ವೇಗದ ಬೌಲರ್ ಎಸೆದ ಬೆಂಕಿ ಚೆಂಡಿಗೆ ಮಧ್ಯದ ಸ್ಟಂಪ್ ಹಿಂದಕ್ಕೆ ಸರಿಯಿತು…ಇತ್ತ ಬ್ಯಾಟ್ಸ್ಮನ್ ಕೂಡ ಕ್ಲೀನ್ ಬೌಲ್ಡ್ ಆಗಿದ್ದೀನಿ ಎಂದುಕೊಂಡು ಮೈದಾನ ತೊರೆಯಲು ಮುಂದಾಗಿದ್ದರು…ಆದರೆ ಅಂಪೈರ್ ನಾಟೌಟ್ ಅಂದರು. ಇಂತಹದೊಂದು ವಿಚಿತ್ರ ತೀರ್ಪಿಗೆ ಸಾಕ್ಷಿಯಾಗಿದ್ದು ಆಸ್ಟ್ರೇಲಿಯಾದಲ್ಲಿ ನಡೆದ ಕ್ಲಬ್ ಪಂದ್ಯ.
ಮೆಲ್ಬೋರ್ನ್ ಕ್ಲಬ್ ಕ್ರಿಕೆಟ್ನಲ್ಲಿ ನಡೆದ ಪಂದ್ಯವೊಂದರಲ್ಲಿ ಬ್ಯಾಟರ್ ಕ್ಲೀನ್ ಬೌಲ್ಡ್ ಆದರೂ ಬೇಲ್ಸ್ ಮಾತ್ರ ಬಿದ್ದಿರಲಿಲ್ಲ. ಇತ್ತ ಮಿಡಲ್ ಸ್ಟಂಪ್ ನೋಡಿ ಬ್ಯಾಟ್ಸ್ಮನ್ ಔಟ್ ಆಗಿದ್ದೇನೆ ಅಂದುಕೊಂಡರು. ಆದರೆ ಐಸಿಸಿ ನಿಯಮದ ಪ್ರಕಾರ ಅಂಪೈರ್ ಟ್ವಿಸ್ಟ್ ನೀಡಿದರು.
ಐಸಿಸಿ ನಿಯಮ ಪ್ರಕಾರ, ಬೌಲ್ಡ್ ಔಟ್ ತೀರ್ಪು ನೀಡಬೇಕಿದ್ದರೆ ಸ್ಟಂಪ್ ಮೇಲಿಂದ ಬೇಲ್ಸ್ ಬೀಳಬೇಕು. ಆದರೆ ಈ ಪಂದ್ಯದಲ್ಲಿ ಮಧ್ಯದ ಸ್ಟಂಪ್ ಹಿಂದಕ್ಕೆ ಸರಿದರೂ ಬೇಲ್ಸ್ ಮಾತ್ರ ಎಗರಿರಲಿಲ್ಲ. ಹೀಗಾಗಿ ಫೀಲ್ಡ್ ಅಂಪೈರ್ ನಾಟೌಟ್ ಎಂಬ ತೀರ್ಮಾನಕ್ಕೆ ಬಂದರು. ಇದೀಗ ಬೌಲ್ಡ್ ನಾಟೌಟ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Given not out. Incredible 😂
via South Yarra CC pic.twitter.com/B3KY2K5XQg
— That’s So Village (@ThatsSoVillage) December 10, 2023
ಈ ಹಿಂದೆ 2019ರ ಏಕದಿನ ವಿಶ್ವಕಪ್ ವೇಳೆ ಝಿಂಗ್ ಬೇಲ್ಸ್ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಐಸಿಸಿ ಪ್ರಸ್ತುತ ಪಡಿಸಿದ್ದ ಲೈಟಿಂಗ್ ಬೇಲ್ಸ್ಗಳು ಬೌಲ್ಡ್ ಆದರೂ ಬೀಳದಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: IPL 2024: ಐಪಿಎಲ್ ಯಾವಾಗ ಶುರು? ಇಲ್ಲಿದೆ ಉತ್ತರ
ಅದರಲ್ಲೂ 2019 ರ ಏಕದಿನ ವಿಶ್ವಕಪ್ನಲ್ಲಿ ಬೌಲ್ಡ್ ಆದರೂ ಐವರು ಬ್ಯಾಟ್ಸ್ಮನ್ಗಳು ಬೇಲ್ಸ್ ಬೀಳದಿರುವ ಕಾರಣ ಜೀವದಾನ ಪಡೆದಿದ್ದರು. ಈ ಬಗ್ಗೆ ಅಪಸ್ವರಗಳು ಕೇಳಿ ಬಂದಿದ್ದವು. ಇದಾದ ಬಳಿಕ ಬೇಲ್ಸ್ ವಿನ್ಯಾಸ ಬಗ್ಗೆ ಐಸಿಸಿ ಹೆಚ್ಚಿನ ಗಮನ ಕೇಂದ್ರೀಕರಿಸಿತ್ತು.