ಶಮಿಯನ್ನು ಹಿಂದಿಕ್ಕಿ ತಿಂಗಳ ಆಟಗಾರ ಪ್ರಶಸ್ತಿ ಪಡೆದ ಟ್ರಾವಿಸ್ ಹೆಡ್

| Updated By: ಝಾಹಿರ್ ಯೂಸುಫ್

Updated on: Dec 11, 2023 | 2:23 PM

Travis Head: ಏಕದಿನ ವಿಶ್ವಕಪ್​ನ ಸೆಮಿಫೈನಲ್​ನಲ್ಲಿ ಸೌತ್ ಆಫ್ರಿಕಾ ವಿರುದ್ಧ 62 ರನ್ ಬಾರಿಸುವ ಮೂಲಕ ಟ್ರಾವಿಸ್ ಹೆಡ್ ಆಸ್ಟ್ರೇಲಿಯಾ ತಂಡಕ್ಕೆ ಜಯ ತಂದುಕೊಟ್ಟಿದ್ದರು. ಅಷ್ಟೇ ಅಲ್ಲದೆ ಫೈನಲ್ ಪಂದ್ಯದಲ್ಲಿ ಬಲಿಷ್ಠ ಟೀಮ್ ಇಂಡಿಯಾ ಬೌಲರ್​ಗಳ ವಿರುದ್ಧ 120 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 15 ಫೋರ್​ಗಳೊಂದಿಗೆ 137 ರನ್ ಬಾರಿಸಿದ್ದರು.

ಶಮಿಯನ್ನು ಹಿಂದಿಕ್ಕಿ ತಿಂಗಳ ಆಟಗಾರ ಪ್ರಶಸ್ತಿ ಪಡೆದ ಟ್ರಾವಿಸ್ ಹೆಡ್
Shami-Head-Maxi
Follow us on

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪ್ರಕಟಿಸಿರುವ ನವೆಂಬರ್ ತಿಂಗಳ ಅತ್ಯುತ್ತಮ ಆಟಗಾರನ ಪ್ರಶಸ್ತಿಯು ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ (Travis Head) ಪಾಲಾಗಿದೆ. ಈ ಬಾರಿಯ ಏಕದಿನ ವಿಶ್ವಕಪ್​ನ ಸೆಮಿಫೈನಲ್​ ಹಾಗೂ ಫೈನಲ್​ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಹೆಡ್ ಚೊಚ್ಚಲ ಬಾರಿಗೆ ಐಸಿಸಿಯ ಪ್ಲೇಯರ್ ಆಫ್​ ದಿ ಮಂತ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನವೆಂಬರ್ ತಿಂಗಳ ಅತ್ಯುತ್ತಮ ಆಟಗಾರರ ಪ್ರಶಸ್ತಿಗೆ ಮೂವರು ಕ್ರಿಕೆಟಿಗರು ನಾಮನಿರ್ದೇಶಿತರಾಗಿದ್ದರು. ಈ ಪಟ್ಟಿಯಲ್ಲಿ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ, ಆಸ್ಟ್ರೇಲಿಯಾ ಆಲ್​ರೌಂಡರ್ ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ ಎಡಗೈ ದಾಂಡಿಗ ಟ್ರಾವಿಸ್ ಹೆಡ್ ಕಾಣಿಸಿಕೊಂಡಿದ್ದರು.

ಆದರೆ ಏಕದಿನ ವಿಶ್ವಕಪ್​ನಲ್ಲಿ 24 ವಿಕೆಟ್​ಗಳನ್ನು ಪಡೆದ ಮೊಹಮ್ಮದ್ ಶಮಿಯನ್ನು ಹಿಂದಿಕ್ಕಿ ನವೆಂಬರ್ ತಿಂಗಳ ಆಟಗಾರ ಪ್ರಶಸ್ತಿ ಪಡೆಯುವಲ್ಲಿ ಟ್ರಾವಿಸ್ ಹೆಡ್ ಯಶಸ್ವಿಯಾಗಿದ್ದಾರೆ. ಟ್ರಾವಿಸ್ ಹೆಡ್ ಅವರಿಗೆ ಈ ಪ್ರಶಸ್ತಿ ಒಲಿಯಲು ಮುಖ್ಯ ಕಾರಣ ನಿರ್ಣಾಯಕ ಪಂದ್ಯಗಳಲ್ಲಿನ ಅವರ ಪ್ರದರ್ಶನ ಎನ್ನಬಹುದು.

ಏಕೆಂದರೆ ಏಕದಿನ ವಿಶ್ವಕಪ್​ನ ಸೆಮಿಫೈನಲ್​ನಲ್ಲಿ ಸೌತ್ ಆಫ್ರಿಕಾ ವಿರುದ್ಧ 62 ರನ್ ಬಾರಿಸುವ ಮೂಲಕ ಟ್ರಾವಿಸ್ ಹೆಡ್ ಆಸ್ಟ್ರೇಲಿಯಾ ತಂಡಕ್ಕೆ ಜಯ ತಂದುಕೊಟ್ಟಿದ್ದರು. ಅಷ್ಟೇ ಅಲ್ಲದೆ ಫೈನಲ್ ಪಂದ್ಯದಲ್ಲಿ ಬಲಿಷ್ಠ ಟೀಮ್ ಇಂಡಿಯಾ ಬೌಲರ್​ಗಳ ವಿರುದ್ಧ 120 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 15 ಫೋರ್​ಗಳೊಂದಿಗೆ 137 ರನ್ ಬಾರಿಸಿದ್ದರು. ಈ ಮೂಲಕ ಆಸ್ಟ್ರೇಲಿಯಾ ತಂಡ ಚಾಂಪಿಯನ್ ಪಟ್ಟಕ್ಕೇರಲು ಪ್ರಮುಖ ಕಾರಣರಾಗಿದ್ದರು.

ಈ ಅದ್ಭುತ ಪ್ರದರ್ಶನಗಳ ಫಲವಾಗಿ ಇದೀಗ ಆಸ್ಟ್ರೇಲಿಯಾ ತಂಡದ ಎಡಗೈ ದಾಂಡಿಗ ಟ್ರಾವಿಸ್ ಹೆಡ್ ನವೆಂಬರ್ ತಿಂಗಳ ಅತ್ಯುತ್ತಮ ಆಟಗಾರ ಎಂಬ ಐಸಿಸಿಯ ಗೌರವಕ್ಕೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: RCB ತಂಡದ ಅತ್ಯಂತ ಕೆಟ್ಟ ಆಯ್ಕೆಗಳಾವುವು ಗೊತ್ತಾ?

ಬಾಂಗ್ಲಾ ಆಟಗಾರ್ತಿಗೆ ಚೊಚ್ಚಲ ಪ್ರಶಸ್ತಿ:

ಬಾಂಗ್ಲಾದೇಶದ ಎಡಗೈ ಸ್ಪಿನ್ನರ್ ನಹಿದಾ ಅಕ್ಟರ್ ಅವರನ್ನು ನವೆಂಬರ್ ತಿಂಗಳ ಐಸಿಸಿ ಮಹಿಳಾ ತಿಂಗಳ ಆಟಗಾರ್ತಿ ಎಂದು ಘೋಷಿಸಿದೆ. ಇದರೊಂದಿಗೆ ಈ ಪ್ರಶಸ್ತಿಯನ್ನು ಗೆದ್ದ ಬಾಂಗ್ಲಾದೇಶದ ಮೊದಲ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆ ಪಾತ್ರರಾದರು.