UPW vs GG Highlights, WPL 2026: ಹೋರಾಟ ನೀಡಿ ಸೋತ ಯುಪಿ ವಾರಿಯರ್ಸ್
UP Warriorz vs Gujarat Giants Highlights in Kannada: ಮಹಿಳಾ ಪ್ರೀಮಿಯರ್ ಲೀಗ್ 2026 ರ ಎರಡನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್, ಯುಪಿ ವಾರಿಯರ್ಸ್, ತಂಡವನ್ನು ಎದುರಿಸಿತು. ರನ್‌ಗಳ ಮಳೆಯೇ ಹರಿದ ಈ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಅಂತಿಮವಾಗಿ 10 ರನ್‌ಗಳಿಂದ ಗೆಲುವು ಸಾಧಿಸುವುದರಲ್ಲಿ ಯಶಸ್ವಿಯಾಯಿತು.

ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ 2026 ರ ಎರಡನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್, ಯುಪಿ ವಾರಿಯರ್ಸ್, ತಂಡವನ್ನು ಎದುರಿಸಿತು. ರನ್‌ಗಳ ಮಳೆಯೇ ಹರಿದ ಈ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಅಂತಿಮವಾಗಿ 10 ರನ್‌ಗಳಿಂದ ಗೆಲುವು ಸಾಧಿಸುವುದರಲ್ಲಿ ಯಶಸ್ವಿಯಾಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಪಿ ವಾರಿಯರ್ಸ್ ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 207 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಯುಪಿ 20 ಓವರ್‌ಗಳಲ್ಲಿ 197 ರನ್ ಕಲೆಹಾಕಲಷ್ಟೇ ಶಕ್ತವಾಗಿ ಪಂದ್ಯವನ್ನು ಕಳೆದುಕೊಂಡಿತು.
LIVE NEWS & UPDATES
-
UPW vs GG Live Score: 10 ರನ್‌ಗಳ ಸೋಲು
ಗುಜರಾತ್ ಜೈಂಟ್ಸ್ ತಂಡವು ಯುಪಿ ವಾರಿಯರ್ಸ್ ತಂಡವನ್ನು 10 ರನ್‌ಗಳಿಂದ ಸೋಲಿಸಿತು. 207 ರನ್‌ಗಳ ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 197 ರನ್ ಗಳಿಸಿತು. ಆಶಾ ಶೋಭನಾ 27 ರನ್ ಮತ್ತು ಶಿಖಾ ಪಾಂಡೆ 1 ರನ್ ಗಳಿಸಿ ಅಜೇಯರಾಗಿ ಉಳಿದರು.
-
UPW vs GG Live Score: 7 ವಿಕೆಟ್‌ಗೆ 168 ರನ್
ಯುಪಿ ವಾರಿಯರ್ಸ್ 17.5 ಓವರ್‌ಗಳಲ್ಲಿ 7 ವಿಕೆಟ್‌ಗೆ 168 ರನ್ ಗಳಿಸಿದೆ. ಗೆಲ್ಲಲು ಅವರಿಗೆ 12 ಎಸೆತಗಳಲ್ಲಿ 40 ರನ್‌ಗಳ ಅಗತ್ಯವಿದೆ.
-
-
UPW vs GG Live Score: ಲಿಚ್‌ಫೀಲ್ಡ್ ಅರ್ಧಶತಕ
ಫೋಬೆ ಲಿಚ್‌ಫೀಲ್ಡ್ 24 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಿತ ಅರ್ಧಶತಕ ಬಾರಿಸಿದ್ದಾರೆ. ಶ್ವೇತಾ ಶೆರಾವತ್ 11 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದಾರೆ. ಯುಪಿ ವಾರಿಯರ್ಸ್ 10.5 ಓವರ್‌ಗಳಲ್ಲಿ 4 ವಿಕೆಟ್‌ಗೆ 102 ರನ್ ಗಳಿಸಿದೆ. ಗೆಲುವಿಗೆ 54 ಎಸೆತಗಳಲ್ಲಿ 106 ರನ್‌ಗಳ ಅಗತ್ಯವಿದೆ.
-
UPW vs GG Live Score: 7 ಓವರ್‌ಗಳಲ್ಲಿ 1 ವಿಕೆಟ್‌ಗೆ 49 ರನ್
ಯುಪಿ ವಾರಿಯರ್ಸ್ 7 ಓವರ್‌ಗಳಲ್ಲಿ 1 ವಿಕೆಟ್‌ಗೆ 49 ರನ್ ಗಳಿಸಿದೆ. ಗೆಲ್ಲಲು ಅವರಿಗೆ 78 ಎಸೆತಗಳಲ್ಲಿ 159 ರನ್‌ಗಳ ಅವಶ್ಯಕತೆಯಿದೆ. ಮೆಗ್ ಲ್ಯಾನಿಂಗ್ 23 ಮತ್ತು ಫೈವಿ ಲಿಚ್‌ಫೀಲ್ಡ್ 24 ರನ್ ಗಳಿಸಿದ್ದಾರೆ.
-
UPW vs GG Live Score: ಮೊದಲ ವಿಕೆಟ ಪತನ
ಯುಪಿ ವಾರಿಯರ್ಸ್ 3 ಓವರ್‌ಗಳಲ್ಲಿ 1 ವಿಕೆಟ್‌ಗೆ 17 ರನ್ ಗಳಿಸಿದ್ದು, ಗೆಲ್ಲಲು 191 ರನ್‌ಗಳ ಅವಶ್ಯಕತೆಯಿದೆ. ಮೆಗ್ ಲ್ಯಾನಿಂಗ್ 3 ಮತ್ತು ಫೈವಿ ಲಿಚ್‌ಫೀಲ್ಡ್ 12 ರನ್ ಗಳಿಸಿದ್ದಾರೆ.
-
-
UPW vs GG Live Score: 207 ರನ್ ಗುರಿ
ಗುಜರಾತ್ ಜೈಂಟ್ಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 207 ರನ್ ಗಳಿಸಿತು. ಜಾರ್ಜಿಯಾ ವೇರ್‌ಹ್ಯಾಮ್ 27 ರನ್ ಮತ್ತು ಭಾರ್ತಿ ಫುಲ್ಮಾಲಿ 14 ರನ್ ಗಳಿಸಿ ಅಜೇಯರಾಗಿ ಉಳಿದರು.
-
UPW vs GG Live Score: 17 ಓವರ್ ಪೂರ್ಣ
ಗುಜರಾತ್ ಜೈಂಟ್ಸ್ ತಂಡ 17 ಓವರ್‌ಗಳಲ್ಲಿ 3 ವಿಕೆಟ್‌ಗೆ 167 ರನ್ ಗಳಿಸಿದೆ. ಆಶ್ಲೇ ಗಾರ್ಡ್ನರ್ (37 ಎಸೆತಗಳಲ್ಲಿ 60) ಮತ್ತು ಜಾರ್ಜಿಯಾ ವೇರ್‌ಹ್ಯಾಮ್ (6) ಕ್ರೀಸ್‌ನಲ್ಲಿದ್ದಾರೆ.
-
UPW vs GG Live Score: 10 ಓವರ್ ಪೂರ್ಣ
ಗುಜರಾತ್ ಜೈಂಟ್ಸ್ 10 ಓವರ್‌ಗಳಲ್ಲಿ 2 ವಿಕೆಟ್‌ಗೆ 90 ರನ್ ಗಳಿಸಿದೆ. ಆಶ್ಲೇ ಗಾರ್ಡ್ನರ್ (12) ಮತ್ತು ಅನುಷ್ಕಾ ಶರ್ಮಾ (23) ಕ್ರೀಸ್‌ನಲ್ಲಿದ್ದಾರೆ.
-
UPW vs GG Live Score: ಸೋಫಿ ಸಿಕ್ಸರ್
ಶಿಖಾ ಪಾಂಡೆ ಎಸೆದ ಮೊದಲ ಓವರ್‌ನಲ್ಲಿ 14 ರನ್‌ಗಳು ಬಂದವು. ಗುಜರಾತ್ ಜೈಂಟ್ಸ್ ತಂಡವು ತನ್ನ ಎರಡನೇ ಓವರ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ 17 ರನ್ ಗಳಿಸಿದೆ.
-
UPW vs GG Live Score: ಯುಪಿ ತಂಡ
ಡಿಯಾಂಡ್ರಾ ಡಾಟಿನ್, ಮೆಗ್ ಲ್ಯಾನಿಂಗ್ (ನಾಯಕಿ), ಫೋಬೆ ಲಿಚ್‌ಫೀಲ್ಡ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ಕಿರಣ್ ನವಗಿರೆ, ಶ್ವೇತಾ ಸೆಹ್ರಾವತ್ (ವಿಕೆಟ್ ಕೀಪರ್), ಆಶಾ ಸೋಭಾನಾ, ಸೋಫಿ ಎಕ್ಲೆಸ್ಟೋನ್, ಶಿಖಾ ಪಾಂಡೆ, ಕ್ರಾಂತಿ ಗೌಡ್.
-
UPW vs GG Live Score: ಗುಜರಾತ್ ತಂಡ
ಸೋಫಿ ಡಿವೈನ್, ಬೆತ್ ಮೂನಿ (ವಿಕೆಟ್ ಕೀಪರ್), ಆಶ್ಲೀಗ್ ಗಾರ್ಡ್ನರ್ (ನಾಯಕಿ), ಜಾರ್ಜಿಯಾ ವೇರ್ಹ್ಯಾಮ್, ಅನುಷ್ಕಾ ಶರ್ಮಾ, ಕನಿಕಾ ಅಹುಜಾ, ಭಾರತಿ ಫುಲ್ಮಾಲಿ, ಕಾಶ್ವಿ ಗೌತಮ್, ತನುಜಾ ಕನ್ವರ್, ರಾಜೇಶ್ವರಿ ಗಾಯಕ್ವಾಡ್, ರೇಣುಕಾ ಸಿಂಗ್ ಠಾಕೂರ್.
-
UPW vs GG Live Score: ಟಾಸ್ ಗೆದ್ದ ಯುಪಿ
ಟಾಸ್ ಗೆದ್ದ ಯುಪಿ ವಾರಿರರ್ಸ್ ನಾಯಕಿ ಮೆಗ್ ಲ್ಯಾನಿಂಗ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
Published On - Jan 10,2026 2:33 PM
