IPL​ನಲ್ಲಿ ಆರ್​ಸಿಬಿ ವಿಫಲ, ಹೆಚ್ಚು ರನ್​ಗಳಿಸಿದ್ದು ವಿದೇಶಿ ಆಟಗಾರ

ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ತಂಡವನ್ನ ಮಣಿಸಿ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಆದ್ರೆ ಈ ವರ್ಷದ ಐಪಿಎಲ್ ಟೂರ್ನಿ ಹತ್ತು ಹಲವು ವಿಶೇಷತೆಗಳಿಂದ ಕೂಡಿತ್ತು. ಅದ್ರಲ್ಲೂ ಮುಂಬೈ ಮತ್ತು ಚೆನ್ನೈ ನಡುವಿನ ಫೈನಲ್ ಪಂದ್ಯ ರಣರೋಚಕವಾಗಿತ್ತು. ಇನ್ನೇನು ಚೆನ್ನೈ ಗೆಲ್ಲುತ್ತೆ ಅನ್ನೋವಾಗಲೇ ಧೋನಿ ರನೌಟ್ ಆಗಿದ್ದು, ಮುಂಬೈ ಗೆಲುವಿಗೆ ಸೋಪಾನವಾಯ್ತು. ಇದರೊಂದಿಗೆ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್​ನಲ್ಲಿ ನಾಲ್ಕನೇ ಬಾರಿಗೆ ಚಾಂಪಿಯನ್ ಆದ ಸಾಧನೆಯನ್ನ ಮಾಡಿತು. ಐಪಿಎಲ್‌ ಕಪ್ […]

IPL​ನಲ್ಲಿ ಆರ್​ಸಿಬಿ ವಿಫಲ, ಹೆಚ್ಚು ರನ್​ಗಳಿಸಿದ್ದು ವಿದೇಶಿ ಆಟಗಾರ
Follow us
ಸಾಧು ಶ್ರೀನಾಥ್​
|

Updated on:Nov 18, 2020 | 11:56 PM

ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ತಂಡವನ್ನ ಮಣಿಸಿ ಚಾಂಪಿಯನ್ ಆಗಿ ಹೊರ ಹೊಮ್ಮಿತು.

ಆದ್ರೆ ಈ ವರ್ಷದ ಐಪಿಎಲ್ ಟೂರ್ನಿ ಹತ್ತು ಹಲವು ವಿಶೇಷತೆಗಳಿಂದ ಕೂಡಿತ್ತು. ಅದ್ರಲ್ಲೂ ಮುಂಬೈ ಮತ್ತು ಚೆನ್ನೈ ನಡುವಿನ ಫೈನಲ್ ಪಂದ್ಯ ರಣರೋಚಕವಾಗಿತ್ತು. ಇನ್ನೇನು ಚೆನ್ನೈ ಗೆಲ್ಲುತ್ತೆ ಅನ್ನೋವಾಗಲೇ ಧೋನಿ ರನೌಟ್ ಆಗಿದ್ದು, ಮುಂಬೈ ಗೆಲುವಿಗೆ ಸೋಪಾನವಾಯ್ತು. ಇದರೊಂದಿಗೆ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್​ನಲ್ಲಿ ನಾಲ್ಕನೇ ಬಾರಿಗೆ ಚಾಂಪಿಯನ್ ಆದ ಸಾಧನೆಯನ್ನ ಮಾಡಿತು.

ಐಪಿಎಲ್‌ ಕಪ್ ಗೆಲ್ಲಲ್ಲೇ ಇಲ್ಲ ಕೊಹ್ಲಿಯ ಆರ್‌ಸಿಬಿ ಹುಡುಗ್ರು! ಪ್ರತಿ ಸೀಸನ್​ನಂತೆ ಈ ಸೀಸನ್​ನಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು, ಈ ಸಲ ಕಪ್ ನಮ್ದೇ ಅನ್ನೋ ಕೂಗು ಶುರುವಿಟ್ಕೊಂಡಿದ್ರು. ಕ್ಯಾಪ್ಟನ್ ಕೊಹ್ಲಿಯೂ ಈ ಸಲ ಕಪ್ ನಮ್ದೇ ಅಂತಾ ಕನ್ನಡದಲ್ಲೇ ಹೇಳಿ ಅಭಿಮಾನಿಗಳ ಆಸೆಗೆ ಕಿಚ್ಚು ಹತ್ತಿಸಿದ್ರು.

ಕ್ಯಾಪ್ಟನ್ ಕೊಹ್ಲಿಯೇ ಹೀಗೆ ಹೇಳಿರುವಾಗ ಅಭಿಮಾನಿಗಳು ಸುಮ್ಮನಿರ್ತಾರಾ. ಹೋದಲ್ಲಿ ಬಂದಲ್ಲಿ ಈ ಸಲ ಕಪ್ ನಮ್ದೇ ಅಂತಾ ಕೂಗೋಕೆ ಶುರುಮಾಡಿದ್ರು. ಆದ್ರೆ ಈ ಬಾರಿಯೂ ಆರ್​ಸಿಬಿ ಮತ್ತದೇ ಹಳೆ ಚಾಳಿಯನ್ನ ಮುಂದುವರಿಸಿತು. ಸೋಲಿನ ಸರಮಾಲೆಯನ್ನೇ ಧರಿಸಿ ಅಭಿಮಾನಿಗಳ ನಂಬಿಕೆಯನ್ನ ಹುಸಿ ಮಾಡಿತು.

ಐಪಿಎಲ್​ನಲ್ಲಿ ಕೋಪದ ಮುಖ ತೋರಿಸಿದ ಮಹೇಂದ್ರ: ಈ ಸೀಸನ್​ನ ಐಪಿಎಲ್​ನಲ್ಲಿ ಮಹೇಂದ್ರ ಸಿಂಗ್ ಧೋನಿಯ ಕೋಪದ ಮುಖ ಅನಾವರಣಗೊಂಡಿದ್ದು ಅಭಿಮಾನಿಗಳ ಅಚ್ಚರಿಗೆ ಕಾರಣವಾಯ್ತು. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಅಂಪೈರ್ ಕೆಟ್ಟ ತೀರ್ಪಿಗೆ ಸಿಟ್ಟಿಗೆದ್ದು ಪೆವಿಲಿಯನ್​ನಿಂದ ಮೈದಾನಕ್ಕೆ ರಭಸವಾಗಿ ಬಂದು ಬಿಡ್ತಾರೆ.

ಭಾರತದ ಅಂಪೈರ್ ಉಲ್ಲಾಸ್ ಮೊದಲು ನೋ ಬಾಲ್ ಹೇಳಿ, ನಂತರ ಉಲ್ಟಾ ಹೊಡೆದಿದ್ದು ಧೋನಿಯನ್ನ ಧಗಧಗ ಉರಿಯುವಂತೆ ಮಾಡಿರುತ್ತೆ. ಮೊದ್ಲು ಕನಿಷ್ಠ ಕ್ರಿಕೆಟ್ ವಿದ್ಯೆಗಳನ್ನ ತಿಳಿದುಕೊಳ್ಳಿ ಎಂದು ಅಂಪೈರ್​ಗೆ ಹೇಳಿ ಧೋನಿ ಕೋಪದಿಂದ್ಲೇ ಮತ್ತೆ ಗ್ಯಾಲರಿಯತ್ತ ಹೆಜ್ಜೆಹಾಕ್ತಾರೆ.

ಆವತ್ತು ಧೋನಿ ಕೋಪ ಕಂಡ ಅಭಿಮಾನಿಗಳು ಬೆಚ್ಚಿ ಬಿದ್ದಿದ್ರು. ಸದಾ ಶಾಂತವಾಗಿರೊ ನಮ್ಮ ಮಹೇಂದ್ರನಿಗೆ ಈ ಪಾಟಿಯೂ ಕೋಪ ಬರುತ್ತಾ ಅಂತಾ ಹೌಹಾರಿದ್ರು. ಅಷ್ಟರ ಮಟ್ಟಿಗೆ ಧೋನಿಯ ಕೋಪಾಗ್ನಿ ಆನ್​ಪೀಲ್ಡ್ ಅಂಪೈರ್​ಗಳನ್ನ ಬೆಚ್ಚಿ ಬೀಳಿಸಿತ್ತು.

ಅಂಪೈರ್ ವಿರುದ್ಧ ಆನ್​ಫೀಲ್ಡ್​ನಲ್ಲಿ ಕಿಡಿಕಿಡಿ ಕೆಂಡಕಾರಿದ ಚೆನ್ನೈ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಗೆ ಬಿಸಿಸಿಐ ದಂಡ ಹೇರಿದೆ. ಜೈಪುರ ಪಂದ್ಯದ ಶೇಕಡಾ 50ರಷ್ಟು ಮೊತ್ತವನ್ನ ಭರಿಸುವಂತೆ ಧೋನಿಗೆ ಸೂಚಿಸಿರುವ ಬಿಸಿಸಿಐ ಮತ್ತೆ ಈ ರೀತಿ ವರ್ತಿಸದಂತೆ ವಾರ್ನಿಂಗ್ ಮಾಡಿತ್ತು.

ರಸ್ಸೆಲ್ ಮೇನಿಯಾಕ್ಕೆ ನಿಬ್ಬೆರಗಾಗಿತ್ತು ಕ್ರಿಕ್ರೆಟ್ ಜಗತ್ತು! ಇನ್ನು ಈ ಸೀಸನ್​ನ ಬ್ಯಾಟಿಂಗ್​ನಲ್ಲಿ ಸುನಾಮಿ ಎಬ್ಬಿಸಿದ್ದು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಡೈನಾಮಿಕ್ ಆಲ್​ರೌಂಡರ್ ಌಂಡ್ರ್ಯೂ ರಸ್ಸೆಲ್. ರಸ್ಸೆಲ್ ಮಸಲ್ ಪವರ್​ಗೆ ಎದುರಾಳಿ ತಂಡದ ಬೌಲರ್​ಗಳು ಬಳಲಿ ಬೆಂಡಾಗಿ ಹೋದ್ರು. ಹೀಗಾಗಿ ರಸ್ಸೆಲ್ ಡಿಎನ್​ಎ ಟೆಸ್ಟ್ ಮಾಡ್ಬೇಕು ಅಂತಾ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಚರ್ಚೆ ಮಾಡಿದ್ರು.

ಅತಿ ಹೆಚ್ಚು ರನ್​ಗಳಿಸಿದ ಆಸ್ಟ್ರೇಲಿಯಾದ ವಾರ್ನರ್! ಬಾಲ್ ಟ್ಯಾಂಪರಿಂಗ್ ಪ್ರಕರಣದಿಂದ ಒಂದು ವರ್ಷ ನಿಷೇಧದ ಶಿಕ್ಷೆಗೆ ಒಳಗಾಗಿದ್ದ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್, ಐಪಿಎಲ್​ನಲ್ಲಿ ಗ್ರೇಟ್ ಕಮ್​ಬ್ಯಾಕ್ ಮಾಡಿದ್ರು. ಸನ್ ರೈಸರ್ಸ್ ಹೈದ್ರಾಬಾದ್ ಪರ ರನ್ ಮಳೆ ಹರಿಸಿದ ವಾರ್ನರ್, ಒಂದು ಶತಕ ಮತ್ತು 8 ಅರ್ಧಶತಕದ ನೆರವಿನಿಂದ 692 ರನ್​ಗಳಿಸಿ ಟೂರ್ನಿಯಲ್ಲಿ ಅತೀ ಹೆಚ್ಚು ರನ್​ಗಳಿಸಿದ ಬ್ಯಾಟ್ಸ್​ಮನ್ ಅನ್ನೋ ಹಿರಿಮೆಯನ್ನ ತಮ್ಮದಾಗಿಸಿಕೊಂಡ್ರು.

ಮಂಕಡ್ ಔಟ್​ನಿಂದ ಆಕ್ರೋಶಕ್ಕೆ ಒಳಗಾದ ಅಶ್ವಿನ್! ಇನ್ನು ಈ ಸೀಸನ್​ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ರವಿಚಂದ್ರನ್ ಅಶ್ವಿನ್, ಮಂಕಡ್ ಔಟ್ ಮಾಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ್ರು. ರಾಜಸ್ಥಾನ್ ರಾಯಲ್ಸ್ ತಂಡದ ಜೋಸ್ ಬಟ್ಲರ್​ನನ್ನ ಮಂಕಡ್ ಔಟ್ ಮಾಡಿದ್ರು. ಅಶ್ವಿನ್ ಹೀಗೆ ಮಂಕಡ್ ಔಟ್ ಮಾಡಿದ್ದಕ್ಕೆ ಅಭಿಮಾನಿಗಳು ಇನ್ನಿಲ್ಲದಂತೆ ಆಕ್ರೋಶಗೊಂಡ್ರು. ಅಂತರಾಷ್ಟ್ರೀಯ ಮಟ್ಟದಲ್ಲಿ ಅಶ್ವಿನ್ ಮಂಕಡ್ ಔಟ್ ಮಾಡಿದ್ದಕ್ಕೆ ಅಭಿಮಾನಿಗಳು ಬೇಸರ ಮತ್ತು ಆಕ್ರೋಶ ವ್ಯಕ್ತಪಡಿಸಿದ್ರು. ಒಟ್ನಲ್ಲಿ ಈ ಬಾರಿಯ ಐಪಿಎಲ್​​ನಲ್ಲಿ ಮಹೇಂದ್ರ ಸಿಂಗ್ ಧೋನಿ ಕೋಪಗೊಂಡಿದ್ದೇ ಅಚ್ಚರಿಗಳಲ್ಲಿ ಅಚ್ಚರಿಯಾಗಿತ್ತು ಅಂದ್ರೆ, ತಪ್ಪಾಗೋದಿಲ್ಲ.

Published On - 12:46 pm, Mon, 30 December 19

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?