IND vs SL 3rd T20: ಮೂರನೇ ಟಿ20ಗೆ ರೋಹಿತ್ ಪಡೆಯಲ್ಲಿ ಫುಲ್ ಚೇಂಜ್: ಇಲ್ಲಿದೆ ಭಾರತದ ಸಂಭಾವ್ಯ ಪ್ಲೇಯಿಂಗ್ XI

IND vs SL 3rd T20: ಮೂರನೇ ಟಿ20ಗೆ ರೋಹಿತ್ ಪಡೆಯಲ್ಲಿ ಫುಲ್ ಚೇಂಜ್: ಇಲ್ಲಿದೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
India Playing XI vs SL 3rd T20

India Probable XI vs SL 3rd T20: ಮೂರನೇ ಟಿ20 ಕದನಕ್ಕೆ ಭಾರತ ತಂಡದ ಪ್ಲೇಯಿಂಗ್ ಇಲೆವೆನ್​ನಲ್ಲಿ ದೊಡ್ಡ ಬದಲಾವಣೆ ಖಚಿತ. ಇಶಾನ್ ಕಿಶನ್ ಇಂಜುರಿಗೆ ತುತ್ತಾಗಿದ್ದು ಇಂದಿನ ಪಂದ್ಯದಲ್ಲಿ ಕಣಕ್ಕಿಳಯುವುದು ಅನುಮಾನ. ಹೀಗಾಗಿ ರೋಹಿತ್ ಶರ್ಮಾ ಜೊತೆ ಮಯಾಂಕ್ ಅಗರ್ವಾಲ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ.

TV9kannada Web Team

| Edited By: Vinay Bhat

Feb 27, 2022 | 11:35 AM

ಇಂದು ಭಾರತ ಹಾಗೂ ಶ್ರೀಲಂಕಾ (India vs Sri Lanka) ನಡುವೆ ಅಂತಿಮ ಮೂರನೇ ಟಿ20 ಪಂದ್ಯ ಆಯೋಜನೆಯಾಗಿದೆ. ಈಗಾಗಲೇ ಮೊದಲ ಮತ್ತು ದ್ವಿತೀಯ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿ ಸರಣಿ ವಶಪಡಿಸಿಕೊಂಡು ದಾಖಲೆ ಬರೆದಿರುವ ಟೀಮ್ ಇಂಡಿಯಾ (Team India) ಇದೀಗ ಕ್ಲೀನ್​ಸ್ವೀಪ್​ನತ್ತ ಚಿತ್ತ ನೆಟ್ಟಿದೆ. ಒಂದು ದಿನದ ವಿರಾಮ ಕೂಡ ಇಲ್ಲದೆ ಇಂದು ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ಮತ್ತೊಂದು ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ದೊಡ್ಡ ಬದಲಾವಣೆ ನಿರೀಕ್ಷಿಸಲಾಗಿದೆ. ಯಾಕಂದ್ರೆ ದ್ವಿತೀಯ ಟಿ20 ಮುಗಿದ ಬಳಿಕ ಸ್ವತಃ ರೋಹಿತ್ ಶರ್ಮಾ (Rohit Sharma) ಅವರೇ ಇದರ ಬಗ್ಗೆ ಹಿಂಟ್ ನೀಡಿದ್ದರು. ಮೂರನೇ ಟಿ20ಗೆ ಬದಲಾವಣೆ ಇದೆಯೇ ಎಂಬ ಪ್ರಶ್ನೆಗೆ ಉತ್ತರ ನೀಡಿದ ರೋಹಿತ್, “ತಂಡದಲ್ಲಿ ಏನು ಬದಲಾವಣೆ ಮಾಡಬೇಕು ಎಂಬ ಬಗ್ಗೆ ಯೋಚಿಸುತ್ತೇವೆ. ನಾವು ಸರಣಿ ಗೆದ್ದಾಗ ಬೆಂಚ್ ಕಾದಿದ್ದ ಆಟಗಾರರಿಗೆ ಅವಕಾಶ ನೀಡಬೇಕು”, ಎಂದು ಹೇಳಿದ್ದರು.

ಹೀಗಾಗಿ ಮೂರನೇ ಟಿ20 ಕದನಕ್ಕೆ ಭಾರತ ತಂಡದ ಪ್ಲೇಯಿಂಗ್ ಇಲೆವೆನ್​ನಲ್ಲಿ ದೊಡ್ಡ ಬದಲಾವಣೆ ಖಚಿತ. ಇಶಾನ್ ಕಿಶನ್ ಇಂಜುರಿಗೆ ತುತ್ತಾಗಿದ್ದು ಇಂದಿನ ಪಂದ್ಯದಲ್ಲಿ ಕಣಕ್ಕಿಳಯುವುದು ಅನುಮಾನ. ಎರಡನೇ ಟಿ20 ಪಂದ್ಯ ನಡೆಯುವ ಸಂದರ್ಭ ಬ್ಯಾಟಿಂಗ್ ಮಾಡುವಾಗ ಬೌನ್ಸರ್ ಚೆಂಡು ಇವರ ತಲೆಗೆ ಬಡಿದ ಕಾರಣ ಪೆಟ್ಟಾಗಿದ್ದು ಹಿಮಾಚಲ ಪ್ರದೇಶದಲ್ಲಿರುವ ಆಸ್ಪತ್ರೆಗೆ ಸೇರಿಲಾಗಿದೆ ಎಂದು ವರದಿಯಾಗಿದೆ. ಈ ಬಗ್ಗೆ ಡಾ. ಶುಭ್ಮನ್ ಮಾಹಿತಿ ನೀಡಿದ್ದು, “ನಾನು ಭಾರತ ತಂಡದ ಜೊತೆ ಸಂಪರ್ಕದಲ್ಲಿದ್ದೇನೆ. ಇಶಾನ್ ಕಿಶನ್​ ತಲೆಗೆ ಗಾಯವಾಗಿರುವ ಕಾರಣ ಅವರನನ್ನು ಆಸ್ಪತ್ರೆಗೆ ಕರೆತರಲಾಗಿದೆ. ಅವರ ಸಿಟಿ ಸ್ಕ್ಯಾನ್ ನಡೆಸಲಾಗಿದ್ದು, ನಿಗಾಘಟಕದಲ್ಲಿ ಇರಿಸಲಾಗಿದೆ”, ಎಂದು ಹೇಳಿದ್ದಾರೆ.

ಕಿಶನ್ ಅಲಭ್ಯತೆ ಇರುವ ಕಾರಣ ಮೂರನೇ ಟಿ20 ಯಲ್ಲಿ ರೋಹಿತ್ ಶರ್ಮಾ ಜೊತೆ ಮಯಾಂಕ್ ಅಗರ್ವಾಲ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಮೂರನೇ ಕ್ರಮಾಂಕದಲ್ಲಿ ಭರ್ಜರಿ ಫಾರ್ಮ್​ನಲ್ಲಿರುವ ಶ್ರೇಯಸ್ ಅಯ್ಯರ್ ಆಡಲಿದ್ದಾರೆ. ಇವರು ಆಡಿದ ಎರಡೂ ಟಿ20 ಯಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಸಂಜು ಸ್ಯಾಮ್ಸನ್ ಕೂಡ ಬ್ಯಾಟಿಂಗ್​ನಲ್ಲಿ ಅಬ್ಬರಿಸಿದ್ದು 4ನೇ ಕ್ರಮಾಂಕದಲ್ಲಿ ಮತ್ತು ಐದನೇ ಸ್ಥಾನದಲ್ಲಿ ರವೀಂದ್ರ ಜಡೇಜಾ ಆಡಲಿದ್ದಾರೆ. ವಿಕೆಟ್ ಕೀಪರ್ ಜವಾಬ್ದಾರಿಯನ್ನು ಸಂಜು ನಿರ್ವಹಿಸಲಿದ್ದಾರೆ.

ವೆಂಕಟೇಶ್ ಅಯ್ಯರ್​ ಅಥವಾ ದೀಪಕ್ ಹೂಡ ಅವರನ್ನು ಈ ಪಂದ್ಯದಿಂದ ಕೈಬಿಡುವ ಸಾಧ್ಯತೆ ಇದೆ.  ಸಾಕಷ್ಟು ದುಬಾರಿಯಾದ ಹರ್ಷಲ್ ಪಟೇಲ್ ಜಾಗಕ್ಕೆ ಆವೇಶ್ ಖಾನ್ ಸೇರುವುದು ಬಹುತೇಕ ಖಚಿತ. ಸ್ಪಿನ್ನರ್ ಯುಜ್ವೇಂದ್ರ ಚಹಲ್ ಜಾಗದಲ್ಲಿ ರವಿ ಬಿಷ್ಟೋಯ್​ ಅಥವಾ ಕುಲ್ದೀಪ್ ಯಾದವ್​ಗೆ ಅವಕಾಶ ಸಿಗಬಹುದು. ಅಥವಾ ಇಬ್ಬರಿಗೂ ಅವಕಾಶ ಸಿಗಬಹುದು. ಮುಂದೆ ಟೆಸ್ಟ್ ಸರಣಿ ಇರುವ ಕಾರಣ ಜಸ್​ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಿ ಮೊಹಮ್ಮದ್ ಸಿರಾಜ್​ರನ್ನು ಆಡಿಸಿದರೆ ಅಚ್ಚರಿ ಪಡಬೇಕಿಲ್ಲ.

ಭಾರತದ ಸಂಭಾವ್ಯ ಪ್ಲೇಯಿಂಗ್ XI: ರೋಹಿತ್ ಶರ್ಮಾ (ನಾಯಕ), ಮಯಾಂಕ್ ಅಗರ್ವಾಲ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ವೆಂಕಟೇಶ್ ಅಯ್ಯರ್, ಭುವನೇಶ್ವರ್ ಕುಮಾರ್, ರವಿ ಬಿಷ್ಟೋಯ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆವೇಶ್ ಖಾನ್.

ಮೂರನೇ ಪಂದ್ಯ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ. ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಸಂಜೆ 7:00 ಗಂಟೆಗೆ ಶುರುವಾಗಲಿದೆ. 6:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್​ ನೆಟ್​ವರ್ಕ್​ನಲ್ಲಿ ನೇರಪ್ರಸಾರ ಕಾಣಲಿದೆ. ಆನ್​ಲೈನ್​ನಲ್ಲಾದರೆ ಡಿಸ್ನಿ+ ಹಾಟ್​ಸ್ಟಾರ್​ನಲ್ಲಿ ಲೈವ್ ಸ್ಟ್ರೀಮ್ ವೀಕ್ಷಿಸಬಹುದು.

Ishan Kishan Hospitalised: ಟೀಮ್ ಇಂಡಿಯಾಕ್ಕೆ ದೊಡ್ಡ ಆಘಾತ: ಇಶಾನ್ ಕಿಶನ್ ಆಸ್ಪತ್ರೆಗೆ ದಾಖಲು: ಏನಾಯ್ತು?, ಇಲ್ಲಿದೆ ಮಾಹಿತಿ

Rohit Sharma: ಸರಣಿ ಗೆದ್ದ ಖುಷಿಯಲ್ಲಿ ಮಹತ್ವದ ಮಾಹಿತಿ ಹೇಳಿಕೊಂಡ ರೋಹಿತ್ ಶರ್ಮಾ: ಏನಂದ್ರು ಕೇಳಿ

Follow us on

Related Stories

Most Read Stories

Click on your DTH Provider to Add TV9 Kannada