ಉಮ್ರಾನ್ ಭಾರತೀಯ ಕ್ರಿಕೆಟ್‌ನ ಅದ್ಭುತ ಆವಿಷ್ಕಾರ! ಮುಂದೊಂದು ದಿನ ಅಖ್ತರ್ ದಾಖಲೆ ಮುರಿಯುತ್ತಾನೆ; ಬ್ರೆಟ್ ಲೀ

| Updated By: ಪೃಥ್ವಿಶಂಕರ

Updated on: Jun 02, 2022 | 9:32 PM

Umran Malik: ಉಮ್ರಾನ್ ಮಲಿಕ್ ಭಾರತೀಯ ಕ್ರಿಕೆಟ್‌ನ ಅದ್ಭುತ ಆವಿಷ್ಕಾರ ಎಂದು ಹೊಗಳಿದ್ದಾರೆ. ಕಳೆದ 15-20 ವರ್ಷಗಳಲ್ಲಿ ವೇಗದ ಬೌಲರ್‌ಗಳ ವೇಗ ಕಡಿಮೆಯಾಗಿದೆ ಎಂಬುದನ್ನು ಒಪ್ಪಿಕೊಳ್ಳಬೇಕು.

ಉಮ್ರಾನ್ ಭಾರತೀಯ ಕ್ರಿಕೆಟ್‌ನ ಅದ್ಭುತ ಆವಿಷ್ಕಾರ! ಮುಂದೊಂದು ದಿನ ಅಖ್ತರ್ ದಾಖಲೆ ಮುರಿಯುತ್ತಾನೆ; ಬ್ರೆಟ್ ಲೀ
ಉಮ್ರಾನ್ ಮಲಿಕ್, ಬ್ರೆಟ್ ಲೀ
Follow us on

ಉಮ್ರಾನ್ ಮಲಿಕ್ (Umran Malik)… ಈ ಹೆಸರು ಪ್ರಪಂಚದಾದ್ಯಂತ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಈ ಕ್ರಿಕೆಟಿಗ ಈಗ ಟೀಮ್ ಇಂಡಿಯಾ (Team India)ದ ಭಾಗವಾಗಿದ್ದು, ಇದಕ್ಕೆ ಕಾರಣ ಐಪಿಎಲ್ 2022 ರಲ್ಲಿ ಅವರ ಪ್ರದರ್ಶನ. ಉಮ್ರಾನ್ ಮಲಿಕ್ ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad) ಪರ ಆಡಿ 14 ಪಂದ್ಯಗಳಲ್ಲಿ 22 ವಿಕೆಟ್ ಪಡೆದಿದ್ದಾರೆ.ಈ ಪ್ರದರ್ಶನದೊಂದಿಗೆ ಮಲಿಕ್​ಗೆ ಪಂದ್ಯಾವಳಿಯ ಉದಯೋನ್ಮುಖ ಆಟಗಾರ ಎಂಬ ಪ್ರಶಸ್ತಿ ಕೂಡ ಲಭಿಸಿದೆ. ಆದರೆ ಹೆಚ್ಚು ಮುಖ್ಯವಾದ ವಿಷಯವೆಂದರೆ ಅವರು ತಮ್ಮ ವೇಗದ ಬಲದಿಂದ ಎಲ್ಲರ ಗಮನ ಸೆಳೆದಿದ್ದಾರೆ. ಶೋಯೆಬ್ ಅಖ್ತರ್ ಆಗಿರಲಿ ಅಥವಾ ಬ್ರೆಟ್ ಲೀಯಂತಹ ಅನುಭವಿ ವೇಗದ ಬೌಲರ್ ಆಗಿರಲಿ, ಎಲ್ಲರೂ ಉಮ್ರಾನ್ ಮಲಿಕ್ ಅವರನ್ನು ಭವಿಷ್ಯದ ಸೂಪರ್ ಸ್ಟಾರ್ ಎಂದು ಕರೆಯುತ್ತಿದ್ದಾರೆ. ಈಗ ಬ್ರೆಟ್ ಲೀ ಅವರು ನ್ಯೂಸ್ 9 ಲೈವ್‌ಗೆ ನೀಡಿದ ಸಂದರ್ಶನದಲ್ಲಿ ಉಮ್ರಾನ್ ಮಲಿಕ್ ಅವರ ವೇಗ ಅದ್ಭುತವಾಗಿದ್ದು, ಅವರು ಶೋಯೆಬ್ ಅಖ್ತರ್ ಅವರ ದಾಖಲೆಯನ್ನು ಮುರಿಯಲ್ಲಿದ್ದಾರೆ ಎಂದು ಹೇಳಿದ್ದಾರೆ.

ಶೋಯೆಬ್ ಅಖ್ತರ್ ಅತಿ ವೇಗದ ಚೆಂಡನ್ನು ಬೌಲಿಂಗ್ ಮಾಡಿದ ದಾಖಲೆಯನ್ನು ಹೊಂದಿದ್ದು, ಅಖ್ತರ್ 161.3 ಕಿ.ಮೀ ವೇಗದಲ್ಲಿ ಚೆಂಡನ್ನು ಎಸೆದು ದಾಖಲೆ ನಿರ್ಮಿಸಿದ್ದರು. ಇಲ್ಲಿಯವರೆಗೆ ಯಾವುದೇ ಬೌಲರ್ ಅಖ್ತರ್ ಅವರ ಈ ದಾಖಲೆಯನ್ನು ಮುರಿಯಲು ಸಾಧ್ಯವಾಗಲಿಲ್ಲ. ಆದರೆ ಉಮ್ರಾನ್ ಮಲಿಕ್ ಐಪಿಎಲ್ 2022 ರಲ್ಲಿ 157 ಕಿಮೀ ವೇಗದಲ್ಲಿ ಚೆಂಡನ್ನು ಎಸೆಯುವುದರೊಂದಿಗೆ ಈ ದಾಖಲೆಯನ್ನು ಮುರಿಯುವ ಭರವಸೆಯನ್ನು ತೋರಿಸಿದ್ದಾರೆ. ನ್ಯೂಸ್ 9 ಲೈವ್ ಜೊತೆಗಿನ ಸಂವಾದದಲ್ಲಿ ಬ್ರೆಟ್ ಲೀ ಕೂಡ ಇದನ್ನು ಒಪ್ಪಿಕೊಂಡಿದ್ದು, ಉಮ್ರಾನ್ ಮಲಿಕ್ ಅವರ ವೇಗ, ಆಕ್ರಮಣಶೀಲತೆಯಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ ಎಂದು ಹೇಳಿದ್ದಾರೆ. ಮಲಿಕ್ ನನಗೆ ವಕಾರ್ ಯೂನಿಸ್‌ನಂತೆ ಕಾಣುತ್ತಾನೆ. ಅವನು ವಿಕೆಟ್ ಕಡೆಗೆ ಓಡುವ ರೀತಿ, ಅವನ ಕ್ರಿಯೆ ಮತ್ತು ಈ ಆಟಗಾರನ ಫಾಲೋ-ಥ್ರೂ. ಅದ್ಭುತವಾಗಿದೆ ಎಂದು ಬಣ್ಣಿಸಿದ್ದಾರೆ.

ಇದನ್ನೂ ಓದಿ: IPL 2022: ಉಮ್ರಾನ್ ಮಲಿಕ್ ಬೌಲಿಂಗ್ ಬಗ್ಗೆ ಶಮಿ ಹೇಳಿದ್ದೇನು?

ಇದನ್ನೂ ಓದಿ
ENG vs NZ: 7 ರನ್​ಗಳಿಗೆ ಆರಂಭಿಕ 4 ವಿಕೆಟ್ ಪತನ! ವಿಶ್ವ ಚಾಂಪಿಯನ್ ಕಿವೀಸ್​ಗೆ ಆಂಗ್ಲರೆದುರು ಭಾರೀ ಮುಖಭಂಗ
French Open 2022: ಗ್ರ್ಯಾಂಡ್ ಸ್ಲಾಮ್ ಫೈನಲ್ ಆಡುವ ರೋಹನ್ ಬೋಪಣ್ಣ ಕನಸು ಭಗ್ನ; ಸೆಮಿಫೈನಲ್‌ನಲ್ಲಿ ಸೋಲು

ಉಮ್ರಾನ್ ಭಾರತೀಯ ಕ್ರಿಕೆಟ್‌ನ ಅದ್ಭುತ ಆವಿಷ್ಕಾರ: ಬ್ರೆಟ್ ಲೀ
ಬ್ರೆಟ್ ಲೀ ಅವರು, ‘ಉಮ್ರಾನ್ ಮಲಿಕ್ ಭಾರತೀಯ ಕ್ರಿಕೆಟ್‌ನ ಅದ್ಭುತ ಆವಿಷ್ಕಾರ ಎಂದು ಹೊಗಳಿದ್ದಾರೆ. ಕಳೆದ 15-20 ವರ್ಷಗಳಲ್ಲಿ ವೇಗದ ಬೌಲರ್‌ಗಳ ವೇಗ ಕಡಿಮೆಯಾಗಿದೆ ಎಂಬುದನ್ನು ಒಪ್ಪಿಕೊಳ್ಳಬೇಕು. 130-140 ವೇಗವನ್ನು ವೇಗವಾಗಿ ಪರಿಗಣಿಸಲಾಗುತ್ತದೆ. ಆದರೆ 140 ರ ವೇಗವು ವೇಗವಾಗಿರುತ್ತದೆ, ಆದರೆ ಈ ವೇಗವು 150 ಅಥವಾ ಅದಕ್ಕಿಂತ ಹೆಚ್ಚು ತಲುಪಿದಾಗ ಅದು ಬೇರೆ ವಿಷಯ. ಮುಂದಿನ ದಿನಗಳಲ್ಲಿ ಉಮ್ರಾನ್ ಮಲಿಕ್ 160 ಕಿ.ಮೀ. ವೇಗದಲ್ಲಿಯೂ ಬೌಲ್ ಮಾಡಬಹುದು ಎಂದು ಲೀ ಹೇಳಿದ್ದಾರೆ.

ಉಮ್ರಾನ್ ಮಲಿಕ್ ತಂತ್ರ ಅದ್ಭುತವಾಗಿದೆ: ಬ್ರೆಟ್ ಲೀ
ಉಮ್ರಾನ್ ಮಲಿಕ್ ಅವರ ಬೌಲಿಂಗ್ ತಂತ್ರವೂ ಅತ್ಯುತ್ತಮವಾಗಿದೆ ಎಂದು ಬ್ರೆಟ್ ಲೀ ಹೇಳಿದ್ದಾರೆ. ಲೀ, ‘ಅತಿ ವೇಗದ ಎಸೆತಗಳನ್ನು ಎಸೆಯುವ ಬೌಲರ್‌ಗಳು ಅತ್ಯಂತ ವೇಗವಾಗಿ ಓಡುತ್ತಾರೆ. ಉಮ್ರಾನ್ ಮಲಿಕ್ ಅವರ ತಂತ್ರ ಪರಿಪೂರ್ಣವಾಗಿದ್ದು, ಅವರು ಕೆಲವು ವಿಷಯಗಳಲ್ಲಿ ತನ್ನ ಬೌಲಿಂಗ್ ಕ್ರಮವನ್ನು ಸುಧಾರಿಸುವ ಸಾಮಥ್ರ್ಯ ಹೊಂದಿದ್ದಾರೆ. ಆದರೆ ನಾನು 39 ವರ್ಷದವನಾಗಿದ್ದಾಗಲೂ ನನ್ನ ಬೌಲಿಂಗ್ ಕ್ರಮವನ್ನು ಸುಧಾರಿಸುತ್ತಿದ್ದೆ ಎಂದು ಹೇಳುವ ಮೂಲಕ ಉಮ್ರಾನ್ ಪ್ರತಿಭೆಯನ್ನು ಕೊಂಡಾಡಿದ್ದಾರೆ.

Published On - 9:32 pm, Thu, 2 June 22