AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನಕ್ಕೆ ಹೇಳಿದಷ್ಟು ಸುಲಭವಾಗಿ ಭಾರತಕ್ಕೆ ನೋ ಹೇಳಲಾಗುವುದಿಲ್ಲ! ಪಾಕ್ ಪರ ನಿಂತ್ ಆಸಿಸ್ ಕ್ರಿಕೆಟಿಗ

ಆಟಗಾರರು ಮತ್ತು ಯಾವುದೇ ಬೋರ್ಡ್ ಪಾಕಿಸ್ತಾನಕ್ಕೆ ಇಲ್ಲ ಎಂದು ಹೇಳುವುದು ಸುಲಭ ಎಂದು ನಾನು ಭಾವಿಸುತ್ತೇನೆ. ಇದು ಬಾಂಗ್ಲಾದೇಶಕ್ಕೂ ಅನ್ವಯಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಆದರೆ ಅದೇ ಪರಿಸ್ಥಿತಿ ಭಾರತದೊಂದಿಗೆ ಸಂಭವಿಸಿದರೆ, ಯಾರೂ ಭಾರತವನ್ನು ಬೇಡ ಎಂದು ಹೇಳಲು ಸಾಧ್ಯವಿಲ್ಲ.

ಪಾಕಿಸ್ತಾನಕ್ಕೆ ಹೇಳಿದಷ್ಟು ಸುಲಭವಾಗಿ ಭಾರತಕ್ಕೆ ನೋ ಹೇಳಲಾಗುವುದಿಲ್ಲ! ಪಾಕ್ ಪರ ನಿಂತ್ ಆಸಿಸ್ ಕ್ರಿಕೆಟಿಗ
ಉಸ್ಮಾನ್ ಖವಾಜಾ
TV9 Web
| Updated By: ಪೃಥ್ವಿಶಂಕರ|

Updated on: Sep 23, 2021 | 8:44 PM

Share

ಕೆಲವು ದಿನಗಳ ಹಿಂದೆ ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಭದ್ರತಾ ಕಾರಣಗಳನ್ನು ಮುಂದಿಟ್ಟುಕೊಂಡು ಪಾಕಿಸ್ತಾನ ಪ್ರವಾಸವನ್ನು ರದ್ದುಗೊಳಿಸಿತ್ತು. ರಾವಲ್ಪಿಂಡಿಯಲ್ಲಿ ನಡೆಯಬೇಕಿದ್ದ ಮೊದಲ ಏಕದಿನ ಪಂದ್ಯಕ್ಕೆ ಸ್ವಲ್ಪ ಮೊದಲು ಅವರು ಈ ನಿರ್ಧಾರ ತೆಗೆದುಕೊಂಡರು. ಇದರ ನಂತರ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸಾಕಷ್ಟು ಹಿನ್ನಡೆ ಅನುಭವಿಸಿದೆ. ಅನೇಕ ಜನರು ಮತ್ತೊಮ್ಮೆ ಪಾಕಿಸ್ತಾನದ ಕಾಲೆಳೆದಿದ್ದಾರೆ. ಆದರೆ ಅನೇಕರು ಈ ದೇಶದ ಜೊತೆ ನಿಂತಿದ್ದಾರೆ. ಆಸ್ಟ್ರೇಲಿಯಾದ ಎಡಗೈ ಬ್ಯಾಟ್ಸ್‌ಮನ್ ಉಸ್ಮಾನ್ ಖವಾಜಾ ಕೂಡ ಈ ವಿಷಯದ ಬಗ್ಗೆ ಮಾತನಾಡಿ ಭಾರತವನ್ನು ಗುರಿಯಾಗಿಸಿಕೊಂಡಿದ್ದಾರೆ. ಯಾವುದೇ ತಂಡವು ಪಾಕಿಸ್ತಾನದ ಪ್ರವಾಸದಿಂದ ಹೊರಬರುವುದು ಸುಲಭ. ಆದರೆ ಭಾರತದೊಂದಿಗೆ ಹೀಗೆ ಮಾಡಲು ಸಾಧ್ಯವಿಲ್ಲ ಎಂದು ಖವಾಜಾ ಹೇಳಿದ್ದಾರೆ.

ನ್ಯೂಜಿಲ್ಯಾಂಡ್ ನಂತರ, ಪಾಕಿಸ್ತಾನಕ್ಕೆ ಮತ್ತೊಂದು ದೇಶದಿಂದ ಹೊಡೆತ ನೀಡಲಾಯಿತು. ಇಂಗ್ಲೆಂಡ್ ಕೂಡ ಪಾಕಿಸ್ತಾನದ ಪ್ರವಾಸವನ್ನು ರದ್ದುಗೊಳಿಸಿತ್ತು, ಆದರೂ ಇಂಗ್ಲೆಂಡ್ ತಂಡಕ್ಕೆ ಕಾರಣ ಭದ್ರತೆ ಅಲ್ಲ ಮಾನಸಿಕ ಆರೋಗ್ಯ. ಈ ಬಗ್ಗೆ ಮಾತನಾಡಿದ ಖವಾಜ, ಆಟಗಾರರು ಮತ್ತು ಯಾವುದೇ ಬೋರ್ಡ್ ಪಾಕಿಸ್ತಾನಕ್ಕೆ ಇಲ್ಲ ಎಂದು ಹೇಳುವುದು ಸುಲಭ ಎಂದು ನಾನು ಭಾವಿಸುತ್ತೇನೆ. ಇದು ಬಾಂಗ್ಲಾದೇಶಕ್ಕೂ ಅನ್ವಯಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಆದರೆ ಅದೇ ಪರಿಸ್ಥಿತಿ ಭಾರತದೊಂದಿಗೆ ಸಂಭವಿಸಿದರೆ, ಯಾರೂ ಭಾರತವನ್ನು ಬೇಡ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಇಲ್ಲಿ ಹಣ ಪ್ರಮುಖ ಪಾತ್ರವಹಿಸುತ್ತದೆ ಎಂದಿದ್ದಾರೆ.

ಪಾಕಿಸ್ತಾನಕ್ಕೆ ಹೋಗದಿರಲು ಯಾವುದೇ ಕಾರಣವಿಲ್ಲ ಖವಾಜಾ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಜನಿಸಿದರು. ಆದರೆ ಆಸಿಸ್​ ಪರ ಕ್ರಿಕೆಟ್ ಆಡುತ್ತಿದ್ದಾರೆ. ಅವರು ಇತ್ತೀಚೆಗೆ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಭಾಗವಹಿಸಿದ್ದರು. ಪಾಕಿಸ್ತಾನಕ್ಕೆ ಹೋಗದಿರಲು ಯಾವುದೇ ಕಾರಣವಿಲ್ಲ ಎಂದು ಅವರು ಹೇಳಿದ್ದಾರೆ. ಆ ಜನರು ಅನೇಕ ಪಂದ್ಯಾವಳಿಗಳಲ್ಲಿ ಇದು ಕ್ರಿಕೆಟ್ ಆಡಲು ಸುರಕ್ಷಿತ ಸ್ಥಳ ಎಂದು ಪದೇ ಪದೇ ಸಾಬೀತುಪಡಿಸುತ್ತಿದ್ದಾರೆ. ನಾವು ಪಾಕಿಸ್ತಾನಕ್ಕೆ ಹೋಗದಿರಲು ಯಾವುದೇ ಕಾರಣವಿಲ್ಲ ಎಂದು ನಾನು ಭಾವಿಸುತ್ತೇನೆ. ಭದ್ರತೆ ಇದೆ, ತುಂಬಾ ಬಿಗಿ ಭದ್ರತೆ ಇದೆ. ಅಲ್ಲಿ ಜನರು ಸುರಕ್ಷಿತವಾಗಿದ್ದಾರೆ ಎಂಬ ವರದಿಗಳನ್ನು ನಾನು ಕೇಳಿದ್ದೇನೆ. ನಾನು ಈ ಬಗ್ಗೆ ಪಿಎಸ್‌ಎಲ್‌ನಲ್ಲಿ ಆಟಗಾರರೊಂದಿಗೆ ಮಾತನಾಡಿದ್ದೇನೆ. ಅವರು ಅದನ್ನೇ ಹೇಳುತ್ತಾರೆ ಎಂದಿದ್ದಾರೆ.

ಕ್ರಿಸ್ ಗೇಲ್ ಮತ್ತು ಸ್ಯಾಮಿ ಕೂಡ ಬೆಂಬಲಿಸಿದರು ಖವಾಜಾಗೂ ಮುಂಚೆ, ಇಬ್ಬರು ವೆಸ್ಟ್ ಇಂಡೀಸ್ ಕ್ರಿಕೆಟಿಗರಾದ ಕ್ರಿಸ್ ಗೇಲ್ ಮತ್ತು ಡರೆನ್ ಸ್ಯಾಮಿ ಕೂಡ ಪಾಕಿಸ್ತಾನವನ್ನು ಬೆಂಬಲಿಸಿದ್ದರು ಮತ್ತು ಅದನ್ನು ಸುರಕ್ಷಿತ ಸ್ಥಳ ಎಂದು ಕರೆದಿದ್ದರು. ಗೇಲ್ ಟ್ವೀಟ್​ನಲ್ಲಿ ತಾನು ಪಾಕಿಸ್ತಾನಕ್ಕೆ ಹೋಗುತ್ತಿದ್ದೇನೆ ಮತ್ತು ಯಾರು ತನ್ನೊಂದಿಗೆ ಬರಲು ಬಯಸುತ್ತಾರೆ ಎಂದು ಕೇಳಿದ್ದರು. ಸ್ಯಾಮಿ ಕೂಡ ಟ್ವೀಟ್ ಮಾಡಿ ಪಾಕಿಸ್ತಾನ ಸುರಕ್ಷಿತ ಸ್ಥಳವಾಗಿದೆ ಎಂದು ಬರೆದುಕೊಂಡಿದ್ದರು. ಇಬ್ಬರೂ ಕೂಡ ಪಿಎಸ್‌ಎಲ್‌ನಲ್ಲಿ ಆಡುತ್ತಾರೆ.