IPL 2022: ಮಾ. 26ರಿಂದ ಐಪಿಎಲ್ ಆರಂಭ; ಮೊದಲ ಪಂದ್ಯದಲ್ಲಿ ಯಾವೆರಡು ತಂಡಗಳು ಸೆಣಸಲಿವೆ ಗೊತ್ತಾ?

IPL 2022: IPL 2022 ರ ಮೊದಲ ಪಂದ್ಯವು ಮಾರ್ಚ್ 26 ರಂದು ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ 15 ನೇ ಸೀಸನ್ ಆರಂಭಿಕ ಪಂದ್ಯದಲ್ಲಿ ಸ್ಪರ್ಧಿಸಲಿವೆ.

IPL 2022: ಮಾ. 26ರಿಂದ ಐಪಿಎಲ್ ಆರಂಭ; ಮೊದಲ ಪಂದ್ಯದಲ್ಲಿ ಯಾವೆರಡು ತಂಡಗಳು ಸೆಣಸಲಿವೆ ಗೊತ್ತಾ?
ಗಂಗೂಲಿ, ಜೈ ಶಾ
Follow us
ಪೃಥ್ವಿಶಂಕರ
|

Updated on: Feb 27, 2022 | 2:41 PM

ಐಪಿಎಲ್ 2022 (IPL 2022) ರ ಮೊದಲ ಪಂದ್ಯವು ಮಾರ್ಚ್ 26 ರಂದು ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ಐಪಿಎಲ್ 15 ನೇ ಸೀಸನ್ (IPL 2022 Opening Match) ಆರಂಭಿಕ ಪಂದ್ಯದಲ್ಲಿ ಸ್ಪರ್ಧಿಸಲಿವೆ. CSK ತಂಡ ಪ್ರಸ್ತುತ ಹಾಲಿ ಚಾಂಪಿಯನ್ ಆಗಿದೆ. ಇಲ್ಲಿಯವರೆಗೆ ಮೊದಲ ಪಂದ್ಯವನ್ನು ಯಾವಾಗಲೂ ಹಾಲಿ ತಂಡವೇ ಆಡುತ್ತದೆ. ಆದ್ದರಿಂದ CSK ಅನ್ನು ಆಯ್ಕೆ ಮಾಡಲಾಗಿದೆ. ಮತ್ತೊಂದೆಡೆ, ಕೋಲ್ಕತ್ತಾ ಕೊನೆಯ ಬಾರಿಯ ಫೈನಲಿಸ್ಟ್ ಆಗಿದೆ. ಅಂತಹ ಪರಿಸ್ಥಿತಿಯಲ್ಲಿ, ಐಪಿಎಲ್ 2022 ರ ಮೊದಲ ಪಂದ್ಯದಲ್ಲಿ, ಐಪಿಎಲ್ 2021 ರ ಫೈನಲ್ ಆಡಿದ ಅದೇ ತಂಡಗಳು ಆಡುತ್ತವೆ. ಈ ಬಾರಿಯ ಐಪಿಎಲ್‌ನ ಲೀಗ್ ಹಂತದ ಪಂದ್ಯಗಳು ಮುಂಬೈ ಮತ್ತು ಪುಣೆಯಲ್ಲಿ ಮಾತ್ರ ನಡೆಯಲಿವೆ. ಐಪಿಎಲ್ 2022 ರಲ್ಲಿ 10 ತಂಡಗಳಿವೆ ಮತ್ತು ಅವುಗಳನ್ನು ತಲಾ ಐದರಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.

IPL 2022 ಪಂದ್ಯಗಳ ಸಮಯದಲ್ಲಿ, ಆಟಗಾರರು ಪಂದ್ಯ ಆಡಲು ಹೋಟೆಲ್‌ಗಳಿಂದ ತೆರಳುವಾಗ ಅಥವಾ ಅಭ್ಯಾಸಕ್ಕೆ ಹೋಗುವಾಗ ತಂಡಗಳಿಗೆ ಟ್ರಾಫಿಕ್ ಕಿರಿಕಿರಿ ಉಂಟಾಗುವುದನ್ನು ತಪ್ಪಿಸಲು ಚಿಂತಿಸಲಾಗಿದೆ ಎಂದು ಇಂಗ್ಲಿಷ್ ಪತ್ರಿಕೆ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ತಂಡಗಳ ಸಂಚಾರಕ್ಕೆ ರಸ್ತೆಯಲ್ಲಿ ಪ್ರತ್ಯೇಕ ಲೇನ್ ಇರಲಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂ, ಬ್ರಬೋರ್ನ್ ಸ್ಟೇಡಿಯಂ, ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ 55 ಪಂದ್ಯಗಳು ನಡೆಯಲಿವೆ. ಇವುಗಳಲ್ಲದೆ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ 15 ಪಂದ್ಯಗಳು ನಡೆಯಲಿವೆ. ಬಿಸಿಸಿಐ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ಮತ್ತು ಥಾಣೆಯ ದಾದೋಜಿ ಕೊಂಡದೇವ್ ಸ್ಟೇಡಿಯಂ ಅನ್ನು ಅಭ್ಯಾಸ ಸೌಲಭ್ಯಗಳಿಗಾಗಿ ಆಯ್ಕೆ ಮಾಡಿದೆ.

ಬಿಸಿಸಿಐಗೆ ಸಹಾಯ ಮಾಡಲಿದೆ ಮಹಾರಾಷ್ಟ್ರ ಸರ್ಕಾರ

ಮಹಾರಾಷ್ಟ್ರ ಸರ್ಕಾರವು ಐಪಿಎಲ್ ಪಂದ್ಯಗಳು ಮತ್ತು ತರಬೇತಿಗೆ ಸಂಬಂಧಿಸಿದಂತೆ ಬಿಸಿಸಿಐಗೆ ಸಂಪೂರ್ಣ ಸಹಾಯದ ಭರವಸೆ ನೀಡಿದೆ. ಇದರ ಅಡಿಯಲ್ಲಿ ತಂಡಗಳಿಗೆ ಪ್ರತ್ಯೇಕ ರಸ್ತೆ ಮಾರ್ಗಗಳ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದೆ. ಈ ಬಗ್ಗೆ ಚರ್ಚಿಸಲು ಫೆಬ್ರವರಿ 26 ರಂದು ಬಿಸಿಸಿಐ ಜೊತೆ ಸಭೆ ನಡೆಸಲಾಗಿದೆ ಎಂಸಿಎ ಆಡಳಿತ ಮಂಡಳಿ ಅಧ್ಯಕ್ಷ ಮಿಲಿಂದ್ ನಾರ್ವೇಕರ್ ಹೇಳಿದ್ದಾರೆ. ಮಹಾರಾಷ್ಟ್ರದ ಪ್ರವಾಸೋದ್ಯಮ ಮತ್ತು ಪರಿಸರ ಸಚಿವ ಆದಿತ್ಯ ಠಾಕ್ರೆ ಕೂಡ ಇದರಲ್ಲಿ ಉಪಸ್ಥಿತರಿದ್ದರು. ನಾರ್ವೇಕರ್ ದಿ ಇಂಡಿಯನ್ ಎಕ್ಸ್‌ಪ್ರೆಸ್‌ ಜೊತೆ ಮಾತನಾಡಿ, “ಯಶಸ್ವಿ ಐಪಿಎಲ್ ಆಯೋಜಿಸಲು ಮಹಾರಾಷ್ಟ್ರ ಸರ್ಕಾರವು ಬಿಸಿಸಿಐಗೆ ಸಂಪೂರ್ಣ ಬೆಂಬಲ ನೀಡುತ್ತದೆ. ಮೈದಾನಕ್ಕೆ ಪ್ರೇಕ್ಷಕರ ಆಗಮನದ ಕುರಿತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿರ್ಧರಿಸಲಿದ್ದಾರೆ ಎಂದಿದ್ದಾರೆ.

ಒಂದು ಹೋಟೆಲ್‌ನಲ್ಲಿ ಎರಡು ತಂಡಗಳು ಉಳಿದುಕೊಳ್ಳುತ್ತವೆ

ಮಹಾರಾಷ್ಟ್ರ ಸರ್ಕಾರವು ಐಪಿಎಲ್ ಪಂದ್ಯಗಳಿಗೆ ಮೈದಾನದಲ್ಲಿ ಶೇಕಡಾ 25 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಬಹುದು ಎಂದು ತಿಳಿದುಬಂದಿದೆ. ಅದೇ ಸಮಯದಲ್ಲಿ, ಒಂದು ಹೋಟೆಲ್‌ನಲ್ಲಿ ಎರಡು ತಂಡಗಳನ್ನು ಇರಿಸಲು ಬಿಸಿಸಿಐ ನಿರ್ಧರಿಸಿದೆ. ಈ ಬಾರಿ 10 ತಂಡಗಳಿದ್ದು, ತಂಡಗಳಿಗೆ ಪಂಚತಾರಾ ಹೋಟೆಲ್‌ಗಳನ್ನು ಕಾಯ್ದಿರಿಸಬೇಕು. ಪಂದ್ಯಾವಳಿಯಲ್ಲಿ ಬಯೋ ಬಬಲ್ ಮತ್ತು ಕೋವಿಡ್ ತನಿಖೆಯಲ್ಲಿ ರಾಜ್ಯ ಸರ್ಕಾರವು ಮಂಡಳಿಗೆ ಸಹಾಯ ಮಾಡುತ್ತದೆ ಎಂದು ವರದಿಯಾಗಿದೆ.

ಇದನ್ನೂ ಓದಿ:IPL 2022: ಕೇವಲ 4 ಮೈದಾನಗಳಲ್ಲಿ ಈ ಬಾರಿಯ ಐಪಿಎಲ್; ಯಾವ ಮೈದಾನದಲ್ಲಿ ಎಷ್ಟು ಪಂದ್ಯಗಳು? ಇಲ್ಲಿದೆ ಮಾಹಿತಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್