಿವಾರ ಚಂಡೀಗಢಕ್ಕೆ ಬಂದಿದ್ದಾರೆ.

ಬೇರೊಂದು ಬಸ್ ವ್ಯವಸ್ಥೆ

ಮೊಹಾಲಿಯ ಪಿಸಿಎ ಕ್ರೀಡಾಂಗಣಕ್ಕೆ ಶನಿವಾರ ಅಭ್ಯಾಸ ನಡೆಸಲು ಭಾರತ ತಂಡ ತೆರಳಬೇಕಿತ್ತು. ಇದರ ಅಡಿಯಲ್ಲಿ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಬಸ್ ತಪಾಸಣೆ ನಡೆಸಿದಾಗ ಸೀಟಿನ ಕೆಳಗೆ ಎರಡು ಕಾಟ್ರಿಡ್ಜ್​ಗಳು ಪತ್ತೆಯಾಗಿವೆ. ಈ ಘಟನೆಯ ನಂತರ, ಬಸ್‌ ಬಗ್ಗೆ ತನಿಖೆ ತ್ವರಿತವಾಗಿ ಪ್ರಾರಂಭವಾಯಿತು. ಆಟಗಾರರನ್ನು ಮತ್ತೊಂದು ಬಸ್ ಮೂಲಕ ಕ್ರೀಡಾಂಗಣಕ್ಕೆ ಕರೆದೊಯ್ಯಲಾಯಿತು. ಬಸ್ಸಿನಲ್ಲಿ ಕಾರ್ಟ್ರಿಡ್ಜ್ ಶೆಲ್ ಪತ್ತೆಯಾದ ನಂತರ, ತಂಡಗಳ ಸುರಕ್ಷತೆಯ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ. ಶ್ರೀಲಂಕಾ ಆಟಗಾರರು ಪ್ರಸ್ತುತ ಹೋಟೆಲ್‌ನಲ್ಲಿಯೇ ಕ್ವಾರಂಟೈನ್‌ನಲ್ಲಿದ್ದಾರೆ. ಅವರು ಫೆಬ್ರವರಿ 28 ರಿಂದ ಅಭ್ಯಾಸವನ್ನು ಪ್ರಾರಂಭಿಸುತ್ತಾರೆ.

ಇದನ್ನೂ ಓದಿ:IPL 2022: ಮಾ. 26ರಿಂದ ಐಪಿಎಲ್ ಆರಂಭ; ಮೊದಲ ಪಂದ್ಯದಲ್ಲಿ ಯಾವೆರಡು ತಂಡಗಳು ಸೆಣಸಲಿವೆ ಗೊತ್ತಾ?

Published On - 4:05 pm, Sun, 27 February 22

Video: ಪ್ರಧಾನಿ ನರೇಂದ್ರ ಮೋದಿಗೆ ಘಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
Video: ಪ್ರಧಾನಿ ನರೇಂದ್ರ ಮೋದಿಗೆ ಘಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
Daily Devotional: ತೀರ್ಥ ತೆಗೆದುಕೊಳ್ಳುವ ವಿಧಾನ ಹೇಗೆ ತಿಳಿಯಿರಿ
Daily Devotional: ತೀರ್ಥ ತೆಗೆದುಕೊಳ್ಳುವ ವಿಧಾನ ಹೇಗೆ ತಿಳಿಯಿರಿ
Daily Horoscope: ಕನ್ಯಾ ರಾಶಿಯ ಆರನೇ ಮನೆಯಲ್ಲಿ ಚಂದ್ರ ಸಂಚಾರ
Daily Horoscope: ಕನ್ಯಾ ರಾಶಿಯ ಆರನೇ ಮನೆಯಲ್ಲಿ ಚಂದ್ರ ಸಂಚಾರ
30 ವರ್ಷಗಳ ಬಳಿಕ ಭಾರತದ ಪ್ರಧಾನಿಯಿಂದ ಘಾನಾ ಭೇಟಿ;  ಮೋದಿಗೆ ಆತ್ಮೀಯ ಸ್ವಾಗತ
30 ವರ್ಷಗಳ ಬಳಿಕ ಭಾರತದ ಪ್ರಧಾನಿಯಿಂದ ಘಾನಾ ಭೇಟಿ;  ಮೋದಿಗೆ ಆತ್ಮೀಯ ಸ್ವಾಗತ
ಗ್ರಾಮೀಣ ಪ್ರದೇಶಗಳ ಸರ್ಕಾರೀ ಶಾಲೆಗಳಿಗೆ ಬೇಕಿದೆ ಕಾಯಕಲ್ಪ
ಗ್ರಾಮೀಣ ಪ್ರದೇಶಗಳ ಸರ್ಕಾರೀ ಶಾಲೆಗಳಿಗೆ ಬೇಕಿದೆ ಕಾಯಕಲ್ಪ
ಸರ್ಕಾರದ ಕೆಲಸಗಳನ್ನು ಮಾಧ್ಯಮಗಳಿಗೆ ತೋರಿಸುತ್ತೇನೆ ಎಂದ ಶಿವಕುಮಾರ್
ಸರ್ಕಾರದ ಕೆಲಸಗಳನ್ನು ಮಾಧ್ಯಮಗಳಿಗೆ ತೋರಿಸುತ್ತೇನೆ ಎಂದ ಶಿವಕುಮಾರ್
ನಾಳೆಯ ಅಮರನಾಥ ಯಾತ್ರೆಗೆ ತೆರಳಲು ಬಂದ ಭಕ್ತರಿಗೆ ಹೂವಿನ ಹಾರ ಹಾಕಿ ಸ್ವಾಗತ
ನಾಳೆಯ ಅಮರನಾಥ ಯಾತ್ರೆಗೆ ತೆರಳಲು ಬಂದ ಭಕ್ತರಿಗೆ ಹೂವಿನ ಹಾರ ಹಾಕಿ ಸ್ವಾಗತ
‘ನಾವು ಗೌಡ್ರು, ಮಾತು ಸ್ಮೂತ್ ಇಲ್ಲ’; ಯಶ್ ತಾಯಿ ಪುಷ್ಪಾ
‘ನಾವು ಗೌಡ್ರು, ಮಾತು ಸ್ಮೂತ್ ಇಲ್ಲ’; ಯಶ್ ತಾಯಿ ಪುಷ್ಪಾ
ಸಂಪುಟ ಸಭೆ ನಂತರ ಹೆಚ್​ಕೆ ಪಾಟೀಲ್ ಬದಲು ಸಿದ್ದರಾಮಯ್ಯರಿಂದ ಸುದ್ದಿಗೋಷ್ಠಿ
ಸಂಪುಟ ಸಭೆ ನಂತರ ಹೆಚ್​ಕೆ ಪಾಟೀಲ್ ಬದಲು ಸಿದ್ದರಾಮಯ್ಯರಿಂದ ಸುದ್ದಿಗೋಷ್ಠಿ
ಕಂಡಕ್ಟರ್ ಟಿಕೆಟ್ ಹಿಂದೆ ಚಿಲ್ಲರೆ ಹಣದ ಬಗ್ಗೆ ಬರೆಯದಿರುವುದು ಜಗಳದ ಮೂಲ
ಕಂಡಕ್ಟರ್ ಟಿಕೆಟ್ ಹಿಂದೆ ಚಿಲ್ಲರೆ ಹಣದ ಬಗ್ಗೆ ಬರೆಯದಿರುವುದು ಜಗಳದ ಮೂಲ