UP T20 League 2024: ರಿಂಕು ಸಿಂಗ್ ಅಲಭ್ಯತೆಯ ನಡುವೆ ಚಾಂಪಿಯನ್ ಕಿರೀಟ ತೊಟ್ಟ ಮೀರತ್ ಮೇವರಿಕ್ಸ್
UP T20 League 2024: ಎರಡನೇ ಆವೃತ್ತಿಯ ಯುಪಿ ಟಿ20 ಲೀಗ್ಗೆ ಅದ್ಧೂರಿ ತೆರೆ ಬಿದ್ದಿದೆ. ಸೆಪ್ಟೆಂಬರ್ 14 ರಂದು ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಮಾಧವ್ ಕೌಶಿಕ್ ನಾಯಕತ್ವದ ಮೀರತ್ ಮೇವರಿಕ್ಸ್ ತಂಡ, ಕಾನ್ಪುರ ಸೂಪರ್‌ಸ್ಟಾರ್ ತಂಡವನ್ನು 5 ವಿಕೆಟ್ಗಳಿಂದ ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.
ಎರಡನೇ ಆವೃತ್ತಿಯ ಯುಪಿ ಟಿ20 ಲೀಗ್ಗೆ ಅದ್ಧೂರಿ ತೆರೆ ಬಿದ್ದಿದೆ. ಸೆಪ್ಟೆಂಬರ್ 14 ರಂದು ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಮಾಧವ್ ಕೌಶಿಕ್ ನಾಯಕತ್ವದ ಮೀರತ್ ಮೇವರಿಕ್ಸ್ ತಂಡ, ಕಾನ್ಪುರ ಸೂಪರ್‌ಸ್ಟಾರ್ ತಂಡವನ್ನು 5 ವಿಕೆಟ್ಗಳಿಂದ ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಮೀರತ್ ಪರ ನಾಯಕನ ಇನ್ನಿಂಗ್ಸ್ ಆಡಿದ ಮಾಧವ್ ಕೌಶಿಕ್ ಅಜೇಯ 75 ರನ್‌ಗಳ ಇನ್ನಿಂಗ್ಸ್ ಆಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಕೊನೆಯ ಓವರ್ವರೆಗೂ ರೋಚಕವಾಗಿ ಸಾಗಿದ ಪಂದ್ಯದಲ್ಲಿ ಕೌಶಿಕ್ 2 ಎಸೆತಗಳು ಬಾಕಿ ಇರುವಾಗಲೇ ಸಿಕ್ಸರ್ ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟರು.
191 ರನ್‌ಗಳ ಟಾರ್ಗೆಟ್
ಎಕಾನಾದಲ್ಲಿ ನಡೆದ ಈ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕಾನ್ಪುರ ಸೂಪರ್‌ಸ್ಟಾರ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 190 ರನ್ ಕಲೆಹಾಕಿತು. ತಂಡದ ಪರ ನಾಯಕ ಸಮೀರ್ ರಿಜ್ವಿ 36 ಎಸೆತಗಳಲ್ಲಿ 57 ರನ್‌ಗಳ ಅತ್ಯಧಿಕ ಇನ್ನಿಂಗ್ಸ್ ಆಡಿದರೆ, ರಿಜ್ವಿ ಹೊರತಾಗಿ ಶೌರ್ಯ ಸಿಂಗ್ 56 ರನ್ ಮತ್ತು ಶೋಯೆಬ್ ಸಿದ್ದಿಕಿ 35 ರನ್ ಗಳಿಸಿದರು. ಈ ಮೂವರ ಆಟದಿಂದ ಕಾನ್ಪುರ ತಂಡ 190 ರನ್‌ಗಳ ಸ್ಪರ್ಧಾತ್ಮಕ ಮೊತ್ತವನ್ನು ಕಲೆಹಾಕಿತು. ಮೀರತ್ ಮೇವರಿಕ್ಸ್ ಪರ ಬೌಲಿಂಗ್‌ನಲ್ಲಿ ಮಿಂಚಿದ ಯಶ್ ಗಾರ್ಗ್ ಗರಿಷ್ಠ 3 ವಿಕೆಟ್ ಪಡೆದರು.
CHAMPIONS OF THE MAHA SANGRAM! @UPCACricket | @Meerutmavericks #MahaSangramKaMahaMuqabla! #CricketKaMahaSangram #UPT20 #UPT20League #Cricket #UttarPradeshCricket #MeerutMavericksVSKanpurSuperstars pic.twitter.com/dz3O5SslUf
— UP T20 League (@t20uttarpradesh) September 14, 2024
ಸ್ವಸ್ತಿಕ್- ಕೌಶಿಕ್ ಗೆಲುವಿನ ಜೊತೆಯಾಟ
ಇನ್ನು ಗೆಲುವಿಗೆ 191 ರನ್‌ಗಳ ಗುರಿ ಬೆನ್ನಟ್ಟಿದ ಮೀರತ್ ಪರ ಸ್ವಸ್ತಿಕ್ ಚಿಕಾರ 62 ರನ್‌ಗಳ ಕಾಣಿಕೆ ನೀಡಿದರೆ, ನಾಯಕ ಕೌಶಿಕ್ ಅವರ ಅಜೇಯ ಅರ್ಧಶತಕದ ಆಧಾರದ ಮೇಲೆ 19.4 ಓವರ್‌ಗಳಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು ಗೆಲುವು ಸಾಧಿಸಿತು. ಇದರೊಂದಿಗೆ ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ ಮೀರತ್ ತಂಡ, ಲೀಗ್ನ ಮೊದಲ ಆವೃತ್ತಿಯಲ್ಲೂ ಫೈನಲ್ ತಲುಪಿತ್ತು. ಆದರೆ ಫೈನಲ್ ಪಂದ್ಯದಲ್ಲಿ ಕಾಶಿ ರುದ್ರಾಸ್ ತಂಡದ ವಿರುದ್ಧ ಸೋತು ಚಾಂಪಿಯನ್ ಪಟ್ಟದಿಂದ ವಂಚಿತವಾಗಿತ್ತು.
ಕೊನೆಯ ಓವರ್ ರೋಚಕತೆ
ಕೊನೆಯ ಓವರ್‌ನಲ್ಲಿ ಮೀರತ್ ತಂಡಕ್ಕೆ 8 ರನ್‌ಗಳ ಅಗತ್ಯವಿತ್ತು. ನಾಯಕ ಮಾಧವ್ ಕೌಶಿಕ್ ಮತ್ತು ಹೃತಿಕ್ ಜೋಡಿ ಕ್ರೀಸ್‌ನಲ್ಲಿದ್ದರು. ಕಾನ್ಪುರ ಪರ ದಾಳಿಗಿಳಿದ ಬೌಲರ್ ಮೊಹ್ಸಿನ್ ಖಾನ್ ಅವರ ಮೊದಲ ಎಸೆತದಲ್ಲಿ ಹೃತಿಕ್ ಒಂದು ರನ್ ತೆಗೆದುಕೊಂಡರು. ಎರಡನೇ ಎಸೆತ ವೈಡ್ ಆಗಿದ್ದು, ಒಟ್ಟು 3 ರನ್ ಗಳಿಸಲಾಯಿತು. ಮುಂದಿನ ಎಸೆತದಲ್ಲಿ ಕೌಶಿಕ್ ಸಿಂಗಲ್ ತೆಗೆದುಕೊಂಡರೆ, ನಂತರದ ಎಸೆತದಲ್ಲೂ ಹೃತಿಕ್ ಸಿಂಗಲ್ ತೆಗೆದುಕೊಂಡು ನಾಯಕನಿಗೆ ಸ್ಟ್ರೈಕ್ ನೀಡಿದರು. ಈ ವೇಳೆ ಒತ್ತಡದಲ್ಲಿದ್ದ ಮೊಹ್ಸಿನ್ ಮತ್ತೆ ವೈಡ್ ಬೌಲ್ ಮಾಡಿದರು. ಆ ನಂತರ ಕೌಶಿಕ್ ಸಿಕ್ಸರ್ ಬಾರಿಸುವ ಮೂಲಕ ತಂಡವನ್ನು ಚಾಂಪಿಯನ್ ಮಾಡಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:32 pm, Sun, 15 September 24