AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SA 2nd T20I: ಭಾರತ-ದಕ್ಷಿಣ ಆಫ್ರಿಕಾ ದ್ವಿತೀಯ ಟಿ20 ಪಂದ್ಯ ಯಾವಾಗ?, ಎಲ್ಲಿ?, ಎಷ್ಟು ಗಂಟೆಗೆ?

South Africa vs India 2nd T20I Details: ಡರ್ಬನ್​ನ ಕಿಂಗ್ಸ್‌ಮೀಡ್ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಸೌತ್ ಆಫ್ರಿಕಾ – ಭಾರತ ನಡುವಣ ಮೊದಲ ಟಿ20 ಪಂದ್ಯವು ಒಂದೂ ಎಸೆತ ಕಾಣದೆ ಮಳೆಯ ಕಾರಣ ರದ್ದಾಯಿತು. ಇದೀಗ ಉಭಯ ತಂಡಗಳು ಎರಡನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ಹಾಗಾದರೆ, ಇಂಡೋ-ಆಫ್ರಿಕಾ ದ್ವಿತೀಯ ಟಿ20 ಯಾವಾಗ?, ಎಲ್ಲಿ ನಡೆಯಲಿದೆ?.

IND vs SA 2nd T20I: ಭಾರತ-ದಕ್ಷಿಣ ಆಫ್ರಿಕಾ ದ್ವಿತೀಯ ಟಿ20 ಪಂದ್ಯ ಯಾವಾಗ?, ಎಲ್ಲಿ?, ಎಷ್ಟು ಗಂಟೆಗೆ?
India vs South Africa 2nd T20I
Follow us
Vinay Bhat
|

Updated on:Dec 11, 2023 | 7:12 AM

ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಶುಭಾರಂಭ ಮಾಡಬೇಕು ಎಂಬ ಭಾರತ ತಂಡದ ಕನಸು ಈಡೇರಲಿಲ್ಲ. ಡರ್ಬನ್​ನ ಕಿಂಗ್ಸ್‌ಮೀಡ್ ಸ್ಟೇಡಿಯಂನಲ್ಲಿ ಭಾನುವಾರ ನಡೆಯಬೇಕಿದ್ದ ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವಣ ಮೊದಲ ಟಿ20 ಪಂದ್ಯ ಒಂದೂ ಎಸೆತ ಕಾಣದೆ ಮಳೆಯಿಂದಾಗಿ ರದ್ದುಗೊಂಡಿತು. ಐಸಿಸಿ ಟಿ20 ವಿಶ್ವಕಪ್ ದೃಷ್ಟಿಯಿಂದ ಟೀಮ್ ಇಂಡಿಯಾಕ್ಕೆ ಇದೊಂದು ದೊಡ್ಡ ಹೊಡೆತವಾಗಿದೆ. ಇನ್ನು ಉಳಿದಿರುವುದು ಕೇವಲ ಎರಡು ಟಿ20 ಪಂದ್ಯ ಮಾತ್ರ. ಹಾಗಾದರೆ, ಇಂಡೋ-ಆಫ್ರಿಕಾ ಎರಡನೇ ಟಿ20 ಪಂದ್ಯ ಯಾವಾಗ?, ಎಲ್ಲಿ ನಡೆಯಲಿದೆ?. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಭಾರತ- ದಕ್ಷಿಣ ಆಫ್ರಿಕಾ ಎರಡನೇ ಟಿ20 ಪಂದ್ಯ ಯಾವಾಗ?

ಡಿಸೆಂಬರ್ 12 ಮಂಗಳವಾರದಂದು ಭಾರತ vs ದಕ್ಷಿಣ ಆಫ್ರಿಕಾ ದ್ವಿತೀಯ ಟಿ20 ಪಂದ್ಯ ನಡೆಯಲಿದೆ.

ಇದನ್ನೂ ಓದಿ
Image
IND vs ENG 3rd T20: ಭಾರತದ ವಿರುದ್ಧ ಸೋತರೂ, ಸರಣಿ ಗೆದ್ದ ಇಂಗ್ಲೆಂಡ್
Image
IND vs SA: ಭಾರತ-ಸೌತ್ ಆಫ್ರಿಕಾ ಮೊದಲ ಟಿ20 ಪಂದ್ಯ ರದ್ದು
Image
RCB ತಂಡದ ಅತ್ಯಂತ ಕೆಟ್ಟ ಆಯ್ಕೆಗಳಾವುವು ಗೊತ್ತಾ?
Image
IND vs SA: ಸೌತ್ ಆಫ್ರಿಕಾ ಸರಣಿಗೂ ಟೀಮ್ ಇಂಡಿಯಾ ಆಟಗಾರ ಡೌಟ್..!

ಭಾರತ-ದಕ್ಷಿಣ ಆಫ್ರಿಕಾ ಎರಡನೇ ಟಿ20 ಪಂದ್ಯ ಎಲ್ಲಿ ಆಡಲಾಗುತ್ತದೆ?

ಭಾರತ ಮತ್ತು ದಕ್ಷಿಣ ಆಫ್ರಿಕಾ ಎರಡನೇ ಟಿ20 ಪಂದ್ಯ ಗೆಬರ್ಹದ ಸ್ಯಾಂಟ್ ಜಾರ್ಜ್ ಪಾರ್ಕ್​ನಲ್ಲಿ ನಡೆಯಲಿದೆ.

U19 Asia Cup, 2023: ಭಾರತದ ವಿರುದ್ಧ ಗೆದ್ದು ಬೀಗಿದ ಪಾಕಿಸ್ತಾನ್

ಭಾರತ-ದಕ್ಷಿಣ ಆಫ್ರಿಕಾ ಎರಡನೇ ಟಿ20 ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?

ಭಾರತ vs ದಕ್ಷಿಣ ಆಫ್ರಿಕಾ ದ್ವಿತೀಯ ಟಿ20 ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ ಮತ್ತು ಡಿಸ್ನಿ+ ಹಾಟ್‌ಸ್ಟಾರ್ ಪಂದ್ಯಗಳನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ಲೈವ್ ಸ್ಟ್ರೀಮ್ ಮಾಡುತ್ತದೆ.

ಭಾರತ-ದಕ್ಷಿಣ ಆಫ್ರಿಕಾ ಎರಡನೇ ಟಿ20 ಪಂದ್ಯ ಎಷ್ಟು ಗಂಟೆಗೆ ಆರಂಭ?

ಭಾರತ ಹಾಗೂ ದಕ್ಷಿಣ ಆಫ್ರಿಕಾ ಎರಡನೇ ಟಿ20 ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8:30ಕ್ಕೆ ಆರಂಭವಾಗಲಿದೆ.

ಭಾರತ ಟಿ20 ತಂಡ: ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್, ರುತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರವೀಂದ್ರ ಜಡೇಜಾ (ಉಪ ಹಾಯಕ), ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ದೀಪಕ್ ಚಹರ್.

ದಕ್ಷಿಣ ಆಫ್ರಿಕಾ ಟಿ20 ತಂಡ: ಏಡೆನ್ ಮಾರ್ಕ್ರಾಮ್ (ನಾಯಕ), ಒಟ್ನೀಲ್ ಬಾರ್ಟ್‌ಮನ್, ಮ್ಯಾಥ್ಯೂ ಬ್ರಿಟ್ಜ್ಕೆ, ನಾಂಡ್ರೆ ಬರ್ಗರ್, ಜೆರಾಲ್ಡ್ ಕೋಟ್ಜಿ, ಡೊನೊವನ್ ಫೆರೀರಾ, ರೀಜಾ ಹೆಂಡ್ರಿಕ್ಸ್, ಮಾರ್ಕೊ ಯಾನ್ಸೆನ್, ಡೇವಿಡ್ ಮಿಲ್ಲರ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್,ಆಂಡಿಲೆ ಫೆಹ್ಲುಕ್ವಾಯೊ, ತಬ್ರೈಜ್ ಶಮ್ಸಿ, ಟ್ರಿಸ್ಟಾನ್ ಸ್ಟಬ್ಸ್, ಲಿಜಾಡ್ ವಿಲಿಯಮ್ಸ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:54 am, Mon, 11 December 23

ಪಂಜಾಬ್ ವಿರುದ್ಧ RCBಗೆ ಗೆಲವು: ಈ ಸಲ ಕಪ್​ ನಮ್ದೇ...
ಪಂಜಾಬ್ ವಿರುದ್ಧ RCBಗೆ ಗೆಲವು: ಈ ಸಲ ಕಪ್​ ನಮ್ದೇ...
ಕೆಂಪೇಗೌಡ ಪ್ರಾಧಿಕಾರಕ್ಕೆ ಸರ್ಕಾರದಿಂದ ಸುಮನಹಳ್ಳಿ ಬಳಿ 5 ಎಕರೆ ಜಾಗ: DCM
ಕೆಂಪೇಗೌಡ ಪ್ರಾಧಿಕಾರಕ್ಕೆ ಸರ್ಕಾರದಿಂದ ಸುಮನಹಳ್ಳಿ ಬಳಿ 5 ಎಕರೆ ಜಾಗ: DCM
ಕರ್ನಾಟಕದ ಜನರೇ ಕಮಲ್ ಹಾಸನ್​ಗೆ ಪಾಠ ಕಲಿಸಬೇಕು: ಯದುವೀರ್ ಒಡೆಯರ್
ಕರ್ನಾಟಕದ ಜನರೇ ಕಮಲ್ ಹಾಸನ್​ಗೆ ಪಾಠ ಕಲಿಸಬೇಕು: ಯದುವೀರ್ ಒಡೆಯರ್
ಇದು ಒಂದು ರಾಷ್ಟ್ರ, ಒಂದು ಪತಿ ಯೋಜನೆಯಾ? ಭಗವಂತ್ ಮಾನ್ ವಿವಾದಾತ್ಮಕ ಹೇಳಿಕೆ
ಇದು ಒಂದು ರಾಷ್ಟ್ರ, ಒಂದು ಪತಿ ಯೋಜನೆಯಾ? ಭಗವಂತ್ ಮಾನ್ ವಿವಾದಾತ್ಮಕ ಹೇಳಿಕೆ
ರಷ್ಯಾಗೆ ಮತ್ತೊಂದು ಹೊಡೆತ; ಕ್ರಿಮಿಯನ್ ಸೇತುವೆ ಸ್ಫೋಟಗೊಳಿಸಿದ ಉಕ್ರೇನ್​
ರಷ್ಯಾಗೆ ಮತ್ತೊಂದು ಹೊಡೆತ; ಕ್ರಿಮಿಯನ್ ಸೇತುವೆ ಸ್ಫೋಟಗೊಳಿಸಿದ ಉಕ್ರೇನ್​
ಆರ್​ಸಿಬಿ ಗೆಲ್ಲುತ್ತೆ, ಬೈಕ್​ಗಳಲ್ಲಿ ಬೆಂಗಳೂರು ಸುತ್ತುತ್ತೇವೆ: ಯುವಕರು
ಆರ್​ಸಿಬಿ ಗೆಲ್ಲುತ್ತೆ, ಬೈಕ್​ಗಳಲ್ಲಿ ಬೆಂಗಳೂರು ಸುತ್ತುತ್ತೇವೆ: ಯುವಕರು
ಕಮಲ್ ಹಾಸನ್ ವಿವಾದ: ಕನ್ನಡಿಗರು ಕಾನೂನು ಕೈಗೆ ತೆಗೆದುಕೊಳ್ಳಬೇಡಿ: ಡಿಕೆಶಿ
ಕಮಲ್ ಹಾಸನ್ ವಿವಾದ: ಕನ್ನಡಿಗರು ಕಾನೂನು ಕೈಗೆ ತೆಗೆದುಕೊಳ್ಳಬೇಡಿ: ಡಿಕೆಶಿ
ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆ ಮೋದಿಯಿಂದ ಉದ್ಘಾಟನೆಗೆ ಸಜ್ಜು
ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆ ಮೋದಿಯಿಂದ ಉದ್ಘಾಟನೆಗೆ ಸಜ್ಜು
ಇವತ್ತಿನ ಪಂದ್ಯ ನೋಡಲು ವಿದೇಶಗಳಿಂದಲೂ ಆಗಮಿಸಿರುವ ಭಾರತೀಯರು!
ಇವತ್ತಿನ ಪಂದ್ಯ ನೋಡಲು ವಿದೇಶಗಳಿಂದಲೂ ಆಗಮಿಸಿರುವ ಭಾರತೀಯರು!
ರಕ್ತ ಸುರಿಯುತ್ತಿದ್ದರೂ ನೊಯ್ಡಾದ ರಸ್ತೆಯಲ್ಲಿ ಯುವಕನ ಥಳಿಸಿದ ವಿಡಿಯೋ ವೈರಲ್
ರಕ್ತ ಸುರಿಯುತ್ತಿದ್ದರೂ ನೊಯ್ಡಾದ ರಸ್ತೆಯಲ್ಲಿ ಯುವಕನ ಥಳಿಸಿದ ವಿಡಿಯೋ ವೈರಲ್