AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

U19 Asia Cup, 2023: ಭಾರತದ ವಿರುದ್ಧ ಗೆದ್ದು ಬೀಗಿದ ಪಾಕಿಸ್ತಾನ್

India vs Pakistan: 260 ರನ್​ಗಳ ಸ್ಪರ್ಧಾತ್ಮಕ ಗುರಿ ಪಡೆದ ಪಾಕಿಸ್ತಾನ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಟೀಮ್ ಇಂಡಿಯಾ ಬೌಲರ್ ಮುರುಗನ್ ಅಭಿಷೇಕ್ ಯಶಸ್ವಿಯಾಗಿದ್ದರು. ಕೇವಲ 8 ರನ್​ಗೆ ಶಾಮಿಲ್ ಹುಸೇನ್ ವಿಕೆಟ್ ಪಡೆದು ಮೊದಲ ಯಶಸ್ಸು ತಂದುಕೊಟ್ಟರು.

U19 Asia Cup, 2023: ಭಾರತದ ವಿರುದ್ಧ ಗೆದ್ದು ಬೀಗಿದ ಪಾಕಿಸ್ತಾನ್
Pakistan vs India
TV9 Web
| Edited By: |

Updated on: Dec 10, 2023 | 7:13 PM

Share

ದುಬೈನ ಐಸಿಸಿ ಅಕಾಡೆಮಿ ಮೈದಾನದಲ್ಲಿ ನಡೆದ ಅಂಡರ್ 19 ಏಷ್ಯಾಕಪ್ (Asia Cup 2023)​ ಪಂದ್ಯದಲ್ಲಿ ಭಾರತ ವಿರುದ್ಧ ಪಾಕಿಸ್ತಾನ್ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ತಂಡವು ಮೊದಲು ಬೌಲಿಂಗ್ ಮಾಡುವ ನಿರ್ಧಾರ ಮಾಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾಗೆ ಆದರ್ಶ್ ಸಿಂಗ್ (62) ಹಾಗೂ ಅರ್ಶಿನ್ ಕುಲ್ಕರ್ಣಿ (24) ಉತ್ತಮ ಆರಂಭ ಒದಗಿಸಿದ್ದರು.

ಆ ಬಳಿಕ ಬಂದ ರುದ್ರ ಪಟೇಲ್ ಕೇವಲ 1 ರನ್​ಗಳಿಸಿ ಔಟಾದರು. ಈ ಹಂತದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ನಾಯಕ ಉದಯ್ ಸಹರಾನ್ 98 ಎಸೆತಗಳಲ್ಲಿ 5 ಫೋರ್​ಗಳೊಂದಿಗೆ 60 ರನ್ ಬಾರಿಸಿದರು. ಇನ್ನು ಕೆಳ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಸಚಿನ್ ದಾಸ್ 42 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 2 ಫೋರ್​ಗಳೊಂದಿಗೆ 58 ರನ್ ಬಾರಿಸಿದರು. ಈ ಮೂಲಕ ಭಾರತ ತಂಡವು 50 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 259 ರನ್ ಕಲೆಹಾಕಿತು.

260 ರನ್​ಗಳ ಸ್ಪರ್ಧಾತ್ಮಕ ಗುರಿ ಪಡೆದ ಪಾಕಿಸ್ತಾನ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಟೀಮ್ ಇಂಡಿಯಾ ಬೌಲರ್ ಮುರುಗನ್ ಅಭಿಷೇಕ್ ಯಶಸ್ವಿಯಾಗಿದ್ದರು. ಕೇವಲ 8 ರನ್​ಗೆ ಶಾಮಿಲ್ ಹುಸೇನ್ ವಿಕೆಟ್ ಪಡೆದು ಮೊದಲ ಯಶಸ್ಸು ತಂದುಕೊಟ್ಟರು.

ಆದರೆ 2ನೇ ವಿಕೆಟ್​ಗೆ ಜೊತೆಯಾದ ಶಹಝೈಬ್ ಖಾನ್ ಹಾಗೂ ಅಝಾನ್ ಅವೈಸ್ 110 ರನ್​ಗಳ ಭರ್ಜರಿ ಜೊತೆಯಾಟವಾಡಿದರು. ಈ ಹಂತದಲ್ಲಿ ಶಹಝೈಬ್ 63 ರನ್ ಬಾರಿಸಿ ಔಟಾದರು.

ಮತ್ತೊಂದೆಡೆ ಜವಾಬ್ದಾರಿಯುತ ಬ್ಯಾಟಿಂಗ್ ಮುಂದುವರೆಸಿದ ಅಝಾನ್ ಅವೈಸ್ 130 ಎಸೆತಗಳಲ್ಲಿ 10 ಫೋರ್​ಗಳೊಂದಿಗೆ ಅಜೇಯ 105 ರನ್ ಬಾರಿಸಿದರು. ಅಲ್ಲದೆ ನಾಯಕ ಸಾದ್ ಬೇಗ್ (68) ಜೊತೆಗೂಡಿ 47 ಓವರ್​ಗಳಲ್ಲಿ ತಂಡವನ್ನು ಗುರಿಮುಟ್ಟಿಸಿದರು. ಈ ಮೂಲಕ ಪಾಕಿಸ್ತಾನ್ ತಂಡವು ಟೀಮ್ ಇಂಡಿಯಾ ವಿರುದ್ಧ 8 ವಿಕೆಟ್​ಗಳ ಜಯ ಸಾಧಿಸಿದೆ.

ಭಾರತ U19 ಪ್ಲೇಯಿಂಗ್ ಇಲೆವೆನ್: ಆದರ್ಶ್ ಸಿಂಗ್ , ಅರ್ಶಿನ್ ಕುಲಕರ್ಣಿ , ರುದ್ರ ಪಟೇಲ್ , ಉದಯ್ ಸಹರಾನ್ (ನಾಯಕ) , ಮುಶೀರ್ ಖಾನ್ , ಸಚಿನ್ ದಾಸ್ , ಅರವೆಲ್ಲಿ ಅವನೀಶ್ (ವಿಕೆಟ್ ಕೀಪರ್) , ಸೌಮಿ ಪಾಂಡೆ , ಮುರುಗನ್ ಅಭಿಷೇಕ್ , ರಾಜ್ ಲಿಂಬಾನಿ , ನಮನ್ ತಿವಾರಿ.

ಇದನ್ನೂ ಓದಿ: IPL 2024: ಐಪಿಎಲ್ ಯಾವಾಗ ಶುರು? ಇಲ್ಲಿದೆ ಉತ್ತರ

ಪಾಕಿಸ್ತಾನ್ U19 ಪ್ಲೇಯಿಂಗ್ ಇಲೆವೆನ್: ಶಾಮಿಲ್ ಹುಸೇನ್ , ಶಹಜೈಬ್ ಖಾನ್ , ಅಜಾನ್ ಅವೈಸ್ , ಸಾದ್ ಬೇಗ್ (ನಾಯಕ) , ಮೊಹಮ್ಮದ್ ಜೀಶನ್ , ಮೊಹಮ್ಮದ್ ರಿಯಾಜುಲ್ಲಾ , ತಯ್ಯಬ್ ಆರಿಫ್ , ಅರಾಫತ್ ಮಿನ್ಹಾಸ್ , ಅಲಿ ಅಸ್ಫಂಡ್ , ಅಮೀರ್ ಹಸನ್ , ಉಬೈದ್ ಶಾ.

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?