IND vs PAK: ಹೀಗಾದ್ರೆ ಭಾರತ vs ಪಾಕಿಸ್ತಾನ್ ನಡುವೆ ಫೈನಲ್!

ಅಂಡರ್​-19 ಏಷ್ಯಾ ಕಪ್ 2026 ರ ಸೆಮಿಫೈನಲ್ ವೇಳಾಪಟ್ಟಿ ಅಂತಿಮಗೊಂಡಿದ್ದು, ಕ್ರಿಕೆಟ್ ಪ್ರೇಮಿಗಳಿಗೆ ಡಬಲ್ ಧಮಾಕಾ ಸಿಗುವ ಸುಳಿವು ಸಿಕ್ಕಿದೆ. ನಾಳೆ (ನವೆಂಬರ್ 12) ನಡೆಯಲಿರುವ ಸೆಮಿಫೈನಲ್ ಪಂದ್ಯಗಳಲ್ಲಿ ಭಾರತ ತಂಡ ಅಫ್ಘಾನಿಸ್ತಾನವನ್ನು ಎದುರಿಸಿದರೆ, ಪಾಕಿಸ್ತಾನ್ ತಂಡ ಬಾಂಗ್ಲಾದೇಶ್ ಸವಾಲನ್ನು ಎದುರಿಸಲಿದೆ.

IND vs PAK: ಹೀಗಾದ್ರೆ ಭಾರತ vs ಪಾಕಿಸ್ತಾನ್ ನಡುವೆ ಫೈನಲ್!
Ind Vs Pak
Image Credit source: x.com

Updated on: Nov 11, 2026 | 11:59 AM

ACC ಪುರುಷರ U19 ಏಷ್ಯಾ ಕಪ್ 2026 ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಂಡಿದ್ದು, ನಾಲ್ಕು ಬಲಿಷ್ಠ ತಂಡಗಳು ಸೆಮಿಫೈನಲ್‌ಗೆ ಲಗ್ಗೆ ಇಟ್ಟಿವೆ. ಅದರಂತೆ ಭಾರತ, ಪಾಕಿಸ್ತಾನ್, ಅಫ್ಘಾನಿಸ್ತಾನ್ ಮತ್ತು ಬಾಂಗ್ಲಾದೇಶ್ ತಂಡಗಳು ಸೆಮಿಫೈನಲ್ ಪಂದ್ಯಗಳನ್ನಾಡಲಿದೆ.

ಒಮಾನ್​ನ ಅಲ್ ಅಮೇರತ್ ಕ್ರಿಕೆಟ್ ಮೈದಾನದಲ್ಲಿ ಗುರುವಾರ ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ್ ಮತ್ತು ಬಾಂಗ್ಲಾದೇಶ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ್ ತಂಡ ಭಾರತ ತಂಡವನ್ನು ಎದುರಿಸಲಿದೆ. ಈ ಎರಡು ಮ್ಯಾಚ್​ಗಳಲ್ಲಿ ಗೆಲ್ಲುವ ತಂಡ ಫೈನಲ್​ಗೇರಲಿದೆ.

Loading...
  • ಮೊದಲ ಸೆಮಿಫೈನಲ್: ಪಾಕಿಸ್ತಾನ್ vs ಬಾಂಗ್ಲಾದೇಶ್ (ಬೆಳಿಗ್ಗೆ 10:30ಕ್ಕೆ, IST)
  • ಎರಡನೇ ಸೆಮಿಫೈನಲ್: ಅಫ್ಘಾನಿಸ್ತಾನ್ vs ಭಾರತ (ಬೆಳಿಗ್ಗೆ 10:30ಕ್ಕೆ, IST)

ಹೀಗಾದ್ರೆ ಭಾರತ ಮತ್ತು ಪಾಕಿಸ್ತಾನ್ ನಡುವೆ ಫೈನಲ್!

ಈ ಬಾರಿಯ ಅಂಡರ್-19 ಏಷ್ಯಾಕಪ್ ಟೂರ್ನಿಯ ಸೆಮಿಫೈನಲ್ ವೇಳಾಪಟ್ಟಿಯು ಭಾರತ ಮತ್ತು ಪಾಕಿಸ್ತಾನ್ ತಂಡಗಳಿಗೆ ಪ್ರತ್ಯೇಕ ಹಾದಿಯನ್ನು ಕಲ್ಪಿಸಿದೆ.

  •  ‘ಎ’ ಗುಂಪಿನಲ್ಲಿ ಆಡಿದ ಮೂರೂ ಪಂದ್ಯಗಳನ್ನು ಗೆದ್ದು ಅಗ್ರಸ್ಥಾನ ಪಡೆದ ಪಾಕಿಸ್ತಾನ್, ‘ಬಿ’ ಗುಂಪಿನ ದ್ವಿತೀಯ ಸ್ಥಾನಿ ಬಾಂಗ್ಲಾದೇಶ್​ ತಂಡವನ್ನು ಎದುರಿಸಲಿದೆ.
  •  ಇತ್ತ ‘ಎ’ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ಭಾರತ ತಂಡವು, ‘ಬಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಅಫ್ಘಾನಿಸ್ತಾನದ ಸವಾಲನ್ನು ಎದುರಿಸಲಿದೆ.

ಒಂದು ವೇಳೆ ಗುರುವಾರ ನಡೆಯುವ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ್ ತಂಡ ಬಾಂಗ್ಲಾದೇಶವನ್ನು ಮಣಿಸಿ, ಇತ್ತ ಭಾರತ ತಂಡ ಅಫ್ಘಾನಿಸ್ತಾನಕ್ಕೆ ಸೋಲುಣಿಸಿದರೆ, ನವೆಂಬರ್ 14 (ಶನಿವಾರ) ರಂದು ನಡೆಯಲಿರುವ ಗ್ರ್ಯಾಂಡ್ ಫೈನಲ್‌ನಲ್ಲಿ ಕ್ರಿಕೆಟ್ ಜಗತ್ತಿನ ಅತ್ಯಂತ ರೋಚಕ ಕದನವಾದ ಭಾರತ vs ಪಾಕಿಸ್ತಾನ ಪಂದ್ಯವನ್ನು ಕಣ್ತುಂಬಿಕೊಳ್ಳಬಹುದು.

ಸೇಡು ತೀರಿಸಿಕೊಳ್ಳಲು ಸುವರ್ಣಾವಕಾಶ:

ಲೀಗ್ ಹಂತದಲ್ಲಿ ನವೆಂಬರ್ 8 ರಂದು ನಡೆದ ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಭಾರತದ ವಿರುದ್ಧ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿತ್ತು. ಈಗ ಎರಡೂ ತಂಡಗಳು ಫೈನಲ್ ಪ್ರವೇಶಿಸಿದರೆ, ಆ ಸೋಲಿಗೆ ಸೇಡು ತೀರಿಸಿಕೊಂಡು ಏಷ್ಯಾ ಕಪ್ ಕಿರೀಟವನ್ನು ಮುಡಿಗೇರಿಸಿಕೊಳ್ಳಲು ಟೀಮ್ ಇಂಡಿಯಾ ಉತ್ತಮ ಅವಕಾಶ ಸಿಗಲಿದೆ.

ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ vs ಅರ್ಷದೀಪ್ ಸಿಂಗ್:  36 ಕೋಟಿ ರೂ. ಸ್ವಾಪ್ ಡೀಲ್..!

ಹೀಗಾಗಿ ಟೀಮ್ ಇಂಡಿಯಾ ಅಭಿಮಾನಿಗಳು ಪಾಕ್ ಪಡೆಯನ್ನು ಫೈನಲ್‌ನಲ್ಲಿ ಎದುರು ನೋಡುತ್ತಿದ್ದಾರೆ. ಅದರಂತೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಫೈನಲ್‌ಗೇರಿದರೆ ಮತ್ತೊಂದು ರಣರೋಚಕ ಪೈಪೋಟಿಯನ್ನು ನಿರೀಕ್ಷಿಸಬಹುದು.

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us