ಕ್ಲೀನ್ ಬೌಲ್ಡ್​…ಆದರೆ ನಾಟೌಟ್..!

ಈ ಹಿಂದೆ 2019ರ ಏಕದಿನ ವಿಶ್ವಕಪ್​ ವೇಳೆ ಝಿಂಗ್ ಬೇಲ್ಸ್ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಐಸಿಸಿ ಪ್ರಸ್ತುತ ಪಡಿಸಿದ್ದ ಲೈಟಿಂಗ್ ಬೇಲ್ಸ್​ಗಳು ಬೌಲ್ಡ್ ಆದರೂ ಬೀಳದಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.

ಕ್ಲೀನ್ ಬೌಲ್ಡ್​...ಆದರೆ ನಾಟೌಟ್..!
Cricket
Follow us
TV9 Web
| Updated By: ಝಾಹಿರ್ ಯೂಸುಫ್

Updated on: Dec 10, 2023 | 6:35 PM

ವೇಗದ ಬೌಲರ್ ಎಸೆದ ಬೆಂಕಿ ಚೆಂಡಿಗೆ ಮಧ್ಯದ ಸ್ಟಂಪ್ ಹಿಂದಕ್ಕೆ ಸರಿಯಿತು…ಇತ್ತ ಬ್ಯಾಟ್ಸ್​ಮನ್ ಕೂಡ ಕ್ಲೀನ್ ಬೌಲ್ಡ್ ಆಗಿದ್ದೀನಿ ಎಂದುಕೊಂಡು ಮೈದಾನ ತೊರೆಯಲು ಮುಂದಾಗಿದ್ದರು…ಆದರೆ ಅಂಪೈರ್ ನಾಟೌಟ್ ಅಂದರು. ಇಂತಹದೊಂದು ವಿಚಿತ್ರ ತೀರ್ಪಿಗೆ ಸಾಕ್ಷಿಯಾಗಿದ್ದು ಆಸ್ಟ್ರೇಲಿಯಾದಲ್ಲಿ ನಡೆದ ಕ್ಲಬ್ ಪಂದ್ಯ.

ಮೆಲ್ಬೋರ್ನ್ ಕ್ಲಬ್ ಕ್ರಿಕೆಟ್​ನಲ್ಲಿ ನಡೆದ ಪಂದ್ಯವೊಂದರಲ್ಲಿ ಬ್ಯಾಟರ್ ಕ್ಲೀನ್ ಬೌಲ್ಡ್ ಆದರೂ ಬೇಲ್ಸ್ ಮಾತ್ರ ಬಿದ್ದಿರಲಿಲ್ಲ. ಇತ್ತ ಮಿಡಲ್ ಸ್ಟಂಪ್ ನೋಡಿ ಬ್ಯಾಟ್ಸ್​ಮನ್ ಔಟ್ ಆಗಿದ್ದೇನೆ ಅಂದುಕೊಂಡರು. ಆದರೆ ಐಸಿಸಿ ನಿಯಮದ ಪ್ರಕಾರ ಅಂಪೈರ್ ಟ್ವಿಸ್ಟ್ ನೀಡಿದರು.

ಐಸಿಸಿ ನಿಯಮ ಪ್ರಕಾರ, ಬೌಲ್ಡ್ ಔಟ್ ತೀರ್ಪು ನೀಡಬೇಕಿದ್ದರೆ ಸ್ಟಂಪ್​ ಮೇಲಿಂದ ಬೇಲ್ಸ್ ಬೀಳಬೇಕು. ಆದರೆ ಈ ಪಂದ್ಯದಲ್ಲಿ ಮಧ್ಯದ ಸ್ಟಂಪ್ ಹಿಂದಕ್ಕೆ ಸರಿದರೂ ಬೇಲ್ಸ್ ಮಾತ್ರ ಎಗರಿರಲಿಲ್ಲ. ಹೀಗಾಗಿ ಫೀಲ್ಡ್ ಅಂಪೈರ್ ನಾಟೌಟ್ ಎಂಬ ತೀರ್ಮಾನಕ್ಕೆ ಬಂದರು. ಇದೀಗ ಬೌಲ್ಡ್ ನಾಟೌಟ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿಶ್ವಕಪ್​ನಲ್ಲೂ ಬೇಲ್ಸ್​ ವಿವಾದ:

ಈ ಹಿಂದೆ 2019ರ ಏಕದಿನ ವಿಶ್ವಕಪ್​ ವೇಳೆ ಝಿಂಗ್ ಬೇಲ್ಸ್ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಐಸಿಸಿ ಪ್ರಸ್ತುತ ಪಡಿಸಿದ್ದ ಲೈಟಿಂಗ್ ಬೇಲ್ಸ್​ಗಳು ಬೌಲ್ಡ್ ಆದರೂ ಬೀಳದಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: IPL 2024: ಐಪಿಎಲ್ ಯಾವಾಗ ಶುರು? ಇಲ್ಲಿದೆ ಉತ್ತರ

ಅದರಲ್ಲೂ 2019 ರ ಏಕದಿನ ವಿಶ್ವಕಪ್​ನಲ್ಲಿ ಬೌಲ್ಡ್ ಆದರೂ ಐವರು ಬ್ಯಾಟ್ಸ್​ಮನ್​ಗಳು ಬೇಲ್ಸ್ ಬೀಳದಿರುವ ಕಾರಣ ಜೀವದಾನ ಪಡೆದಿದ್ದರು.  ಈ ಬಗ್ಗೆ ಅಪಸ್ವರಗಳು ಕೇಳಿ ಬಂದಿದ್ದವು. ಇದಾದ ಬಳಿಕ ಬೇಲ್ಸ್ ವಿನ್ಯಾಸ ಬಗ್ಗೆ ಐಸಿಸಿ ಹೆಚ್ಚಿನ ಗಮನ ಕೇಂದ್ರೀಕರಿಸಿತ್ತು.

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ