Urvashi Rautela: ‘ತಮ್ಮಯ್ಯ ನೀನು ಕ್ರಿಕೆಟ್ ಅಷ್ಟೇ ಆಡು’; ಪಂತ್ ಪಂಚ್​ಗೆ ಉರಿದು ಬಿದ್ದ ಊರ್ವಶಿ

| Updated By: ಪೃಥ್ವಿಶಂಕರ

Updated on: Aug 12, 2022 | 3:29 PM

Urvashi Rautela: ಆರ್​ಪಿ, ನಾನು ತಂಗಿದ್ದ ಹೋಟೆಲ್​ನ ಲಾಬಿಯಲ್ಲಿ ನನಗಾಗಿ ಕಾದು ಕುಳಿತ್ತಿದ್ದರು. ಜೊತೆಗೆ ಅವರು ನನಗೆ 17 ಕ್ಕೂ ಹೆಚ್ಚು ಬಾರಿ ಕರೆ ಮಾಡಿದ್ದರು. ತುಂಬಾ ಸುಸ್ತಾಗಿದ್ದ ನಾನು, ಮುಂಬೈಗೆ ಬಂದು ನಿನ್ನೊಂದಿಗೆ ಮಾತನಾಡುವುದಾಗಿ ಹೇಳಿ ಕಳಿಸಿದ್ದೆ ಎಂದು ಹೇಳಿಕೊಂಡಿದ್ದರು.

Urvashi Rautela: ‘ತಮ್ಮಯ್ಯ ನೀನು ಕ್ರಿಕೆಟ್ ಅಷ್ಟೇ ಆಡು’; ಪಂತ್ ಪಂಚ್​ಗೆ ಉರಿದು ಬಿದ್ದ ಊರ್ವಶಿ
ಪಂತ್, ಊರ್ವಶಿ
Follow us on

ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ಹಾಗೂ ಬಾಲಿವುಡ್ ನಟಿ ಊರ್ವಶಿ ರೌಟೇಲಾ (Rishabh Pant and actress Urvashi Rautela) ನಡುವಿನ ವಿವಾದ ಇಷ್ಟಕ್ಕೆ ನಿಲ್ಲುವ ಲಕ್ಷಣಗಳು ಕಾಣುತ್ತುಲ್ಲ. ಊರ್ವಶಿ ಅವರ ವೈರಲ್ ಸಂದರ್ಶನದ ನಂತರ ಆರಂಭವಾದ ಈ ವಿವಾದದಲ್ಲಿ ಇಬ್ಬರ ಕಡೆಯಿಂದಲೂ ಸೋಶಿಯಲ್ ಮೀಡಿಯಾ ವಾರ್ ನಡೆಯುತ್ತಿದೆ. ನಟಿಯ ಹೇಳಿಕೆಗೆ ಇನ್ಸ್ಟಾಗ್ರಾಮ್ನಲ್ಲಿ ಪ್ರತ್ತ್ಯುತ್ತರ ನೀಡಿದ ಪಂತ್, ಕೆಲವೇ ನಿಮಿಷಗಳಲ್ಲಿ ಅದನ್ನು ಡಿಲೀಟ್ ಮಾಡಿದ್ದರು. ಆದರೆ ಅಷ್ಟರಲ್ಲಾಗಲೇ ಪಂತ್ ಪೋಸ್ಟ್ ಎಲ್ಲೆಡೆ ವೈರಲ್ ಆಗಿತ್ತು. ಈ ಪೋಸ್ಟ್​ನಲ್ಲಿ ಪಂತ್, ಊರ್ವಶಿ ತನ್ನ ಹೆಸರನ್ನು ಜನಪ್ರಿಯತೆಗಾಗಿ ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ಖಡಕ್ ರಿಪ್ಲೆ ನೀಡಿರುವ ಊರ್ವಶಿ, ರಿಷಭ್ ಪಂತ್​ರನ್ನು ಚೋಟು ಎಂದು ಕರೆದು ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದ್ದಾರೆ.

ಊರ್ವಶಿ ಮೇಲೆ ಕೆರಳಿದ್ದ ರಿಷಬ್ ಪಂತ್

ಇದನ್ನೂ ಓದಿ
Rishabh Pant: ‘ಸುಳ್ಳು ಹೇಳುವುದಕ್ಕೂ ಒಂದು ಮಿತಿಯಿದೆ’; ನಟಿ ಊರ್ವಶಿ ಹೇಳಿಕೆಗೆ ತಿರುಗೇಟು ಕೊಟ್ಟ ರಿಷಭ್ ಪಂತ್
IND vs ENG: ಪಂತ್​ಗೆ ಜೀವದಾನ ಕೊಟ್ಟು ಕೆಟ್ಟೆವು..! ತಪ್ಪೊಪ್ಪಿಕೊಂಡ ಆಂಗ್ಲ ನಾಯಕ ಬಟ್ಲರ್ ಹೇಳಿದ್ದಿದು

ಊರ್ವಶಿ ರೌಟೇಲಾ ಕೆಲ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಆರ್‌ಪಿ ಎಂಬ ವ್ಯಕ್ತಿ ತನಗಾಗಿ ಹೋಟೆಲ್‌ನಲ್ಲಿ ಗಂಟೆಗಟ್ಟಲೆ ಕಾಯ್ದಿದ್ದರು ಎಂದು ಹೇಳಿದ್ದರು. ಇದನ್ನು ಕಂಡ ಪಂತ್ ಕೆರಳಿ ಕೆಂಡವಾಗಿ ತಾವೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟೊಂದನ್ನು ಹಾಕಿದ್ದರು. ಇದರಲ್ಲಿ ಪಂತ್, ಕೆಲವರು ಜನಪ್ರಿಯತೆ ಗಳಿಸಲು ಮತ್ತು ಮುಖ್ಯಾಂಶಗಳಲ್ಲಿ ಕಾಣಿಸಿಕೊಳ್ಳುವ ಸಲುವಾಗಿ ಸಂದರ್ಶನಗಳಲ್ಲಿ ಸುಳ್ಳು ಹೇಳುವುದು ನಗುವಿನ ವಿಷಯವಾಗಿದೆ. ಕೆಲವರಿಗೆ ಜನಪ್ರಿಯತೆಯ ಹಸಿವು ಎಷ್ಟು ಕೆಟ್ಟದಾಗಿದೆ. ದೇವರು ಅವರನ್ನು ಸಂತೋಷವಾಗಿಡಲಿ ಎಂದು ಬರೆದುಕೊಂಡಿದ್ದರು. ಜೊತೆಗೆ ಸಹೋದರಿ ನನ್ನ ಹಿಂದೆ ಬರುವುದನ್ನು ಬಿಡು, ಸುಳ್ಳು ಹೇಳುವುದಕ್ಕೂ ಒಂದು ಮಿತಿ ಇದೆ ಎಂದಿದ್ದರು. ಆದಾಗ್ಯೂ, ಸುಮಾರು ಏಳು ನಿಮಿಷಗಳ ನಂತರ, ಪಂತ್ ಈ ಫೋಸ್ಟ್​ ಅನ್ನು ಡಿಲೀಟ್ ಮಾಡಿದ್ದರು. ಅಷ್ಟೊತ್ತಿಗಾಗಲೇ ಅದರ ಸ್ಕ್ರೀನ್ ಶಾಟ್​ಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದವು.

ಪಂತ್‌ಗೆ ಊರ್ವಶಿ ಟಾಂಗ್

ಆದಾಗ್ಯೂ, ಪಂತ್ ತಮ್ಮ ಇನ್ಸ್​ಟಾಗ್ರಾಂ ಪೋಸ್ಟ್​ನಲ್ಲಿ ಈ ವಿಚಾರವನ್ನು ನಿಜವಾಗಿಯೂ ಬಿತ್ತರಿಸಿದ್ದಾರೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಅಷ್ಟರಲ್ಲಾಗಲೇ ಊರ್ವಶಿ ತಮ್ಮ ಇನ್‌ಸ್ಟಾಗ್ರಾಮ್​ನಲ್ಲಿ ರಿಷಭ್ ಪಂತ್​ಗೆ ಸರಿಯಾಗಿಯೇ ಟಾಂಗ್ ನೀಡಿದ್ದು, ತಮ್ಮ ಪೋಸ್ಟ್​ನಲ್ಲಿ, ಚೋಟು ಭಯ್ಯಾ ಶುಡ್‌ ಪ್ಲೇ ಬ್ಯಾಟ್‌-ಬಾಲ್‌ (ತಮ್ಮಯ್ಯ ನೀನು ಕ್ರಿಕೆಟ್ ಅಷ್ಟೇ ಆಡು). ಮೇ ಕೋಯಿ ಮುನ್ನಿ ನಹೀ ಹೂನ್ ಬದ್ನಾಮ್‌ ಹೋನೆ ವಿತ್‌ ಯಂಗ್‌ ಕಿಡ್ಡೋ ಡಾರ್ಲಿಂಗ್‌ ತೇರಿ ಲಿಯೇ (ನಿನ್ನಂತಹ ಚಿಕ್ಕ ಹುಡುಗನೊಂದಿಗೆ ಪ್ರೀತಿ ಪ್ರೇಮದಲ್ಲಿ ಬಿದ್ದು ಹಾಳಾಗಲು ನಾನೇನು ಮುನ್ನಿ ಅಲ್ಲ). ರಕ್ಷಾ ಬಂಧನ್‌ ಮುಬಾರಕ್‌ #ಆರ್‌ಪಿ ಚೋಟು ಭಯ್ಯಾ (ರಕ್ಷಾ ಬಂಧನದ ಶುಭಾಶಯಗಳು ಆರ್‌.ಪಿ ತಮ್ಮಯ್ಯ). #ಡೋಂಟ್‌ ಟೇಕ್‌ ಅಡ್ವಂಟೇಜ್‌ ಆಫ್ ಸಿಂಗಲ್‌ ಗರ್ಲ್‌ (ಹುಡುಗಿ ಒಬ್ಬಂಟಿಯಾಗಿದ್ದಾಳೆಂದು ಇದರ ಲಾಭ ತೆಗೆದುಕೊಳ್ಳುವ ಪ್ರಯತ್ನ ಮಾಡಬೇಡಿ). ಎಂದು ಬರೆದುಕೊಂಡಿದ್ದಾರೆ.

ವಿವಾದ ಹುಟ್ಟಿಸಿದ ಸಂದರ್ಶನದಲ್ಲಿ ಏನಿತ್ತು?

ಊರ್ವಶಿ ರೌಟೇಲಾ ಅವರು ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿ, ದೆಹಲಿಯ ಹೋಟೆಲ್‌ನಲ್ಲಿ ಆರ್‌ಪಿ (ಇಲ್ಲಿ ರಿಷಭ್ ಪಂತ್ ಹೆಸರನ್ನು ನೆರವಾಗಿ ತೆಗೆದುಕೊಳ್ಳದೆ ಕೇವಲ ಆರ್​ಪಿ ಎಂಬ ಪದವನ್ನು ಬಳಸಿದ್ದರು) ತನಗಾಗಿ ಕಾಯುತ್ತಿದ್ದರು. ನಾನು ಸತತ 10 ಗಂಟೆ ಶೂಟಿಂಗ್ ಮುಗಿಸಿ ದೆಹಲಿಗೆ ಬರುವಷ್ಟರಲ್ಲಿ ತುಂಬಾ ದಣಿದಿದ್ದೆ. ಹಾಗಾಗಿ ಧಣಿವಾರಿಸಿಕೊಳ್ಳಲು ಹೋಟೆಲ್​ ರೂಂ ಗೆ ಹೋಗಿ ಮಲಗಿದ್ದೆ. ಆದರೆ ಆರ್​ಪಿ, ನಾನು ತಂಗಿದ್ದ ಹೋಟೆಲ್​ನ ಲಾಬಿಯಲ್ಲಿ ನನಗಾಗಿ ಕಾದು ಕುಳಿತ್ತಿದ್ದರು. ಜೊತೆಗೆ ಅವರು ನನಗೆ 17 ಕ್ಕೂ ಹೆಚ್ಚು ಬಾರಿ ಕರೆ ಮಾಡಿದ್ದರು. ತುಂಬಾ ಸುಸ್ತಾಗಿದ್ದ ನಾನು, ಮುಂಬೈಗೆ ಬಂದು ನಿನ್ನೊಂದಿಗೆ ಮಾತನಾಡುವುದಾಗಿ ಹೇಳಿ ಕಳಿಸಿದ್ದೆ ಎಂದು ಹೇಳಿಕೊಂಡಿದ್ದರು.

Published On - 3:29 pm, Fri, 12 August 22