IPL 2022: ಉಮ್ರಾನ್ ಮಲಿಕ್ ಬೌಲಿಂಗ್ ಬಗ್ಗೆ ಶಮಿ ಹೇಳಿದ್ದೇನು?
IPL 2022: ಪ್ರಸಕ್ತ ಸೀಸನ್ನಲ್ಲಿ ಮೊದಲ 12 ಪಂದ್ಯಗಳಿಂದ ಉಮ್ರಾನ್ ಮಲಿಕ್ 18 ವಿಕೆಟ್ ಕಬಳಿಸಿದ್ದಾರೆ. ಯುವ ವೇಗಿ ಗುಜರಾತ್ ಟೈಟಾನ್ಸ್ ವಿರುದ್ಧ ಐದು ವಿಕೆಟ್ ಪಡೆದು ಮಿಂಚಿದ್ದರು.
ಸನ್‌ರೈಸರ್ಸ್ ಹೈದರಾಬಾದ್ ವೇಗಿ ಉಮ್ರಾನ್ ಮಲಿಕ್ ಪ್ರಸ್ತುತ ಐಪಿಎಲ್‌ನಲ್ಲಿ ತಮ್ಮ ವೇಗದ ಮೂಲಕ ಸಾಕಷ್ಟು ಪ್ರಭಾವ ಬೀರಿದ್ದಾರೆ. ಮಲಿಕ್ ತಮ್ಮ ವೇಗದಿಂದ ಬ್ಯಾಟ್ಸ್‌ಮನ್‌ಗಳಿಗೆ ಭೀತಿ ಹುಟ್ಟಿಸಿದ್ದಾರೆ. ಇದಾಗ್ಯೂ ಯುವ ವೇಗಿ ಲೈನ್ ಲೆಂಗ್ತ್ ಕಾಪಾಡಿಕೊಳ್ಳಲು ಎಡವುತ್ತಿದ್ದಾರೆ. ಇದೇ ಕಾರಣದಿಂದ ಉಮ್ರಾನ್ ಮಲಿಕ್ ಕೆಲ ಪಂದ್ಯಗಳಲ್ಲಿ ದುಬಾರಿಯಾಗಿದ್ದಾರೆ. ತಮ್ಮ ವೇಗದ ಮೂಲಕ ಹೊಸ ಸೆನ್ಸೇಷನ್ ಸೃಷ್ಟಿಸಿರುವ ಜಮ್ಮು ಕಾಶ್ಮೀರದ ಯುವ ವೇಗಿಯ ಕುರಿತು ಟೀಮ್ ಇಂಡಿಯಾ ಬೌಲರ್ ಮೊಹಮ್ಮದ್ ಶಮಿ ಇದೇ ಮೊದಲ ಬಾರಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಶಮಿ, ವೇಗದ ಬೌಲರ್ ತನ್ನ ವೇಗದಿಂದ ಮಾತ್ರ ಯಶಸ್ವಿಯಾಗಲು ಸಾಧ್ಯವಿಲ್ಲ. ವೇಗದ ಜೊತೆಗೆ ಚೆಂಡನ್ನು ಎರಡೂ ಕಡೆ ಸ್ವಿಂಗ್ ಮಾಡುವ ಸಾಮರ್ಥ್ಯ ಹೊಂದಿರಬೇಕು. ಮಲಿಕ್ ವೇಗವನ್ನು ಹೊಂದಿದ್ದಾರೆ, ಆದರೆ ಅವರು ತಮ್ಮ ಬೌಲಿಂಗ್ಗೆ ಇನ್ನೂ ಕೆಲವು ಶಸ್ತ್ರಾಸ್ತ್ರಗಳನ್ನು ಸೇರಿಸುವ ಅಗತ್ಯವಿದೆ ಎಂದು ಮೊಹಮ್ಮದ್ ಶಮಿ ಹೇಳಿದರು.
ಉಮ್ರಾನ್ ಮಲಿಕ್ ಅವರ ವೇಗವನ್ನು ನಾನು ಒಪ್ಪುತ್ತೇನೆ. ಆದರೆ ವೈಯಕ್ತಿಕವಾಗಿ ನಾನು ವೇಗದ ಅಭಿಮಾನಿಯಲ್ಲ. ನೀವು ಗಂಟೆಗೆ 140 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದರೆ ಮತ್ತು ಚೆಂಡನ್ನು ಎರಡೂ ಕಡೆ ಸ್ವಿಂಗ್ ಮಾಡುವ ಕಲೆ ಗೊತ್ತಿದ್ದರೆ ಬ್ಯಾಟ್ಸ್‌ಮನ್‌ಗಳನ್ನು ಇಕ್ಕಟ್ಟಿಗೆ ಸಿಲುಕಿಸಲು ಅದು ಸಾಕು ಎಂದು ನಾನು ನಂಬುತ್ತೇನೆ. ಮಲಿಕ್ ಉತ್ತಮ ವೇಗವನ್ನು ಹೊಂದಿದ್ದಾರೆ. ಆದರೆ ಅವರು ಪ್ರಬುದ್ಧರಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಶಮಿ ಅಭಿಪ್ರಾಯಪಟ್ಟಿದ್ದಾರೆ.
ಪ್ರಸಕ್ತ ಸೀಸನ್ನಲ್ಲಿ ಮೊದಲ 12 ಪಂದ್ಯಗಳಿಂದ ಉಮ್ರಾನ್ ಮಲಿಕ್ 18 ವಿಕೆಟ್ ಕಬಳಿಸಿದ್ದಾರೆ. ಯುವ ವೇಗಿ ಗುಜರಾತ್ ಟೈಟಾನ್ಸ್ ವಿರುದ್ಧ ಐದು ವಿಕೆಟ್ ಪಡೆದು ಮಿಂಚಿದ್ದರು. ಅಷ್ಟೇ ಅಲ್ಲದೆ 157 ಗಂಟೆಗೆ ಕಿ.ಮೀ ವೇಗದಲ್ಲಿ ಚೆಂಡೆಸೆಯುವ ಮೂಲಕ ಈ ಬಾರಿಯ ಐಪಿಎಲ್‌ನಲ್ಲಿ ಅತ್ಯಂತ ವೇಗವಾಗಿ ಬೌಲಿಂಗ್ ಮಾಡಿದ ಬೌಲರ್ ಎಂಬ ದಾಖಲೆ ಬರೆದಿದ್ದಾರೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.