Umran Malik: ಶಪಥ ಅಂದ್ರೆ ಇದಪ್ಪ; ಪಾಕ್ ವೇಗಿ ಅಖ್ತರ್ ದಾಖಲೆ ಮುರಿಯುತ್ತೇನೆ ಎಂದ ಉಮ್ರಾನ್ ಮಲಿಕ್

| Updated By: ಪೃಥ್ವಿಶಂಕರ

Updated on: Jun 05, 2022 | 4:13 PM

Umran Malik: ಮಾಧ್ಯಮಗಳೊಂದಿಗೆ ಮಾತನಾಡಿದ ಉಮ್ರಾನ್ ಮಲಿಕ್, "ಭವಿಷ್ಯದಲ್ಲಿ ನಾನು ಶೋಯೆಬ್ ಅಖ್ತರ್ ಅವರ ವೇಗದ ಬಾಲ್ ದಾಖಲೆಯನ್ನು ಗುರಿಯಾಗಿಸಿಕೊಳ್ಳುತ್ತೇನೆ ಎಂದಿದ್ದಾರೆ.

Umran Malik: ಶಪಥ ಅಂದ್ರೆ ಇದಪ್ಪ; ಪಾಕ್ ವೇಗಿ ಅಖ್ತರ್ ದಾಖಲೆ ಮುರಿಯುತ್ತೇನೆ ಎಂದ ಉಮ್ರಾನ್ ಮಲಿಕ್
ಉಮ್ರಾನ್ ಮಲಿಕ್‌
Follow us on

ಉಮ್ರಾನ್ ಮಲಿಕ್ (Umran Malik) IPL 2022 ರಲ್ಲಿ ತನ್ನ ವೇಗದ ಮೂಲಕ ಎಲ್ಲರನ್ನೂ ಅಚ್ಚರಿಸಿಗೊಳಿಸಿದ ಕಾಶ್ಮೀರಿ ಬೌಲರ್. ಮಲಿಕ್ T20 ಲೀಗ್‌ನ 15 ನೇ ಸೀಸನ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಇದರ ಆಧಾರದ ಮೇಲೆ, ಮಲಿಕ್​ಗೆ ಜೂನ್ 9 ರಿಂದ ದಕ್ಷಿಣ ಆಫ್ರಿಕಾ ವಿರುದ್ಧದ (IND vs SA) 5 ಪಂದ್ಯಗಳ T20 ಸರಣಿಗಾಗಿ ಭಾರತೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಐಪಿಎಲ್ 2022 ರಲ್ಲಿ ಜಮ್ಮು ಮತ್ತು ಕಾಶ್ಮೀರದ ವೇಗದ ಬೌಲರ್ ಗಂಟೆಗೆ 157 ಕಿಮೀ ವೇಗದಲ್ಲಿ ಬೌಲ್ ಮಾಡಿದರು. ಇದು ಐಪಿಎಲ್ ಇತಿಹಾಸದಲ್ಲಿ ಯಾವುದೇ ಭಾರತೀಯ ಬೌಲರ್‌ನ ವೇಗದ ಎಸೆತವಾಗಿದೆ. ಈಗ ಅವರ ಮುಂದಿನ ಗುರಿ ಶೋಯೆಬ್ ಅಖ್ತರ್ (Shoaib Akhtar) ಅವರ ದಾಖಲೆಯಾಗಿದೆ. ಪಾಕಿಸ್ತಾನದ ಮಾಜಿ ವೇಗದ ಬೌಲರ್ 161 ಕಿಮೀ ವೇಗದಲ್ಲಿ ಚೆಂಡನ್ನು ಎಸೆದು ವಿಶ್ವದಾಖಲೆ ಮಾಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಉಮ್ರಾನ್ ಮಲಿಕ್, “ಭವಿಷ್ಯದಲ್ಲಿ ನಾನು ಶೋಯೆಬ್ ಅಖ್ತರ್ ಅವರ ವೇಗದ ಬಾಲ್ ದಾಖಲೆಯನ್ನು ಗುರಿಯಾಗಿಸಿಕೊಳ್ಳುತ್ತೇನೆ. ನಾನು ನನ್ನ ಅತ್ಯುತ್ತಮ ಪ್ರದರ್ಶನದ ಮೇಲೆ ಗಮನ ನೀಡುತ್ತಿದ್ದು, ಈ ದಾಖಲೆಯನ್ನು ಮುರಿಯಬಲ್ಲೆ. “ನಾನು 150 ಕಿಮೀ ವೇಗದಲ್ಲಿ ಬೌಲ್ ಮಾಡಲು ನನ್ನ ಫಿಟ್ನೆಸ್ ಮಟ್ಟವನ್ನು ಕಾಯ್ದುಕೊಳ್ಳಬೇಕಾಗಿದೆ ಎಂದರು.

ಇದನ್ನೂ ಓದಿ
Hardik Pandya: ಐಪಿಎಲ್ ಚಾಂಪಿಯನ್ ಹಾರ್ದಿಕ್​ಗೆ ಉದ್ಯಮಿಯೊಬ್ಬರಿಂದ ಸಿಕ್ತು ಸ್ಪೆಷಲ್ ಗಿಫ್ಟ್; ಫೋಟೋ ವೈರಲ್
IND vs SA: ಆಟಗಾರನಾಗಿ ಕ್ಲಿಕ್, ನಾಯಕನಾಗಿ ಫ್ಲಾಪ್! ನಾಯಕನಾಗಿ ರಾಹುಲ್​ಗೆ ಇದು ಮಾಡು ಇಲ್ಲವೇ ಮಡಿ ಸರಣಿ

ಇದನ್ನೂ ಓದಿ:ಕೇವಲ ಸ್ಪೀಡ್ ಇದ್ದರೆ ಸಾಲದು! ಉಮ್ರಾನ್ ಮಲಿಕ್​ ಕಂಡರೆ ಪಾಕ್ ವೇಗಿಗ್ಯಾಕೆ ಇಷ್ಟೊಂದು ಹೊಟ್ಟೆಕಿಚ್ಚು

ಸದ್ಯ ಎಲ್ಲರ ಗಮನವೂ ಗೆಲುವಿನ ಮೇಲೆಯೇ ಇದೆ

ಸದ್ಯ ನನ್ನ ಗಮನ ಶೋಯೆಬ್ ಅಖ್ತರ್ ಅವರ ದಾಖಲೆಯ ಮೇಲೆ ಇಲ್ಲ. ನಾನು ಚೆನ್ನಾಗಿ ಬೌಲ್ ಮಾಡಲು ಬಯಸುತ್ತೇನೆ. ನಾನು ವೇಗವಾಗಿ ಬೌಲಿಂಗ್ ಮಾಡಲು ಬಯಸುತ್ತೇನೆ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಎಲ್ಲಾ 5 ಪಂದ್ಯಗಳನ್ನು ಗೆಲ್ಲಲು ನನ್ನ ದೇಶಕ್ಕೆ ಸಹಾಯ ಮಾಡಲು ಬಯಸುತ್ತೇನೆ. ಮುಂದೊಂದು ದಿನ ನಾನು ಆ ದಾಖಲೆಯನ್ನು ಮುರಿಯುತ್ತೇನೆ ಎಂದು ಅವರು ಹೇಳಿದರು. ಆದರೆ ಇದೀಗ ದೇಹ ಮತ್ತು ಶಕ್ತಿಯನ್ನು ಕಾಪಾಡಿಕೊಳ್ಳುವತ್ತ ಗಮನ ಹರಿಸಲಾಗಿದೆ ಎಂದರು. ಮಲಿಕ್ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಅದ್ಭುತ ಪ್ರದರ್ಶನ ನೀಡಿದರು. ಆದರೆ, ಹೈದರಬಾದ್ ತಂಡ ಪ್ಲೇಆಫ್ ತಲುಪುವಲ್ಲಿ ವಿಫಲವಾಯಿತು.

22 ವರ್ಷದ ಉಮ್ರಾನ್ ಮಲಿಕ್ 14 ಐಪಿಎಲ್ ಪಂದ್ಯಗಳಲ್ಲಿ 20ರ ಸರಾಸರಿಯಲ್ಲಿ 22 ವಿಕೆಟ್ ಪಡೆದಿದ್ದಾರೆ. 25 ರನ್ ನೀಡಿ 5 ವಿಕೆಟ್‌ ಪಡೆದಿದ್ದು ಅವರ ಅತ್ಯುತ್ತಮ ಪ್ರದರ್ಶನವಾಗಿತ್ತು. ಈ ಸೀಸನ್​ನಲ್ಲಿ ಮಲಿಕ್ ಇನ್ನೊಂದು ಪಂದ್ಯದಲ್ಲಿ 4 ವಿಕೆಟ್‌ ಪಡೆದ ಸಾಧನೆಯನ್ನು ಮಾಡಿದರು. ಆದರೆ ಈ ಸೀಸನ್​ನಲ್ಲಿ ಮಲಿಕ್ ಎಕನಾಮಿ 9 ಕ್ಕಿಂತ ಹೆಚ್ಚಿತ್ತು. ಆದ್ದರಿಂದ ಅವರು ಅದನ್ನು ಸುಧಾರಿಸಲು ಬಯಸುತ್ತಾರೆ. ಒಟ್ಟಾರೆ ಮಲಿಕ್ 22 ಟಿ20 ಪಂದ್ಯಗಳಲ್ಲಿ 33 ವಿಕೆಟ್ ಪಡೆದಿದ್ದಾರೆ.

Published On - 4:13 pm, Sun, 5 June 22