ಒಂದು ಮ್ಯಾಚ್ ಹೋಯಿತು…ಟೀಮ್ ಇಂಡಿಯಾ ಮುಂದಿರುವುದು ಕೇವಲ 5 ಪಂದ್ಯ..!

Team India: ಅಫ್ಘಾನಿಸ್ತಾನ್ ವಿರುದ್ಧದ ಸರಣಿಯ ಬೆನ್ನಲ್ಲೇ ಭಾರತ ತಂಡವು ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಇದಾದ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾಗಲಿದೆ. ಮಾರ್ಚ್ ಅಂತ್ಯದ ವೇಳೆಗೆ ಐಪಿಎಲ್​ ಆರಂಭವಾಗಲಿದ್ದು, ಮೇ ತಿಂಗಳಾಂತ್ಯಕ್ಕೆ ಮುಗಿಯುವ ಸಾಧ್ಯತೆಯಿದೆ.

ಒಂದು ಮ್ಯಾಚ್ ಹೋಯಿತು...ಟೀಮ್ ಇಂಡಿಯಾ ಮುಂದಿರುವುದು ಕೇವಲ 5 ಪಂದ್ಯ..!
Team India
Follow us
TV9 Web
| Updated By: ಝಾಹಿರ್ ಯೂಸುಫ್

Updated on:Dec 11, 2023 | 3:14 PM

ಟಿ20 ವಿಶ್ವಕಪ್ (T20 World Cup 2024)​ ಆರಂಭಕ್ಕೆ ಇನ್ನು ಉಳಿದಿರುವುದು ಕೇವಲ ತಿಂಗಳುಗಳು ಮಾತ್ರ. ಆದರೆ ಈ ತಿಂಗಳುಗಳ ಅಂತರದಲ್ಲಿ ಟೀಮ್ ಇಂಡಿಯಾ ಮುಂದಿರುವುದು ಕೇವಲ 5 ಪಂದ್ಯಗಳು ಮಾತ್ರ. ಅಚ್ಚರಿ ಎನಿಸಿದರೂ ಇದು ಸತ್ಯ. ಟಿ20 ವಿಶ್ವಕಪ್​ಗೂ ಮುನ್ನ ಟೀಮ್ ಇಂಡಿಯಾ ಕೇವಲ 6 ಪಂದ್ಯಗಳನ್ನಾಡಲು ಮಾತ್ರ ವೇಳಾಪಟ್ಟಿ ರೂಪಿಸಿಕೊಂಡಿದೆ.

ಅದರಂತೆ ಸೌತ್ ಆಫ್ರಿಕಾ ವಿರುದ್ಧ 3 ಪಂದ್ಯಗಳು ಹಾಗೂ ಅಫ್ಘಾನಿಸ್ತಾನ್ ವಿರುದ್ಧ 3 ಪಂದ್ಯಗಳ ಟಿ20 ಸರಣಿ ಆಡಲಿದೆ. ಆದರೆ ಇದೀಗ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯವು ಮಳೆಗೆ ಅಹುತಿಯಾಗಿದೆ. ಇನ್ನುಳಿದಿರುವುದು ಕೇವಲ 5 ಮ್ಯಾಚ್​ಗಳು ಮಾತ್ರ.

ಟಿ20 ವಿಶ್ವಕಪ್​ ಜೂನ್ 4 ರಿಂದ ಶುರುವಾಗಲಿದ್ದು, ಅದಕ್ಕೂ ಮುನ್ನ ಭಾರತ ತಂಡವು ಏಕದಿನ ಹಾಗೂ ಟೆಸ್ಟ್ ಸರಣಿಗಳಿಗೆ ವೇಳಾಪಟ್ಟಿಯನ್ನು ರೂಪಿಸಿಕೊಂಡಿರುವುದು ಇದೀಗ ಅಚ್ಚರಿಗೆ ಕಾರಣವಾಗಿದೆ. ಏಕೆಂದರೆ ಚುಟುಕು ಕ್ರಿಕೆಟ್ ಸಮರಕ್ಕೂ ಮುನ್ನ ಭಾರತ ತಂಡವು ಎಲ್ಲಾ ರೀತಿಯಲ್ಲೂ ತಯಾರಿಯಾಗಬೇಕಿದೆ. ಆದರೆ ಇತ್ತ ಬಿಸಿಸಿಐ ಸೌತ್ ಆಫ್ರಿಕಾವನ್ನು ಹೊರತುಪಡಿಸಿ ಅಫ್ಘಾನಿಸ್ತಾನ್ ವಿರುದ್ಧ ಟಿ20 ಸರಣಿ ಆಯೋಜಿಸಿದೆ.

ಸೌತ್ ಆಫ್ರಿಕಾ ವಿರುದ್ಧದ ಸರಣಿಯ ಮುಕ್ತಾಯದ ಬೆನ್ನಲ್ಲೇ ಅಫ್ಘಾನಿಸ್ತಾನ್ ವಿರುದ್ಧ ಟಿ20 ಪಂದ್ಯಗಳನ್ನಾಡಲಿದೆ. ಆದರೆ ಈ ವೇಳೆ ಭಾರತ ತಂಡದಲ್ಲಿರುವ ಪ್ರಮುಖ ಆಟಗಾರರು ವಿಶ್ರಾಂತಿ ಪಡೆಯುವ ಸಾಧ್ಯತೆ ಹೆಚ್ಚು.

ಇನ್ನು ಅಫ್ಘಾನಿಸ್ತಾನ್ ವಿರುದ್ಧದ ಸರಣಿಯ ಬೆನ್ನಲ್ಲೇ ಭಾರತ ತಂಡವು ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಇದಾದ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾಗಲಿದೆ. ಮಾರ್ಚ್ ಅಂತ್ಯದ ವೇಳೆಗೆ ಐಪಿಎಲ್​ ಆರಂಭವಾಗಲಿದ್ದು, ಮೇ ತಿಂಗಳಾಂತ್ಯಕ್ಕೆ ಮುಗಿಯುವ ಸಾಧ್ಯತೆಯಿದೆ. ಅಂದರೆ ಐಪಿಎಲ್​ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ಟಿ20 ವಿಶ್ವಕಪ್​ಗಾಗಿ ತೆರಳಲಿದೆ.

ಒಟ್ಟಿನಲ್ಲಿ ಪ್ರಮುಖ ಟೂರ್ನಿಗೂ ಮುನ್ನ ಬಿಸಿಸಿಐ ನಿಗದಿಪಡಿಸಿರುವ ವೇಳಾಪಟ್ಟಿಯು ಇದೀಗ ಚರ್ಚೆಗೆ ಗ್ರಾಸವಾಗಿದ್ದು, ಇದಾಗ್ಯೂ ಈ ಬಾರಿ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆಲ್ಲಲಿದೆಯಾ ಕಾದು ನೋಡಬೇಕಿದೆ.

ಭಾರತ-ಸೌತ್ ಆಫ್ರಿಕಾ ಟಿ20 ಸರಣಿ ವೇಳಾಪಟ್ಟಿ:

  1. ಡಿಸೆಂಬರ್ 12- ಎರಡನೇ ಟಿ20 ಪಂದ್ಯ (ಗೆಬರ್ಹ)
  2. ಡಿಸೆಂಬರ್ 14- ಮೂರನೇ ಟಿ20 ಪಂದ್ಯ (ಜೋಹಾನ್ಸ್​ಬರ್ಗ್​)

ಭಾರತ-ಅಫ್ಘಾನಿಸ್ತಾನ್ 20 ಸರಣಿ ವೇಳಾಪಟ್ಟಿ:

  1. ಜನವರಿ 11- ಮೊದಲ ಟಿ20 ಪಂದ್ಯ
  2. ಜನವರಿ 14- ಎರಡನೇ ಟಿ20 ಪಂದ್ಯ
  3. ಜನವರಿ 17- ಮೂರನೇ ಟಿ20 ಪಂದ್ಯ

ಇದನ್ನೂ ಓದಿ: IPL 2024: RCB ಎಷ್ಟು ಆಟಗಾರರನ್ನು ಖರೀದಿಸಬಹುದು?

ಅಫ್ಘಾನಿಸ್ತಾನ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವು ಪಂಜಾಬ್​ ಕ್ರಿಕೆಟ್​ ಅಸೋಷಿಯೇಷನ್​ ಸ್ಟೇಡಿಯಂನಲ್ಲಿ ನಡೆದರೆ, 2ನೇ ಪಂದ್ಯಕ್ಕೆ ಮಧ್ಯಪ್ರದೇಶದ ಹೋಲ್ಕರ್ ಸ್ಟೇಡಿಯಂ ಆತಿಥ್ಯವಹಿಸಲಿದೆ. ಇನ್ನು ಮೂರನೇ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ.

Published On - 3:14 pm, Mon, 11 December 23