Ranji Trophy: ಜಮ್ಮು-ಕಾಶ್ಮೀರ ವಿರುದ್ದ ಕರ್ನಾಟಕಕ್ಕೆ ಭರ್ಜರಿ ಜಯ
Ranji Trophy 2022: ಕರ್ನಾಟಕ ಪರ ಪ್ರಸಿದ್ಧ್ ಕೃಷ್ಣ ಮೊದಲ ಇನಿಂಗ್ಸ್ನಲ್ಲಿ ಕೇವಲ 35 ರನ್ ನೀಡಿ 6 ವಿಕೆಟ್ ಪಡೆದರೆ, 2ನೇ ಇನಿಂಗ್ಸ್ನಲ್ಲಿ 59 ರನ್ ನೀಡಿ 4 ವಿಕೆಟ್ ಉರುಳಿಸಿದರು.
ರಣಜಿ ಟ್ರೋಫಿಯಲ್ಲಿ ಕರ್ನಾಟಕ ತಂಡವು ಜಮ್ಮು-ಕಾಶ್ಮೀರ ವಿರುದ್ದ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಕರ್ನಾಟಕ ಕರುಣ್ ನಾಯರ್ (175) ಅವರ ಶತಕದ ನೆರವಿನಿಂದ ಜಮ್ಮು-ಕಾಶ್ಮೀರಕ್ಕೆ 302 ರನ್‌ಗಳ ಬೃಹತ್ ಗುರಿ ನೀಡಿತ್ತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಜಮ್ಮು-ಕಾಶ್ಮೀರ ತಂಡವು ಪ್ರಸಿದ್ಧ್ ಕೃಷ್ಣ ಅವರ ಮಾರಕ ದಾಳಿಗೆ ತತ್ತರಿಸಿತು. ಅದರಂತೆ ಮೊದಲು ಇನಿಂಗ್ಸ್ನಲ್ಲಿ ಕೇವಲ 93 ರನ್ಗಳಿಗೆ ಆಲೌಟ್ ಆಯಿತು. ಅದರಂತೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡವು 3 ವಿಕೆಟ್ ನಷ್ಟಕ್ಕೆ 298 ರನ್ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.
2ನೇ ಇನಿಂಗ್ಸ್ನಲ್ಲಿ ಮೊದಲ ಇನಿಂಗ್ಸ್ನ ಹಿನ್ನಡೆಯೊಂದಿಗೆ 508 ರನ್‌ಗಳ ಬೃಹತ್ ಟಾರ್ಗೆಟ್ ಪಡೆದ ಜಮ್ಮು-ಕಾಶ್ಮೀರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ನಾಯಕ ಇಯಾನ್ ದೇವ್ ಸಿಂಗ್ ಶತಕ ಸಿಡಿಸಿ 110 ರನ್ ಗಳಿಸಿದರೆ, ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಫಾಜಿಲ್ ರಶೀದ್ 65 ರನ್ ಗಳಿಸಿದರು. ಇವರಲ್ಲದೆ ಅಬ್ದುಲ್ ಸಮದ್ 70 ರನ್ ಮತ್ತು ಪರ್ವೇಜ್ ರಸೂಲ್ 46 ರನ್ ಗಳಿಸಿದರು. ಇದಾಗ್ಯೂ 390 ರನ್ಗಳಿಗೆ ಆಲೌಟ್ ಆಗುವ ಮೂಲಕ 117 ರನ್ಗಳಿಂದ ಸೋಲೊಪ್ಪಿಕೊಂಡಿತು.
ಕರ್ನಾಟಕ ಪರ ಪ್ರಸಿದ್ಧ್ ಕೃಷ್ಣ ಮೊದಲ ಇನಿಂಗ್ಸ್ನಲ್ಲಿ ಕೇವಲ 35 ರನ್ ನೀಡಿ 6 ವಿಕೆಟ್ ಪಡೆದರೆ, 2ನೇ ಇನಿಂಗ್ಸ್ನಲ್ಲಿ 59 ರನ್ ನೀಡಿ 4 ವಿಕೆಟ್ ಉರುಳಿಸಿದರು. ಇನ್ನು ಮೊದಲ ಇನಿಂಗ್ಸ್ನಲ್ಲಿ 175 ರನ್ ಬಾರಿಸಿದ್ದ ಕರುಣ್ ನಾಯರ್ 2ನೇ ಇನಿಂಗ್ಸ್ನಲ್ಲಿ 71 ರನ್ ಬಾರಿಸಿದರು. ಈ ಭರ್ಜರಿ ಬ್ಯಾಟಿಂಗ್ ಫಲವಾಗಿ ಕರುಣ್ ನಾಯರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
ಇನ್ನು ಕರ್ನಾಟಕ ತಂಡ ರೈಲ್ವೇಸ್ ವಿರುದ್ದ ಆಡಿದ ಮೊದಲ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿತು. ಇದೀಗ ಜಮ್ಮು-ಕಾಶ್ಮೀರ ವಿರುದ್ದ ಜಯ ಸಾಧಿಸುವ ಮೂಲಕ ರಣಜಿ ಸೀಸನ್ 2022 ರಲ್ಲಿ ಕರ್ನಾಟಕ ಮೊದಲ ಗೆಲುವು ದಾಖಲಿಸಿದೆ.
ಇದನ್ನೂ ಓದಿ: IPL 2022 format explained: 2 ಗುಂಪು, 70 ಪಂದ್ಯಗಳು: ಹೇಗಿರಲಿದೆ IPL 2022 ಟೂರ್ನಿ
ಇದನ್ನೂ ಓದಿ: ಐಪಿಎಲ್ ಆರಂಭಿಕ ಪಂದ್ಯಗಳಿಗೆ ಈ ಆಟಗಾರರು ಅಲಭ್ಯ
ಇದನ್ನೂ ಓದಿ: IPL 2022: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಶೇನ್ ವಾಟ್ಸನ್ ಎಂಟ್ರಿ..!
(Ranji Trophy: Karnataka beat Jammu Kashmir)