ವಿಮಾನದಲ್ಲಿ ಟೀಮ್ ಇಂಡಿಯಾ ಆಟಗಾರರ ಸಂಭ್ರಮ ಹೇಗಿತ್ತು? ಇಲ್ಲಿದೆ ವಿಡಿಯೋ

|

Updated on: Jul 04, 2024 | 11:47 AM

T20 World Cup 2024: ಶನಿವಾರ ನಡೆದ ಟಿ20 ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವನ್ನು ಭಾರತ 7 ರನ್​ಗಳಿಂದ ಸೋಲಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 176 ರನ್​ಗಳಿಸಿದರೆ, ಸೌತ್ ಆಫ್ರಿಕಾ 169 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಟೀಮ್ ಇಂಡಿಯಾ ಏಳು ರನ್​ಗಳ ಜಯ ಸಾಧಿಸಿ ಇದೀಗ ಟಿ20 ವಿಶ್ವಕಪ್​ನೊಂದಿಗೆ ಭಾರತಕ್ಕೆ ಮರಳಿದೆ.

ಟಿ20 ವಿಶ್ವಕಪ್​ನಲ್ಲಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತ ತಂಡ (Team India) ಕೊನೆಗೂ ತಾಯ್ನಾಡಿಗೆ ಮರಳಿದೆ. ಶನಿವಾರ ನಡೆದ ಫೈನಲ್ ಪಂದ್ಯದ ಮುಕ್ತಾಯದ ಬಳಿಕ ಬಾರ್ಬಡೋಸ್​ನಲ್ಲಿ ಉಳಿದಿದ್ದ ಟೀಮ್ ಇಂಡಿಯಾ ಬುಧವಾರ ಭಾರತಕ್ಕೆ ಹಿಂತಿರುಗಿತ್ತು. ಅದರಂತೆ 16 ಗಂಟೆಗಳ ದೀರ್ಘ ಪ್ರಯಾಣದ ಬಳಿಕ ಭಾರತೀಯ ಆಟಗಾರರು ದೆಹಲಿಗೆ ಬಂದಿಳಿದಿದ್ದಾರೆ. ಈ ಪ್ರಯಾಣದ ನಡುವೆ ಟೀಮ್ ಇಂಡಿಯಾ ಆಟಗಾರರ ಸಂಭ್ರಮದ ವಿಡಿಯೋವನ್ನು ಬಿಸಿಸಿಐ ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.

ಇದೊಂದು ಅದ್ಭುತ ಅನುಭವ, ಇದಕ್ಕಾಗಿ ಸಾಕಷ್ಟು ಶ್ರಮಪಟ್ಟಿದ್ದೇವೆ. ಇದೀಗ ಟ್ರೋಫಿ ಕೈ ಸೇರಿದೆ. ನಾನು ನಿಜಕ್ಕೂ ಅದೃಷ್ಟವಂತ ಎಂದು ಈ ವಿಡಿಯೋದಲ್ಲಿ ಮೊಹಮ್ಮದ್ ಸಿರಾಜ್ ಹೇಳಿಕೊಂಡಿದ್ದಾರೆ. ಇದೇ ವೇಳೆ ಮಾತನಾಡಿದ ಯುಜ್ವೇಂದ್ರ ಚಹಲ್, ಈ ಅನುಭವವನ್ನು ವರ್ಣಿಸಲು ಅಸಾಧ್ಯ. ನಾನು ತುಂಬಾ ಲಕ್ಕಿ ಎಂದು ಭಾವಿಸುವೆ ಎಂದರು.

ಇದೇ ವೇಳೆ ಟೀಮ್ ಇಂಡಿಯಾ ಆಟಗಾರರು ಟ್ರೋಫಿಯೊಂದಿಗೆ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಹಾಗೆಯೇ ಟೀಮ್ ಇಂಡಿಯಾ ಸಿಬ್ಬಂದಿಗಳು ಜೆರ್ಸಿ ಮೇಲೆ ಆಟಗಾರರ ಸಹಿ ಪಡೆಯುತ್ತಿರುವುದನ್ನು ಸಹ ಕಾಣಬಹುದು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆ ಪಡೆದುಕೊಂಡಿದೆ.

 

Published on: Jul 04, 2024 11:43 AM