U19 World Cup 2024: ಸೆಮಿಫೈನಲ್‌ಗೆ 4 ತಂಡಗಳು ಎಂಟ್ರಿ; ಭಾರತಕ್ಕೆ ಯಾರು ಎದುರಾಳಿ ಗೊತ್ತಾ?
U19 World Cup 2024: ಭಾರತವು ಸೂಪರ್ 6 ರ ಗುಂಪು 1 ರಲ್ಲಿ ಅಗ್ರಸ್ಥಾನದಲ್ಲಿದ್ದು, ಇದೇ ಗುಂಪಿನಲ್ಲಿರುವ ಪಾಕಿಸ್ತಾನ ಕೂಡ ಎರಡನೇ ಸ್ಥಾನ ಪಡೆಯುವ ಮೂಲಕ ಸೆಮಿಫೈನಲ್‌ಗೆ ಅರ್ಹತೆ ಗಳಿಸಿದೆ. ಇದಲ್ಲದೇ 2ನೇ ಗುಂಪಿನಲ್ಲಿ ಆಸ್ಟ್ರೇಲಿಯಾ ತಂಡ ಅಗ್ರಸ್ಥಾನದಲ್ಲಿದ್ದು, ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದೆ. ಈಗ ಎರಡು ಸೆಮಿಫೈನಲ್ ಪಂದ್ಯಗಳು ಫೆಬ್ರವರಿ 6 ಮತ್ತು 8 ರಂದು ನಡೆಯಲಿವೆ.
ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಅಂಡರ್ 19 ವಿಶ್ವಕಪ್ 2024 ರ (ICC Under-19 World Cup 2024) ಸೂಪರ್ 6 ಸುತ್ತಿನಲ್ಲಿ, ಪಾಕಿಸ್ತಾನ ತಂಡ ರೋಚಕ ಪಂದ್ಯದಲ್ಲಿ ಬಾಂಗ್ಲಾದೇಶವನ್ನು (Pakistan vs Bangladesh) 5 ರನ್‌ಗಳಿಂದ ಸೋಲಿಸುವ ಮೂಲಕ ಸೆಮಿಫೈನಲ್ ಟಿಕೆಟ್ ಅನ್ನು ಖಚಿತಪಡಿಸಿಕೊಂಡಿದೆ. ಇದರೊಂದಿಗೆ ಪ್ರಸಕ್ತ ಟೂರ್ನಿಯ ನಾಲ್ಕು ಸೆಮಿಫೈನಲ್ ತಂಡಗಳು ಕೂಡ ಖಚಿತಗೊಂಡಿವೆ. ಟೀಂ ಇಂಡಿಯಾ (Team India) ಸೂಪರ್ 6 ರ ಗುಂಪು 1 ರಲ್ಲಿ ಅಗ್ರಸ್ಥಾನದಲ್ಲಿದ್ದು, ಇದೇ ಗುಂಪಿನಲ್ಲಿರುವ ಪಾಕಿಸ್ತಾನ ಕೂಡ ಎರಡನೇ ಸ್ಥಾನ ಪಡೆಯುವ ಮೂಲಕ ಸೆಮಿಫೈನಲ್‌ಗೆ ಅರ್ಹತೆ ಗಳಿಸಿದೆ. ಇದಲ್ಲದೇ 2ನೇ ಗುಂಪಿನಲ್ಲಿ ಆಸ್ಟ್ರೇಲಿಯಾ ತಂಡ ಅಗ್ರಸ್ಥಾನದಲ್ಲಿದ್ದು, ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದೆ. ಈಗ ಎರಡು ಸೆಮಿಫೈನಲ್ ಪಂದ್ಯಗಳು ಫೆಬ್ರವರಿ 6 ಮತ್ತು 8 ರಂದು ನಡೆಯಲಿವೆ.
ಕೊನೆಗೂ ಗೆದ್ದ ಪಾಕಿಸ್ತಾನ
ಸೂಪರ್ ಸಿಕ್ಸ್ ಸುತ್ತಿನ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನ ತಂಡ ಗೆಲುವು ಸಾಧಿಸಿತ್ತಾದರೂ, ಈ ಗೆಲುವಿಗಾಗಿ ಸಾಕಷ್ಟು ಬೆವರು ಹರಿಸಬೇಕಾಯ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ 155 ರನ್‌ಗಳಿಗೆ ಆಲೌಟ್ ಆಯಿತು. ಉತ್ತರವಾಗಿ ಬಾಂಗ್ಲಾದೇಶ 150 ರನ್‌ಗಳಿಗೆ ಆಲೌಟ್ ಆಗಿ 5 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಬಾಂಗ್ಲಾದೇಶ 38.1 ಓವರ್‌ಗಳಲ್ಲಿ ಪಂದ್ಯ ಗೆದ್ದಿದ್ದರೆ ಸೆಮಿಫೈನಲ್‌ಗೆ ಟಿಕೆಟ್ ಪಡೆಯುತ್ತಿತ್ತು. ಆದರೆ ತಂಡ 35.5 ಓವರ್‌ಗಳಲ್ಲಿ 150 ರನ್ ಗಳಿಸಿ ಆಲೌಟ್ ಆಗಿ 5 ರನ್‌ಗಳಿಂದ ಹಿನ್ನಡೆ ಅನುಭವಿಸಿತು.
ಭಾರತ ತಂಡ ಅಜೇಯ
ಫೆಬ್ರವರಿ 11 ರಂದು, ಎರಡೂ ಸೆಮಿಫೈನಲ್‌ಗಳ ವಿಜೇತ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಈ ಟೂರ್ನಿಯಲ್ಲಿ ಭಾರತ ತಂಡ ಇಲ್ಲಿಯವರೆಗೆ ಅಜೇಯವಾಗಿದೆ. ಟೀಂ ಇಂಡಿಯಾ ಗ್ರೂಪ್ ಹಂತದಲ್ಲಿ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದಿತ್ತು. ಆ ಬಳಿಕ ಸೂಪರ್ 6ಸುತ್ತಿನಲ್ಲಿ ಭಾರತ, ನ್ಯೂಜಿಲೆಂಡ್ ಮತ್ತು ನೇಪಾಳ ತಂಡಗಳನ್ನು ಸೋಲಿಸಿ ಸೆಮಿಫೈನಲ್ ಟಿಕೆಟ್ ಗಿಟ್ಟಿಸಿಕೊಂಡಿತು.
ಸೆಮಿಫೈನಲ್ ಪೂರ್ಣ ವೇಳಾಪಟ್ಟಿ
ಗುಂಪು ಹಂತದ ನಂತರ, ಪ್ರತಿ ಗುಂಪಿನಿಂದ 3 ತಂಡಗಳು ಸೂಪರ್ 6 ತಲುಪಿದವು. ನಂತರ ಗ್ರೂಪ್ ಎ ಮತ್ತು ಡಿ ಗುಂಪಿನ ತಲಾ 3 ತಂಡಗಳನ್ನು ಗ್ರೂಪ್ 1 ಮತ್ತು ಗ್ರೂಪ್ ಬಿ ಮತ್ತು ಸಿ ಯಿಂದ ತಲಾ 3 ತಂಡಗಳನ್ನು ಗುಂಪು 2 ಎಂದು ವಿಂಗಡಿಸಲಾಯಿತು. ಸೂಪರ್ ಸಿಕ್ಸ್‌ನಲ್ಲಿ ಎರಡೂ ಗುಂಪಿನ ಪ್ರತಿ ತಂಡಗಳು ತಲಾ 2 ಪಂದ್ಯಗಳನ್ನು ಆಡಿದವು. ಇದೀಗ ನಾಲ್ಕು ಸೆಮಿಫೈನಲ್ ತಂಡಗಳು ದೃಢಪಟ್ಟಿವೆ. ಫೆಬ್ರವರಿ 6 ರಂದು ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಎರಡನೇ ಸೆಮಿಫೈನಲ್ ಫೆಬ್ರವರಿ 8 ರಂದು ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿದೆ. ನಂತರ ಫೆಬ್ರವರಿ 11 ರಂದು ಫೈನಲ್ ಪಂದ್ಯ ನಡೆಯಲಿದೆ. ಈ ಎಲ್ಲಾ ಪಂದ್ಯಗಳು ಬೆನೋನಿಯಲ್ಲಿ ನಡೆಯಲಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ