AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ishan Kishan Hospitalised: ಟೀಮ್ ಇಂಡಿಯಾಕ್ಕೆ ದೊಡ್ಡ ಆಘಾತ: ಇಶಾನ್ ಕಿಶನ್ ಆಸ್ಪತ್ರೆಗೆ ದಾಖಲು: ಏನಾಯ್ತು?, ಇಲ್ಲಿದೆ ಮಾಹಿತಿ

IND vs SL 2nd T20: ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಸರಣಿ ವಶಪಡಿಸಕೊಂಡ ಖುಷಿಯಲ್ಲಿದ್ದ ಭಾರತ ತಂಡಕ್ಕೆ ದೊಡ್ಡ ಆಘಾತ ಉಂಟಾಗಿದೆ. ತಂಡದ ಪ್ರಮುಕ ಬ್ಯಾಟ್ಸ್​ಮನ್, ವಿಕೆಟ್ ಕೀಪರ್ ಇಶಾನ್ ಕಿಶನ್ (Ishan Kishan) ಆಸ್ಪತ್ರೆಗೆ ದಾಖಲಾಗಿದ್ದಾರೆ.

Ishan Kishan Hospitalised: ಟೀಮ್ ಇಂಡಿಯಾಕ್ಕೆ ದೊಡ್ಡ ಆಘಾತ: ಇಶಾನ್ ಕಿಶನ್ ಆಸ್ಪತ್ರೆಗೆ ದಾಖಲು: ಏನಾಯ್ತು?, ಇಲ್ಲಿದೆ ಮಾಹಿತಿ
Ishan Kishan Hospitalised
TV9 Web
| Updated By: Vinay Bhat|

Updated on:Feb 27, 2022 | 10:58 AM

Share

ಧರ್ಮಶಾಲದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯ ಗೆದ್ದು ಸರಣಿ ವಶಪಡಿಸಿಕೊಂಡಿರುವ ಭಾರತಕ್ಕೆ (India vs Sri Lanka) ಇದೀಗ ದೊಡ್ಡ ಆಘಾತ ಉಂಟಾಗಿದೆ. ತಂಡದ ಪ್ರಮುಕ ಬ್ಯಾಟ್ಸ್​ಮನ್, ವಿಕೆಟ್ ಕೀಪರ್ ಇಶಾನ್ ಕಿಶನ್ (Ishan Kishan) ಆಸ್ಪತ್ರೆಗೆ ದಾಖಲಾಗಿದ್ದಾರೆ. ಎರಡನೇ ಟಿ20 ಪಂದ್ಯ ನಡೆಯುವ ಸಂದರ್ಭ ಬ್ಯಾಟಿಂಗ್ ಮಾಡುವಾಗ ಬೌನ್ಸರ್ ಚೆಂಡು ಇವರ ತಲೆಗೆ ಬಡಿದ ಕಾರಣ ಪೆಟ್ಟಾಗಿದ್ದು ಹಿಮಾಚಲ ಪ್ರದೇಶದಲ್ಲಿರುವ ಆಸ್ಪತ್ರೆಗೆ ಸೇರಿಲಾಗಿದೆ ಎಂದು ವರದಿಯಾಗಿದೆ. ಈ ಬಗ್ಗೆ ಡಾ. ಶುಭ್ಮನ್ ಮಾಹಿತಿ ನೀಡಿದ್ದು, “ನಾನು ಭಾರತ ತಂಡದ ಜೊತೆ ಸಂಪರ್ಕದಲ್ಲಿದ್ದೇನೆ. ಇಶಾನ್ ಕಿಶನ್​ ತಲೆಗೆ ಗಾಯವಾಗಿರುವ ಕಾರಣ ಅವರನನ್ನು ಆಸ್ಪತ್ರೆಗೆ ಕರೆತರಲಾಗಿದೆ. ಅವರ ಸಿಟಿ ಸ್ಕ್ಯಾನ್ ನಡೆಸಲಾಗಿದ್ದು, ನಿಗಾಘಟಕದಲ್ಲಿ ಇರಿಸಲಾಗಿದೆ”, ಎಂದು ಹೇಳಿದ್ದಾರೆ. ಭಾರತ (Team India) ಬ್ಯಾಟಿಂಗ್ ಇನ್ನಿಂಗ್ಸ್​ನ 3ನೇ ಓವರ್​ನಲ್ಲಿ ಈ ಘಟನೆ ಸಂಭವಿಸಿದೆ.

ಲಹಿರು ತಿರುಮನೆ ಅವರ ಬೌನ್ಸರ್ ಬಾಲ್ ಅನ್ನು ಸರಿಯಾಗಿ ಅರಿಯುವಲ್ಲಿ ವಿಫಲರಾದ ಕಿಶನ್ ಪುಲ್ ಮಾಡಲು ಎಡವಿದರು. ಪರಿಣಾಮ ರಭಸವಾದ ಚೆಂಡು ನೇರವಾಗಿ ಕಿಶನ್ ಅವರ ಹೆಲ್ಮೆಟ್​ಗೆ ಬಡಿದಿದೆ. ಆಗ ಇವರು 14 ರನ್ ಕಲೆಹಾಕಿದ್ದರು. ಚೆಂಡು ಹೆಲ್ಮೆಟ್​ಗೆ ಬಡಿದಾಗ ಒಂದು ಕ್ಷಣ ಅವರೇ ದಂಗಾಗಿ ಹೋದರು. ತಕ್ಷಣವೇ ಮೈದಾನದಕ್ಕೆ ಭಾರತದ ಫಿಸಿಯೋ ಬಂದು ಪರೀಕ್ಷೆ ನಡೆಸಿದರು. ಸ್ವಲ್ಪ ಸಮಯ ಬಿಟ್ಟು ಬ್ಯಾಟಿಂಗ್ ಮುಂದುವರೆಸಿದ ಕಿಶನ್ ಹೆಚ್ಚು ರನ್ ಗಳಿಸಲು ಸಾಧ್ಯವಾಗದೆ 16 ರನ್​ಗೆ ಕೀಪರ್​ಗೆ ಸುಲಭ ಕ್ಯಾಚಿತ್ತು ನಿರ್ಗಮಿಸಿದರು. ಔಟಾದ ಬಳಿಕ ಕಿಶನ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಭಾರತ ಈಗಾಗಲೇ ಇಂಜುರಿಯಿಂದಾಗಿ ದೀಪಕ್ ಚಹರ್, ರುತುರಾಜ್ ಗಾಯಕ್ವಾಡ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಲಭ್ಯತೆಯನ್ನು ಕಳೆದುಕೊಂಡಿದೆ. ಇದೀಗ ಕಿಶನ್ ಅವರು ಕೂಡ ಮೂರನೇ ಟಿ20ಯಲ್ಲಿ ಆಡುವುದು ಅನುಮಾನ. ಗಾಯಕ್ವಾಡ್ ಬದಲು ತಂಡಕ್ಕೆ ಸೇರಿಕೊಂಡಿರುವ ಮಯಾಂಕ್ ಅಗರ್ವಾಲ್ ಅಂತಿಮ ಟಿ20 ಯಲ್ಲಿ ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ.

ವೆಸ್ಟ್ ಇಂಡೀಸ್ ವಿರುದ್ಧ 3 ಪಂದ್ಯಗಳ ಏಕದಿನ ಹಾಗೂ ಟಿ20 ಸರಣಿಯಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದು ವೈಟ್ ವಾಷ್ ಸಾಧನೆ ಮಾಡಿದ್ದ ಟೀಮ್ ಇಂಡಿಯಾ ಇದೀಗ ಶ್ರೀಲಂಕಾ ವಿರುದ್ಧವೂ ಸಹ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದೆ. ಇನ್ನು ಒಂದು ಪಂದ್ಯ ಬಾಕಿ ಇರುವಂತೆಯೇ ರೋಹಿತ್ ಪಡೆ 2-0 ಅಂತರದಿಂದ ಸರಣಿ ಜಯಿಸಿದೆ. ಶನಿವಾರ ನಡೆದ ಎರಡನೇ ಟಿ20 ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ (74*ರನ್, 44 ಎಸೆತ, 6 ಬೌಂಡರಿ, 4 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಫಲವಾಗಿ ಭಾರತ ತಂಡ 7 ವಿಕೆಟ್‌ಗಳಿಂದ ಮಣಿಸಿತು. ಸಂಜು ಸ್ಯಾಮ್ಸನ್ (39 ರನ್, 25 ಎಸೆತ, 2 ಬೌಂಡರಿ, 3 ಸಿಕ್ಸರ್) ಹಾಗೂ ರವೀಂದ್ರ ಜಡೇಜಾ (45*ರನ್, 18 ಎಸೆತ, 7 ಬೌಂಡರಿ, 1 ಸಿಕ್ಸರ್) ಕೂಡ ಅಬ್ಬರಿಸುವ ಮೂಲಕ ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ರೋಹಿತ್ ಶರ್ಮ ಪೂರ್ಣ ಪ್ರಮಾಣದ ನಾಯಕತ್ವ ವಹಿಸಿಕೊಂಡ ಬಳಿಕ ಭಾರತಕ್ಕೆ ಇದು ಸತತ 3ನೇ ಟಿ20 ಸರಣಿ ಗೆಲುವಾಗಿದೆ. ಈ ಮೂಲಕ ಭಾರತ ಟಿ20 ಕ್ರಿಕೆಟ್‌ನಲ್ಲಿ ಸತತ 11ನೇ ಪಂದ್ಯ ಗೆಲುವು ದಾಖಲಿಸಿತು. ಇದಿಷ್ಟೆ ಅಲ್ಲದೆ ಪಾಕಿಸ್ತಾನ ಕ್ರಿಕೆಟ್​​ ತಂಡ ಟಿ20 ಯಲ್ಲಿ ಮಾಡಿರುವ ಸಾಧನೆ ಸಾಲಿಗೆ ಸೇರಿದೆ. ಟಿ20 ಕ್ರಿಕೆಟ್​​ನಲ್ಲಿ ಪಾಕ್​ ತಂಡ ಇಲ್ಲಿಯವರೆಗೆ 189 ಪಂದ್ಯಗಳಿಂದ 117 ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಿದ್ದು, 100ಕ್ಕೂ ಅಧಿಕ ಪಂದ್ಯಗಳಲ್ಲಿ ಜಯ ಸಾಧಿಸಿರುವ ಮೊದಲ ತಂಡವಾಗಿದೆ.

Rohit Sharma: ಸರಣಿ ಗೆದ್ದ ಖುಷಿಯಲ್ಲಿ ಮಹತ್ವದ ಮಾಹಿತಿ ಹೇಳಿಕೊಂಡ ರೋಹಿತ್ ಶರ್ಮಾ: ಏನಂದ್ರು ಕೇಳಿ

IND vs SL 2nd T20: ಭಾರತಕ್ಕೆ ದಾಖಲೆಯ 100ನೇ ಜಯ ತಂದಿಟ್ಟು ತಾನೂ ವಿಶ್ವ ದಾಖಲೆ ನಿರ್ಮಿಸಿದ ರೋಹಿತ್ ಶರ್ಮಾ

Published On - 10:01 am, Sun, 27 February 22

ಹೊಯ್ಸಳ ಡ್ರೈವರ್ ಜತೆ ಗೃಹಿಣಿ ಎಸ್ಕೇಪ್
ಹೊಯ್ಸಳ ಡ್ರೈವರ್ ಜತೆ ಗೃಹಿಣಿ ಎಸ್ಕೇಪ್
ಪರಮೇಶ್ವರ್ ಸಿಎಂ ಆಗಬೇಕು ಎಂದ ಸಚಿವ ವಿ ಸೋಮಣ್ಣ
ಪರಮೇಶ್ವರ್ ಸಿಎಂ ಆಗಬೇಕು ಎಂದ ಸಚಿವ ವಿ ಸೋಮಣ್ಣ
‘ಸ್ಟುಪಿಡ್’, ‘... ಎಲಿಮೆಂಟ್’: ರಜತ್ ವಿರುದ್ಧ ಅಶ್ವಿನಿ ಕೆಂಡಾಮಂಡಲ
‘ಸ್ಟುಪಿಡ್’, ‘... ಎಲಿಮೆಂಟ್’: ರಜತ್ ವಿರುದ್ಧ ಅಶ್ವಿನಿ ಕೆಂಡಾಮಂಡಲ
ತಿರುವನಂತಪುರಂ ಕಾರ್ಪೊರೇಷನ್‌ ಫಲಿತಾಂಶದ ಬಳಿಕ ಬಿಜೆಪಿ ಕಾರ್ಯಕರ್ತರ ಸಂಭ್ರಮ
ತಿರುವನಂತಪುರಂ ಕಾರ್ಪೊರೇಷನ್‌ ಫಲಿತಾಂಶದ ಬಳಿಕ ಬಿಜೆಪಿ ಕಾರ್ಯಕರ್ತರ ಸಂಭ್ರಮ
ಜ 6ರಂದು ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ಶಾಸಕ ಇಕ್ಬಾಲ್ ಹುಸೇನ್
ಜ 6ರಂದು ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ಶಾಸಕ ಇಕ್ಬಾಲ್ ಹುಸೇನ್
ವೋಟ್ ಚೋರಿ ವಿರೋಧಿಸಿ ರಾಹುಲ್​​ ಗಾಂಧಿ ಪ್ರತಿಭಟನೆ: ಜೋಶಿ ಏನಂದ್ರು ನೋಡಿ
ವೋಟ್ ಚೋರಿ ವಿರೋಧಿಸಿ ರಾಹುಲ್​​ ಗಾಂಧಿ ಪ್ರತಿಭಟನೆ: ಜೋಶಿ ಏನಂದ್ರು ನೋಡಿ
ದುಡ್ಡಿಲ್ಲವೆಂದು ಖಾಲಿ ಇರುವ 2 ಲಕ್ಷ ಹುದ್ದೆಗಳನ್ನ ಭರ್ತಿ ಮಾಡ್ತಿಲ್ಲ: ಜೋಶಿ
ದುಡ್ಡಿಲ್ಲವೆಂದು ಖಾಲಿ ಇರುವ 2 ಲಕ್ಷ ಹುದ್ದೆಗಳನ್ನ ಭರ್ತಿ ಮಾಡ್ತಿಲ್ಲ: ಜೋಶಿ
ಜಡ್ಜ್ ಮಹಾಭಿಯೋಗಕ್ಕೆ ಸಹಿ ಹಾಕಿದ ಕಾಂಗ್ರೆಸ್ ಸಂಸದರು: ಜೋಶಿ ಏನಂದ್ರು ನೋಡಿ
ಜಡ್ಜ್ ಮಹಾಭಿಯೋಗಕ್ಕೆ ಸಹಿ ಹಾಕಿದ ಕಾಂಗ್ರೆಸ್ ಸಂಸದರು: ಜೋಶಿ ಏನಂದ್ರು ನೋಡಿ
‘ಗೌರಿ’ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್​; ಆಗಸದಲ್ಲೇ ಮದುವೆ
‘ಗೌರಿ’ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್​; ಆಗಸದಲ್ಲೇ ಮದುವೆ
ಸರಿ ನಿರ್ಧಾರ ಯಾವುದು? ತಪ್ಪು ಯಾವುದು? ಪಂಚಾಯ್ತಿ ವಿಷಯ ಹೇಳಿದ ಸುದೀಪ್
ಸರಿ ನಿರ್ಧಾರ ಯಾವುದು? ತಪ್ಪು ಯಾವುದು? ಪಂಚಾಯ್ತಿ ವಿಷಯ ಹೇಳಿದ ಸುದೀಪ್