ತ್ರಿಕೋನಾ ಸರಣಿಗೆ USA ತಂಡ ಪ್ರಕಟ: ಭಾರತೀಯ ನಾಯಕ

| Updated By: ಝಾಹಿರ್ ಯೂಸುಫ್

Updated on: May 15, 2022 | 6:16 PM

ಯಾಸಿರ್ ಚೊಚ್ಚಲ ಟಿ20 ಪಂದ್ಯದಲ್ಲಿ ಯಾವುದೇ ವಿಕೆಟ್ ಪಡೆಯದಿದ್ದರೂ, ಬಿಗಿಯಾಗಿ ಬೌಲಿಂಗ್ ಮಾಡಿ ತಮ್ಮ ತಂಡದ 26 ರನ್‌ಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ತ್ರಿಕೋನಾ ಸರಣಿಗೆ USA ತಂಡ ಪ್ರಕಟ: ಭಾರತೀಯ ನಾಯಕ
USA Team
Image Credit source: Cricbuzz.com
Follow us on

ಮೇ 28 ರಿಂದ ಟೆಕ್ಸಾಸ್‌ನಲ್ಲಿ ಐಸಿಸಿ ಕ್ರಿಕೆಟ್ ವಿಶ್ವಕಪ್ ಲೀಗ್‌ನ ಅಡಿಯಲ್ಲಿ ನಡೆಯಲಿರುವ ಎರಡು ತ್ರಿಕೋನ ಸರಣಿಗಾಗಿ ಯುಎಸ್‌ಎ 14 ಸದಸ್ಯರ ತಂಡವನ್ನು ಪ್ರಕಟಿಸಿದೆ. ಈ ತಂಡದ ನಾಯಕತ್ವವನ್ನು ಭಾರತೀಯ ಮೂಲದ ಮೋನಾಕ್ ಪಟೇಲ್ ಅವರಿಗೆ ವಹಿಸಲಾಗಿದೆ. ಗುಜರಾತ್ ಮೂಲದ ಮೋನಾಕ್ ಕಳೆದ ಕೆಲ ವರ್ಷಗಳಿಂದ ಯುಎಸ್​ಎ ಪರ ಆಡುತ್ತಿದ್ದಾರೆ. 29 ವರ್ಷದ ಅನುಭವಿ ಕ್ರಿಕೆಟಿಗ ಇದುವರೆಗೆ ಯುಎಸ್​ಎ ಪರ 19 ಏಕದಿನ ಹಾಗೂ 4 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಒಟ್ಟು 689 ರನ್​ ಕಲೆಹಾಕಿದ್ದಾರೆ.

ಇನ್ನು ಈ ಸರಣಿಗಾಗಿ ಯುವ ಲೆಗ್ ಸ್ಪಿನ್ ಆಲ್ ರೌಂಡರ್ ಯಾಸಿರ್ ಮೊಹಮ್ಮದ್ ಅವರು ಏಕದಿನ ತಂಡದಲ್ಲಿ ಚೊಚ್ಚಲ ಬಾರಿಗೆ ಆಯ್ಕೆಯಾಗಿದ್ದಾರೆ. ಯಾಸಿರ್ ಐರ್ಲೆಂಡ್ ವಿರುದ್ಧದ ತನ್ನ ಚೊಚ್ಚಲ T20I ನಲ್ಲಿ ಪ್ರಭಾವಶಾಲಿ ಪ್ರದರ್ಶನ ನೀಡಿದ್ದರು. ಹಾಗೆಯೇ ವೇಗದ ಬೌಲರ್ ಕ್ಯಾಮರೂನ್ ಸ್ಟೀವನ್ಸನ್ ಎರಡು ವರ್ಷಗಳ ನಂತರ ತಂಡಕ್ಕೆ ಮರಳಿದ್ದಾರೆ. ಇದಲ್ಲದೇ ಎರಡು ವರ್ಷಗಳ ಬಳಿಕ ರಸ್ಟಿ ಥೆರಾನ್‌ಗೂ ಏಕದಿನ ತಂಡದಲ್ಲಿ ಅವಕಾಶ ನೀಡಲಾಗಿದೆ.

ಯಾಸಿರ್ ಚೊಚ್ಚಲ ಟಿ20 ಪಂದ್ಯದಲ್ಲಿ ಯಾವುದೇ ವಿಕೆಟ್ ಪಡೆಯದಿದ್ದರೂ, ಬಿಗಿಯಾಗಿ ಬೌಲಿಂಗ್ ಮಾಡಿ ತಮ್ಮ ತಂಡದ 26 ರನ್‌ಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮುಂದಿನ ಪಂದ್ಯದಲ್ಲಿ, ಅವರು 32ಕ್ಕೆ 2 ವಿಕೆಟ್ ಪಡೆದು ಮಿಂಚಿದ್ದರು. ಇದೇ ಕಾರಣಕ್ಕಾಗಿ ಇದೀಗ ಐರ್ಲೆಂಡ್​ ವಿರುದ್ದದ ಸರಣಿಗೂ ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ
Virat Kohli: ಕಳಪೆ ಫಾರ್ಮ್​ ನಡುವೆಯೂ 2 ದಾಖಲೆ ಬರೆದ ಕಿಂಗ್ ಕೊಹ್ಲಿ
IPL 2022: RCB ತಂಡದ ಸೋಲಿಗೆ ಇವರಿಬ್ಬರೇ ಕಾರಣ..!
IPL 2022: ಸೋಲುತ್ತೆ ನಿಜ, ಆದರೆ ಇದು?, LSG ಆಟಗಾರರ ವಿರುದ್ದ ಗಂಭೀರ್ ಗರಂ
IPL 2022: ಅಂದು ಲಯನ್ಸ್, ಇಂದು ಟೈಟನ್ಸ್: ಗುಜರಾತ್ ತಂಡದ ಫ್ಯಾನ್ಸ್​ಗೆ ಹೊಸ ಚಿಂತೆ ಶುರು..!

ಇನ್ನು ಕಳೆದ ಬಾರಿ ತಂಡದಲ್ಲಿದ್ದ ಕ್ಸೇವಿಯರ್ ಮಾರ್ಷಲ್, ವತ್ಸಲ್ ವಘೇಲಾ ಮತ್ತು ಜೆಸ್ಸಿ ಸಿಂಗ್ ಈ ಬಾರಿ ತಂಡದಲ್ಲಿ ಸ್ಥಾನ ಪಡೆದಿಲ್ಲ. ಐರ್ಲೆಂಡ್ ವಿರುದ್ಧದ ಏಕೈಕ T20I ನಲ್ಲಿ ವಿಫಲರಾದ ಮಾರ್ಷಲ್ ಅವರನ್ನು ಕೈಬಿಡಲಾಗಿದೆ. ಹಾಗೆಯೇ ವೈಯಕ್ತಿಕ ಕಾರಣಗಳಿಗಾಗಿ ಐರ್ಲೆಂಡ್ ಸರಣಿಯಿಂದ ಹೊರಗುಳಿದಿರುವ ರಸ್ಟಿ ಥರಾನ್ ಅವರನ್ನು ತಂಡದ ಆಯ್ಕೆಗೆ ಪರಿಗಣಿಸಿಲ್ಲ.

14 ಸದಸ್ಯರ USA ತಂಡವು ಈ ಕೆಳಗಿನಂತಿದೆ:
ಮೋನಾಕ್ ಪಟೇಲ್ (ನಾಯಕ), ಆರನ್ ಜೋನ್ಸ್ (ಉಪನಾಯಕ), ಅಲಿ ಖಾನ್, ಕ್ಯಾಮೆರಾನ್ ಸ್ಟೀವನ್ಸನ್, ಗಜಾನಂದ್ ಸಿಂಗ್, ಜಸ್ಕರನ್ ಮಲ್ಹೋತ್ರಾ, ನಿಸರ್ಗ ಪಟೇಲ್, ನೋಸ್ತುಶ್ ಕೆಂಜಿಗೆ, ರಾಹುಲ್ ಜರಿವಾಲಾ, ರಸ್ಟಿ ಥರಾನ್, ಸೌರಭ್ ನೇತ್ರವಾಲ್ಕರ್, ಸ್ಟೀವನ್ ಟೇಲರ್, ಸುಶಾಂತ್ ಮೊದಾನಿ, ಯಾಸಿರ್ ಮೊದಾನಿ

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.