IND vs SA: ಭಾರತ-ಸೌತ್ ಆಫ್ರಿಕಾ ಮೊದಲ ಟಿ20 ಪಂದ್ಯ ರದ್ದು
South Africa vs India: ಟಿ20 ಕ್ರಿಕೆಟ್ನಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಇದುವರೆಗೆ 24 ಬಾರಿ ಮುಖಾಮುಖಿಯಾಗಿವೆ. ಈ ವೇಳೆ 13 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದರೆ, 10 ಮ್ಯಾಚ್ಗಳಲ್ಲಿ ಸೌತ್ ಆಫ್ರಿಕಾ ಗೆಲುವು ಕಂಡಿದೆ. ಇನ್ನು 1 ಪಂದ್ಯವು ಕಾರಣಾಂತರಗಳಿಂದ ರದ್ದಾಗಿತ್ತು.
ಸೌತ್ ಆಫ್ರಿಕಾ – ಭಾರತ (India vs South Africa) ನಡುವಣ ಮೊದಲ ಟಿ20 ಪಂದ್ಯವು ಮಳೆಯ ಕಾರಣ ರದ್ದಾಗಿದೆ. ಡರ್ಬನ್ನಲ್ಲಿ ನಡೆಯಬೇಕಿದ್ದ ಈ ಪಂದ್ಯಕ್ಕೆ ಆರಂಭದಲ್ಲೇ ವರುಣ ಅಡ್ಡಿಪಡಿಸಿತ್ತು. ಇದರಿಂದ ಟಾಸ್ ಪ್ರಕ್ರಿಯೆ ಕೂಡ ನಡೆದಿರಲಿಲ್ಲ. ಇದಾಗ್ಯೂ ಓವರ್ಗಳ ಕಡಿತದೊಂದಿಗೆ ಪಂದ್ಯ ಆರಂಭವಾಗುವ ನಿರೀಕ್ಷೆಯಿತ್ತು. ಆದರೆ ಬಿಡದೇ ಸುರಿದ ಮಳೆಯಿಂದಾಗಿ ಮೈದಾನವು ಸಂಪೂರ್ಣ ಒದ್ದೆಯಾಗಿದ್ದು, ಹೀಗಾಗಿ ಪಂದ್ಯವನ್ನು ರದ್ದುಪಡಿಸಲು ನಿರ್ಧರಿಸಲಾಗಿದೆ.
ಮೂರು ಪಂದ್ಯಗಳ ಈ ಸರಣಿಯ ಎರಡನೇ ಪಂದ್ಯವು ಡಿಸೆಂಬರ್ 12 ರಂದು ನಡೆಯಲಿದೆ. ಹಾಗೆಯೇ ಮೂರನೇ ಪಂದ್ಯವು ಡಿಸೆಂಬರ್ 14 ರಂದು ಜೋಹಾನ್ಸ್ಬರ್ಗ್ನಲ್ಲಿ ನಡೆಯಲಿದೆ. ಇದಾದ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ಶುರುವಾಗಲಿದೆ.
Not so great news from Durban as the 1st T20I has been called off due to incessant rains.#SAvIND pic.twitter.com/R1XW1hqhnf
— BCCI (@BCCI) December 10, 2023
ಟಿ20 ಕ್ರಿಕೆಟ್ನಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಇದುವರೆಗೆ 24 ಬಾರಿ ಮುಖಾಮುಖಿಯಾಗಿವೆ. ಈ ವೇಳೆ 13 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದರೆ, 10 ಮ್ಯಾಚ್ಗಳಲ್ಲಿ ಸೌತ್ ಆಫ್ರಿಕಾ ಗೆಲುವು ಕಂಡಿದೆ. ಇನ್ನು 1 ಪಂದ್ಯವು ಕಾರಣಾಂತರಗಳಿಂದ ರದ್ದಾಗಿತ್ತು.
ಭಾರತ-ಸೌತ್ ಆಫ್ರಿಕಾ ಟಿ20 ಸರಣಿ ವೇಳಾಪಟ್ಟಿ:
- ಡಿಸೆಂಬರ್ 12- ಎರಡನೇ ಟಿ20 ಪಂದ್ಯ (ಗೆಬರ್ಹ)
- ಡಿಸೆಂಬರ್ 14- ಮೂರನೇ ಟಿ20 ಪಂದ್ಯ (ಜೋಹಾನ್ಸ್ಬರ್ಗ್)
ಏಕದಿನ ಸರಣಿ ವೇಳಾಪಟ್ಟಿ:
- ಡಿಸೆಂಬರ್ 17- ಮೊದಲ ಏಕದಿನ ಪಂದ್ಯ (ಜೋಹಾನ್ಸ್ಬರ್ಗ್)
- ಡಿಸೆಂಬರ್ 19- ಎರಡನೇ ಏಕದಿನ ಪಂದ್ಯ (ಗೆಬರ್ಹ)
- ಡಿಸೆಂಬರ್ 21- ಮೂರನೇ ಏಕದಿನ ಪಂದ್ಯ (ಪಾರ್ಲ್)
ಸೌತ್ ಆಫ್ರಿಕಾ ಟಿ20 ತಂಡ: ರೀಜಾ ಹೆಂಡ್ರಿಕ್ಸ್, ಮ್ಯಾಥ್ಯೂ ಬ್ರೀಟ್ಝ್ಕ್, ಟ್ರಿಸ್ಟಾನ್ ಸ್ಟಬ್ಸ್, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ಆಂಡಿಲ್ ಫೆಹ್ಲುಕ್ವಾಯೊ, ಕೇಶವ್ ಮಹಾರಾಜ್, ಜೆರಾಲ್ಡ್ ಕೊಯೆಟ್ಝಿ, ನಾಂಡ್ರೆ ಬರ್ಗರ್, ತಬ್ರೈಝ್ ಶಮ್ಸಿ, ಡೊನ್ಕೊ ಜಾರ್ಟನ್ಸ್, ಡೊನ್ಕೊ ಜಾರ್ಟನ್ಸ್ ಫೆರೇರಾ, ಲಿಜಾಡ್ ವಿಲಿಯಮ್ಸ್.
ಇದನ್ನೂ ಓದಿ: ಕ್ಲೀನ್ ಬೌಲ್ಡ್…ಆದರೆ ನಾಟೌಟ್..!
ಭಾರತ ಟಿ20 ತಂಡ: ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ದೀಪಕ್ ಚಹರ್, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ಇಶಾನ್ ಕಿಶನ್, ಮುಕೇಶ್ ಕುಮಾರ್, ವಾಷಿಂಗ್ಟನ್ ಸುಂದರ್ , ರುತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ಕುಲ್ದೀಪ್ ಯಾದವ್.
Published On - 9:28 pm, Sun, 10 December 23